ಶಮನೇವಾಡಿ

ಭಾರತ ದೇಶದ ಗ್ರಾಮಗಳು

ಶಮನೇವಾಡಿ ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕ ರಾಜ್ಯದ ಉತ್ತರ ದಿಕ್ಕಿನಲ್ಲಿದೆ. ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಯ ದಡದ ಮೇಲಿನ ಗ್ರಾಮ

ಶಮನೇವಾಡಿ
ಶಮನೇವಾಡಿ
Population
 (2001)
 • Total೫,೯೮೮

೨೦೦೧ ಭಾರತದ ಜನಗಣತಿಯ ಪ್ರಕಾರ ಶಮನೇವಾಡಿಯಲ್ಲಿ 3,060 ಪುರುಷರು ಮತ್ತು 2,928 ಮಹಿಳೆಯರೊಂದಿಗೆ 5,988 ಜನಸಂಖ್ಯೆಯನ್ನು ಹೊಂದಿತ್ತು. 90% ಗಿಂತ ಹೆಚ್ಚು ಇಲ್ಲಿ ಜೈನ ಸಮುದಾಯ ಮತ್ತು ಲಿಂಗಾಯತರು ಜ್ಯೊತೆ ಇತರ ಸಮುದಾಯಗಳು ಇವೆ. ಇಲ್ಲಿನ ಬಹಳಷ್ಟು ಜನರು ಕೃಷಿ ಮೇಲೆ ಅವಲಂಬಿತವಾಗಿದ್ದಾರೆ, ಕಬ್ಬು ಇಲ್ಲಿನ ಪ್ರಮುಖ ಬೆಳೆ. ನೀರಾವರಿಗಾಗಿ ದೂಧಗಂಗಾ ನದಿಯನ್ನು ಅವಲಂಬಿಸಿದ್ದಾರೆ. ಒಕ್ಕಲುತನ ಇಲ್ಲಿಯ ಮುಖ್ಯ ಕಸಬು; ಕಬ್ಬು, ತಂಬಾಕು, ಸೋಯಾಬಿನ್, ಜೋಳ, ಕಡಲೆ ಮತ್ತು ಇನ್ನಿತರ ವಾನಿಜ್ಯ್ ಬೆಳೆಗಳನ್ನು ಬೆಳೆಯುತ್ತಾರೆ. ಇದು ದೂಧಗಂಗಾ ನದಿಯ ದಡದ ಮೇಲೆ ಇರುವದರಿಂದ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು

ಬದಲಾಯಿಸಿ
  • ಭಾರತೀಯ ಸೇಟ್ ಬ್ಯಾಂಕ್
  • ರತ್ನಾಕರ್ ಬ್ಯಾಂಕ್
  • ಜೈ ಜಿನೇಂದ್ರ ಸಹಕಾರ ಕ್ರೆಡಿಟ್ ಸೌಹಾರ್ದ ಸೋಸಾಯಟಿ ಲಿಮಿಟೆಡ್
  • ಪದ್ಮಾವತಿ ಅಲ್ಪಸಂಖ್ಯಾತ ಮಲ್ಟಿಪರ್ಪಸ್ ಸೊಸೈಟಿ.
  • ಪಾರ್ಶ್ವನಾಥ ಸಹಕಾರ ಕ್ರೆಡಿಟ್ ಸೌಹಾರ್ದ ಸೋಸಾಯಟಿ ಲಿಮಿಟೆಡ್
  • ಶಮನೇವಾಡಿ ಸಹಕಾರ ಕ್ರೆಡಿಟ್ ಸೌಹಾರ್ದ ಸೋಸಾಯಟಿ ಲಿಮಿಟೆಡ್
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ
  • ಜೈ ಕಿಸಾನ ಕೃಷಿ ಪತ್ತಿನ ಸಹಕಾರಿ ಸಂಘ

ಶಿಕ್ಷಣ ಹಾಗು ವಿದ್ಯಾ ಸಂಸ್ಥೆಗಳು

ಬದಲಾಯಿಸಿ
  • ಆಚಾರ್ಯ ದೇಶಭೂಷಣ ಆಯುರ್ವೇದ ವೈದ್ಯಕೀಯ ಕಾಲೇಜು
  • ಕುಸುಮಾವತಿ ಮಿರ್ಜಿ ಕಲೆ ಮತ್ತು ವಾಣಿಜ್ಯ ಕಾಲೇಜ್
  • ಬಿಎಸ್ ಪದವಿ ಪೂರ್ವ ಕಾಲೇಜ್
  • ಬಿಎಸ್ ಪ್ರಾಥಮಿಕ ಶಾಲೆ (ಕಾನ್ವೆಂಟ್)
  • ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ
  • ಆಚಾರ್ಯ ದೇಶಭೂಷಣ BEd ಕಾಲೇಜ್
  • DEd ಕಾಲೇಜ್
  • ಪದ್ಮಜ ಗರ್ಲ್ಸ್ ಹೈ ಸ್ಕೂಲ್
  • ಆಚಾರ್ಯ ದೇವನಂದಿ ಸಂಸ್ಕಾರ್ ಕೇಂದ್ರ

ದೇವಸ್ತಾನಗಳು

ಬದಲಾಯಿಸಿ
  • ೧೦೦೮ ಚಂದ್ರಪ್ರಭು ದಿಗಂಬರ ಜೈನ ಮಂದಿರ
  • ರಾಮಲಿಂಗೆಶ್ವರ ಮಂದಿರ
  • ಬೀರೆಶ್ವರ ಮಂದಿರ
  • ಯಲ್ಲಮ್ಮಾ ಮಂದಿರ
  • ಹನುಮಾನ ಮಂದಿರ

ಸಂಸ್ಕೃತಿ

ಬದಲಾಯಿಸಿ

ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಶಮನೇವಾಡಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮಿಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ, ಮರಾಠಿ ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಷೇಶತೆ.

ರಸ್ತೆ ಹಾಗೂ ಸಾರಿಗೆ

ಬದಲಾಯಿಸಿ

ರಾಜ್ಯ ಹೆದ್ದಾರಿ ಸಂಖ್ಯೆ ೯೭, ಜಿಲ್ಲಾ ಮೂಖ್ಯ ರಸ್ತೆ ಚಿಕ್ಕೋಡಿ - ಇಚಲಕರಂಜಿ ಶಮನೇವಾಡಿಯನ್ನು ಸಂಪರ್ಕಿಸುತ್ತವೆ. ವಾಯುವ್ಯ ಸಾರಿಗೆ ಸಂಸ್ಠೆ ಬಸ್ಸುಗಳು ಇಲ್ಲಿನ ಮೂಲ ರಸ್ತೆ ಸಾರಿಗೆ. ಶಮನೇವಾಡಿಯು ಚಿಕ್ಕೋಡಿಯಿಂದ ೨೧ ಕಿಮಿ, ನಿಪ್ಪಾಣಿಯಿಂದ ೨೪ ಕಿಮಿ ದೂರದಲ್ಲಿದೆ.