ವೀರ್ ಮಾತಾ ಜೀಜಾಬಾಯ್ ಉದ್ಯಾನ್, ಬೈಕಲ್ಲ, ಮುಂಬಯಿ

'ವಿಕ್ಟೋರಿಯ ಗಾರ್ಡನ್ಸ್' ಎಂದು ವಿಶ್ವದಾದ್ಯಂತ ಜನಪ್ರಿಯವಾಗಿರುವ ಮುಂಬಯಿ ಮಹಾನಗರದ ಈ ಉದ್ಯಾನವನವನ್ನು ಈಗ 'ವೀರಮಾತಾ ಜೀಜಾಬಾಯ್ ಉದ್ಯಾನ್', वीर जीजामाता उद्यान (रानी बाग) ಎಂದು, 'ಮುಂಬಯಿಯ ಮುನಿಸಿಪಾಲಿಟಿ' ಘೋಶಿಸಿದಮೇಲೆ, ಸ್ಥಾನೀಯರು ಹಾಗೂ ಮುಂಬಯಿಕರ್ ಗಳೆಲ್ಲಾ ಅದೇ ಹೆಸರಿನಿಂದ ಕರೆಯುತ್ತಿದ್ದಾರೆ. [] ಒಟ್ಟು ೪೨ ಎಕರೆ ಪ್ರದೇಶದಲ್ಲಿ ಹರಡಿರುವ ಈ ಉದ್ಯಾನವನ, ಮಧ್ಯ ರೈಲ್ವೆಯ 'ಭೈಕಲ್ಲ ರೈಲ್ವೆ ಸ್ಟೇಷನ್' ಮುಂಭಾಗದಲ್ಲೇ ಇದೆ. 'ಡೇವಿಡ್ ಸಸೂನ್' ಎಂಬ ಶ್ರೀಮಂತ ಯಹೂದಿ ವರ್ತಕನಿಗೆ ಈ ಪ್ರದೇಶ ಸೇರಿತ್ತು. ಕಾಲಾನುಕ್ರಮದಲ್ಲಿ ಆತನು 'ಬೊಂಬಾಯಿನ ಮುನಿಸಿಪಲ್ ಕಾರ್ಪೊರೇಷನ್' ಗೆ ಈ ಪ್ರದೇಶವನ್ನು ದಾನವಾಗಿ ಕೊಟ್ಟನು. ೧೮೬೧ ರಲ್ಲಿ ಸ್ಥಾಪಿಸಲಾದ ಈ ಉದ್ಯಾನದಲ್ಲಿ ಹಲವು ವಿಶೇಷ ಜಾತಿಯ ಫಲ,ಪುಷ್ಪಗಳ ಗಿಡಮರಗಳಿವೆ. ವಿಶ್ವದ ಅಳಿವಿನ ಅಂಚಿನಲ್ಲಿರುವ ಕೆಲವು ಪ್ರಾಚೀನ ಸಸ್ಯಗಳು ಈ ತೋಟದಲ್ಲಿರುವುದು ಇಲ್ಲಿನ ವಿಶೇಷತೆಯಾಗಿದೆ. ಕೆಲವು ಮರಗಳು ಅತಿಪ್ರಾಚೀನವಾದದ್ದು ಎಂದು ಗುರುತಿಸಲಾಗಿದೆ. 'ಭಾವು ದಾಜಿ ಲಾಡ್ ವಸ್ತುಸಂಗ್ರಹಾಲಯ', ಹಾಗೂ 'ಪ್ರಾಣಿಸಂಗ್ರಹಾಲಯ,' (Zoo) ಕಾಂಪೌಡ್ ನ ಒಳಭಾಗದಲ್ಲಿಯೇ ಇದೆ.[]

'ರಾಣಿ ಬಾಗ್ ನ, ಮುಂದಿರುವ ಎತ್ತರದ ಗಡಿಯಾರದ ಗೋಪುರ'
Rani bagh,Byculla, Mumbai'ಪ್ರವೇಶ ದ್ವಾರ',
'ಉದ್ಯಾನದಲ್ಲಿ ಇರುವ, ೭ ನೇ ಜಾರ್ಜ್ ಚಕ್ರವರ್ತಿಯವರ ವಿಗ್ರಹ,'

'ವಿಕ್ಟೋರಿಯ ಆಲ್ಬರ್ಟ್ ಮ್ಯೂಸಿಯಂ'

ಬದಲಾಯಿಸಿ

'ಡೇವಿಡ್ ಸಸೂನ'ರು 'ವಿಕ್ಟೋರಿಯ ಮತ್ತು ಆಲ್ಬರ್ಟ್ ಮ್ಯೂಸಿಯಂ' ನಿರ್ಮಾಣಮಾಡಿದರು. [] ೧೮೬೨ ನಲ್ಲಿ ಕಟ್ಟಡ ಕಟ್ಟಲು ಪ್ರಾರಂಬಿಸಿ, ೧೮೭೧ ರಲ್ಲಿ ಕಟ್ಟಡ ಮುಕ್ತಾಯಗೊಂಡಿತು. ಹಲವು ದಶಕಗಳ ನಂತರ, ೧೯೭೫ ರಲ್ಲಿ, ಇದನ್ನೇ ಸ್ವಲ್ಪ ದುರಸ್ತಿಮಾಡಿಸಿ, 'ಡಾ. ಲಾಡ್ ಮ್ಯೂಸಿಯೆಂ' ಎಂದು ನಾಮಕರಣಮಾಡಲಾಯಿತು. ೨೦೦೩-೦೭ ರಲ್ಲಿ ಹಲವು ಬದಲಾವಣೆಗಳಾದವು. ಈ ಮ್ಯೂಸಿಯೆಂನಲ್ಲಿ ಅತಿ ಹೆಚ್ಚು ಹಳೆಯ ಭೂಗರ್ಭಶಾಸ್ತ್ರದ ಕಲಾವಸ್ತುಗಳ ಸಂಗ್ರಹಗಳಿವೆ. ಬೊಂಬಾಯಿನ ಹತ್ತಿರದ 'ಎಲಿಫೆಂಟಾ ಗುಹೆ'ಯಿಂದ ತಂದಿದ್ದ ಕಲ್ಲಿನ ಆನೆಯ ಮಾದರಿಯ

'ಡಾ. ಲಾಡ್ ಮ್ಯೂಸಿಯಂ, ಮೊದಲು V&A museum, ಎಂದು ಕರೆಯಲಾಗುತ್ತಿತ್ತು.

ವಿಗ್ರಹವನ್ನು ೧೮೬೪ ರಲ್ಲಿ ಇಂಗ್ಲೆಂಡ್ ಗೆ ರವಾನಿಸಲಾಯಿತು. ಆದರೆ ಅಲ್ಲಿನ ಮುಖ್ಯಸ್ಥರು ಅದನ್ನು ಮುಂಬಯಿನ ವಸ್ತುಸಂಗ್ರಹಾಲಯದಲ್ಲೇ ಇರಿಸಲು ಸಲಹೆ ಕೊಟ್ಟಮೇಲೆ, ವಾಪಸ್ ತರಲಾಯಿತು. ಈ ವಸ್ತುಸಂಗ್ರಹಾಲಯದಲ್ಲಿ ವೀಕ್ಷಣೆಗೆ ಇರಿಸಲಾದ ವಸ್ತುಗಳು ಬಹಳ ಮಹತ್ವವನ್ನು ಪಡೆದಿವೆ

  • ಹಲವಾರು ಬಗೆ-ಬಗೆಯ ವಿಶೇಷ ಪಿಂಗಾಣಿ ವಸ್ತುಗಳು,
  • ಬೊಂಬಾಯಿನ ಹಳೆಯ ನಕ್ಷೆಗಳು,
  • ಬೆಳ್ಳಿ, ತಾಮ್ರದ ಪಾತ್ರೆಗಳು,
  • ಪ್ರಾಚೀನ ಕಾಲದ ಒಡವೆ ವಸ್ತುಗಳು,

೨೦೦೫ ರಲ್ಲಿ ಈ ವಸ್ತುಸಂಗ್ರಹಾಲಯ ಶ್ರೇಷ್ಠತೆಗಳನ್ನು ಗಮನಿಸಿ 'ಯುನೆಸ್ಕೊ ಪ್ರಶಸ್ತಿ' ನೀಡಲಾಯಿತು. '೭ ನೆಯ, ಕಿಂಗ್ ಎಡ್ವರ್ಡ್ ಚಕ್ರವರ್ತಿ', ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಪ್ಪು ಕುದುರೆಯ ಮೇಲೆ ಸವಾರಿ ಮಾಡುತ್ತಿರುವ ಅವರ ಭವ್ಯ ಪ್ರತಿಮೆಯನ್ನು ನಿರ್ಮಾಣಮಾಡಿ ಅದನ್ನು ಡೇವಿಡ್ ಸಸೂನ್ ಲೈಬ್ರೆರಿಯ ಮುಂಭಾಗದಲ್ಲಿ ಸ್ಥಾಪಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ, ಬ್ರಿಟಿಷರ ಯಾವ ಪ್ರತಿಮೆಯನ್ನೂ ಸಾರ್ವಜನಿಕ ವಲಯಗಳಲ್ಲಿ ಪ್ರದರ್ಶನಕ್ಕೆ ಇಡಬಾರದೆಂಬ ಸರಕಾರದ ನೀತಿಯಿಂದಾಗಿ ನಗರದ ಪ್ರಮುಖ ವಲಯಗಳಲ್ಲಿದ್ದ ಒಂದೊಂದೇ ಪ್ರತಿಮೆಗಳನ್ನು ಸ್ಥಾನಾಂತರಿಸಿ, 'ಸಾರ್ವಜನಿಕ ಪಾರ್ಕ್' ಗಳಲ್ಲಿ ಇರಿಸಲಾಯಿತು. ಅದೇ ರೀತಿ, ಕಪ್ಪು ಕುದುರೆ ಸವಾರಿಮಾಡುತ್ತಿರುವ, '೭ನೆಯ ಜಾರ್ಜ್ ಚಕ್ರವರ್ತಿಯವರ ಪುತ್ಥಳಿ'ಯನ್ನು 'ವೀರಮಾತಾ ಜೀಜಾಬಾಯ್ ಉದ್ಯಾನವನ'ದಲ್ಲಿ ಇರಿಸಲಾಯಿತು.

'ಜೀಜಾಮಾತಾ ಉದ್ಯಾನದ ಝೂ ಬಹಳ ಹೀನಾವಸ್ತೆಯಲ್ಲಿತ್ತು'

ಬದಲಾಯಿಸಿ

'ಮಡಗಾಸ್ಕರ್ ದ್ವೀಪ'ದಲ್ಲಿ ಬೆಳೆಯುವ 'ಬೆಬೋಬ್' ಎಂಬ ಬೃಹದ್ ಗಾತ್ರದ ಮರ ಈ ಉದ್ಯಾನದಲ್ಲಿದೆ.(Baobab tree) ಭಾರಿ ಗಾತ್ರದ ಮರದ ಕೊಂಬೆಗಳಿಂದ ಕೂಡಿದ ಮರದ ಭಾರಿ ಗಾತ್ರದ ಕೊಂಬೆಗಳಲ್ಲಿ ನೀರು ತುಂಬಿರುತ್ತದೆ. ಕೊಂಬೆಗಳು ಭೂಮಿಯಿಂದ ನೀರನ್ನು ಹಿರಿಕೊಂಡಿರುತ್ತವೆ. ಈ ಬಟಾನಿಕಲ್ ಗಾರ್ಡನ್ ಎಲ್ಲಾ ವಿಧದ ಸಸ್ಯ ಸಂಪತ್ತಿನಿಂದ ತುಂಬಿವೆ ಇಡೀ ರಾಷ್ಟ್ರದಲ್ಲೇ ಅತಿ ಪುರಾತನ ಉದ್ಯಾನವನವಾಗಿದೆ. 'ಝೂ'ನ ಪ್ರಾಣಿಗಳು ಪಾರ್ಕ್ ನ ನಿರ್ವಾಹಕರ ಯಾವ ಸಹಾಯವಿಲ್ಲದೆ ಬಹಳ ದುರ್ದಶೆಯಲ್ಲಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ. ಪ್ರಾಣಿಗಳಿಗೆ ಸರಿಯಾದ ನೈರ್ಮಲ್ಯಕ್ಕೂ ಗಮನ ಕೊಡುತ್ತಿಲ್ಲ. 'ರೈನೋ' ಗಳ ಅವಸ್ಥೆ ಬಹಳ ಹಿನಾಯವಾಗಿದೆ. 'ಕೋತಿಗಳು' ಮತ್ತು 'ಹೈನಾ,' 'ಜಿಂಕೆ'ಗಳು ಅಲ್ಲಿ ಇಲ್ಲಿ ಕಾಣಿಸುತ್ತಿವೆ.

'ಸೆಂಟ್ರೆಲ್ ಝೂ ಪ್ರಾಧಿಕರಣ' ದ ಯೋಜನೆ

ಬದಲಾಯಿಸಿ

ಉದ್ಯಾನದ, 'ಝೂ' ಉತ್ತಮಪಡಿಸಬೇಕೆಂಬ ಯೋಜನೆ ಬಹಳದಿನಗಳಿಂದ ಅಧಿಕಾರಿಗಳ ಮನಸ್ಸಿನಲ್ಲಿತ್ತು. 'ಸೆಂಟ್ರೆಲ್ ಝೂ ಪ್ರಾಧಿಕರಣ' ಹಣವನ್ನು ಮಂಜೂರಿಮಾಡಿದೆ. ಉದ್ಯಾನದ ಪುನರ್ನಿರ್ಮಾಣವಾದ ಬಳಿಕ, ಅಧಿಕಾರಿಗಳು ಕೊಟ್ಟ ಹೇಳಿಕೆಯ ಮೇರೆಗೆ, ಒಟ್ಟು ೧೮ ಪ್ರಾಣಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಅವುಗಳಲ್ಲಿ ಮುಖ್ಯವಾದ ಪ್ರಾಣಿಗಳು :

  • ಚಿರತೆಗಳು,
  • ತೋಳಗಳು,
  • ಗುಳ್ಳೆನರಿಗಳು,
  • ಸಾಂಬಾರ್ ಗಳು,
  • ಏಶಿಯದ ಸಿಂಹಗಳು,
  • ರಾಯಲ್ ಬೆಂಗಾಲ್ ಹುಲಿಗಳು,
  • ಚಿರತೆಗಳು,
  • ಕಾಡು ಬೆಕ್ಕುಗಳು,
  • ಜಾಗ್ವಾರ್ ಗಳು,
  • ಝೀಬ್ರಗಳು,
  • ಪೆಂಗ್ವಿನ್ ಪಕ್ಷಿಗಳು

೨೦೧೫ ರ ಮಾರ್ಚ್, ನಲ್ಲಿ ಈ ಹೊಸವಿಭಾಗವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. 'ರಾಣಿ ಬಾಗ್/ ವೀರ್ ಮಾತಾ ಜೀಜಾಬಾಯ್, ಭೋನ್ಸ್ಲೆ, ಉದ್ಯಾನ್, ಭೈಕಲ್ಲಾ, ಮುಂಬಯಿ, 27, 01-13
  2. 'ಇಂಗ್ಲೀಷ್ ವಿಕಿಪೀಡಿಯ,'ವೀರ್ ಜೀಜಾಮಾತಾ ಬೊನ್ಸ್ಲೆ ಉದ್ಯಾನ್,'
  3. 'My World,' 14 April 2014