ವ್ಯವಹಾರದ ಸಾಮಾಜಿಕ ಹೊಣೆಗಾರಿಕೆ

ಅರ್ಥ ಬದಲಾಯಿಸಿ

ಲಾಭ ಗಳಿಸುವುದು ಯಾವುದೆ ಒಂದು ವ್ಯವಹಾರದ ಒಂದು ಪ್ರಮುಖವಾದ ಅಥವಾ ಪ್ರಧಾನವಾದ ಗುರಿ.ವ್ಯವಹಾರವನ್ನು ಕೈಗೊಳುವುದು ಯಂತ್ರಗಳಿಂದಲ್ಲ,ಮಾನವ ಜೀವಿಗಳಿಂದ. ಯಂತ್ರ ಸಂಸ್ಕ್ರತಿಯನ್ನು ನಾವು ಎಷಟೇ ಬೆಳಸಿದರೂ ಅಲ್ಲಿ ಮಾನವ ಅಂಸಶವೋಂದು ಇದ್ದೇ ಇರುತ್ತದೆ. ಆದ್ದರಿಂದ, ಒಬ್ಬ ವ್ಯವಹಾರಸ್ಥ ಗರಿಷಟ ಲಾಭ ಗಳಿಸುವ ಒಂದೇ ದೇಯಕ್ಕೆ ಕಟ್ಟುನಿಟ್ಟಾಗಿ ಅಂಟ್ಟಿಕೂಳ್ಳಲಾರ. ವಿವಿಧ ಬಗೆಯ ಸಹಕಾರಿ ಸಂಘಗಳು,ಬಳಕೆದಾರರ ಹಿತರಕಷಣೆ, ಕಾರ್ಮಿಕ ಸಂಘಗಳು, ಇತ್ಯಾದಿಗಳ ಆಗಮನ ಯಾವುದೇ ವ್ಯವಹಾರದ ಸಂಸ್ಥೆ, ಸಮಾಜದ ಕಲ್ಯಾಣಕ್ಕೆ ಆನುಕೂಲಕರವಾದ ಚಟುವಟಿಕೆಗಳನ್ನು ಬೆಳಸುವಂತೆ ಮಾಡಿವೆ.

ಸಾಮಾಜಿಕ ಹೊಣೆಗಾರಿಕೆಯೆಂದರೆ, ನಿರ್ಧಾರ ರೂಪಿಸುವವರು, ತಮ್ಮ ಹಿತಾಸಕ್ತಿಗಳ ಜೊತೆಯಲ್ಲೇ ಇಡೀ ಸಮಾಜದ ಕಲ್ಯಾಣವನ್ನು ಗಮನದಲ್ಲಿರಿಸಿಕೊಂಡು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಹೊಣೆಗಾರಿಕೆ, ವ್ಯವಹಾರಸ್ಥರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಮತ್ತು ಅಂಥ ನಿರ್ಧಾರಗಳ ಕಾರ್ಯಾಚರಣೆ ಸಾಮಾಜಿಕ ಬದ್ದತೆಯನ್ನು ಹೊಂದಿರಬೇಕು, ವೈವಿಧ್ಯತೆ, ವಿಸ್ತರಣೆ, ಹೊಸ ಶಾಖೆಯ ಆರಂಭ, ಇರುವ ಶಾಖೆಯನ್ನು ಮುಚ್ಚುವುದು, ಮನುಷ್ಯರು ಮತ್ತು ಯಂತ್ರಗಳನ್ನು ಬದಲಿಸುವುದು ಇತ್ಯಾದಿ ನಿರ್ಧಾರಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತವೆ. ವಿಷಯ ಮಹತ್ವದ್ದಿರಲಿ ಅಥವಾ ಇಲ್ಲದಿರಲಿ, ಯಾವುದೇ ಕ್ರಮ ತೆಗೆದುಕೊಳ್ಲುವ ಮೊದಲು ವ್ಯವಹಾರಸ್ಥರು ಸಮಾಜಿಕ ಹೊಣೆಗಾರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡಿರುಬೇಕಾಗುತ್ತದೆ.

ಚಿತ್ರ:Capture banner.jpg
ಸಮಾಜದ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ

ಸಾಮಾಜಿಕ ಹೊಣೆಗಾರಿಕೆಯ ಪರವಾದ ವಾದಗಳು ಬದಲಾಯಿಸಿ

1.ವ್ಯವಹಾರದ ಸಾರ್ವಜನಿಕ ನಿರೀಕ್ಷೆಗಳು ಬದಲಾಗಿವೆ. ಸಾಮಾಜಿಕ ಹೊಣೆಗಾರಿಕೆಯ ಅತ್ಯಂತ ಪ್ರಮುಖ ವಾದಗಳಲ್ಲಿ ಒಂದೆಂದರೆ, ವ್ಯವಹಾರದ ಸಮಾಜಿಕ ನಿರೀಕ್ಷೆಗಳು ಬದಲಾಗಿವೆ. ವ್ಯವಹಾರ ಬಹುಕಾಲ ಉಳಿಯಬೇಕೆಂದಿದ್ದರೆ, ಅದು ಮಾಜದ ಅಗತ್ಯಗಳಿಗೆ ಪ್ರತಿಸ್ಪಂದಿಸಬೇಕು ಮತ್ತು ಸಮಾಜ ಬಯಸಿದ್ದನ್ನು ನೀಡಬೇಕು.

2.ವ್ಯವಹಾರಕ್ಕೆ ಉತ್ತಮ ಪರಿಸರ ಸಾಮಾಜಿಕ ಹೊಣೆಗರಿಕೆಯನ್ನು ಬೆಂಬಲಿಸುವ ಇನ್ನೊಂದು ವಾದವೆಂದರೆ, ಈ ಪರಿಕಲ್ಪನೆ, ಉತ್ತಮ ಸಮಾಜ, ವ್ಯವಹಾರದ ಕಾರ್ಯಾಚರಣೆಗಳಿಗೆ ಹೆಚ್ಚು ಅನುಕೂಲಕರವಾದ ಪರಿಸರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದರಿಂದ ಉತ್ತಮಗುಣಮಟ್ಟದ ಕಾರ್ಮಿಕರನ್ನು ನೇಮಿಸಿಕೊಳ್ಳೂವುದು ಸುಲಭವಾಗುತ್ತದೆ ಮತ್ತು ಕೆಲಸಬಿಡುವ ಕಾರ್ಮಿಕರ ಸಂಖ್ಯೆ ಮತ್ತು ಗೈರುಹಾಜರಿಯನ್ನು ಕಡಿಮೆ ಮಾಡಬಹುದು.

3. ಸಾರ್ವಜನಿಕ ವ್ಯಕ್ತಿತ್ವ ಇನ್ನೊಂದು ವಾದದ ಪ್ರಕಾರ, ಅದು ಸಾರ್ವಜನಿಕ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಪ್ರತಿಯೊಂದು ಬಿಡಿ ಸಂಸ್ಥೆಯೂ ಅಧಿಕಗೊಂಡ ಸಾರ್ವಜನಿಕ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ, ಅದು ಇನ್ನಷ್ಟು ಗ್ರಾಹಕರು, ಉತ್ತಮ ಉದ್ಯೋಗಿಗಳು, ಹೆಚ್ಚು ಜವಾಬ್ದಾರಿಯಂತ ಹಣದ ಮಾರುಕಟ್ಟೆಗಳು ಮತ್ತು ಇತರ ಪ್ರಯೋಜನಗಳನ್ನು ಪಡೆಯಬಹುದು. ಉತ್ತಮ ಸಾರ್ವಜನಿಕ ವ್ಯಕ್ತಿತ್ವವುಳ್ಳ ಸಂಸ್ಥೆ ಸಾಮಾಜಿಕ ಗುರಿಗಳನ್ನು ಬೆಂಬಲಿಸಬೇಕು.

4. ಸರ್ಕಾರಿ ನಿಯಮಾವಳಿ ಉಲ್ಲಂಘನೆ ತಪ್ಪಿಸುವುದು ಸಾರ್ವಜನಿಕ ಹಿತಾಸಕ್ತಿಯಿಂದ ವ್ಯವಹಾರವನ್ನು ನಿಯಂತ್ರಿಸಲು ಸರ್ಕಾರ ಸದಾ ತನ್ನ ಬೆಂಬಲದ ಹಸ್ತ ಚಾಚುತ್ತದೆ. ಆದರೆ, ವ್ಯವಹಾರ ಅಗತ್ಯ ಸ್ವಾತಂತ್ರ್ಯದಿಂದ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದು ಯಾವಾಗಲೂ ಉತ್ತಮ.

5. ಹೊಣೆಗಾರಿಕೆ ಮತ್ತು ಶಕ್ತಿಯ ಸಮತೋಲನ ಇನ್ನೊಂದು ಪ್ರಮುಖ ವಾದವೆಂದರೆ, ಸಾಮಾಜಿಕ ಹೊಣೆಗಾರಿಕೆಯೆಂದರೆ, ತನ್ನ ಶಕ್ತಿಗೆ ಹೆಚ್ಚಾಗಿ ಸಂಬಂಧಿಸಿದ ವ್ಯವಹಾರದ ಹೊಣೆಗಾರಿಕೆಯೇ ಆಗಿದೆ. ವ್ಯವಹಾರಸ್ಥರು ವ್ಯಾಪಕವಾದ ಸಾಮಾಜಿಕ ಶಕ್ತಿಯನ್ನು ಹೊಂದಿರುತ್ತಾರೆ. ಅವರು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಪ್ರಭಾವ ಬೀರಬಹುದು. ಪ್ರತಿಯೊಂದು ವ್ಯವಹಾರದ ಸಂಸ್ಥೆ, ತನ್ನ ಶಕ್ತ್ಯನುಸಾರ ಹೊಣೆಗಾರಿಕೆಯನ್ನು ವಹಿಸಿಕೊಂಡು ಅದನ್ನು ನಿರ್ವಹಿಸಬೇಕು.

6. ವ್ಯವಹಾರದ ಸಂಪನ್ಮೂಲಗಳು ಒಂದು ವ್ಯವಹಾರ, ಜನ, ಹಣ, ಪ್ರತಿಭೆ ಮತ್ತು ಪರಿಣತಿಗಳ ಲೆಕ್ಕದಲ್ಲಿ ವ್ಯಾಪಾರ ಸಂಪನ್ಮೂಲಗಳ ಸಂಚಯವನ್ನು ಹೊಂದಿರಬಹುದು. ಈ ಸಂಪನ್ಮೂಲಗಳಿಂದ ವ್ಯವಹಾರ ತನ್ನ ಸಾಮಾಜಿಕ ಹೊಣೆಗರಿಕೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು.

7. ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವುದು ಯಾವಾಗಲೂ ಚಿಕಿತ್ಸೆಗಿಂತ ರೋಗವನ್ನು ತಡೆಗಟ್ಟುವುದೇ ಉತ್ತಮ, ಸಾಮಾಜಿಕ ಸಮಸ್ಯೆಗಳು ಉಲ್ಬಣವಗಿ ಆಡಳಿತ ಮಂಡಲಿಯು ಬಹುಪಾಲು ಅಮೂಲ್ಯ ಸಮಯವನ್ನು ಹಾಳು ಮಾಡುವ ಮೊದಲೇ ವ್ಯವಹಾರ ತನ್ನ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸುವುದು ಅದರ ಕರ್ತವ್ಯವಾಗಿದೆ.

ಸಾಮಾಜಿಕ ಹೊಣೆಗಾರಿಕೆಯ ವಿರುದ್ಧವಾದ ವಾದಗಳು ಬದಲಾಯಿಸಿ

1. ಲಾಭ ಗರಿಷ್ಠಗೊಳಿಸುವುದು ಸಾಮಾಜಿಕ ಹೊಣೆಗಾರಿಕೆಯ ವಿರುದ್ಧವಾದ ವಾದವೆಂದರೆ, ಗರಿಷ್ಠ ಲಾಭ ಗಳಿಸುವುದೇ ಅದರ ಪ್ರಮುಖ ಧ್ಯೇಯವಾಗಿದೆ ಎಂಬುದು. ವ್ಯವಹಾರ ತನ್ನ ಆರ್ಥಿಕ ಸಾಮಥ್ರ್ಯ ಮತ್ತು ತನ್ನ ಲಾಭವನ್ನು ಗರಿಷ್ಠಗೊಳಿಸುವುದರಲ್ಲೇ ಗಮನ ಕೇಂದ್ರೀಕರಿಸುತ್ತದೆ ಮತ್ತು ಕನಿಷ್ಠ ಮಟ್ಟದಲ್ಲಿ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ.

2. ಸಾಮಾಜಿಕ ಹೊಣೆಗಾರಿಕೆಯ ವೆಚ್ಚ ಇನ್ನೊಂದು ವಾದವೆಂದರೆ, ಸಮಾಜ, ಸಾಮಾಜಿಕ ಹೊಣೆಗಾರಿಕೆಯ ವೆಚ್ಚವನ್ನು ಭರಿಸಬೇಕೆಂಬುದು. ಅದನ್ನು ಸಮಾಜ ಎಷ್ಟರಮಟ್ಟಿಗೆ ಭರಿಸಬಹುದು ಮತ್ತು ವ್ಯವಹಾರ ಆ ಭಾಗವನ್ನು ಸಮಾಜದ ಮೇಲೆ ಹೊರಿಸುವುದು ಎಷ್ಟರಮಟ್ಟಿಗೆ ನ್ಯಾಯಸಮ್ಮತ ಎಂಬುದೇ ಪ್ರಶ್ನೆಯಾಗಿದೆ.

3. ಸಾಮಾಜಿಕ ಪರಿಣತಿಗಳ ಅಭಾವ ವ್ಯವಹಾರದ ವ್ಯವಸ್ಥಾಪಕರು ವ್ಯವಹಾರವನ್ನು ನಿರ್ವಹಿಸಲು ಉತ್ತಮ ನಿರ್ವಹಣಾ ಪರಿಣತಿಯನ್ನು ಪಡೆದಿರಬೇಕು. ಆದರೆ ಅವರು ಸಾಮಾಜಿಕ ಪರಿಣತಿಯಲ್ಲಿ ದುರ್ಬಲರಾಗಿರಬಹುದು. ಅವರ ದೃಷ್ಠಿ ಪ್ರಧಾನವಾಗಿ ಆರ್ಥಿಕವಾಗಿರುತ್ತದೆ ಮತ್ತು ಸಾಮಾಜಿಕ ವಿಷಯಗಳು ಅಷ್ಟಾಗಿ ಅವರಿಗೆ ಹಿತ ನೀಡದಿರಬಹುದು. ಅಂಥ ಸಂದರ್ಭಗಳಲ್ಲಿ ಅವರು ತಮ್ಮ ಸಂಸ್ಥೆಯನ್ನು ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಪ್ರಸ್ತುತಗೊಳಿಸುವರೆಂಬುದು ಪ್ರಶ್ನಾರ್ಹ ಅಂಶವಾಗುತ್ತದೆ.

4. ವ್ಯವಹಾರ ಸಾಕಷ್ಟು ಶಕ್ತಿ ಹೊಂದಿದೆ ಸಾಕಷ್ಟು ಸಾಮಾಜಿಕ ಶಕ್ತಿ ಹೊಂದಿರುವುದರಿಂದ ವ್ಯವಹಾರ ಒಂದು ಶಕ್ತಿಯುತ ಸಂಸ್ಥೆಯಾಗಿರುತ್ತದೆ. ಸಾಮಾಜಿಕ ಅಂಶಗಳು ಮತ್ತು ವ್ಯವಹಾರದ ಆರ್ಥಿಕ ಅಂಶಗಳನ್ನು ಸಂಯೋಜಿಸುವ ಪ್ರಕ್ರಿಯೆಯಿಂದ, ವ್ಯವಹಾರ ತನ್ನ ಶಕ್ತಿಯನ್ನು ಮತ್ತಷ್ಟು ಕೇಂದ್ರೀಕರಿಸಬೇಕಾಗುತ್ತದೆ. ವ್ಯವಹಾರಕ್ಕೆ ಅಷ್ಟು ಶಕ್ತಿ ಅಥವಾ ಅಧಿಕಾರ ಕೊಡುವುದು ಅಷ್ಟು ಅಪೇಕ್ಷಣೀಯವಲ್ಲ.

5. ಉತ್ತರದಾಯಿತ್ವದ (Accountability) ಅಭಾವ ಉತ್ತರದಾಯಿತ್ವ ಹೊಣೆಗಾರಿಕೆಯ ಜೊತೆಯಲ್ಲೇ ಸಾಗುತ್ತದೆ. ವ್ಯವಹಾರಸ್ಥರು, ಜನರಿಗೆ ನೇರವಾದ ಉತ್ತರದಾಯಿಗಳಲ್ಲ. ಆದ್ದರಿಂದ, ಅವರ ಉತ್ತರದಾಯಿಗಳಲ್ಲದೆ ಕ್ಷೇತ್ರದ ಹೊಣೆಗಾರಿಕೆಯನ್ನು ವ್ಯವಹಾರಸ್ಥರಿಗೆ ನೀಡುವುದು ಬುದ್ಧಿವಂತಿಕೆಯಲ್ಲ.

6. ಬೆಂಬಲದ ಅಭಾವ ವ್ಯವಹಾರ ಸಾಮಾಜಿಕ ಗುರುಗಳಲ್ಲಿ ತೊಡಗುವುದಕ್ಕೆ ಸಮಾಜದ ಎಲ್ಲ ಗುಂಪುಗಳೂ ಬೆಂಬಲ ನೀಡಲಾರವು. ವ್ಯವಹಾರ, ಸಾಮಾಜಿಕವಾಗಿ ತೊಡಗಿಸಿಕೊಂಡರೆ, ಅದು ಭಿನ್ನಮತದ ಪಕ್ಷಗಳ ನಡುವೆ ಬಿರುಕುಗಳನ್ನು ಸೃಷ್ಟಿಸಬಹುದು ಮತ್ತು ಅವರು, ವ್ಯವಹಾರ ಸಾಮಾಜಿಕ ಕೆಲಸಗಳನ್ನು ಮಾಡುವ ಅಗತ್ಯವಿಲ್ಲವೆಂದು ವಾದಿಸಬಹುದು. ಈ ವಿಷಯದಲ್ಲಿ ಸಾರ್ವಜನಿಕರಲ್ಲಿ, ಬುದ್ಧಿಜೀವಿಗಳಲ್ಲಿ, ಸರ್ಕಾರಿ ಅಧಿಕಾರಿಗಳಲ್ಲಿ ಮತ್ತು ಪ್ರಮುಖ ವ್ಯವಹಾರಸ್ಥರಲ್ಲಿ ಭಿನ್ನಾಭಿಪ್ರಾಯಗಳಿವೆ.

ಸಾಮಾಜಿಕ ಹೊಣೆಗಾರಿಕೆ ಲೆಕ್ಕಶಾಸ್ತ್ರದ ಜವಾಬ್ದಾರಿಗಳು ಬದಲಾಯಿಸಿ

ಮಾಲೀಕರ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

  1. ವ್ಯವಹಾರ ಸಂಸ್ಥೆಗಳು, ಅದರ ಮಾಲೀಕರಿಗೆ ನ್ಯಾಯವಾದ ದರದಲ್ಲಿ ಲಾಭಾಂಶವನ್ನು ನಿಯಮಿತವಾಗಿ ನೀಡಬೇಕು.
  2. ಇಂದಿನ ನಿವ್ವಳ ಮೌಲ್ಯ ಗರಿಷ್ಠಗೊಳ್ಳುವಂತೆ ನಿರ್ವಹಣಾ, ತಂತ್ರ, ದಕ್ಷ ಮತ್ತು ಪರಿಣಾಮಕಾರಿಯಾಗಿರಬೇಕು.
  3. ಉದ್ದಿಮೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕು ಅದರ ಮಾಲೀಕರಿಗಿರಬೇಕು.
  4. ‘ಒಂದೇ ಗುಂಪಿನ ನಿರ್ವಹಣೆ, ((oligarchic management) ಬೆಳೆಯುವ ಪ್ರವೃತ್ತಿಯನ್ನು ತಡೆಹಿಡಿಯಬೇಕು.
  5. ಕಂಪನಿಯ ಕೆಲಸ ಕಾರ್ಯಗಳ ಬಗ್ಗೆ ಮಾಲೀಕರಿಗೆ ಪೂರ್ಣ ಮಾಹಿತಿ ನೀಡಬೇಕು. ನಿಖರವಾದ ಮತ್ತು ವ್ಯಾಪಾಕವಾದ ವರದಿಗಳನ್ನು ಪೂರೈಸಬೇಕು.
  6. ಆರ್ಥಿಕ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಮತ್ತು ಸಂದೇಹಗಳನ್ನು ಪರಿಹರಿಸಬೇಕು. ಷೇರುದಾರರು ಸಾರ್ವಜನಿಕ ನಿಯಮಿತ ಕಂಪನಿಗಳ ಮಾಲೀಕರಾಗಿರವುದರಿಂದ ಅವರು ತಮ್ಮ ಸ್ಥಾನದ ಭದ್ರತೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವ ಹಕ್ಕುಳ್ಳವರಾಗಿರುತ್ತಾರೆ.
  7. ಕಂಪನಿಯ ಅಧ್ಯಕ್ಷ ಮತ್ತು ನಿರ್ದೇಶಕರು ಮಾಲೀಕರಿಗೆ ಸುಲಭವಾಗಿ ಲಭ್ಯವಾಗುವಂತಿರಬೇಕು.

ಹೂಡಿಕೆದಾರರ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

ಹೂಡಿಕೆದಾರರು ಮಾಲೀಕರಾಗಿರಬಹುದು ಅಥವಾ ಅವರು ಬ್ಯಾಂಕುಗಳು, ಲೇವಾದೇವಿದಾರರು ಅಥವಾ ಸಾಲಪತ್ರದಾರರಂತಹ ಹೊರಗಿನ ವ್ಯಕ್ತಿಗಳಾಗಿರಬಹುದು. ವ್ಯವಹಾರ ಹೂಡಿಕೆದಾರರ ವಿಷಯದಲ್ಲಿ ಕೆಳಕಂಡ ಹೊಣೆಗಾರಿಕೆಗಳನ್ನು ಹೊಂದಿದೆ.

  1. ತಮ್ಮ ಹೂಡಿಕೆದಾರರಿಗೆ ವ್ಯವಹಾರ ಸಂಸ್ಥೆಗಳು ನ್ಯಾಯವಾದ ದರದಲ್ಲಿ ಲಾಭಾಂಶವನ್ನ ನಿಯಮಿತವಾಗಿ ನೀಡಬೇಕು.
  2. ಹೂಡಿಕೆದಾರರಿಗೆ ಸಂಸ್ಥೆಯ ಆಗುಹೋಗುಗಳಲ್ಲಿ ಭಾಗವಹಿಸುವ ಹಕ್ಕನ್ನು ನೀಡಬೇಕು.
  3. ಕಂಪನಿಯ ಕಾರ್ಯಗಳ ಬಗ್ಗೆ ಹೂಡಿಕೆದಾರರಿಗೆ ಪೂರ್ಣ ಮಾಹಿತಿ ಕೊಡಬೇಕು. ಖಚಿತವಾದ ಮತ್ತು ವ್ಯಾಪಕವಾದ ವರದಿಗಳನ್ನು ಅವರಿಗೆ ಪೂರೈಸಬೇಕು.
  4. ಹೂಡಿಕೆದಾರರ ಹೂಡಿಕೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
  5. ಎಲ್ಲ ಹಣಕಾಸಿನ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಹೂಡಿಕೆದಾರರ ಸಂದೇಹಗಳನ್ನು ನಿವಾರಿಸಬೇಕು.
  6. ಕಂಪನಿಯ ಅಧ್ಯಕ್ಷ ಮತ್ತು ನಿರ್ದೇಶಕರು ಹೂಡಿಕೆದಾರರಿಗೆ ಸುಲಭವಾಗಿ ಭೇಟಿಗೆ ಸಿಗಬೇಕು.

ಉದ್ಯೋಗಿಗಳ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

  1. ನ್ಯಾಯಯುತ ವೇತನಗಳು, ಬೋನಸ್, ಲಾಭ ಹಂಚಿಕೆ ಇತ್ಯಾದಿಗಳ ಜೊತೆಗೆ ಕೆಲಸದ ಭದ್ರತೆಯನ್ನು ಒದಗಿಸಬೇಕು.
  2. ನ್ಯಾಯಯುತ ಬಡ್ತಿ ಅವಕಾಶಗಳನ್ನು ಒದಗಿಸಬೇಕು.
  3. ಒಳಗೇ ಉದ್ಯೋಗಿಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳನ್ನು ಕೊಡಬೇಕು. ಸಂಸ್ಥೆಯ ಬೆನ್ನೆಲುಬಾದ ಉದ್ಯೋಗಿಗಳಿಗೆ ತಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಸಮಾನ ಹಕ್ಕುಗಳನ್ನು ನೀಡಬೇಕು.
  4. ಕೆಲಸಗಾರರ ನೈಪುಣ್ಯ ಸುಧಾರಿಸಬೇಕು. ಕೆಲಸದ ವಾತಾವರಣ ಆಸಕ್ತಿದಾಯಕವಾಗಿರಬೇಕು ಮತ್ತು ಆಯಾಸ ಮತ್ತು ಮಾನಸಿಕ ದಣಿವನ್ನು ತಡೆಯಲು ಕೆಲಸದ ಏಕತಾನತೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
  5. ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯ ಕ್ರಮಗಳ ಕಡೆ ಗಮನ ಹರಿಸಬೇಕು.
  6. ಕೆಲಸದಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಸೂಕ್ತವಾದ ಪ್ರೋತ್ಸಾಹಕ ಕ್ರಮಗಳನ್ನು ಜಾರಿಗೊಳಿಸಬೇಕು.
  7. ವೃತ್ತಿ ಸಂಬಂಧೀ ಅಪಘಾತಗಳ ವಿರುದ್ಧ ಕೆಲಸಗಾರರಿಗೆ ರಕ್ಷಣೆ ಒದಗಿಸಬೇಕು. ಸಾಕಾಗುವಷ್ಟು ವೈದ್ಯಕೀಯ ನೆರವುಗಳಿರಬೇಕು. ಆ ವಾತಾವರಣದಲ್ಲಿ ಕೆಲಸಗಾರನಿಗೆ ಸುರಕ್ಷತೆಯ ಭಾವನೆ ಉಂಟಾಗಬೇಕು. ಅಂಥ ಭಾವನೆ ಬರಲು, ಸಂಸ್ಥೆ ಅವರ ಅಗತ್ಯಗಳನ್ನು ಸೂಕ್ತವಾಗಿ ಪೂರೈಸಬೇಕು.
  8. ಉತ್ತಮ ಕಾರ್ಮಿಕ ಸಂಘದ ನಾಯಕತ್ವದ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಆದರಿಂದ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವೆ ಆರೋಗ್ಯಕರ ಸಂಬಂಧ ಏರ್ಪಡುತ್ತದೆ.
  9. ಪ್ರತಿ ಉದ್ಯೋಗಿಯ ಮಾನವೀಯ ಅಂಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅದರಿಂದ, ಆಡಳಿತ ಮಂಡಲಿ ಕೆಲಸಗಾರರ ಬಗ್ಗೆ ಸದ್ಭಾವನೆಯ ನಿಲುವನ್ನು ಬೆಳಸಿಕೊಳ್ಳುತ್ತದೆ. ಆಡಳಿತ ನಡೆಸುವ ಮಂದಿ, ಬರೀ ಯಂತ್ರಗಳಲ್ಲ ಎಂಬುದನ್ನು ಅರ್ಥಮಾಡಿಕೊಮಡರೆ ಎರಡು ಗುಂಪುಗಳ ನಡುವೆ ಸೌಹಾರ್ದ ಸಂಬಂಧ ಬೆಳೆಯುತ್ತದೆ. ಮಾನಸಿಕ ಸಮತೋಲನವುಳ್ಳ ಕಾರ್ಮಿಕ ಮಹತ್ವದ ಫಲಿತಾಂಶಗಳನ್ನು ತರಬಲ್ಲ.

ಬಳಕೆದಾರರ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

  1. ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿ ಮತ್ತು ಸೂಕ್ತ ಪ್ರಮಾಣದಲ್ಲಿ ಉತ್ಪನ್ನಗಳ ಲಭ್ಯತೆಯನ್ನು ಖಾತ್ರಿಗೊಳಿಸುವುದು.
  2. ಸರಕುಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಯಾವುದೇ ಅಂತರರಾಷ್ಟ್ರೀಯ ಉತ್ಪನ್ನದೊಡನೆ ಸ್ಪರ್ಧಿಸುವಂತೆ ಗುಣಮಟ್ಟವನ್ನು ವೃದ್ಧಿಗೊಳಿಸುವುದು.
  3. ಉತ್ಪನ್ನಗಳಿಗೆ ನ್ಯಾಯಯುತ ಬೆಲೆಗಳನ್ನು ವಿಧಿಸುವುದು. ವ್ಯವಹಾರದ ಸಂಸ್ಥೆ ನಿಗದಿಪಡಿಸಬೇಕಾದ ಲಾಭದ ಶೇಕಡಾವಾರಿನ ಮೇಲೆ ಎಚ್ಚರವಹಿಸಬೇಕು. ಬಳಕೆದಾರರಿಗೆ ನ್ಯಾಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸರಕು ಲಭ್ಯವಾಗಬೇಕು.
  4. ಸರಿಯಾದ ಅಳತೆ ಮತ್ತು ತೂಕಗಳನ್ನು ಬಳಸಬೇಕು.
  5. ಬಳಕೆದಾರರು, ಅದರ ಕಾರ್ಯಾಚರಣೆಯ ಬಗ್ಗೆ ಸಂಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಹೊಂದಿರಬೇಕು. ಇದಕ್ಕಾಗಿ ಮಾರಾಟದ ನಂತರದ ಸೇವೆ ಬಹಳ ಮುಖ್ಯ.
  6. ವ್ಯವಹಾರ ಸಂಸ್ಥೆಗಳು ನಿರ್ಬಂಧಿತ ವ್ಯಾಪಾರದ ರೂಢಿಗಳನ್ನು ತಪ್ಪಿಸಬೇಕು ಮತ್ತು ಬಳಕೆದಾರ ಖರ್ಚು ಮಾಡಿದ ಹಣಕ್ಕೆ ಪೂರ್ಣ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕು.
  7. ಬಳಕೆದಾರರ ಸಲಹಾ ಸಮಿತಿಗಳು ಮತ್ತು ಬಳಕೆದಾರರ ಸಂಘಗಳೊಂದಿಗೆ ನಿಕಟ ಸಂಬಂಧಪವನ್ನು ಕಾಯ್ದುಕೊಳ್ಳುವುದರ ಮೂಲಕ, ವ್ಯವಹಾರದ ಸಂಸ್ಥೆ ಬಳಕೆದಾರರ ಇಷ್ಟಗಳ ಪ್ರವೃತ್ತಿಯನ್ನು ತಿಳಿದುಕೊಳ್ಳಬಹುದು. ಅಂಥ ಸಂಘಗಳನ್ನು ವ್ಯವಹಾರ ಸಂಸ್ಥೆಗಳು ಪ್ರೋತ್ಸಾಹಿಸಬೇಕು.
  8. ಬಳಕೆದಾರರ ಬೆಳೆಯುತ್ತಿರುವ ಅಗತ್ಯಗಳನ್ನು ಕಂಡುಕೊಳ್ಳಲು ನಿರಂತರ ಶೋಧನೆ ನಡೆಸಬೇಕು. ಅದರಲ್ಲಿ, ಅವರ ಅಗತ್ಯಗಳನ್ನು ತೃಪ್ತಿಪಡಿಸುವ ಹೊಸ ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯವಿಬೇಕು.
  9. ಬಳಕೆದಾರರ ತೃಪ್ತಿ, ಹಿತಾಸಕ್ತಿ ಮತ್ತು ಕಲ್ಯಾಣ ವರ್ಧಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
  10. ‘ರಫ್ತು ಗುಣಮಟ್ಟ’ದ ಪರಿಕಲ್ಪನೆ ಕ್ರಮೇಣ ಮರೆಯಾಗಬೇಕು. ವ್ಯವಹಾರ ಸಂಸ್ಥೆಗಳು ಸ್ಥಳೀಯ ಬಳಕೆದಾರರು, ಪ್ರಮಾಣಿತ ಮಟ್ಟದ ಉತ್ಪನ್ನವನ್ನು ಪಡೆಯುವುದು ಮಾತ್ರವಲ್ಲದೆ, ರಫ್ತಾಗಬಲ್ಲ ಮಟ್ಟದ ಉತ್ಪನ್ನವನ್ನು ಪಡೆಯುವಂತೆ ನೋಡಿಕೊಳ್ಳಬೇಕು.

ಸರ್ಕಾರದ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

  1. ವಿವಿಧ ಕಾನೂನುಗಳ ಜಾರಿ ಮತ್ತು ಅವಕಾಶಗಳಿಗೆ ಸಂಬಂಧಿಸಿದ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
  2. ತೆರಿಗೆಗಳು ಮತ್ತು ಇತರ ಬಾಕಿಗಳನ್ನು ಸರ್ಕಾರಕ್ಕೆ ನಿಯಮಿತವಾಗಿ ಪಾವತಿಯಾಗುವಂತೆ ಸಂಸ್ಥೆ ನೋಡಿಕೊಳ್ಳಬೇಕು. ಅದರಿಂದ ಸರ್ಕಾರಿ ಅಧಿಕಾರಿಗಳು ಮಧ್ಯ ಪ್ರವೇಶಿಸುವ ಸಂದರ್ಭ ಬರುವುದಿಲ್ಲ ಮತ್ತು ಕಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ.
  3. ಉದ್ಯೋಗ, ಆಹಾರ, ಹಣದುಬ್ಬರ, ಆರ್ಥಿಕ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಗುಣಮಟ್ಟವನ್ನು ವೃದ್ಧಿಸುವುದು ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸುವುದರಿಂದ, ವ್ಯವಹಾರ ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದಂತಾಗುತ್ತದೆ.

ಸಮಾಜದ ವಿಷಯದಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಲಾಯಿಸಿ

ವ್ಯವಹಾರ ಸಮಾಜವನ್ನು ಅವಲಂಬಿಸಿದೆ. ಅದು ಸಾಧ್ಯವಾದಷ್ಟು ಉತ್ತಮವಾಗಿ ಸಮುದಾಯಕ್ಕೆ ಸೇವೆ ಸಲ್ಲಿಸಬೇಕು. ಸಮಾಜಕ್ಕೆ ವ್ಯವಹಾರದ ಹಲವು ಹೊಣೆಗಾರಿಕೆಗಳು ಕೆಳಕಂಡಂತಿವೆ.

  1. ವ್ಯವಹಾರ ಎಷ್ಟು ಸಾಧ್ಯವೋ ಅಷ್ಟು ಮಾಲಿನ್ಯವನ್ನು ಕನಿಷ್ಠಗೊಳಿಸಬೇಕು. ಗಾಳಿ, ನೀರು ಮತ್ತು ಶ್ಧ ಮಾಲಿನ್ಯಗಳ ವಿರುದ್ಧವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ.
  2. ವ್ಯವಹಾರ ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಸಾಮಾಜಿಕ ಮೌಲ್ಯಗಳನ್ನು ತಪ್ಪದೆ ಗೌರವಿಸಬೇಕು. ಧರ್ಮ, ಜಾತಿ ಇತ್ಯಾದಿಗಳನ್ನು ಆಧಾರದ ಮೇಲೆ ತಾರತಮ್ಯ ಮಾಡಬಾರದು.
  3. ಅದು ಆಸ್ಪತ್ರೆಗಳು, ಚಿಕಿತ್ಸಾ ಕೇಂದ್ರಗಳು ಇತ್ಯಾದಿಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ನೆರವು ನೀಡಬೇಕು.
  4. ಅದು ಅಂಗವಿಕಲರು, ಅನಾಥರು ಮತ್ತು ಸಮಾಜಿಕವಾಗಿ ಹಿಂದುಳಿದ ವರ್ಗದವರಿಗೆ ಬೆಂಬಲ ನೀಡಬೇಕು.
  5. ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಗ್ರಾಮೀಣ ಪುನರ್ರಚನೆಗೆ ನೆರವಾಗಬೇಕು.
  6. ಆರ್ಥಿಕ ಶಕ್ತಿಯ ಏಕಸ್ವಾಮ್ಯ ಮತ್ತು ಕೇಂದ್ರೀಕರಣವನ್ನು ತಪ್ಪಿಸಲು ಪ್ರಯತ್ನಿಸಬೇಕು.
  7. ಉದ್ದಿಮೆಗೆ ಉಪಯುಕ್ತವಾಗುವಂತೆ ಗ್ರಾಮೀಣ ಜನರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
  8. ಸಾರ್ವಜನಿಕ ಸೇವೆಗಳ ಬೆಳವಣಿಗೆಗೆ, ಸ್ಥಳೀಯ ಸ್ವಯಂ ಆಡಳಿತ, ನಗರ ಸಭೆ, ಪಂಚಾಯಿತಿಗಳಿಗೆ ಸಹಾಯ ಮಾಡಬೇಕು.
  9. ಅದು ಸಾರ್ವಜನಿಕರಿಗೆ ಸಾಕಷ್ಟು ಉದ್ಯೋಗಾವಕಾಶವನ್ನು ಒದಗಿಸಬೇಕು.
  10. ಕುಟುಂಬ ಯೋಜನೆ, ಸಾಕ್ಷರತಾ ಕಾರ್ಯಕ್ರಮಗಳು, ಬಡತನ ನಿರ್ಮೂಲನೆ ಇತ್ಯಾದಿ ಕೆಲವು ಸಮಸ್ಯೆಗಳನ್ನು ನಿವಾರಿಸಲು ಅದು ಸರ್ಕಾರಕ್ಕೆ ನೆರವು ನೀಡಬೇಕು.

ಪರಿಸರ ರಕ್ಷಣೆಯ ಹೊಣೆಗಾರಿಕೆಗಳು ಬದಲಾಯಿಸಿ

ಪ್ರತಿಯೊಂದು ವ್ಯವಹಾರದ ಸಾಮಾಜಿಕ ಹೊಣೆಗಾರಿಕೆಗಳಲ್ಲಿ ಒಂದೆಂದರೆ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು. ಪರಿಸರ ಸಮತೋಲನವೆಂದರೆ, ಜೀವಿಗಳು(ಅಂದರೆ, ಸಸ್ಯಗಳು, ಪ್ರಾಣಿಗಳು ಮತ್ತು ಮನುಷ್ಯರು) ಮತ್ತು ಅವುಗಳ ಪರಿಸರದ ನಡುವಿನ ಸೂಕ್ತ ಸಮತೋಲನ. ಪರಿಸರದ ಅಸಮತೋಲನ ಮನುಷ್ಯನಿಗೆ ಹಾನಿಕಾರಕ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ವ್ಯವಹಾರ ಕೆಳಕಂಡ ಜವಾಬ್ದಾರಿಗಳನ್ನು ಹೊಂದಿದೆ.

  1. ಎಲ್ಲ ಬಗೆಯ ಸಮಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು.
  2. ನೈಸರ್ಗಿಕ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು.
  3. ಭೂ ಸತ್ವ ಹಾಳಾಗದಂತೆ ನಿಯಂತ್ರಿಸುವುದು.
  4. ಅಂತರ್ಜಲ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು.
  5. ವನ್ಯ ಜೀವಿಗಳ ಸಂರಕ್ಷಣೆ.
  6. ಆನಸಂಖ್ಯಾ ಸ್ಫೋಟವನ್ನು ತಡೆಗಟ್ಟುವುದು.

ವ್ಯವಹಾರದಲ್ಲಿ ನೈತಿಕತೆ ಬದಲಾಯಿಸಿ

ಪ್ರತಿಯೊಂದು ವ್ಯವಹಾರವೂ ಸಮಾಜದ ಒಂದು ಅವಿಭಾಜ್ಯ ಅಂಗ. ಆದ್ದರಿಂದ ಅದು, ಸಮಾಜದ ನೀತಿ ನಿಯಮಗಳ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ಹೀಗೆ ಪ್ರತಿಯೊಂದು ವ್ಯವಹಾರ, ಸಮಾಜ ಸರಿಯೆಂದು ಆಚರಿಸುತ್ತಿರುವ ನೀತಿ ಮತ್ತು ತತ್ವಗಳನ್ನು ಪಾಲಿಸಬೇಕು. ವ್ಯವಹಾರದ ನೈತಿಕತೆಯನ್ನು ಸಮಾಜ ವ್ಯವಹಾರಸ್ಥನಿಂದ ನಿರೀಕ್ಷಿಸುವ ನೀತಿ ಸಂಹಿತೆಗಳ ಒಂದು ಗುಂಪು ಎಂದು ವ್ಯಾಖ್ಯಾನಿಸಬಹುದು. ವ್ಯವಹಾರದಲ್ಲಿ ನೀತಿಯನ್ನು ಪಾಲಿಸುವಾಗ ವ್ಯವಹಾರಸ್ಥ ಕೆಳಕಂಡ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರಬೇಕು:

  1. ನ್ಯಾಯಯುತವಾದ ಲಾಭ ಮಾಡುವುದು.
  2. ಸೂಕ್ತ ಅಳತೆ ಮತ್ತು ತೂಕವನ್ನು ಬಳಸುವುದನ್ನು ಖಾತ್ರಿಪಡಿಸಿಕೊಳ್ಳುವುದು.
  3. ಉದ್ಯೋಗಿಗಳೊಂದಿಗೆ ಮಾನವೀಯವಾಗಿ ವರ್ತಿಸುವುದು. ಇದು ಕಾರ್ಮಿಕ ಬಲಕ್ಕೆ ಉತ್ತಮ ಮಾನ್ಯತೆಯನ್ನು ನೀಡಿದಂತಾಗುತ್ತದೆ.
  4. ಸರಕಿನ ಕಟ್ಟುನಿಟ್ಟಾದ ನಿರಂತರ ಪೂರೈಕೆಯನ್ನು ಖಾತ್ರಿಪಡಿಸುವುದು.
  5. ನ್ಯಾಯುತವಾದ ಬೆಲೆಯ ನೀತಿಯನ್ನು ಅನುಸರಿಸುವುದು.
  6. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಸರಕನ್ನು ಪೂರೈಸುವುದು.
  7. ಸೂಕ್ತ ರೀತಿಯಲ್ಲಿ ಲೆಕ್ಕದ ಪುಸ್ತಕವನ್ನು ನಿರ್ವಹಿಸುವುದು ಮತ್ತು ನಿಯಮಿತವಾಗಿ ತೆರಿಗೆಯನ್ನು ಪಾವತಿ ಮಾಡುವುದು.

ಉಲ್ಲೇಖ ಬದಲಾಯಿಸಿ

೧`. ವ್ಯವಹಾರದ ಸಾಮಾಜಿಕ ಹೊಣೆಗಾರಿಕೆ

೨. ಸಾಮಾಜಿಕ ಹೊಣೆಗಾರಿಕೆಯ ಪರವಾದ ವಾದಗಳು Archived 2015-02-16 ವೇಬ್ಯಾಕ್ ಮೆಷಿನ್ ನಲ್ಲಿ.