ಶಿಮಂತೂರು ನಾರಾಯಣ ಶೆಟ್ಟಿ
ಶಿಮಂತೂರು ನಾರಾಯಣ ಶೆಟ್ಟಿಯವರು ಯಕ್ಷಗಾನ ಪ್ರಸಂಗಕರ್ತರು ಹಾಗೂ ಕನ್ನಡ ಛಂದಸ್ಸುಗಳ ಕುರಿತಾಗಿ ಅಧ್ಯಯನ ನಡೆಸಿದ್ದಾರೆ. ಇವರು ಶಾಲಾ ಶಿಕ್ಷಕರಾಗಿ ಬರಹಗಾರರಾಗಿ, ಹಾಗೂ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ. ಯಕ್ಷಗಾನ ಛಂದಸ್ಸಿಗೆ ಸಂಬಂಧಿಸಿದಂತೆ ಶಿಮಂತೂರು ನಾರಾಯಣ ಶೆಟ್ಟಿಯವರು ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು ಎಂಬ ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ಯಕ್ಷಗಾನ ಛಂದೋಂಬುಧಿ ಮಹಾಗ್ರಂಥಕ್ಕೆ ಹಂಪಿ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಶಿಮಂತೂರು ನಾರಾಯಣ ಶೆಟ್ಟಿ | |
---|---|
ಜನನ | ನಂದಿಕೂರು | ೧ ಫೆಬ್ರವರಿ ೧೯೩೪
ಮರಣ | 26 August 2020 ಶಿಮಂತೂರು, ಕರ್ನಾಟಕ | (aged 62)
ವೃತ್ತಿ | ಶಿಕ್ಷಕರು, ಯಕ್ಷಗಾನ ಸಾಹಿತಿ, ಪ್ರಸಂಗಕರ್ತರು |
ಪ್ರಮುಖ ಕೆಲಸ(ಗಳು) | ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು |
ಜನನ–ಶಿಕ್ಷಣ–ವೃತ್ತಿಜೀವನ
ಬದಲಾಯಿಸಿಶಿಮಂತೂರು ನಾರಾಯಣ ಶೆಟ್ಟಿಯವರು ಕಾರ್ಕಳ ತಾಲೂಕಿನ ನಂದಿಕೂರಿನಲ್ಲಿ ಫೆಬ್ರವರಿ ೧, ೧೯೩೪ ರಲ್ಲಿ ಜನಿಸಿದ್ದರು. ಇವರ ತಂದೆ ಎಳತ್ತೂರುಗುತ್ತು ಅಚ್ಚಣ್ಣ ಶೆಟ್ಟಿ, ತಾಯಿಯ ಹೆಸರು ಕಮಲಾಕ್ಷಿ ಶೆಡ್ತಿ. ಛಂದಸ್ಸಿನ ಬಗ್ಗೆ ಅಧ್ಯಯನ ನಡೆಸಿ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಿಂದ ಡಿ ಲಿಟ್ ಪದವಿ ಪಡೆದಿದ್ದರು. ಶಿಮಂತೂರು ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಯ ಪ್ರಥಮ ಸದಸ್ಯರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಕೃತಿಗಳು
ಬದಲಾಯಿಸಿಶಿಮಂತೂರು ನಾರಾಯಣ ಶೆಟ್ಟಿಯವರು ಒಟ್ಟು ೧೭ ಯಕ್ಷಗಾನ ಪ್ರಸಂಗಗಳ ರಚನೆ ಮಾಡಿದ್ದಾರೆ. ಇವರು ತಮ್ಮ ೧೩ ನೇ ವಯಸ್ಸಿನಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಬರೆದಿದ್ದರು.
- ಗೋವಾ ದುರಂತ
- ಕೃಷಿ ವಿಜಯ
- ಪಂಜುರ್ಲಿ ಸಂಧಾನ
- ಕಟ್ಟೆ ಪುಣಿತ ಕಾಳಗ
- ಸೊರ್ಕುದ ಸಿರಿಗಿಂಡೆ
- ಬಿರ್ದ್ ದ ಬೈರವೆರ್
- ಬೆಂಗ್ ದ ಬಾಲೆನಾಗಿ
- ರಾಜಮುದ್ರಿಕಾ
- ಶ್ರೀ ಕೃಷ್ಣ ದೇವರಾಯ
- ದೀಕ್ಷಾ ಕಂಕಣ
ಪ್ರಶಸ್ತಿಗಳು
ಬದಲಾಯಿಸಿ- ಯಕ್ಷಪಾಣಿನಿ
- ಛಂದಶ್ಚತುರಾನನ
- ಯಕ್ಷ ಛಂದೋ ಭಾರ್ಗವ
- ಛಂದೋಂಬುಧಿ ಚಾರುಚಂದ್ರ
- ಛಂದೋ ವಾರಿಧಿ ಚಂದ್ರ
- ಅಭಿನವ ನಾಗವರ್ಮ
- ಛಂದೋ ಬ್ರಹ್ಮ
ಮರಣ
ಬದಲಾಯಿಸಿಶಿಮಂತೂರು ನಾರಾಯಣ ಶೆಟ್ಟಿಯವರು ಆಗಸ್ಟ್ ೨೬, ೨೦೨೦ ರಂದು ಮಂಗಳೂರಿನಲ್ಲಿ ನಿಧನರಾದರು