ಶಿಖಾ ಟಂಡನ್
ಭಾರತದ ಖ್ಯಾತ ಈಜುಗಾರ್ತಿ. ಶಿಖಾ ಟಂಡನ್ ಅವರು ಕರ್ನಾಟಕದ ಬೆಂಗಳೂರಿನವರು. ಜನನ ೨೦ ಜನವರಿ ೧೯೮೫ ರಲ್ಲಿ ಜನಿಸಿದ ಇವರು ಕಿರಿಯ ವಯಸ್ಸಿಗೆ ಕ್ರೀಡಾ ಜೀವನವನ್ನ ಆರಂಭಿಸಿದರು. ತಮ್ಮ ಕ್ರೀಡಾ ಜೀವನದಲ್ಲಿ ೧೪೬ ರಾಷ್ಟೀಯ ಪದಕಗಳನ್ನು ಪಡೆದ ಇವರು ಐದು ಚಿನ್ನದ ಪದಕಗಳನ್ನು ಒಳಗೊಂಡಂತೆ ಅಂತರಾಷ್ಟೀಯ ಸ್ಪರ್ಧೆಗಳಲ್ಲಿ ೩೬ ಪದಕಗಳನ್ನು ಗೆದಿದ್ದಾರೆ. ಪ್ರಸ್ತುತ ಅವರು ಯುಎಸ್ಎಡಿಯೆಯ ವಿಜ್ಞಾನ ತಂಡದ ಸದಸ್ಯರಾಗಿದ್ದು ಯುಎಸ್ಎಡಿಯ ನಿರ್ಣಾಯಕ ಸಂಪನ್ಮೂಲಗಳು ಮತ್ತು ವರದಿ ಮಾಡುವಿಕೆಗೆ ದೈನಂದಿನ ಯೋಜನೆಗಳ ಕಾರ್ಯಚಾರಣೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದಾರೆ.
ಕ್ರೀಡಾ ವೃತ್ತಿ
ಬದಲಾಯಿಸಿಟಂಡನ್ ೧೩ ವರ್ಷದವಳಿದ್ದಾಗಲೇ ರಾಜ್ಯ ಮಟ್ಟದ ಕ್ರೀಡೆಗೆ ಆಯ್ಕೆಯಾದ ಅವರು ಕಂಚಿನ ಪದಕಗಳನ್ನು ಗಳಿಸಿದರು. ಟಂಡನ್ ೧೩ ನೇ ವಯಸ್ಸಿನಲ್ಲಿ ಏಷ್ಯಾನ್ ಕ್ರೀಡಾಕೂಟದಲ್ಲಿ ಮತ್ತು ೧೬ ನೇ ವಯಸ್ಸಿನಲ್ಲಿ ತನ್ನ ಮೊದಲ ವಷ೯ದ ವಿಶ್ವಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದರು.[೧]
೨೦೦೧ರ ೨೮ನೇ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ ಶಿಪ್ ನಲ್ಲಿ ಟಂಡನ್ ೨೦೦ ಮೀಟರ್ ನಲ್ಲಿ ವೈಯಕ್ತಿಕವಾಗಿ ಪದಕವನ್ನು ಗೆದ್ದು ಹೊಸ ದಾಖಲೆಯನ್ನು ಸೃಷ್ಟಿಸಿದರು. ೨೦೦೨ರಲ್ಲಿ ಬೂಸಾನ್ ನಲ್ಲಿ ನಡೆದ ಏಷ್ಯಾನ್ ಕ್ರೀಡಾಕೂಟದಲ್ಲಿ ೧೦೦ ಮೀಟರ್ ಫ್ರೀಸ್ಟ್ಯೆಲ್ ಸ್ಪರ್ಧೆಯಲ್ಲಿ ಟಂಡನ್ ೮ ನೇ ಸ್ಥಾನ ಪಡೆದಿರು.
೨೦೦೩ ರಲ್ಲಿ ನಡೆದ ೫೭ ನೇ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ ಶಿಪ್ ನಲ್ಲಿ ಟಂಡನ್ ೨೬.೬೧ ಸೆ.ಸಮಯದೊಂದಿಗೆ ಭಾರತೀಯ ಮಹಿಳಾ ೫೦ ಫ್ರೀಸ್ಟ್ಯೆಲ್ ದಾಖಲೆಯನ್ನು ಮುರಿದರು.ಅವರು ಸ್ಪರ್ಧೆಯಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದರು. ಮತ್ತು ಸತತ ಮೂರನೇ ವರ್ಷವೂ ಅತ್ಯುತ್ತಮ ಈಜುಗಾರ್ತಿ ಎಂದು ಘೋಷಿಸಲ್ಪಟ್ಟರು. [೨] ೨೦೦೪ ರ ಅಥೆನ್ಸ್ ಒಲಿಂಪಿಕ್ ನಲ್ಲಿ ಟಂಡನ್ ೫೦ ಮೀಟರ್ ಮತ್ತು ೧೦೦ ಮೀಟರ್ ನಲ್ಲಿ ಪ್ರತ್ಯೇಕವಾಗಿ ಒಲಂಪಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ್ತಿ.
೨೦೦೫ ರಲ್ಲಿ ಶಿಖಾ ಏಳು ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಿದ ಇವರಿಗೆ [೩] ಅರ್ಜುನ ಪ್ರಶಸ್ತಿ]ಯನ್ನು ನೀಡಲಾಯಿತು. ೨೦೦೬ ರಲ್ಲಿ ಮೆಲ್ಬರ್ನ್ ಕಾಮನ್‌ವೆಲ್ತ್ ನಲ್ಲಿ ಟಂಡನ್ ೫೦ ಮೀಟರ್ ಬ್ಯಾಕ್ ಸ್ಟ್ರೋಕ್ ಮತ್ತು ೫೦ಮೀಟರ್ ಫ್ರೀ ಸ್ಟೈಲ್ ಎರಡರಲ್ಲೂ ಸೆಮಿಫೈನಲ್ಸ್ ಅನ್ನೂ ತಲುಪಿದರು. ಅದೇ ವರ್ಷದಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಒಳಾಂಗಣ ಏಷ್ಯಾನ್ ಏಜ್ ಗ್ರೂಪ್ನ ಈಜು ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಶಾರ್ಟ್ ಕೋಸ್೯ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
೨೦೦೯ರಲ್ಲಿ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಡ್ಯುಯಲ್ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ ಯುಎಸ್ಎಡಿಎಯಲ್ಲಿ ಅರ್ಜಿ ಸಲ್ಲಿಸಿ, ಯುಎಸ್ಎಡಿಎನಲ್ಲಿ ಉದ್ಯೋಗ ಪಡೆದ ಮೊದಲ ಭಾರತೀಯರಾಗಿದ್ದಾರೆ.[೪]
ವೈಯಕ್ತಿಕ ಜೀವನ
ಬದಲಾಯಿಸಿಟಂಡನ್ ಗೆ ಆಸ್ತಮಾದಿಂದ ಬಳಲುತ್ತಿರುವ ಶೋಭಿತ್ ಎಂಬ ಕಿರಿಯ ಸಹೋದರನಿದ್ದಾನೆ. ವೈದ್ಯರ ಸಲಹೆ ಮೇರೆಗೆ ಅವರ ತಾಯಿ ಅವನ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಈಜು ತರಬೇತಿಗೆ ಕರೆದೊಯ್ದುರು ಮತ್ತು ಟಂಡನ್ ಸಹ ತರಬೇತಿ ಪಡೆದರು. ಅವರ ರೋಲ್ ಮಾಡೆಲ್ಗಳೆಂದರೆ ಜೆನ್ನಿ ಥಾಂಪ್ಸನ್ ಮತ್ತು ಇಂಗೆ ಡಿ ಬ್ರೋಯಿನ್.
ಶಿಕ್ಷಣ
ಬದಲಾಯಿಸಿಶಿಖಾ ಟಂಡನ್ ಅವರು ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಓದಿದರು. ನಂತರ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೈವಿಕ ತಂತ್ರಜ್ಞಾನವನ್ನು ಅಧ್ಯಯನ ಮಾಡಿದರು. ಓಹಿಯೋದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ಮತ್ರು ಜೈವಿಕ ತಂತ್ರಜ್ಞಾನದಲ್ಲಿ ಎರಡು ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಅವರು ಪ್ರಸ್ತುತ ಯು.ಎಸ್.ಎ. ಕೋಲೋರಾಡೋ ಸ್ಪ್ರಿಂಗ್ ಯುಎಸ್ ಆಂಟಿಡೋಪಿಂಗ್ ಏಜೆನ್ಸಿಯಲ್ಲಿ ಸೈನ್ಸ್ ಪ್ರೋಗ್ರಾಂ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- ೨೦೦೫ - ಅರ್ಜುನ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ https://www.sportskeeda.com/swimming/i-always-wanted-to-work-with-usada-swimmer-shikha-tandon-interview
- ↑ https://www.hothungama.com/top-5-most-popular-swimmers
- ↑ https://goswimindia.blogspot.com/2011/08/history-of-arjuna-awards-in-swimming.html
- ↑ https://www.sportskeeda.com/swimming/i-always-wanted-to-work-with-usada-swimmer-shikha-tandon-interview
Tamilrockers.wc/ Archived 2020-08-05 ವೇಬ್ಯಾಕ್ ಮೆಷಿನ್ ನಲ್ಲಿ.