ವೆಲ್ಲೂರು ಸಿಪಾಯಿ ದಂಗೆ

ವೆಲ್ಲೂರು ಸಿಪಾಯಿ ದಂಗೆ ಬದಲಾಯಿಸಿ

ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ೧೮೫೭ ರ ಸಿಪಾಯಿದಂಗೆ ಅತ್ಯಂತ ಮಹತ್ವದ್ದು ಎಂದು ಪ್ರಸಿದ್ದಿ ಪಡೆದಿದೆ. ಆದರೆದಕ್ಷಿಣ ಭಾರತತಮಿಳುನಾಡು ವೆಲ್ಲೂರು ಕೋಟೆಯಲ್ಲಿ ೧೮೦೬ ರಲ್ಲಿ ನಡೆದ ಸಿಪಾಯಿದಂಗೆ ಹಾಗೂ ಮೈಸೂರು ಹುಲಿ ಟಿಪ್ಪು ಸುಲ್ತಾನನ ಮಕ್ಕಳು ಮತ್ತು ಕುಟುಂಬ ವರ್ಗದವರು ಇದರಲ್ಲಿ ಸಕ್ರಿಯರಾಗಿದ್ದ ವಿಷಯ ಬಹಳ ಜನಕ್ಕೆ ಗೊತ್ತಿಲ್ಲ.ಇತಿಹಾಸಕಾರರು ಮೊತ್ತಮೊದಲು ಈ ದಂಗೆಗೆ ಹೆಚ್ಚಿನ ಮಹತ್ವ ನೀಡದಿರುವುದು ಒಂದು ಚಾರಿತ್ರಿಕ ದುರಂತ. ದೇಶದ ಇತಿಹಾಸದ ಪುಟಗಳನ್ನು ತಿರುವಿದಾಗ ಸಹಸ್ರಾರು ವರ್ಷಗಳಿಂದ ಪೌರಾಣಿಕ ಹಿನ್ನೆಲೆಯುಳ್ಳ ನಮ್ಮ ದೇಶದಲ್ಲಿ ಆಳರಸರ,ಮಾಂಡಲಿಕರ ಹಾಗೂ ಪಾಳೆಯಗಾರರ ನಡುವೆ ಪರಸ್ಪರ ನಡೆದ ಪಿತೂರಿಗಳು,ಯುದ್ದಗಳು ಇತರ ಯಾವುದೇ ದೇಶದಲ್ಲಿ ನಡೆದಿಲ್ಲ.೧೮೦೬ ರಲ್ಲಿ ತಮಿಳುನಾದಡಿನ ಪುರಾತನ ನಗರವಾದ ವೆಲ್ಲೂರಿನ ಕೋಟೆಯೊಳಗೆ ದಂಗೆ ನಡೆಯಿತು. ಇದು ಬಿಳಿಯರ ವಿರುದ್ದ ಭಾರತೀಯ ಸೈನಿಕರ ಸಿಡಿದೆದ್ದ ದಂಗೆ.೧೭೯೯ ರಲ್ಲಿ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ ಮತ್ತು ಬ್ರಿತಿಷರಿಗೆ ನಡೆದ ಯುದ್ದದಲ್ಲಿ ಟಿಪ್ಪು ಸುಲ್ತಾನ ಹತನಾದ. ಆತನ ಹೆಂಡತಿ ಮಕ್ಕಳಿಗೆ ಬ್ರಿಟಿಷರು ಮಾಸಿಕ ಪಿಂಚಣಿ ಮಂಜೂರು ಮಾಡಿ ಅವರನ್ನು ಹಾಗೂ ಅವರ ಕುಟುಂಬ ವರ್ಗದವರನ್ನು ಹಾಗೂ ಸೇವಕರನ್ನೊಳಗೊಂಡಂತೆ ೧೮೧೨ ಜನರನ್ನು ಬಂದಿಗಳನ್ನಾಗಿಸಿ ವೆಲ್ಲೂರಿನ ಇತಿಹಾಸ ಪ್ರಸಿದ್ದ ಕೋಟೆಯಲ್ಲಿಟ್ಟರು.ಈ ಸಂದರ್ಭದಲ್ಲಿ ಸರ್ ಜಾರ್ಜ್ ಬಾರ್ಲೊ ಭಾರತದ ಗವರ್ನರ್ ಜನರಲ್ ಆಗಿದ್ದು ಲಾರ್ದ್ ವಿಲ್ಲಿಯಂ ಬೆಂಟಿಕ್ ಮದರಾಸು ಪ್ರೆಸಿಡೆನ್ಸಿಗೆ ಗವರ್ನರ್ ಆಗಿದ್ದರು. ೧೭೯೬ರಲ್ಲಿ ಬ್ರಿಟಿಷರು ಸೈನ್ಯದಲ್ಲಿ ಹಲವಾರು ಸುಧಾರಣೆಗಳನ್ನು ತಂದು ಹಿಂದು ಮತ್ತು ಮಹಮ್ಮದೀಯರ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತರುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದರು. ಮುಖ್ಯವಾಗಿ ಸೈನಿಕರೆಲ್ಲರೂ ಪ್ರತಿದಿನ ಮುಖ ಕ್ಷೌರ ಮಾಡಬೇಕು. ಯರೂ ಗಡ್ಡ ಬೆಳೆಸಬಾರದು.ಕಿವಿಗಳಿಗೆ ಯಾವುದೇ ಆಭರಣಗಳನ್ನು ಇಡಬಾರದು ಎಂಬ ನಿಯಮಗಳು ಹಿಂದೂ ಹಾಗೂ ಮುಸಲ್ಮಾನ ಸೈನಿಕರ ನಸಮಾಧಾನಕ್ಕೆ ಕಾರಣವಾಯಿತು.ನಂತರ ಸೈನಿಕರಿಗೆ ಹೊಸ ಟರ್ಬನ್ ಒದಗಿಸಿದರು. ಈ ಟರ್ಬನ್ಗಳನ್ನು ಹಂದಿ ಹಾಗು ಹ್ಯಸುಗಳ ಚರ್ಮದಿಂದ ಮಾಡಲಾಗಿತ್ತು. ಧಾರ್ಮಿಕ ನಂಬಿಕೆಗಳಂತೆ ಹಿಂದು ಹಾಗು ಮುಸಲ್ಮಾನ ಸೈನಿಕರು ಇದನ್ನು ಧರಿಸುವಂತಿರಲಿಲ್ಲ.ಇದರಿಂದಾಗಿ ಮೊದಲೇ ಅಸಮಾಧಾನದಲ್ಲಿದ್ದ ಸೈನಿಕರಿಗೆ ಅಧಿಕಾರಿಗಳ ವಿರುದ್ದ ಸೇಡು ತೀರಿಸಿಕೊಳ್ಳಲು ಮುಖ್ಯ ಕಾರಣವಾಯಿತು.