ಹಲವಾರು ವರ್ಷಗಳಿಂದ ಸತತವಾಗಿ ಚಾಲ್ತಿಯಲ್ಲಿರುವ ಮುಕ್ತಾ ಮುಕ್ತಾ ಕರ್ನಾಟಕದಲ್ಲಿ ಮನೆಮಾತಾದ ಕನ್ನಡ ಟೆಲಿವಿಶನ್ ಧಾರಾವಾಹಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದೆ. ನಟಿ,ಶಾಂತಲಾ ಕಾಮತ್ 'ಮುಕ್ತಾಮುಕ್ತಾ' ಕನ್ನಡ ಧಾರಾವಾಹಿನಿಯಲ್ಲಿ ದೇವಯಾನಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.

ಮನೆಯ ಪರಿಸರ, ಜನನ

ಬದಲಾಯಿಸಿ

'ಶಾಂತಲಾ ಕಾಮತ್' ರವರ ತಂದೆ, ರಮೇಶ್ ಕಾಮತ್, ವೃತ್ತಿಯಲ್ಲಿ ಒಬ್ಬ ಇಂಜಿನಿಯರ್. ತಾಯಿ ರೂಪಾ ಕಾಮತ್, ಅವರು ಮೂಲತಃ ಕರಾವಳಿಯವರು. ಶಾಂತಲಾ ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ 'ಮಾಡೆಲಿಂಗ್' ಮಾಡುತ್ತಿದ್ದರು. 'ಮಿಸ್ ಸೌತ್ ಇಂಡಿಯ ಪ್ರಶಸ್ತಿ'ಗಳಿಸಿದ್ದಾರೆ. ವೈದ್ಯ, ಪ್ರವೀಣ್ ಪೈರವರನ್ನು ಮದುವೆಯಾಗಿದ್ದಾರೆ. ವಿವಾಹದ ನಂತರ ಈ ದಂಪತಿಗಳು ಯು.ಕೆಯಲ್ಲಿ ೫ ವರ್ಷ ವಾಸವಾಗಿದ್ದರು. ನಟನೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು. ದೃಷ್ಯಮಾಧ್ಯಮಕ್ಕೆ ಸಹಾಯಕವಾಗುವ ಕೆಲವು 'ಕ್ಯಾಮರಾ ಕೋರ್ಸ್' ಗಳನ್ನು ಅಲ್ಲಿಯೇ ಮಾಡಿಕೊಂಡರು.'ಎಡಿಟಿಂಗ್' ನಲ್ಲೂ ಸಾಕಷ್ಟು ಪರಿಶ್ರಮವಿದೆ. ಭಾರತಕ್ಕೆ ವಾಪಸ್ಸಾದಮೇಲೆ ಬೆಂಗಳೂರಿನಲ್ಲಿ ಅಭಿನಯಕ್ಕೆ ಪ್ರಾರಂಭಿಸಿದರು.

ಕನ್ನಡ ಟೆಲಿವಿಶನ್ ಧಾರಾವಾಹಿಯಲ್ಲಿ

ಬದಲಾಯಿಸಿ

'ಶಾಂತಲಾ ಕಾಮತ್ ರವರನ್ನು 'ಟೆಲಿವಿಶನ್ ಇಂಡಸ್ಟ್ರಿ'ಗೆ ಪರಿಚಯಿಸಿದವರು, ನಟ ಶರತ್ ಲೋಹಿತಾಶ್ವರವರು. ’ಮುಗಿಲು ಧಾರಾವಾಹಿ'ಯನ್ನು ಚೈತನ್ಯರವರು ನಿರ್ದೇಶಿಸುತ್ತಿದ್ದರು. ಆಗ 'ಶಾಂತಲಾ'ರವರನ್ನು ಮೊದಲು ರವರಿಗೆ ಪರಿಚಯಿಸಿದ್ದು 'ಲೋಹಿತಾಶ್ವ'. ಮೊದಲ 'ಆಡಿಶನ್' ಆಗಿದ್ದು ಅಲ್ಲೇ. ಆನಂತರ, ವಿನು ಬಳಂಜ ಅನೇಕ ಒಳ್ಳೆಯ ಅವಕಾಶಗಳನ್ನು ಒದಗಿಸಿಕೊಟ್ಟರು. ಅವರು ನಿರ್ದೇಶಿಸಿದ ಜೋಗುಳದಲ್ಲಿನ ಪಾತ್ರ 'ಶಾಂತಲಾ ಕಾಮತ್' ರಿಗೆ, ಮುದಕೊಟ್ಟಿತು.