ವಿ. ಕೆ. ಹೈಮಾವತಿ
ಕಲಾಮಂಡಲಂ ಹೈಮಾವತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿ. ಕೆ. ಹೈಮಾವತಿ ಭಾರತದ ಕೇರಳದ ಮೋಹಿನಿಯಾಟ್ಟಂ ನೃತ್ಯಗಾರ್ತಿ ಮತ್ತು ನೃತ್ಯ ಶಿಕ್ಷಕಿ. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಗುರುಪೂಜಾ ಪ್ರಶಸ್ತಿ[೧] ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.[೨]
ವಿ. ಕೆ. ಹೈಮಾವತಿ | |
---|---|
ಜನನ | ತ್ರಿಶೂರ್ ಜಿಲ್ಲೆ, ಕೇರಳ | ೧೨ ಅಕ್ಟೋಬರ್ ೧೯೫೫
ರಾಷ್ಟ್ರೀಯತೆ | ಭಾರತೀಯರು |
ಇತರೆ ಹೆಸರು | ಕಲಾಮಂಡಲಂ ಹೈಮಾವತಿ |
ವೃತ್ತಿ(ಗಳು) | ನರ್ತಕಿ, ನೃತ್ಯ ಶಿಕ್ಷಕಿ |
ಗಮನಾರ್ಹ ಕೆಲಸಗಳು | ಭಾರತೀಯ ಶಾಸ್ತ್ರೀಯ ನೃತ್ಯ/ ಮೋಹಿನಿಯಾಟ್ಟಂ |
ಸಂಗಾತಿ | ಚಂದ್ರಶೇಖರನ್ |
ಮಕ್ಕಳು | ೧ |
ಪೋಷಕ(ರು) | ಕೃಷ್ಣ ವಾರಿಯರ್ ಪಾರ್ವತಿ ವಾರಿಯರ್ |
ಪ್ರಶಸ್ತಿಗಳು | ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೇರಳ ಸಂಗೀತ ನಾಟಕ ಅಕಾಡೆಮಿ ಗುರುಪೂಜಾ ಪ್ರಶಸ್ತಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ |
ಜೀವನಚರಿತ್ರೆ
ಬದಲಾಯಿಸಿವಿ. ಕೆ. ಹೈಮಾವತಿಯವರು ೧೯೫೫ರ ಅಕ್ಟೋಬರ್ ೧೨ ರಂದು ತ್ರಿಶ್ಶೂರಿನ ಪೆರಿಂಗೋಡಿನ ಕೃಷ್ಣ ವಾರಿಯರ್ ಮತ್ತು ಮಚಾಡ್‌ನ ಪಾರ್ವತಿ ವಾರಿಯರ್ ದಂಪತಿಗೆ ಜನಿಸಿದರು. ಅವರ ತಂದೆ ವೈದ್ಯರಾಗಿದ್ದರು. ಅವರು ಒಂದು ವರ್ಷದವರಿದ್ದಾಗ ಅವರ ಕುಟುಂಬ ಚೆರುತುರುತಿಗೆ ಸ್ಥಳಾಂತರಗೊಂಡಿತು. ಐದನೇ ವಯಸ್ಸಿನಲ್ಲಿ, ಅವರು ಚಂದ್ರಿಕಾ ಅವರ ಬಳಿ ನೃತ್ಯ ಮತ್ತು ಶಂಕರನಾರಾಯಣನ್ ಆಸನ್ ಅವರ ಬಳಿ ಕಥಕ್ಕಳಿ ಕಲಿಯಲು ಪ್ರಾರಂಭಿಸಿದರು. ಅವರು ತಮ್ಮ ೧೨ ನೇ ವಯಸ್ಸಿನಲ್ಲಿ ತಮ್ಮ ಸಹೋದರಿ ರುಗ್ಮಿಣಿಯೊಂದಿಗೆ ಕೇರಳ ಕಲಾಮಂಡಲಂನಲ್ಲಿ ನೃತ್ಯ ಮಾಡಿದರು. ನಂತರ, ಅವರು ಕಲಾಮಂಡಲಂ ಸತ್ಯಭಾಮಾ, ಲೀಲಾಮಣಿ ಮತ್ತು ಚಂದ್ರಿಕಾ ಅವರ ಅಡಿಯಲ್ಲಿ ನೃತ್ಯವನ್ನು ಅಧ್ಯಯನ ಮಾಡಲು ಕಲಾಮಂಡಲಕ್ಕೆ ಸೇರಿದರು ಮತ್ತು ೧೬ ವಯಸ್ಸಿನಲ್ಲಿ ತಮ್ಮ ಡಿಪ್ಲೋಮಾ ಕೋರ್ಸನ್ನು ಪೂರ್ಣಗೊಳಿಸಿದರು.
ಮದುವೆಯ ನಂತರ, ೧೯ ನೇ ವಯಸ್ಸಿನಲ್ಲಿ ಅವರು ಕಲ್ಕತ್ತಾಗೆ ತೆರಳಿದರು ಆದರೆ ಕಲಾಮಂಡಲದಲ್ಲಿ ಮೋಹಿನಿಯಾಟ್ಟಂ ಶಿಕ್ಷಕಿಯಾಗಿ ಕೆಲಸ ಸಿಕ್ಕಿದಾಗ ಅವರು ಶೀಘ್ರದಲ್ಲೇ ಕೇರಳಕ್ಕೆ ಮರಳಿದರು. ಕಲಾಮಂಡಲದಲ್ಲಿ ಕೆಲಸ ಮಾಡುವಾಗ, ಹೈಮಾವತಿ ಅವರು ಕಲಾಮಂಡಲಂ ಕ್ಷೇಮಾವತಿಯವರಲ್ಲಿ ಕೂಚಿಪುಡಿಯನ್ನು ಅಧ್ಯಯನ ಮಾಡಿದರು. ೩೩ ವರ್ಷಗಳ ಸೇವೆಯ ನಂತರ, ಅವರು ಮೋಹಿನಿಯಾಟ್ಟಂ ವಿಭಾಗದ ಮುಖ್ಯಸ್ಥರಾಗಿ ಕಲಾಮಂಡಲಂನಿಂದ ನಿವೃತ್ತರಾದರು ಮತ್ತು ನಂತರ ಕಾಲಾಡಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇರಿದರು.
ವೈಯಕ್ತಿಕ ಜೀವನ
ಬದಲಾಯಿಸಿಅವರಿಗೆ ಮತ್ತು ಅವರ ಪತಿ ಚಂದ್ರಶೇಖರನ್ ಅವರಿಗೆ ಒಬ್ಬ ಮಗನಿದ್ದಾನೆ. ಅವರು ತ್ರಿಶೂರ್ ಜಿಲ್ಲೆಯ ಚೆರುತುರುತಿಯಲ್ಲಿರುವ ಶ್ರೀಕೃಷ್ಣಸದನಂ ಎಂಬ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಗಮನಾರ್ಹ ಪ್ರದರ್ಶನಗಳು
ಬದಲಾಯಿಸಿಹೈಮಾವತಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳು ಬರೆದ ದೈವದಶಕಂ ಅನ್ನು ೧೫೦೦ ನರ್ತಕರು ಮೋಹಿನಿಯಾಟ್ಟಂ ರೂಪದಲ್ಲಿ ದೃಶ್ಯೀಕರಿಸಿದರು.
ಸಾಕ್ಷ್ಯಚಿತ್ರ
ಬದಲಾಯಿಸಿಮೋಹನಂ ಮತ್ತು ಚೋಲ್ಕೆಟ್ಟು ಹೈಮಾವತಿ ಮತ್ತು ಅವರ ನೃತ್ಯ ವೃತ್ತಿಯ ಕುರಿತು ಮಾಡಿದ ಎರಡು ಸಾಕ್ಷ್ಯಚಿತ್ರಗಳಾಗಿವೆ.
ಪ್ರಶಸ್ತಿಗಳು ಮತ್ತು ಗೌರವಗಳು
ಬದಲಾಯಿಸಿ- ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
- ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಪ್ರಶಸ್ತಿ ೨೦೦೭
- ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೦೧೬
- ಕಲಾದರ್ಪಣಂ ಪ್ರಶಸ್ತಿ
- ಕೇರಳ ಕಲಾಮಂಡಲದಿಂದ ಲಾಸ್ಯಮೋಹಿನಿ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ http://www.keralaculture.org/gurupooja/454
- ↑ "ಆರ್ಕೈವ್ ನಕಲು". Archived from the original on 2022-02-04. Retrieved 2023-12-17.