'ರಾಲ್ಫ್ ರಿಚರ್ಡ್ ಸನ್' ನಿವೃತ್ತಿಯ ನಂತರ, 'ವಿ. ವಿ. ಗುಪ್ತೆ'ಯವರು 'ಸ್ಪಿನ್ನಿಂಗ್ ಶಾಖೆ'ಯ 'ಸ್ಪಿನ್ನಿಂಗ್ ಮಾಸ್ಟರ್' ಆಗಿ ಸೇವೆಸಲ್ಲಿಸಿದರು. ೩೦ ರ ದಶಕದಲ್ಲಿ, 'ಇಂಗ್ಲೆಂಡ್' ನಲ್ಲಿ ಪದವಿ ಪಡೆದು 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯಲ್ಲಿ 'ಸ್ಪಿನ್ನಿಂಗ್ ಮಾಸ್ಟರ್' ಆಗಿ ಸೇರಿದ 'ಪ್ರಥಮ ಭಾರತೀಯರ' ಪಟ್ಟಿಯಲ್ಲಿ ಸೇರಿದ್ದರು. ಆಗಿನ ಕಾಲದಲ್ಲಿ ವಿಶೇಷವಾಗಿ ಅಂತಹ ಹುದ್ದೆಗಳನ್ನು 'ಬ್ರಿಟಿಷ್' ಇಲ್ಲವೇ 'ಪಾರ್ಸಿ'ಗಳು ವಹಿಸಿಕೊಳ್ಳುತ್ತಿದ್ದರು. 'ಮಹಾತ್ಮ ಗಾಂಧಿ'ಯವರು ಉಪಯೋಗಿಸುತ್ತಿದ್ದ 'ಚರಖಾ' ಚಲಾಯಿಸಲು ಹೆಚ್ಚು ಶ್ರಮವಹಿಸಬೇಕಾಗಿತ್ತು. ಶ್ರೀ ವಿ. ವಿ. ಗುಪ್ತೆಯವರು ಚರಖವನ್ನು ಪರಿಶೀಲಿಸಿ ಕೆಲವು ಆಂತರಿಕ ಚಕ್ರಗಳ ಬದಲಾವಣೆಯಿಂದ ಒಂದು ಪುಟ್ಟ ಪೆಟ್ಟಿಗೆಯಲ್ಲಿ ಇಡುವಷ್ಟು 'ಚಿಕ್ಕ ಚರಖಾ'ವನ್ನು ನಿಯೋಜಿಸಿದ್ದಲ್ಲದೆ,ಆ ಮಾದರಿಯ ಹಲವಾರು ಚರಖಗಳನ್ನು ಗ್ರಾಹಕರಿಗೆ ಒದಗಿಸಿದರು.ಆ ಚರಖದ ಹೆಸರನ್ನು 'ಅಂಬರ್ ಚರಖ'ವೆಂದು ಕರೆಯಲಾಯಿತು.