ಶಾಂತಾರಾಮ ನಾಯಕ ಹಿಚಕಡ
ಶಾಂತಾರಾಮ ನಾಯಕ ಹಿಚಕಡ
ಬದಲಾಯಿಸಿಶಾಂತಾರಾಮ ನಾಯಕ ಹಿಚಕಡ
ಬದಲಾಯಿಸಿಶಾಂತಾರಾಮ ನಾಯಕ ಹಿಚಕಡರವರ ಪೂರ್ಣ ಹೆಸರು ಶಾಂತಾರಾಮ ನಾರಾಯಣ ನಾಯಕ.
ಜನನ
ಬದಲಾಯಿಸಿಶಾಂತಾರಾಮ ನಾರಾಯಣ ನಾಯಕರವರು ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ, ೧೯೩೯ ಮಾರ್ಚ್ ೨೩ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿಚಕಡದಲ್ಲಿ ಜನಿಸಿದರು.
ಶಿಕ್ಷಣ
ಬದಲಾಯಿಸಿಇವರು ಹಿಂದಿ ರಾಷ್ಟ್ರಭಾಷಾ ವಿಶಾರದಾ ಪದವಿಯನ್ನು ಪಡೆದಿದ್ದಾರೆ. ಇದರೊಂದಿಗೆ ಎಂ.ಎ ಪದವಿಯನ್ನು ಪಡೆದಿದ್ದಾರೆ. ಹಾಗೂ ಬಿ.ಎಡ್ ಕೂಡಾ ಮಾಡಿದ್ದಾರೆ.
ಶಿಕ್ಷಕ ವೃತ್ತಿ
ಬದಲಾಯಿಸಿಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ . ಎಮ್ . ಹೈಸ್ಕೂಲಿನಲಿ ಸಹಶಿಕ್ಷಕರಾಗಿ 1961ರಲ್ಲಿ ಸೇವೆ ಪ್ರಾರಂಭಿಸಿ, ಶೆಟಗೇರಿ ಸತ್ಯಾಗ್ರಹ ಸಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿ ಹೊಂದಿದರು.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಪ್ರಶಸ್ತಿಗಳು
ಬದಲಾಯಿಸಿಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ ॥ ಸೈಯ್ಯದ್ ಝಮೀರುಲ್ಲಾ ಫರೀಫ್ ಕಾವ್ಯ ಪ್ರಶಸ್ತಿ , ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಹೊಯ್ಸಳ ಪ್ರಶಸ್ತಿ . ( ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುಸ್ತು ಮಾಸ್ತರ ಪ್ರಶಸ್ತಿ , ಸಾಹಿತ್ಯ ಸೇವೆಗಾಗಿ 2019ರ ಶ್ರೀ ಆರ್ . ಎನ್ . ನಾಯಕರ ಪ್ರಶಸ್ತಿಗಳು ಇವರಿಗೆ ದೊರಕಿವೆ.
ಲೇಖಕರ ಪ್ರಕಟಿತ ಕೃತಿಗಳು
ಬದಲಾಯಿಸಿಕವನ ಸಂಗ್ರಹಗಳು
ಬದಲಾಯಿಸಿಕಾಡಹೆಣ್ಣು, ದಾರಿಮಾಡಿಕೊಡಿ, ಅನುಭವ, ಆತಂಕ, ಅನುರಾಗ, ನಿನಾದ, ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು.
ಚರಿತ್ರೆ
ಬದಲಾಯಿಸಿಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ ಇವರು ಬರೆದ ಚರಿತ್ರೆಗಳು.
ಜೀವನ ಚರಿತ್ರೆ
ಬದಲಾಯಿಸಿಮಾನಧನ ಎಂ . ಎಚ್ . ನಾಯಕ, ಶಿಕ್ಷಕ ಕವಿ ವಿ . ವೆ , ತೊರ್ಕೆ, ಕರುಣಾಳು ಸ , ಪ . ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವರು ರಚಿಸಿದ ಜೀವನ ಚರಿತ್ರೆಗಳು.
ಪ್ರಬಂಧ
ಬದಲಾಯಿಸಿಇವರು ಬರೆದ ಪ್ರಬಂಧಗಳೆಂದರೆ ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ, ಹಂಬಲ, ಹುಡುಕಾಟ ಮತ್ತು ಒಡನಾಟ.
ಕಥೆ
ಬದಲಾಯಿಸಿಮಂಡಕ್ಕಿ ತಿಂದ ಗಂಗೆ ಇವರು ಬರೆದ ಕಥೆಯಾಗಿದೆ.
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
{ref} ಎಲ್ಲಾ ಮಾಹಿತಿಯನ್ನು ಅವರ ಪುಸ್ತಕಗಳಿಂದ ಮತ್ತು ಅವರ ವೈಯಕ್ತಿಕ ಭೇಟಿಯಿಂದ ಪಡೆಯಲಾಗಿದೆ.{/ref}