ಶಕ
ಶಕ ಪದವನ್ನು ಮಧ್ಯ ಏಷ್ಯಾದಿಂದ ವಲಸೆಬಂದು ಮಧ್ಯ, ಉತ್ತರ ಮತ್ತು ಪಶ್ಚಿಮ ದಕ್ಷಿಣ ಏಷ್ಯಾದ ಭಾಗಗಳಲ್ಲಿ (ಸೋಗ್ದಾ, ಬ್ಯಾಕ್ಟ್ರಿಯಾ, ಅರಕೋಸಿಯಾ, ಗಾಂಧಾರ, ಸಿಂಧ್, ಕಾಶ್ಮೀರ, ಪಂಜಾಬ್, ಹರ್ಯಾಣಾ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ) ನೆಲೆಸಿದ ಬುಡಕಟ್ಟುಗಳನ್ನು ಸೂಚಿಸಲು ಬಳಸಲಾಗುತ್ತದೆ. ಇವರು ಕ್ರಿ.ಪೂ. ೨ನೇ ಶತಮಾನದ ಮಧ್ಯಭಾಗದಿಂದ ಕ್ರಿ.ಶ. ೪ನೇ ಶತಮಾನದಲ್ಲಿ ನೆಲೆಸಿದ್ದರು.
ಮ್ಯೂಸ್ (ಕ್ರಿ.ಪೂ. ೧ನೇ ಶತಮಾನ) ದಕ್ಷಿಣ ಏಷ್ಯಾದಲ್ಲಿ ಮೊದಲ ಶಕ ರಾಜನಾಗಿದ್ದನು. ಇವನು ಶಕರ ಅಧಿಕಾರವನ್ನು ಗಂಧಾರದಲ್ಲಿ (ಆಧುನಿಕ ಪಾಕಿಸ್ತಾನ ಮತ್ತು ಅಫ಼್ಘಾನಿಸ್ತಾನ ಪ್ರದೇಶ) ಸ್ಥಾಪಿಸಿದನು ಮತ್ತು ಕ್ರಮೇಣ ತನ್ನ ಪ್ರಭುತ್ವವನ್ನು ವಾಯವ್ಯ ಭಾರತದಲ್ಲಿ ವಿಸ್ತರಿಸಿದನು. ಕ್ರಿ.ಶ. ೩೯೫ರಲ್ಲಿ ಭಾರತದ ಸಾಮ್ರಾಟ ಗುಪ್ತ ಸಾಮ್ರಾಜ್ಯದ ಎರಡನೇ ಚಂದ್ರಗುಪ್ತನ ಕೈಯಲ್ಲಿ ಕೊನೆಯ ಪಶ್ಚಿಮ ಕ್ಷತ್ರಪ ಮೂರನೇ ರುದ್ರಸಿಂಹನ ಪರಾಜಯದಿಂದ ವಾಯವ್ಯ ಭಾರತದಲ್ಲಿ ಶಕರ ಆಳ್ವಿಕೆ ಕೊನೆಯಾಯಿತು.[೧] ಕ್ರಿ.ಶ. ೨ನೇ ಶತಮಾನದಲ್ಲಿ ದಕ್ಷಿಣ ಭಾರತದ ಸಾಮ್ರಾಟ ಶಾತವಾಹನ ರಾಜವಂಶದ ಗೌತಮಿಪುತ್ರ ಶಾತಕರ್ಣಿಯ ಕೈಯಲ್ಲಿ ಸೋತ ನಂತರ ಶಕ ರಾಜರ ಅಧಿಕಾರ ಕ್ಷೀಣಿಸಲು ಆರಂಭವಾಯಿತು.[೨][೩] ನಂತರ ಶಕ ರಾಜ್ಯವನ್ನು ಎರಡನೇ ಚಂದ್ರಗುಪ್ತನು ೪ನೇ ಶತಮಾನದಲ್ಲಿ ಸಂಪೂರ್ಣವಾಗಿ ನಾಶಮಾಡಿದನು.
ನೈಋತ್ಯ ಏಷ್ಯಾದಲ್ಲಿ ಮೊದಲ ಶಕ ರಾಜ್ಯವು ಪಾಕಿಸ್ತಾನದಲ್ಲಿ ಸಿಂಧ್ ಇಂದ ಸೌರಾಷ್ಟ್ರದ ಪ್ರದೇಶಗಳಲ್ಲಿ ಕ್ರಿ.ಪೂ. ೧೧೦ರಿಂದ ೮೦ ರ ವರೆಗೆ ಸ್ಥಿತವಾಗಿತ್ತು. ಅವರು ಕ್ರಮೇಣ ಮತ್ತಷ್ಟು ಉತ್ತರಕ್ಕೆ ಇಂಡೊ-ಗ್ರೀಕ್ ಪ್ರಾಂತ್ಯದಲ್ಲಿ ವಿಸ್ತರಿಸಿದರು, ಕ್ರಿ.ಪೂ. ೮೦ರಲ್ಲಿ ಮ್ಯೂಸ್‍ನ ವಿಜಯಗಳ ವರೆಗೆ. ಶಕರು ಅಂತಿಮವಾಗಿ ವಾಯವ್ಯದಲ್ಲಿ ತಕ್ಷಶಿಲೆಯ ಹತ್ತಿರ ನೆಲೆಹೊಂದಿದ ರಾಜ್ಯವನ್ನು ಸ್ಥಾಪಿಸಿದರು, ಮತ್ತು ಅವರ ಎರಡು ದೊಡ್ಡ ಕ್ಷತ್ರಪಗಳು, ಪೂರ್ವದಲ್ಲಿ ಮಥುರಾದಲ್ಲಿ, ಮತ್ತು ಇನ್ನೊಂದು ನೈಋತ್ಯದ ಸೌರಾಷ್ಟ್ರದಲ್ಲಿ ಇದ್ದವು.
ಆಗ್ನೇಯದಲ್ಲಿ, ಶಕರು ಉಜ್ಜೈನ್ ಪ್ರದೇಶವನ್ನು ಆಕ್ರಮಣ ಮಾಡಿದರು, ಆದರೆ ತರುವಾಯ ಕ್ರಿ.ಪೂ. ೫೭ರಲ್ಲಿ ಮಾಲ್ವಾದ ರಾಜ ವಿಕ್ರಮಾದಿತ್ಯನು ಅವರನ್ನು ಹಿಮ್ಮೆಟ್ಟಿಸಿದನು. ಈ ಘಟನೆಯ ಸ್ಮರಣಾರ್ಥ ವಿಕ್ರಮಾದಿತ್ಯನು ವಿಕ್ರಮ ಶಕೆಯನ್ನು ಊರ್ಜಿತಗೊಳಿಸಿದನು. ವಿಕ್ರಮ ಶಕೆಯು ಕ್ರಿ.ಪೂ. ೫೭ರಲ್ಲಿ ಆರಂಭವಾಗುತ್ತಿದ್ದ ನಿರ್ದಿಷ್ಟ ಭಾರತೀಯ ಪಂಚಾಂಗವಾಗಿತ್ತು. ಒಂದು ಶತಮಾನಕ್ಕಿಂತ ಹೆಚ್ಚು ಕಾಲದ ನಂತರ, ಶಕರು ಉಜ್ಜೈನ್ ಅನ್ನು ಮತ್ತೊಮ್ಮೆ ಆಕ್ರಮಣ ಮಾಡಿ ಶಕ ಶಕೆಯನ್ನು. ಇದು ಬಹುಕಾಲವಿದ್ದ ಪಶ್ಚಿಮ ಕ್ಷತ್ರಪ ರಾಜ್ಯದ ಆರಂಭವನ್ನು ಗುರುತಿಸಿತು......