ಶಾಂತಿಮರ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. bellerica
Binomial name
ಟರ್ಮಿನಾಲಿಯ ಬೆಲ್ಲೆರಿಕ

ಶಾಂತಿಮರ (ತಾರೆ, ಗೋಟಿಂಗ) ದೊಡ್ಡಪ್ರಮಾಣದ ಮರ. ಶುಷ್ಕ ಹಾಗೂ ತೇವಪರ್ಣಪಾತಿ ಕಾಡುಗಳಲ್ಲಿ ಕಂಡು ಬರುವುದು. ಆಗ್ನೇಯ ಎಷಿಯಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.[]

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ
 
ಶಾಂತಿಮರ (Terminalia bellirica) ಹಣ್ಣುಗಳು

ಇದು ಕೊಂಬ್ರೆಟೆಸಿ(Combretaceae) ಕುಟುಂಬಕ್ಕೆ ಸೇರಿದ್ದು, ಟರ್ಮಿನಾಲಿಯ ಬೆಲೆರಿಕ (Terminalia Belerica)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು

ಬದಲಾಯಿಸಿ

ದೊಡ್ಡಪ್ರಮಾಣದ ಮರ. ೩೦ ಮೀ.ರಷ್ಟು ಎತ್ತರ,೩ ಮೀ.ದಪ್ಪ ಬೆಳೆಯುತ್ತದೆ.ಎಲೆಗಳು ಅಗಲವಾಗಿ ಅಂಡವೃತ್ತಾಕಾರವಾಗಿರುವುದು. ರೆಂಬೆಗಳ ತುದಿಯಲ್ಲಿ ಗುಚ್ಚ ಗುಚ್ಚವಾಗಿರುವುದು.ಇದರ ಹಣ್ಣುಗಳು ಕೋತಿ, ಅಳಿಲು ಮುಂತಾದ ಪ್ರಾಣಿಗಳಿಗೆ ಮೆಚ್ಚಿನ ಆಹಾರ. ಇದರ ದಾರುವು ಹಳದಿ ಛಾಯೆಯ ಬೂದು ಬಣ್ಣದ್ದಾಗಿದೆ. ಬಾಳಿಕೆ ಬರುವುದಿಲ್ಲ.

ಉಪಯೋಗಗಳು

ಬದಲಾಯಿಸಿ

ಇದರ ದಾರುವು ನೀರಿನಲ್ಲಿ ಚೆನ್ನಾಗಿ ಬಾಳಿಕೆ ಬರುವುದರಿಂದ ದೋಣಿಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಪದರ ಹಲಗೆಗಳಿಗೆ,ನಿರ್ಮಾಣ ಕೆಲಸಗಳಲ್ಲಿ ತಾತ್ಕಾಲಿಕ ರಚನೆಗಳಿಗೆ ಉಪಯೋಗವಾಗುತ್ತದೆ. ಇದರ ಹಣ್ಣುಗಳಿಂದ ಟ್ಯಾನಿನ್ ದೊರಕುತ್ತದೆ. ಕಾಯಿಗಳನ್ನು ಬಟ್ಟೆ, ಚರ್ಮಗಳಿಗೆ ಬಣ್ಣ ಕೊಡಲು ಬಳಸುತ್ತಾರೆ. ಔಷಧಗಳಲ್ಲಿಯೂ ಉಪಯೋಗದಲ್ಲಿದೆ.

ಆಧಾರ ಗ್ರಂಥಗಳು

ಬದಲಾಯಿಸಿ

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ


ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಶಾಂತಿಮರ&oldid=1164420" ಇಂದ ಪಡೆಯಲ್ಪಟ್ಟಿದೆ