ರಾಲ್ಫ್ ರಿಚರ್ಡ್ ಸನ್
ರಾಲ್ಫ್ ರಿಚರ್ಡ್ ಸನ್,' 'ಎಫ್. ಟಿ. ಐ'; ರವರು ಟರ್ನರ್ ಜೊತೆಯಲ್ಲೇ ೩, ನವೆಂಬರ್, ೧೯೨೪ ರಲ್ಲಿ, ಸ್ಪಿನ್ನಿಂಗ್ ಮಾಸ್ಟರ್ ಆಗಿ,'ಲ್ಯಾಬೊರೇಟೊರಿಗೆ ಸೇರಿದರು. ಅಪಾರ ಅನುಭವಿಗಳು. ಸನ್, ೧೮೯೯ ರಲ್ಲಿ 'ಇಂಗ್ಲೇಂಡ್ ನ ಕ್ಲರೆನ್ಸ್ ಮಿಲ್' ನಲ್ಲಿ ತಮ್ಮ ಕೆರಿಯರ್ ಆರಂಭಿಸಿದರು. 'ಕೆನಡಾದ ಮಾಂಟ್ರಿಯೆಲ್ ನ ಮಿಲ್' (೧೯೧೨) ಒಂದರಲ್ಲಿ, ನಂತರ 'ಓಲ್ಡ್ ಹ್ಯಾಮ್ ಕಾಲೇಜ್' ನಲ್ಲಿ 'ಡೆಮಾನ್ಸ್ಟ್ರೇಟರ್ ಆಗಿ', (೧೯೧೫-೧೬), ಭಾರತದ ಆಗ್ರನಗರದ,ಜಾನ್.ಅಂಡ್ ಕಂ,ಯಲ್ಲಿ ಸೇವೆ ಸಲ್ಲಿಸಿದ್ದರು. ಸನ್,(೧೯೧೬)ರಲ್ಲಿ, 'ಲ್ಯಾಬೊರೇಟೊರಿ'ಗೆ ಬರುವ ಮೊದಲು, ದಕ್ಷಿಣ ಭಾರತದ, 'ಕೋವಿಲ್ ಪಟ್ಟಿ'ಯ, ತಿನ್ನವೇಲಿ ಮಿಲ್ ನಲ್ಲಿ ದುಡಿದರು.
ಗೌರವ ಪ್ರಶಸ್ತಿಗಳು
ಬದಲಾಯಿಸಿ- 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯ ಬೆಳವಣಿಗೆಯ ದಿನಗಳಲ್ಲಿ ಡಾ. ಟರ್ನರ್ ಜೊತೆಯಲ್ಲಿ ಸೇರಿ, 'ಹತ್ತಿ ಸಂಶೋಧನೆಯ ಕಾರ್ಯ'ದಲ್ಲಿ ಬಹಳ ಮಹತ್ತರ ಕೊಡುಗೆಯನ್ನು ಕೊಟ್ಟಿದ್ದಾರೆ.
- ರಾಲ್ಫ್ ರಿಚರ್ಡ್ ಸನ್ ರವರು ತಮ್ಮ ಅನುಪಮ ಸೇವೆಯನ್ನು 'ಮ್ಯೂಲ್ ಕಾಪಿಂಗ್ ಮತ್ತು ಹತ್ತಿಯ ಹೈ ಡ್ರಾಫ್ಟಿಂಗ್ ವಲಯ'ದಲ್ಲಿ ಕೊಟ್ಟಿದ್ದಾರೆ. ('Mule copping and High drafing of cottons')
- ಸುಮಾರು ೨೫ ವರ್ಷಗಳ ಸತತವಾದ 'ಮಿಲ್ ಸೇವೆಯ ಮೌಲಿಕ ಕಾರ್ಯ'ಗಳನ್ನು ಗುರುತಿಸಿ, 'ಮ್ಯಾಂಚೆಸ್ಟರ್ ನ ಟೆಕ್ಸ್ ಟೈಲ್ ಇನ್ ಸ್ಟಿ ಟ್ಯೂಟ್', ೧೯೩೦ ರಲ್ಲಿ, ಅವರಿಗೆ 'ಗೌರವ ಎಫ್.ಟಿ. ಐ. ಪ್ರಶಸ್ತಿ,'ಯನ್ನು ನೀಡಿ ಗೌರವಿಸಿತು.