ಶರಾವತಿ ವನ್ಯಜೀವಿ ಅಭಯಾರಣ್ಯ

ಶರಾವತಿ ಎಲ್‌ಟಿಎಂ ವನ್ಯಜೀವಿ ಅಭಯಾರಣ್ಯವು ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿರುವ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವಾಗಿದೆ. ಅಭಯಾರಣ್ಯದ ಮೂಲಕ ಹರಿಯುವ ಶರಾವತಿ  ನದಿಯಿಂದಾಗಿ ಈ ಹೆಸರಿಡಲಾಗಿದೆ. ಈ ಅಭಯಾರಣ್ಯವು ಉತ್ತರ ಕನ್ನಡದ ಕಾಡುಗಳಲ್ಲಿ ವ್ಯಾಪಿಸಿದೆ ಹಾಗೂ ಹತ್ತಿರದ ಪಟ್ಟಣವಾದ ಸಾಗರದಿಂದ ೩೪ ಕಿ.ಮೀ ದೂರದಲ್ಲಿದೆ ಮತ್ತು ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರಿಗೆ ಬಸ್ ಸೇವೆಯ ಮೂಲಕ ಪ್ರತಿದಿನ ಸಂಪರ್ಕ ಹೊಂದಿದೆ. ಹತ್ತಿರದ ರೈಲ್ವೆ ನಿಲ್ದಾಣ ತಾಲಗುಪ್ಪ ೧೫ ಕಿ.ಮೀ ದೂರದಲ್ಲಿದೆ ಹಾಗೂ ಹತ್ತಿರದ ಮಂಗಳೂರು ವಿಮಾನ ನಿಲ್ದಾಣ ಅಭಯಾರಣ್ಯದಿಂದ ೨೦೦ ಕಿ.ಮೀ ದೂರದಲ್ಲಿದೆ [].

ಅಭಯಾರಣ್ಯವನ್ನು ೧೯೭೨ ರಲ್ಲಿ ೪೩೧.೨೩ ಕಿಮೀ (೧೬೬.೫೦ ಚದರ ಮೈಲಿ) ವೈಡ್ ಗೆಜೆಟ್ ಅಧಿಸೂಚನೆಯೊಂದಿಗೆ ದಿನಾಂಕ ೨೮-೦೬-೧೯೭೮ ರಂದು ಸ್ಥಾಪಿಸಲಾಯಿತು ನಂತರ ಇದನ್ನು ೨೦೧೯ ರಲ್ಲಿ ೯೩೦.೧೬ ಕಿಮೀ(೩೫೯.೧೪ ಚದರ ಮೈಲಿ)ಗೆ ವಿಸ್ತರಿಸಲಾಯಿತು. ಅಘನಾಶಿನಿ ಸಿಂಹ ಬಾಲದ ಮಕಾಕ್ ಸಂರಕ್ಷಣಾ ಮೀಸಲು ಮತ್ತು ಉತ್ತರ ಕನ್ನಡದಲ್ಲಿ ಕೆಲವು ಕಾಯ್ದಿರಿಸಿದ ಕಾಡುಗಳನ್ನು ಸೇರಿಸುವ ಮೂಲಕ ಅಭಯಾರಣ್ಯವನ್ನು ವಿಸ್ತರಿಸಲಾಯಿತು []. ವಿಸ್ತರಿಸಿದ ಅಭಯಾರಣ್ಯವು ಲಯನ್ ಬಾಲದ ಮಕಾಕ್ ಅಥವಾ ಸಿಂಗಲಿಖ, ಎಲೆ ಮೂಗಿನ ಬಾವಲಿ ಅಥವಾ ಲೀಫ್ ನೋಸ್ಡ್ ಬಾವಲಿಗಳು, ಹಾರ್ನ್‌ಬಿಲ್ಸ್ ಮುಂತಾದ ಅನೇಕ ವಿಭಿನ್ನ ಪ್ರಾಣಿ ಪಕ್ಷಿಗಳನ್ನು ಹೊಂದಿರುವ ಅಭಯಾರಣ್ಯವಾಗಿದೆ. ವನ್ಯಜೀವಿ ಅಭಯಾರಣ್ಯವು ಮೈರಿಸ್ಟಿಕಾ ಜೌಗು ಪ್ರದೇಶಗಳ ಸಿಹಿನೀರಿನ ಆವಾಸಸ್ಥಾನವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.

ಶರಾವತಿ ಕಣಿವೆ, ಗೇರುಸೊಪ್ಪಾ

ಲಯನ್ ಟೈಲ್ಡ್ ಮಕಾಕ್ (ಮಕಾಕಾ ಸೈಲೆನಸ್) ಅನ್ನು ಐಯುಸಿಎನ್ 'ಅಳಿವಿನಂಚಿನಲ್ಲಿರುವ ಪ್ರಾಣಿ' ಎಂದು ವರ್ಗೀಕರಿಸಿದೆ [].

ಸಸ್ಯ ಮತ್ತು ಪ್ರಾಣಿ

ಬದಲಾಯಿಸಿ

ಶರಾವತಿ ವನ್ಯಜೀವಿ ಅಭಯಾರಣ್ಯವು ದಕ್ಷಿಣ ಉಷ್ಣವಲಯದ ನಿತ್ಯ ಹಸಿರಿನ ಅರಣ್ಯ, ದಕ್ಷಿಣ ಉಷ್ಣವಲಯದ ಅರೆ-ನಿತ್ಯ ಹಸಿರಿನ ಅರಣ್ಯವನ್ನು ಹೊಂದಿದೆ.

ಈ ಅಭಯಾರಣ್ಯದಲ್ಲಿ ಸ್ಪೊಟೆಡ್ ಡೀರ್, ಸಾಂಬಾರ್, ಗೌರ್, ಭಾರತೀಯ ಕಾಡುಹಂದಿ, ಭಾರತೀಯ ಮುಳ್ಳುಹಂದಿ, ಬೊಗಳುವ  ಜಿಂಕೆ (ಮುಂಟ್ಜಾಕ್ ), ಮೌಸ್ ಜಿಂಕೆ, ಲಯನ್ ಟೈಲ್ಡ್ ಮಕಾಕ್, ಕಾಮನ್ ಲಂಗೂರ್, ಹುಲಿ , ಪ್ಯಾಂಥರ್, ಧೋಲ್, ಪೈಥಾನ್, ಕಿಂಗ್ ಕೋಬ್ರಾ ಮುಂತಾದ ಪ್ರಾಣಿಗಳು ಇವೆ. ಗ್ರೇ ಜಂಗಲ್ ಫೌಲ್, ನವಿಲುಗಳು, ಮರಕುಟಿಕ, ಫ್ಲೈ ಕ್ಯಾಚರ್ಸ್, ಕಿಂಗ್ ಫಿಶರ್, ವಿಸ್ಲಿಂಗ್ ಟೀಲ್, ಬಲ್ಬುಲ್ಸ್ , ಮೈನಾ, ಬೀ ಈಟರ್ಸ್, ಡ್ರಾಂಗೊ ಇಲ್ಲಿ ಕಂಡುಬರುವ ಕೆಲವು ಪ್ರಾಣಿ ಪಕ್ಷಿಗಳು. ಅಭಯಾರಣ್ಯದಲ್ಲಿ ಅನೇಕ ಚಿಟ್ಟೆಗಳು ಸಹ ಕಂಡುಬರುತ್ತವೆ ಅವುಗಳೆಂದರೆ ದನೈದ್ಸ್, ಗ್ಲಸ್ಸ್ಯ್ ಟ್ಯಿಗರ್, ಡಾರ್ಕ್ ಬ್ಲು ಟ್ಯಿಗರ್, ಕೊಮ್ಮೊನ್ ಕ್ರೊವ್ ಮತ್ತು ಟ್ರೀ ನ್ಯಿಮ್ಫ್.

ಶರಾವತಿ ವನ್ಯಜೀವಿ ಅಭಯಾರಣ್ಯದ ಹವಾಮಾನವು ಬಹಳ ಆಹ್ಲಾದಕರವಾಗಿರುತ್ತದೆ. ಇದು ವರ್ಷದ ಸಮಯ ಮತ್ತು ವಿವಿಧ ಪ್ರದೇಶಗಳ ನೆಲದ ಎತ್ತರವನ್ನು ಅವಲಂಬಿಸಿ ೧೧ ರಿಂದ ೩೮ ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಇರುತ್ತದೆ. ಇದು ಪ್ರಸ್ಥಭೂಮಿಗಿಂತ ತಪ್ಪಲಿನಲ್ಲಿ ಮತ್ತು ಬಯಲು ಪ್ರದೇಶಗಳಲ್ಲಿ ಬೆಚ್ಚಗಿರುತ್ತದೆ. ಜೂನ್ ಮತ್ತು ಸೆಪ್ಟೆಂಬರ್ ನಡುವಿನ ಮಳೆಗಾಲದ ತಿಂಗಳುಗಳಲ್ಲಿ ಗಾಳಿ ವೇಗ ಮತ್ತು ನೀರಿನ ಮಟ್ಟ ಹೆಚ್ಚಾಗಿರುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹವಾಮಾನವು ಬಿಸಿಯಾಗಿರುತ್ತದೆ.

ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಹಿನ್ನೀರು ಜಲಕ್ರೀಡೆ ಆಡಲು ಉತ್ತಮ ಅವಕಾಶಗಳನ್ನು ಕೊಡುತದೆ. ಕ್ಯಾನೋಯಿಂಗ್, ಕಯಾಕಿಂಗ್ ಮತ್ತು ವಿಂಡ್ ಸರ್ಫಿಂಗ್ ಇಲ್ಲಿ ಆಡಬಹುದಾದ ಕೆಲವು ಜಲಕ್ರೀಡೆಗಳಾಗಿವೆ. ಪಕ್ಷಿ ನೋಡುವ ಉತ್ಸಾಹಿಗಳು ಸಹ ಈ ಸ್ಥಳಕ್ಕೆ ಭೇಟಿ ನೀಡಬಹುದು.

ಅಭಯಾರಣ್ಯವು ೪೦ ಸಣ್ಣ ಗ್ರಾಮಗಳನ್ನು ಒಳಗೊಂಡಿದ್ದು ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿ ೧ ರಿಂದ ೧೦ ಮನೆಗಳಿವೆ. ಈ  ಹಳ್ಳಿಗಳು ದೀರ್ಘಕಾಲಿಕ ಕಣಿವೆಗಳಲ್ಲಿರುವುದರಿಂದಾಗಿ ನೀರಿನ ಮೂಲ ಮತ್ತು ಆಳವಾದ ಮಣ್ಣು ಲಭ್ಯವಿದೆ. ಯಾವುದೇ ವಾಸ ಪ್ರದೇಶಗಳು ದಟ್ಟವಾದ ಜನಸಂಖ್ಯೆ ಹೊಂದಿಲ್ಲ. ಜನರು ಸ್ವಾಭಾವಿಕವಾಗಿ ಅಭಯಾರಣ್ಯದೊಳಗೆ ಚಲಿಸುತ್ತಾರೆ ಏಕೆಂದರೆ ಅವರು ಅಭಯಾರಣ್ಯವನ್ನು ಅವಲಂಬಿಸಿರುತ್ತಾರೆ. ಇಂಧನ, ಮೇವು, ಸಣ್ಣ ಮರ ಮತ್ತು ಇತರ ಅನಿವಾರ್ಯ ಸಾಮಾನ್ಯ ಜೀವನಕ್ಕೆ ಅಗತ್ಯವಾಗಿರುವ ವಸ್ತುಗಳು ಅರಣ್ಯದಲ್ಲಿ ದೊರೆಯುತ್ತದೆ. ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ ಅಭಯಾರಣ್ಯದ ಹುಲ್ಲಿನ ಖಾಲಿ ಜಾಗಗಳಲ್ಲಿ ಅಕೇಶಿಯ ಆರಿಕ್ಯುಲಿಫಾರ್ಮಿಸ್ ತೋಟಗಳನ್ನು ಬೆಳೆದಿದೆ. ವನ್ಯಜೀವಿ ವಿಭಾಗದ ಮಿಶ್ರ ತೋಟಗಳಲ್ಲಿ ಮುಖ್ಯವಾಗಿ ಹಣ್ಣು ನೀಡುವ ಜಾತಿಗಳನ್ನು ಬೆಳೆಸಲಾಗಿದೆ. ಬೆಂಕಿಯ ಅಪಾಯವನ್ನು ನಿಯಂತ್ರಿಸಲು ಅಕೇಶಿಯ ತೋಟಗಳನ್ನು ಶೋಲಾ ಕಾಡಿನ ಪರಿಧಿಯ ಸುತ್ತಲೂ  ಬೆಳೆಸಲಾಗಿದೆ.

ರಕ್ಷಣೆಯ ಅಡಿಯಲ್ಲಿರುವ ತತ್ವಗಳು

ಬದಲಾಯಿಸಿ
 
ಶರಾವತಿ ವನ್ಯಜೀವಿ ಅಭರಯಾರನ್ಯದಲ್ಲಿರುವ ಮರಗಲು ಮತ್ತು ಹುಲ್ಲು

೧. ಮಾನವರು ಪರಭಕ್ಷಕದಿಂದ ನೈಸರ್ಗಿಕ ಸಸ್ಯ ಮತ್ತು ಪ್ರಾಣಿಗಳಿಗೆ ರಕ್ಷಣೆ ನೀಡುವುದು(ಕಳ್ಳಸಾಗಣೆ, ಬೇಟೆಯಾಡುವುದು ಮತ್ತು ಅತಿಕ್ರಮಣ).

೨. ಬೆಂಕಿಯ ನಿರ್ವಹಣೆ.

೩. ಜಾನುವಾರುಗಳಿಂದ ವನ್ಯಜೀವಿಗಳ ರಕ್ಷಣೆ.

೪ .ಗಡಿ ಗುರುತಿಸುವಿಕೆಯ ನಿರ್ವಹಣೆ.

೫. ಮೇಲಿನ ಎಲ್ಲವನ್ನೂ ಸಾಧಿಸಲು ಉತ್ತಮ ಸಂಪರ್ಕವನ್ನು ಒದಗಿಸುವುದು.

೬. ವನ್ಯಜೀವಿಗಳ ಅನುಕೂಲಕ್ಕಾಗಿ ದೇಶೀಯ ಲೈವ್ ಸ್ಟಾಕ್ ಅನ್ನು ಪ್ರದೇಶದಿಂದ ಹೊರಗಿಡಲು ಫೆನ್ಸಿಂಗ್.

೭. ಬೆಂಕಿಯ ವಿರಾಮಗಳು ಮತ್ತು ಅಗ್ನಿಶಾಮಕ ರೇಖೆಗಳ ರಚನೆ ಮತ್ತು ನಿರ್ವಹಣೆ.

೮. ಏಕಸಂಸ್ಕೃತಿಯ ವಿಲಕ್ಷಣ ಜಾತಿಗಳ ತೋಟವನ್ನು ವೈವಿಧ್ಯಮಯ ಮರದ ಜಮೀನುಗಳಿಗೆ ಪರಿವರ್ತಿಸುವುದು.

ಭೇಟಿ ನೀಡುವ ಸಮಯ

ಬದಲಾಯಿಸಿ

ಅಭಯಾರಣ್ಯವು ವರ್ಷದುದ್ದಕ್ಕೂ ತೆರೆದಿರುತ್ತದೆ. ಭೇಟಿ ನೀಡಲು ಉತ್ತಮ ಸೀಸನ್ ನವೆಂಬರ್ ಮತ್ತು ಮೇ ನಡುವೆ ಇರುತ್ತದೆ. ನೀವು ಮುಪ್ಪಾನೆ ಅಥವಾ ಶಿಮೊಗಾದಲ್ಲಿ ವಸತಿಗಾಗಿ ನೋಡಬಹುದು. ಹತ್ತಿರದ ವಿಮಾನ ನಿಲ್ದಾಣವೆಂದರೆ ಶಿಮೋಗದಿಂದ ೧೬೫ ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಯಲ್ಲಿದೆ. ಶಿವಮೊಗ್ಗ ರೈಲು ಮತ್ತು ರಸ್ತೆಯ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ನೀವು ಮಂಗಳೂರು (೨೦೦ ಕಿ.ಮೀ) ಮತ್ತು ಬೆಂಗಳೂರಿನಿಂದ (೨೭೪ ಕಿ.ಮೀ) ಪ್ರಯಾಣಿಸಬಹುದು. ಈ ಪ್ರದೇಶದಲ್ಲಿ ಸಾಕಷ್ಟು ಕರ್ನಾಟಕ ಸಾರಿಗೆ ನಿಗಮ ಬಸ್‌ಗಳಿವೆ [].

ಉಲ್ಲೇಖಗಳು

ಬದಲಾಯಿಸಿ