ಶಾಲ್ಮಲಾ ನದಿ ಧಾರವಾಡದಲ್ಲಿ ಹುಟ್ಟುವ ಒಂದು ನದಿ. ಅರಬ್ಬೀ ಸಮುದ್ರವನ್ನು ಸೇರುತ್ತದೆ. ಶಾಲ್ಮಲಾ ನದಿಯ ಉಗಮ ಸ್ಥಾನ ಧಾರವಾಡದ ಸೋಮೇಶ್ವರ ಗುಡಿ. ಇದು ಊರಿನ ಮಧ್ಯಭಾಗದಿಂದ ಕಲಘಟಗಿ ರಸ್ತೆಯ ದಿಕ್ಕಿನಲಿ ಸುಮಾರು ೫ ಕಿಮೀ ದೂರ ಸಾಗಿದರೆ ಬರುತ್ತದೆ. ಇಂದು ಶಾಲ್ಮಲಾ ಉಗಮ ಸ್ಥಾನದಲ್ಲಿ ನೀರಿದ್ದರೂ, ಧಾರವಾಡದಲ್ಲಿ ಗುಪ್ತಗಾಮಿನಿ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹರಿವಿದೆ.

ಶಾಲ್ಮಲಾ ನದಿಯಲ್ಲಿ ಲಿಂಗಗಳ ರಚನೆ ಕಂಡುಬರುವುದು

ಧಾರವಾಡದ ಸುತ್ತಮುತ್ತಲೂ ಹಿಂದೆ ತುಂಬಿಕೊಂಡು ಹರಿಯುತ್ತಿದ್ದ ನದಿಪಾತ್ರವನ್ನು ಅಲ್ಲಲ್ಲಿ ನೋಡಬಹುದು. ಇಂದು ಬರಡಾದ ನದಿಪಾತ್ರದ ಪಕ್ಕದಲ್ಲಿ ಕವಿವಿ ಒಂದು ವಿದ್ಯಾರ್ಥಿ ನಿಲಯವನ್ನು ಕಟ್ಟಿ, ಅದಕ್ಕೆ ಶಾಲ್ಮಲಾ ವಿದ್ಯಾರ್ಥಿ ನಿಲಯ ಎಂದು ಹೆಸರಿಸಿಟ್ಟಿದ್ದಾರೆ. []

ಉಪನದಿಯಾದ ಬೇಡ್ತಿ, ಹುಬ್ಬಳಿ ತಾಲೂಕಿನಲ್ಲಿ ಹುಟ್ಟಿ, ಕಲಘಟಗಿ ಬಳಿ ಶಾಲ್ಮಲಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಅಲ್ಲಿಂದ ಪೂರ್ವಕ್ಕೆ ೨೫ ಕಿಮೀ ಹರಿದು ಉತ್ತರ ಕನ್ನಡ ಜಿಲ್ಲೆಯನ್ನು ಶಾಲ್ಮಲಾ ಎಂಬ ಹೆಸರಿನೊಂದಿಗೆ ಪ್ರವೇಶಿಸುತ್ತದೆ.

  • ಒಟ್ಟೂ ಹರಿವಿನ ಉದ್ದ .  : ೧೬೧ ಕಿಮೀಗಳು
  • ಉತ್ತರ ಕನ್ನಡ ಜಿಲ್ಲೆಯಲ್ಲಿ: ೯೬ ಕಿಮೀಗಳು

ಶಾಲ್ಮಲಾ ನದಿಗೆ ಪಟ್ಟಣದ ಹೊಳೆ ಮತ್ತು ಬಿಳಿ ಹೊಳೆ ಎಂಬ ಉಪನದಿಗಳೂ ಇವೆ.[]

ಇದರ ಹರಿವಿನಲ್ಲಿ ಬರುವ ಪ್ರಮುಖ ಸ್ಥಳಗಳು:

ಶಾಲ್ಮಲಾ ನದಿ ಕಣಿವೆ ಸಂರಕ್ಷಣಾ ಪ್ರದೇಶ

ಬದಲಾಯಿಸಿ
ಮಲಬಾರ್ ಪೈಡ್ ಹಾರ್ನ್ ಬಿಲ್, ಗಂಡು ಮತ್ತು ಹೆಣ್ಣು ಪಕ್ಷಿಗಳು

"ಮಲಬಾರ್ ಪೈಡ್ ಹಾರ್ನ್ ಬಿಲ್" ಎಂಬ ಅಪರೂಪದ ಪಕ್ಷಿಗಳಿಗೆ ಆವಾಸಸ್ಥಾನ. ಸಿಲೋನ್ ಫ಼್ರಾಗ್ ಮೌಥ್, ಮರದರಿಶಿಣ, ಅಶೋಕ, ಉಪ್ಪಾಗೆ ಮತ್ತು ವಾಯುವಿಳಂಗ ಇಲ್ಲಿನ ವಿಶೇಷ ಸಸ್ಯ ಪ್ರಬೇಧಗಳು. [] ಸಹಸ್ರಲಿಂಗದಿಂದ ಗಣೇಶಪಾಲ್ ವರೆಗಿನ ೧೫.೭೬ ಕಿಮೀ ಉದ್ದ ಹರಿಯುವ ನದಿಯ ಎರಡೂ ಇಕ್ಕೆಲಗಳಲ್ಲಿ ೧೦೦ ಮಿ. ಪ್ರದೇಶವನ್ನು "ಶಾಲ್ಮಲಾ ನದಿ ಕಣಿವೆ ಸಂರಕ್ಷಣಾ ಪ್ರದೇಶ" ಅಥವಾ Shalmala River Riparian Ecosystem Conservation Reserve ಎಂದು ಘೋಷಿಸಲಾಗಿದೆ.

ಸುತ್ತಮುತ್ತಲಿನ ಸಂರಕ್ಷಣಾ ಪ್ರದೇಶಗಳು
ಸಂರಕ್ಷಣಾ ಪ್ರದೇಶ ವಿಸ್ತೀರ್ಣ (ಚ.ಕಿ.ಮೀ.)
ಬೇಡ್ತಿ ಸಂರಕ್ಷಣಾ ಪ್ರದೇಶ ೫೭.೩೦೭
ಅಘನಾಶಿನಿ-ಸಿಂಗಳೀಕ ಸಂರಕ್ಷಣಾ ಪ್ರದೇಶ ೨೯೯.೫೨
ಶಾಲ್ಮಲಾ ನದಿ ಕಣಿವೆ ಸಂರಕ್ಷಣಾ ಪ್ರದೇಶ ೪.೮೯
ಹಾರ್ನ್ ಬಿಲ್ ಸಂರಕ್ಷಣಾ ಪ್ರದೇಶ ೫೨.೫೦

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "ಶಾಲ್ಮಲಾ ನದಿಮೂಲ ಉಳಿಸಿ ಅಭಿಯಾನ", ಲೋಕಧ್ವನಿ, ೧೫ ನವೆಂಬರ ೨೦೧೮


  ಈ ಲೇಖನವನ್ನು ಕರ್ನಾಟಕ ರಾಜ್ಯೋತ್ಸವ ಸಂಪಾದನೋತ್ಸವ ೨೦೧೮ರ ಅಂಗವಾಗಿ ಸೃಷ್ಟಿಸಲಾಗಿದೆ ಅಥವಾ ಸಂಪಾದಿಸಲಾಗಿದೆ.