ಶಾಕ್ತ ಪಂಥ
ಶಾಕ್ತ ಪಂಥ (ಅಕ್ಷರಶಃ ಶಕ್ತಿಯ ಸಿದ್ಧಾಂತ ಅಥವಾ ದೇವಿಯ ಸಿದ್ಧಾಂತ) ಪರಮ, ಅಂತಿಮ ದೇವರಾಗಿ ಶಕ್ತಿ ಅಥವಾ ದೇವಿಯ ಮೇಲೆ ಆರಾಧನೆಯನ್ನು ಕೇಂದ್ರೀಕರಿಸುವ ಹಿಂದೂ ಧರ್ಮದ ಒಂದು ಪಂಥವಾಗಿದೆ. ಅದು ಶೈವ ಪಂಥ ಮತ್ತು ವೈಷ್ಣವ ಪಂಥಗಳ ಜೊತೆಗೆ ಭಕ್ತಿಪೂರ್ವಕ ಹಿಂದೂ ಧರ್ಮದ ಮುಖ್ಯ ಪಂಥಗಳಲ್ಲಿ ಒಂದಾಗಿದೆ. ಶಾಕ್ತ ಪಂಥವು ದೇವಿಯನ್ನು ಪರಮ ಬ್ರಹ್ಮನೆಂದೇ ಪರಿಗಣಿಸುತ್ತದೆ, ಮತ್ತು ದೈವಿಕತೆಯ ಎಲ್ಲ ಇತರ ರೂಪಗಳು, ಸ್ತ್ರೀ ಅಥವಾ ಪುರುಷ, ಕೇವಲ ಅವಳ ವೈವಿಧ್ಯಮಯ ಅಭಿವ್ಯಕ್ತಿಗಳೆಂದು ಪರಿಗಣಿಸಲ್ಪಡುತ್ತವೆ.