ಶಬ್ದಮಣಿದರ್ಪಣದ ಸೂತ್ರಾಂಶಗಳು

ಕೇಶಿರಾಜಶಬ್ದಮಣಿದರ್ಪಣ ಕೃತಿಯಲ್ಲಿ ಬರುವ ಸೂತಾಂಶಗಳನ್ನು ಈ ಲೇಖನದಲ್ಲಿ ಗಮನಿಸಬಹುದು.

ಸೂತ್ರಾಂಶಗಳು ಬದಲಾಯಿಸಿ

ಆಯ್ದ ಕೆಲವು ಸೂತ್ರಗಳ ಸಾಲುಗಳನ್ನು ಮತ್ತು ಪದ್ಯದ ಸಾರಾಂಸವನ್ನು ಗಮನಿಸಬಹುದು.

ಪೇಳ್ದೆನದರಿಂ ಕ್ಷಳನಂ ಸೂತ್ರ:15 ಬದಲಾಯಿಸಿ

‘ಕುಳ’ಲಕಾರವನ್ನು ಪ್ರಾಸವಾಗಿಟ್ಟು ತಚಿಸಿರುವ ಕಾವ್ಯದಲ್ಲಿ ‘ಕ್ಷಳ’ ಲಕಾರದ ಪ್ರಾಸವನ್ನು ವಿಕಲ್ಪದಿಂದ ಪ್ರಯೋಗಿಸಬಾರದು. ಲಕಾರವನ್ನು ಪ್ರಾಸವಾಗಿಟ್ಟು ರಚಿಸಿದ ಪದ್ಯದಲ್ಲಿ ‘ಕ್ಷಳ’ ಲಕಾರವನ್ನು ವಿಕಲ್ಪದಿಂದ ಬಳಸಬಾರದು. ಇವೆರಡನ್ನೂ ಮಾಡಬಾರದು. ಸಂಸ್ಕøತ ಪದದಲ್ಲಿನ ‘ಲ’ ಕಾರಕ್ಕೆ ಕ್ಷಳ ಲಕಾರವಲ್ಲದೇ ಬೇರೆ ಇಲ್ಲದಿರುವುದರಿಂದ ಅದಕ್ಕೆ ವಿಕಲ್ಪವನ್ನು ಮಾಡಬಾರದಾಗಿ, ಇದರಲ್ಲಿ ಕ್ಷಳ ಲಕಾರವನ್ನೇ ಹೇಳಿದ್ದೇನೆ.

ಉದಾ : ಕಿಳಿರೆ ಹಯಂಗಳ್ ಗರ್ಜಿಸೆ, ಜಳದ ನಭಂಗಳ್ ಗಜಂಗಳ ---

ತ್ರಿಮಾತ್ರಕಂ ಪ್ಲುತಮಕ್ಕುಂ ಸೂತ್ರ:20 ಬದಲಾಯಿಸಿ

ಗುರುವೆಂದರೆ ಎರಡು ಮಾತ್ರೆಯುಳ್ಳದ್ದು. ದೀರ್ಘವೆಂದರೂ ಎರಡು ಮಾತ್ರಾ ಪ್ರಮಾಣವೇ, ಗುರು ಮತ್ತು ದೀರ್ಘವಾಗಿದ್ದು ಸಂಧಿಯಾಗಿರುವ ಏ, ಐ, ಓ, ಔ ಅಕ್ಷರಗಳು ಸಂಧ್ಯಕ್ಷರಗಳೆನಿಸುತ್ತವೆ. ಅದಕದಕೆ ವಿಷ್ಣು ವನ್ನು ವರಸಂಧ್ಯಕ್ಷರದಂತಿರೆ ಎಂಬ ಪದ್ಯದಿಂದ ನಿರ್ದೇಸಿದ್ದಾರೆ. ಎರಡು ವ್ಯಂಜನವನ್ನು ಉಚ್ಚರಿಸುವಷ್ಟು ಕಾಲದ ಅವಧಿಯನ್ನು ಮಾತ್ರೆಯೆನ್ನುತ್ತಾರೆ. ಅದರಲ್ಲಿ ಒಂದು ಮಾತ್ರೆಯಾದರೆ ಹ್ರಸ್ವವೂ, ಎರಡು ಮಾತ್ರೆಗಳಾದರೆ ದೀರ್ಘವೂ(ಗುರುವೆಂದೂ) ಮತ್ತು ಮೂರು ಮಾತ್ರೆಗಳಾದರೆ ಪ್ಲುತವೂ ಆಗುತ್ತದೆ.

ಉದಾ : ಹ್ರಸ್ವ - ಕೊ, ದೀರ್ಘ - ಕೋ, ಪ್ಲುತ - ಕ್ಕೋsss

ಸ್ವರಾಂಗಮುಂ ವ್ಯಂಜನಾಂಗಮುಂ ತಾನೆಂಬರ್ ಸೂತ್ರ:22 ಬದಲಾಯಿಸಿ

ಅನುಸ್ವಾರಗಳು ಮತ್ತು ವಿಸರ್ಗಗಳು ಸ್ವರಾಕ್ಷರಗಳೊಡನೆಯೂ ಮತ್ತು ವ್ಯಂಜನಾಕ್ಷರಗಳೊಡನೆಯೂ ಸೇರಿ ಬರುವುದರಿಂದ ಅವನ್ನು ಸ್ವರಾಂಗವೆಂದೂ ಹೇಳಬಹುದು.

ನಾಮರೂಢಿಯಳಿಯದ ಪಕ್ಷಂ 62 ಬದಲಾಯಿಸಿ

ಕನ್ನಡ ಭಾಷೆಯ ಮತ್ತು ಸಂಸ್ಕøತ ಭಾಷೆಯ ವಿಭಕ್ತಿಪ್ರತ್ಯಯಗಳ ಸ್ವರವೂ ಮತ್ತು ನಾಮಪ್ರಕೃತಿಯ ಸಹಜಸ್ವರವೂ ಪರವಾದಾಗ ರೂಢಿಯಲ್ಲಿರುವ ನಾಮಪ್ರಸಿದ್ಧಿಯು ಕೆಡದಿದ್ದಲ್ಲಿ ಲೋಪವನ್ನು ಹೊಂದುತ್ತದೆ.

ಉದಾ:ಸಂಸ್ಕøತ ಪ್ರಕೃತಿಯ ವಿಭಕ್ತಿ ಸ್ವರಲೋಪಕ್ಕೆ, ಕ್ರಮದೆ+ಆಯ್ತು=ಕ್ರಮದಾಯ್ತು,ಇಂದ್ರಂಗೆ+ಐರಾವತಂ ಕನ್ನಡ ಪ್ರಕೃತಿಯ ವಿಭಕ್ತಿಸ್ವರಲೋಪಕ್ಕೆ, ನೆಲದಿಂದೆ+ಉಣ್ಬಂ=ನೆಲದಿಂದುಣ್ಬಂ, ಚಲದ+ಆಣ್ಮಂ=ಚಲದಾಣ್ಮಂ

ಷಷ್ಠಿ ನಿಯಮದೆ ಯತ್ವಂ ಸೂತ್ರ:63 ಬದಲಾಯಿಸಿ

ಆಕಾರ, ಇಕಾರ, ಈಕಾರ, ಓಕಾರ, ಐಕಾರ, ಎಕಾರ, ಮತ್ತು ಏಕಾರಗಳಿಗೆ ಸ್ವರವು ಪರವಾದರೆ ‘ಯ’ಕಾರವು ಅಗಮವಾಗಿ ಬರುತ್ತದೆ. ಇದೇ ರೀತಿ ಷಷ್ಠೀ ವಿಭಕ್ತಿಯ ಪ್ರತ್ಯಯವಾದ ‘ಅ’ಕಾರ ಮತ್ತು ಅವಧಾರಣೆಯ ‘ಎ’ಕಾರಗಳಿಗೆ ಪರವಾದರೂ ಯ ಕಾರವು ಬರುತ್ತದೆ.

ಉದಾ : ಆ+ಇರ್ದ=ಆಯಿರ್ದ

ಸರೇಫಮಿದಿರಾಗೆ ಶಿಥಿಲಮೆಂದನುಕರಿಪರ್ ಸೂತ್ರ:69 ಬದಲಾಯಿಸಿ

ಪೂರ್ವಪದದ ಕೊನೆಯ ಅಕ್ಷರ ಲಘುವಾಗಿದ್ದು, ಉತ್ತರಪದದ ಮೊದಲನೆಯ ಅಕ್ಷರ ಒತ್ತಕ್ಷರವಾಗಿದ್ದರೆ ಸಂಧಿದೋಷವೆನಿಸುತ್ತದೆ. [ಸಂಧಿದೋಷಕ್ಕೆ - ಬರಿಸಿ+ಪ್ರಧಾನರಂ] ಛಂದಸ್ಸಿನ ವಿಚಾರದಲ್ಲಿ ಉತ್ತರಪದದ ಮೊದಲನೆ ಅಕ್ಷರವೂ ರೇಫೆಯೊಡನೆ ಕೂಡಿದ್ದರೆ [ರೇಫೆಯೊಡನೆ - ಮಿರುಗುತ್ತಿರ್ಪ+ತ್ರಿಶೂಲದಿಂ] ಸಿಥಿಲತೆಯಾಗುವುದರಿಂದ ಸಂಧಿದೋಷವಿಲ್ಲವೆಂದು ಕೆಲವರು ಸಮ್ಮತಿಸುತ್ತಾರೆ.

ಶ್ರುತಿಕಷ್ಟಂಬರೆ ಸಂಧಿಮಾಡಲಾಗದು ಸೂತ್ರ:73 ಬದಲಾಯಿಸಿ

ಎರಡು ‘ರ’ಕಾರಗಳು ಪರಸ್ಪರ ಸೇರುವಂತೆ ಸಂಧಿಯನ್ನು ಮಾಡಬಾರದು. ಏಕೆಂದರೆ ಅವನ್ನು ಉಚ್ಚರಿಸುವಾಗ ಕಷ್ಟವಾಗುತ್ತದೆ. [ವಿದ್ವಿಟ್ಸ್ತ್ರೀಯರ್] ಆ ಉಚ್ಚಾರಣೆಯನ್ನು ಕೇಳುವುದು ಕಷ್ಟವಾಗುತ್ತದೆ. [ಬಂದರ್ರಾಮರ್] ಎರಡು ಕರಡೆಗಳ ಘರ್ಷಣೆಯಿಂದ ಹೊರಡುವ ಶಬ್ದದಂತೆ [ಸರ್ರನೆ, ಕಿರ್ರನೆ, ಕರ್ರನೆ ] ಶ್ರುತಿ ಸಹ್ಯವಾಗುವುದಿಲ್ಲ.

ದ್ವಿತ್ವವೃತ್ತಿ ನಿತ್ಯಮೆನಿಕ್ಕುಂ ಸೂತ್ರ:81 ಬದಲಾಯಿಸಿ

ಪ್ರತಿಷೇಧವೆಂದರೆ ನಿಷೇಧ ವೆಂದು ಅರ್ಥ. ಈ ನಿಷೇಧಾರ್ಥದ ಧಾತುಗಳಿಗೆ ವಿಭಕ್ತಿಯ ಸ್ವರವು ಪರವಾದರೂ [ವಿಭಕ್ತಿಸ್ವರಕ್ಕೆ, ಎನ್+ಅಂ=ಎನ್ನಂ, ಉಣ್ಣಂ, ಮೆಲ್ಲಯ್, ಬಯ್ಯೆನ್] ನಿಷೇಧಾರ್ಥದ ಭೂತಕಾಲದ ಕ್ರಿಯೆಯಲ್ಲಿ ಅದೆ ಎಂಬುದು ಪರವಾದಾಗಲೂ ನಕಾರಾಂತ, ಣಕಾರಾಂಥ, ಲಕಾರಾಂತ, ಯಕಾರಾಂತ ಮತ್ತು ಳಕಾರಾಂತ ಪದಗಳಿಗೆ [ಅದೆಗೆ- ಎನ್+ಅದೆ=ಎನ್ನದೆ, ತಿನ್ನದೆ, ಉಣ್ಣದೆ ] ದ್ವಿತ್ವವು ನಿತ್ಯವಾಗಿ ಬರುತ್ತದೆ.

ನಾಮಮಳಿದೆ ಮೂದೆರನ್ ಸೂತ್ರ:86 ಬದಲಾಯಿಸಿ

ನಾಮವು ರೂಢನಾಮ, ಅನ್ವರ್ಥನಾಮ ಮತ್ತು ಅಂಕಿತನಾಮವೆಂದು ಮೂರು ಬಗೆಯಾಗುತ್ತದೆ. ರೂಢನಾಮವೆಂದರೆ ಪ್ರಸಿದ್ಧವಾದುದು. ಅನ್ವರ್ಥನಾಮವು ಗುಣಾನುರೂಪ ಮತ್ತು ಅರ್ಥಾನುರೂಪವೆಂದು ಎರಡು ಬಗೆಯಾಗಿದೆ. ಅಂಕಿತನಾಮವೆಂದರೆ ಅವರವರಿಷ್ಟದಂತೆ ಹೆಸರನ್ನಿಟ್ಟುಕೊಳ್ಳುವುದು. ದಿಟದ ನಾಮವೆನ್ನುವುದು ಸಮಾಸವಿಲ್ಲದ ಒಂದಕ್ಷರದಿಂದ ಹಿಡಿದು ಐದು ಅಕ್ಷರಗಳ ವರೆಗಿನ ನಾಮಗಳನ್ನು ಪಡೆದಿರುತ್ತದೆ. [ರೂಢ-ನೆಲಂ, ಪೊಲಂ. ಗುಣಾನುರೂಪಾನ್ವರ್ಥಕ್ಕೆ-ದಾನಿ, ದಯಾಪರಂ. ಅರ್ಥಾನುರೂಪಾನ್ವರ್ಥಕ್ಕೆ - ಹೆಳೆಗಾಲಂ, ನಿಡುಮೂಗಂ. ಅಂಕಿತನಾಮಕ್ಕೆ-ಕಾಟಂ, ಲಸವಂ. ದಿಟದನಾಮಕ್ಕೆ-ಪೂ, ಮರ, ಹೊತ್ತಗೆ.

ಮಹಚ್ಛಬ್ದಮಿರೆ ನಪುಂಸಕಮಕ್ಕುಂ ಸೂತ್ರ:102 ಬದಲಾಯಿಸಿ

ಸಹಜವಾಗಿ ಜನ ಶಬ್ದವು ನಪುಂಸಕಲಿಂಗದಲ್ಲಿ ಪ್ರಯೋಗವಾಗುತ್ತಿದೆ. ಅದಕ್ಕೆ ದುಸ್, ಸತ್ ಮತ್ತು ಸು ಎಂಬಿವು ಸೇರಿದಾಗ ಪುಲ್ಲಿಂಗವಾಗುತ್ತದೆ.(ದುರ್ಜನಂ, ಸಜ್ಜನಂ, ಸುಜನಂ) ಮಹತ್ ಮತ್ತು ಮಹಾ ಎಂಬಿವು ಸೇರಿದಾಗ ನಪುಂಸಕಲಿಂಗವಾಗಿಯೇ [ಜನಂ, ಮಹಾಜನಂ]ಪ್ರಯೋಗದಲ್ಲಿ ಬರುತ್ತದೆ.

ಅಸಹ್ಯವೃತ್ತಿಯೊಳ್ ತಾಂ ಬಹುತ್ವಮೇಕತ್ವದೊಳಂ ಸೂತ್ರ:112 ಬದಲಾಯಿಸಿ

ಏಕವಚನವನ್ನು ಹೇಳುವಾಗ ಕೆಲವೆಡೆ ಅಂದರೆ ಗುರುಭಾವನೆ ಉಳ್ಳವರಲ್ಲಿ, (ಎಮ್ಮ ತಂದೆಗಳ್) ಮುನಿಗಳಲ್ಲಿ,(ಸಮಂತಭದ್ರಸ್ವಾಮಿಗಳ್) ತಿರಸ್ಕಾರವನ್ನು ನುಡಿಯುವ ಸಮಯದಲ್ಲಿ, (ಅಸಹ್ಯವೃತ್ತಿ-ಬಡವಾದಿರರಸ) ಬಹುವಚನವನ್ನು ಹೇಳುತ್ತಾರೆ.

ಪುಲ್ಲಿಂಗದಲ್ಲಿ ಇನಾಗಮಂ ಅಕ್ಕುಂ ಸೂತ್ರ:115 ಬದಲಾಯಿಸಿ

ಪ್ರಥಮಾ ವಿಭಕ್ತಿಯಲ್ಲಿ ಏಕವಚನದ ಅಕಾರಾಂತಗಳಿಗೆ ಬಿಂದು ಬರುತ್ತದೆ.[ವೇದವಿದಂ, ಅಥರ್ವಕುಶಲಂ] ಅಕಾರಾಂತವಲ್ಲದಿರುವಾಗ ಲೋಪವಾಗುತ್ತದೆ.[ಪುಲ್, ಪೊದರ್] ಅಕಾರಾಂತ ಪುಲ್ಲಿಂಗಕ್ಕೆ ವಿಭಕ್ತಿಸ್ವರಗಳು ಪರವಾದಾಗ ‘ನ’ಕಾರಾವು ಬರುತ್ತದೆ.[ಅವನಂ,ಅವನಿಂ]

ಹ್ರಸ್ವೈತ್ವದೊಳಂ ಇನಾಗಮ ವಿಧಿ ತಪ್ಪದು ಸೂತ್ರ:118 ಬದಲಾಯಿಸಿ

ಉಕಾರ,[ತಳಿರ್ವಾಸು+ಇಂದೆ=ತಳಿರ್ವಾಸಿನಿಂದೆ] ಋಕಾರ,[ಪಿತೃವಿನ] ಔಕಾರ[ಗ್ಲೌವಿನ. ಗ್ಲೌ=ಚಂದ್ರ] ಮತ್ತು ಎಕಾರ[ಗುರುಗೆ] ಗಳನ್ನು ಕೊನೆಯಲ್ಲಿ ಉಳ್ಳ ಶಬ್ದಗಳಿಗೆ ತೃತೀಯಾವಿಭಕ್ತಿಯ ಪ್ರತ್ಯಯ ಮೊದಲಾದುವನ್ನು ಹಚ್ಚಿದಾಗ ‘ಇನ’ ಆಗಮವು ಬರುತ್ತದೆ. ತೃತೀಯೆಯಲ್ಲಿ ಮತ್ತು ವಕಾರ ಸಂಧಿಯಲ್ಲಿ ಇನಾಗಮ ವಿಕಲ್ಪದಿಂದ ಬರುತ್ತದೆ.

ಪಂಚಮಿಯೊಳಂ ತೃತೀಯೆ ಸಮರ್ಥಂ ಸೂತ್ರ:146 ಬದಲಾಯಿಸಿ

ಪ್ರಥಮಾ, ತೃತೀಯಾ, ಚತುರ್ಥೀ ಮತ್ತು ಪಂಚಮೀ ವಿಭಕ್ತಿಗಳ ಅರ್ಥದಲ್ಲಿ ದ್ವಿತೀಯೆಯು ಬರುತ್ತದೆ. ತೃತೀಯಾ ವಿಭಕ್ತ್ಯರ್ಥದಲ್ಲಿ ಸಪ್ತಮೀ ವಿಭಕ್ತಿ ಬರುತ್ತದೆ. ಪಂಚಮೀ ವಿಭಕ್ತಿಯ ಅರ್ಥದಲ್ಲಿ ತೃತೀಯಾ ವಿಭಕ್ತಿಯು ಬರುತ್ತದೆ. [ಕೆರೆಯತ್ತಣಿಂ = ಕೆರೆಯಿಂ]

ಪ್ರಥಮೆಯುಂ ದ್ವಿತೀಯೆಯೊಳ್ ಅಕ್ಕುಂ 147 ಬದಲಾಯಿಸಿ

ಷಷ್ಠಿ ಮತ್ತು ದ್ವಿತೀಯಾ ವಿಭಕ್ತಿಯ ಅರ್ಥದಲ್ಲಿ ಚತುರ್ಥೀ ವಿಭಕ್ತಿಯುಂ, ಸಪ್ತಮೀ ವಿಭಕ್ತ್ಯರ್ಥದಲ್ಲಿ ಪ್ರಥಮಾ, ಷಷ್ಠಿ ಮತ್ತು ಚತುರ್ಥೀ ವಿಭಕ್ತಿಗಳು, ದ್ವಿತೀಯಾ ವಿಭಕ್ತ್ಯರ್ಥದಲ್ಲಿ ಪ್ರಥಮಾ ವಿಭಕ್ತಿಯೂ ಪಲ್ಲಟಿಸಿ ಬರುತ್ತದೆ.[ಒಂದು ವರ್ಷಮನಿರ್ದಂ – ಒಂದು ವರ್ಷಮಿರ್ದಂ]

ಅಕ್ಕುಂ ಜಾತಿಯೊಳ್ ಏಕತ್ವಕ್ಕೆ ಬಹುತ್ವಂ ಸೂತ್ರ:148 ಬದಲಾಯಿಸಿ

‘ಜಾತಿ’ ಎಂದರೆ ಗುಂಪು. ಈ ಅರ್ಥದಲ್ಲಿ ಏಕವಚನವಿದ್ದರೂ ಬಹುವಚನವನ್ನು ತಿಳಿಸುತ್ತದೆ.[ಆನೆ ನೂಂಕಿದುವು, ಆನೆಗಳ್ನೂಂಕಿದವು] ಆದುದರಿಂದ ಕ್ರಿಯಾಪದವು ಬಹುವಚನವಾಗಿರುವುದಿಲ್ಲ. ಜಾತಿಯಲ್ಲದಿರುವಾಗ ಬಹುವಚನಕ್ಕೆ ಏಕವಚನವು ವಿಶೇಷಣವಾಗಿ ಬಹುವಚನವಾಗಿರುತ್ತದೆ.

ಏಕತೆಯೆ ತನಗೆ ಬಹುತಯನ್ ಆಕರಿಸದು ಜಾತಿ ಸೂತ್ರ:149 ಬದಲಾಯಿಸಿ

ಕಾರಕವು ವಿಶೇಷಣವಾಗಿ ಏಕವಚನದಲ್ಲಿದ್ದರೆ, ಕ್ರಿಯಾಪದವು ಏಕವಚನದಲ್ಲಿದ್ದರೆ ವಿಸೇಷ್ಯವಾದ ಜಾತಿವಾಚಕಕ್ಕೆ ಏಕವಚನವೇ ಬರುತ್ತದೆ.[ಕಾರಕ-ಇಂತುಟಾನೆ, ಕ್ರಿಯೆಗೆ-ನಡೆದುದು ಹಂಸೆ]

ಕೂಡಿ ನುಡಿವೆಡೆಯೊಳ್ ಎಂದುಂ ಕೂಡದು ಲಿಂಗತ್ರಯಕ್ಕೆ ತರತಮ ಭಾವಂ ಸೂತ್ರ:152 ಬದಲಾಯಿಸಿ

ಮೂರು ಲಿಂಗಗಳೂ ಒಟ್ಟಿಗೆ ಸೇರಿ ಬರುವಾಗ ಅವುಗಳಲ್ಲಿ ಯಾವುದು ಮುಖ್ಯ ಯಾವುದು ಅಮುಖ್ಯ ಎಂಬ ಭೇದವೇನಿಲ್ಲ. ವಾಕ್ಯದ ಕೊನೆಯಲ್ಲಿ ಬರುವ ಲಿಂಗವೇ ಪ್ರಧಾನವಾಗಿರುತ್ತದೆ.[ಸೇನೆಯುಮರಸಿಯುಮರಸನುಂ ಬಂದರ್, ಅರಸನುಂ ಅರಸಿಯುಂ ಚತುರಂಗಬಲಮುಂ ಬಂದವು]

ಅವ್ಯಯೀಭಾವದೊಳ್ ಕೆಳಗು ಕಿಳೆನಿಕ್ಕುಂ ಸೂತ್ರ:177 ಬದಲಾಯಿಸಿ

ಅವ್ಯಯೀಭಾವ ಸಮಾಸದಲ್ಲಿ ಬರುವ ಅಡಿ, ಮೇಗು ಎಂಬ ಶಬ್ದಗಳ ಕೊನೆಯ ಅಕ್ಷರಕ್ಕೆ ಬಿಂದುವು ಬರುತ್ತದೆ. [ಅಡಿಗೆ-ಅಂಗಾಲ್, ಮೇಗು-ಮೇಂಗಾಲ್] ಮುಂದು, ಪಿಂದು ಎಂಬ ಪದಗಳ ಕೊನೆಯ ಅಕ್ಷರವು ಲೋಪವಾಗುತ್ತದೆ. [ಮುಂದು-ಮುಂಗಾಲ್, ಪಿಂದು-ಪಿಂಗಾಲ್] ‘ಕೆಳಗೆ’ ಎಂಬುದು ‘ಕಿಳ್’ ಎಂಬುದಾಗಿಯೂ, [ಕರೆಯ+ಕೆಳಗೆ= ಕಿಳ್ಕೆರೆ] ‘ಪೆರಗೆ’ ಎಂಬುದು ‘ಪಿಂತು’ ಎಂದೂ ಆಗುತ್ತದೆ. [ಇಲ್+ಪೆರಗೆ=ಪಿಂತಿಲ್, ಪರಗೆ+ತೊಲೆ=ಪಿಂತೊಲೆ]

ಪದವಿಧಿ ಕನ್ನಡಕಂ ಸಕ್ಕದಕ್ಕಮಿಲ್ಲಾ ಸೂತ್ರ:185 ಬದಲಾಯಿಸಿ

ಕನ್ನಡz ಪದಕ್ಕೂ ಸಂಸ್ಕøತ ಪದಕ್ಕೂ ಸಮಾಸವಾಗುವುದಿಲ್ಲ. [ಅರಿಸಮಾಸಕ್ಕೆ-ಮುಖತಾವರೆ, ಅರಸುಕುಮಾರಂ] ಪ್ರಾಚೀನ ಕವಿಗಳು ಪ್ರಯೋಗಿಸಿರುವುದನ್ನು ಆಗಬಹುದು. [ಪ್ರಾಚೀನ ಕವಿ ಪ್ರಯೋಗಕ್ಕೆ-ಕಡುರಾಗಂ, ಕೂರಸಿ, ಮಾರ್ಬಲಂ, ಮೊಗರಾಗಂ] ಬಿರುದಾವಳಿಯಲ್ಲಿ ಇದು ಆಗಬಹುದು. [ಬಿರುದಾವಳಿಗೆ-ಗಜದುಳಿ, ಗಜಪಾರು, ನರಕಲೋಕದಲ್ಲಣಂ, ರಾಯಕೋಳಾಹಳಂ]ಉಳಿದ ಕಡೆಗಳಲ್ಲಿ ದೋಷವಾಗುವುದು.

ಮಹಚ್ಛಬ್ದಕ್ಕುದ್ಬವು ಇಕ್ಕುಂ ಆದೇಶಂ ಸೂತ್ರ:186 ಬದಲಾಯಿಸಿ

ಎಲ್ಲ ಎಂಬ ಪದಕ್ಕೆ ವಿಕಲ್ಪದಿಂದ ಎಲ್ಲಾ ಎಂದು ದೀರ್ಘವು ಆದೇಶವಾಗಿ ಬರುತ್ತದೆ.[ಎಲ್ಲ-ಎಲ್ಲಕಾರ್ಯಂ, ಎಲ್ಲಾ-ಎಲ್ಲಾ ಪುರುಷರ್]ಸಂಸ್ಕøತದ ‘ಮಹತ್’ ಎಂಬ ಶಬ್ದಕ್ಕೆ ಕನ್ನಡದಲ್ಲಿ ‘ಮಾ’ ಎಂಬುದು ಆದೇಶವಾಗಿ ಬರುತ್ತದೆ. [ಮಾದೇವಿ, ಮಾಕಾಳಿ] ಇವುಗಳಿಗೆ ಸಂಸ್ಕøತ ಪದವು ಪರವಾದರು ಸಹ ದೋಷವಿಲ್ಲವು.

ಬೆಳೆ ಎಂಬ ಧಾತು ಸಸ್ಯಾವಳಿಯೊಳ್ ಸೂತ್ರ:228 ಬದಲಾಯಿಸಿ

ಗಿಡ, ಮರ ಮತ್ತು ಬಳ್ಳಿ ಮೊದಲಾದವುಗಳ ಅಭಿವೃದ್ಧಿಯಲ್ಲಿ ‘ಬೆಳೆ’ ಎಂಬ ಧಾತುವನ್ನು ಉಪಯೋಗಿಸಬೇಕು. [ಬೆಳೆ - ನೆಲ್ಲುಂ ಕೌಂಗುಂ ಮಾವುಂ ಮಲ್ಲಿಗೆಯುಂ ಬೆಳೆವುವು] ಉಳಿದ ವಸ್ತುಗಳ ವೃದ್ಧಿಯಲ್ಲಿ ‘ಬಳೆ’ ಎಂಬ ಧಾತುವನ್ನು ಉಪಯೋಗಿಸಬೇಕು. [-- ಮೃದುಮುಗ್ಧಾಲಾಪಂ ಬಳೆದಂ ಸರಸ್ವತೀ ಮಣಿಹಾರಂ] ‘ಬೆಳೆ’ ಎಂಬ ಧಾತುವು ಭಾವವಚನದಲ್ಲಿ ‘ಬೆಳೆ’ ಎಂದೂ, ‘ಬೆಳೆಸು’ ಎಂದೂ ರೂಪವನ್ನು ಹೊಂದುತ್ತದೆ. [ಬೆಳಸುಂ ಕುಂದುದು] ‘ಬಳೆ’ ಎಂಬ ಧಾತುವಿನ ಭಾವವಚನ ರೂಪವು ‘ಬಳವಿ’ ಎಂದಾಗುತ್ತದೆ. [ತನುಜನ ಬಳವಿಯನೆ ನೋಡಿ ಜನಕಂ ನಲಿದಂ]

ಉಲ್ಲೇಖ ಬದಲಾಯಿಸಿ