ವೆಬ್ ವಿಹಾರ - ೨೦೦೮ರಲ್ಲಿ ಪ್ರಕಟವಾದ ಪುಸ್ತಕ. ಲೇಖಕರು ಟಿ. ಜಿ. ಶ್ರೀನಿಧಿ.

ವೆಬ್ ವಿಹಾರ
cover
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ಪ್ರಕಟವಾದ ದಿನಾಂಕ
೨೦೦೮

ಇದು ಅಂತರಜಾಲ (ಇಂಟರ್ ನೆಟ್) ಹಾಗೂ ವಿಶ್ವವ್ಯಾಪಿ ಜಾಲದ (WWW) ಸಂಕ್ಷಿಪ್ತ ಪರಿಚಯ ನೀಡಿ ಅದರ ಅನೇಕ ಸೌಲಭ್ಯಗಳನ್ನು ಬಳಸಲು ಓದುಗರಿಗೆ ನೆರವಾಗುವ ಪುಸ್ತಕ. ಮಾಹಿತಿ ಎಂದರೇನು ಎಂಬಲ್ಲಿಂದ ಪ್ರಾರಂಭಿಸಿ ಗಣಕ ಜಾಲಗಳು, ಅಂತರಜಾಲದ ಹುಟ್ಟು, ವಿಶ್ವವ್ಯಾಪಿ ಜಾಲ ಬೆಳೆದ ಬಗೆ, ಇಮೇಲ್, ಬ್ಲಾಗಿಂಗ್, ಇ-ಶಾಪಿಂಗ್, ಆನ್ ಲೈನ್ ಬ್ಯಾಂಕಿಂಗ್, ಬ್ಲಾಗಿಂಗ್, ವಿಶ್ವವ್ಯಾಪಿ ಜಾಲವನ್ನು ಕಾಡುತ್ತಿರುವ ಸಮಸ್ಯೆಗಳು (ವೈರಸ್, ಫಿಷಿಂಗ್, ಮಾಲ್‌ವೇರ್, ಸ್ಪಾಮ್ ಇತ್ಯಾದಿ )ಮುಂತಾದ ಅನೇಕ ವಿಷಯಗಳನ್ನು ಇದು ವಿವರಿಸುತ್ತದೆ. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸ್ಥಿತಿಗತಿಗಳ ಬಗೆಗೂ ಬಹಳಷ್ಟು ಮಾಹಿತಿ ಇದೆ. ಶ್ರೀ ನಾಗೇಶ ಹೆಗಡೆಯವರು ಮುನ್ನುಡಿ ಬರೆದಿದ್ದಾರೆ.

ಪುಸ್ತಕದ ಬಗ್ಗೆ

ಬದಲಾಯಿಸಿ

"ಕಿಸೆಯಲ್ಲಿ ದುಡ್ಡಿದ್ದವರು ಮಶಿನ್‌ಗಳನ್ನು ಏರಿ ಎಲ್ಲಿ ಬೇಕೆಂದಲ್ಲಿ ಹೋಗಬಹುದು. ತಲೆಯಲ್ಲಿ ತುಸು ಇಂಗ್ಲಿಷ್ ಜ್ಞಾನ ಇದ್ದವರು ಡಿಜಿಟಲ್ ಲೋಕದಲ್ಲಿ ಯಾವ ಮಾಹಿತಿಯನ್ನು ಎಲ್ಲಿಗೆ ಬೇಕಿದ್ದರೂ ರವಾನಿಸಬಹುದು, ಎಲ್ಲಿಂದ ಬೇಕಿದ್ದರೂ ಬಾಚಿಕೊಳ್ಳಬಹುದು.

ಇಂಗ್ಲಿಷ್ ಗೊತ್ತಿದ್ದವರಿಗೆ ಮಾತ್ರ ಅವೆಲ್ಲ ಸಾಧ್ಯ ಎಂದು ಈವರೆಗೆ ಭಾವಿಸಲಾಗಿತ್ತು. ಅಂಥವರು ಈ ಕೃತಿಯನ್ನು ಓದಿ ನೋಡಬೇಕು. ಕಂಪ್ಯೂಟರ್ ಲೋಕದ ಈ ಜ್ಞಾನವಾಹಿನಿಗೆ ಕನ್ನಡಿಗರೂ ಪ್ರವೇಶಿಸಲು ಸುಲಭವಾಗುವಂತೆ ಇಲ್ಲಿ ಸಕಲ ಮಾಹಿತಿಗಳಿವೆ. ಪ್ರವೇಶವಷ್ಟೇ ಅಲ್ಲ ಅಲ್ಲಿ ವಿಹರಿಸಲು, ವ್ಯವಹರಿಸಲು ಏನೇನು ಸಿದ್ಧತೆ ಬೇಕೆಂಬುದನ್ನು ಇಲ್ಲಿ ಟಿ. ಜಿ. ಶ್ರೀನಿಧಿ ಸರಳವಾಗಿ ಬರೆದಿದ್ದಾರೆ."

- ಶ್ರೀ ನಾಗೇಶ ಹೆಗಡೆ (ಮುನ್ನುಡಿಯಿಂದ)

ಹೆಚ್ಚಿನ ಓದು

ಬದಲಾಯಿಸಿ