ಶಂಕರಪೋಳಿ ಪಶ್ಚಿಮ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ತಿನಿಸು, ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ.[] ಕರ್ನಾಟಕದಲ್ಲೂ ತಯಾರಿಸುತ್ತಾರೆ. ಸಾಂಪ್ರದಾಯಿಕವಾಗಿ ಇದನ್ನು ದೀಪಾವಳಿಯಲ್ಲಿ ವಿಶೇಷ ತಿನಿಸಾಗಿ ಭೋಗಿಸಲಾಗುತ್ತದೆ. ಇದು ಕಾರ್ಬೊಹೈಡ್ರೆಟ್‍ಗಳಿಂದ ಸಮೃದ್ಧವಾಗಿದೆ, ಹಾಗಾಗಿ ಶಕ್ತಿಯ ಧಿಡೀರ್ ಮೂಲವಾಗಿದೆ. ಇದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಅವಲಂಬಿಸಿ ಇದು ಸಿಹಿ, ಹುಳಿ ಅಥವಾ ಖಾರವಾಗಿರಬಹುದು.

ಶಂಕರಪೋಳಿ
ಮೂಲ
ಪರ್ಯಾಯ ಹೆಸರು(ಗಳು)ಶಕ್ಕಪಾರಾ
ಮೂಲ ಸ್ಥಳಭಾರತೀಯ ಉಪಖಂಡ
ಪ್ರಾಂತ್ಯ ಅಥವಾ ರಾಜ್ಯಅಫ್ಘಾನಿಸ್ತಾನ್, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ
ವಿವರಗಳು
ಸೇವನಾ ಸಮಯತಿನಿಸು
ಮುಖ್ಯ ಘಟಕಾಂಶ(ಗಳು)ಹಾಲು, ಸಕ್ಕರೆ, ತುಪ್ಪ, ಮೈದಾ, ರವೆ

ಬಳಸುವ ಪದಾರ್ಥಗಳು

ಬದಲಾಯಿಸಿ

ಶಂಕರಪೋಳಿಯನ್ನು ಹಾಲು, ಸಕ್ಕರೆ, ತುಪ್ಪ, ಮೈದಾ, ರವೆ ಮತ್ತು ಉಪ್ಪಿನ ಕಣಕದಿಂದ ತಯಾರಿಸಲಾಗುತ್ತದೆ.

ತಯಾರಿಕೆ

ಬದಲಾಯಿಸಿ

ಮಿಶ್ರಣವನ್ನು ಕಣಕವಾಗಿ ಮಾಡಿಕೊಂಡು ವಿಷಮಕೋಣ ಆಕಾರದ ಘಟಕಗಳಾಗಿ ಯಾಂತ್ರಿಕವಾಗಿ ಕತ್ತರಿಸಿ ತುಪ್ಪ ಅಥವಾ ಬೆಣ್ಣೆಯಲ್ಲಿ ಕರಿಯಲಾಗುತ್ತದೆ.[]

  1. ಹಾಲನ್ನು ಕುದಿಸಿ, ಬಿಸಿ ಹಾಲಿನಲ್ಲಿ ಸಕ್ಕರೆಯನ್ನು ಕರಗಿಸಿ.
  2. ನಂತರ ತುಪ್ಪ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ.
  3. ಈ ಮಿಶ್ರಣವನ್ನು ಒಲೆಯಿಂದ ಕೆಳಗಿಳಿಸಿ (ಸ್ವಲ್ಪ ಹುರಿದ) ಮೈದಾ ಮತ್ತು ರವಾವನ್ನು ಮಿಶ್ರಣಕ್ಕೆ ಸೇರಿಸಿ.
  4. ಹಿಟ್ಟನ್ನು ನಾದಿ 2–3 ಗಂಟೆ ಇಡಿ.
  5. ಲಟ್ಟಣಿಗೆಯಿಂದ ಕಣಕವನ್ನು ಚಪಾತಿ ಆಕಾರದಲ್ಲಿ ಲಟ್ಟಿಸಿಕೊಂಡು ಕಣಕವನ್ನು ವಿಷಮಕೋಣ ಆಕಾರದ ಶಂಕರಪೋಳಿಯಾಗಿ ಕತ್ತರಿಸಿ.
  6. ಕಂದು ಬಣ್ಣ ಬರುವವರೆಗೆ ತುಪ್ಪದಲ್ಲಿ ಕರಿಯಿರಿ.
 

ಇದು ದೀರ್ಘವಾದ ಬಡು ಅವಧಿಯನ್ನು ಹೊಂದಿದೆ. ಇದು ಅಂಗಡಿಗಳಲ್ಲಿ ವ್ಯಾಪಕವಾಗಿ ದೊರೆಯುತ್ತದೆ; ಜನರು ಸಾಮಾನ್ಯವಾಗಿ ವರ್ಷದ ಇತರ ವೇಳೆ ಸಿದ್ಧವಾದ ಶಂಕರಪೋಳಿಯನ್ನು ಖರೀದಿಸುತ್ತಾರೆ ಮತ್ತು ಮನೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಮಾತ್ರ ತಯಾರಿಸುತ್ತಾರೆ. ಇದನ್ನು ವರ್ಷದಾದ್ಯಂತ ತಯಾರಿಸಿ ಮಾರಾಟಮಾಡುವ ಮಹಿಳೆಯರಿಗೆ ಇದು ಜೀವನೋಪಾಯವನ್ನು ಒದಗಿಸುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. Sacharoff, Shanta (1996). Flavors of India: Vegetarian Indian Cuisine. Book Publishing Company. p. 192. ISBN 9781570679650.
  2. "ಆರ್ಕೈವ್ ನಕಲು". Archived from the original on 2018-10-22. Retrieved 2018-02-23.