ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಭದ್ರಾವತಿ
ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್ ನ ಪ್ಲಾಂಟ್ ಸ್ಟೀಲ್ ಅಥಾರಿಟಿ ಆಫ್(ಇಂಡಿಯ)ದ ಒಂದು ವಿಭಾಗ, ಅಲಾಯ್ ಸ್ಟೀಲ್, ಹಾಗೂ ಪಿಗ್ ಐರನ್ ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ಒಂದು ಪ್ರಮುಖ ಘಟಕವಾಗಿ, ಭದ್ರಾವತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಖಾನೆ ಸ್ಥಾಪನೆಯಾದದ್ದು, ಜನವರಿ, ೧೮, ೧೯೨೩,ರಂದು, ಭಾರತರತ್ನ ಸರ್.ಎಂ.ವಿಶ್ವರೇಶ್ವರಯ್ಯನವರಿಂದ . ಈಗ ಈ ಕಾರ್ಖಾನೆ, ಸ್ಟೀಲ್ ಅಥಾರಿಟಿ ಆಫ್ ಇಂಡಿಯ ಒಂದು ಪ್ರಮುಖ ಘಟಕವಾಗಿದೆ. ನಾಲ್ಮಡಿ ಕೃಷ್ಣರಾಜ ವಡೆಯರು ದಿವಾನ್ ವಿಶ್ವೇಶ್ವರಯ್ಯನವರ ಸಲಹೆಯಮೇರೆಗೆ ಸ್ಥಾಪಿಸಿದರು. ಬಾಬಾಬುಡನ್ ಗಿರಿಯ ಹತ್ತಿರದ ಕೆಮ್ಮಣ್ಣುಗುಂಡಿ ಬೆಟ್ಟದ ಬಳಿ ವಿಪುಲವಾಗಿ ಸಿಗುವ ಕಬ್ಬಿಣದ ಅದುರನ್ನು ಉಪಯೋಗಿಸಿಕೊಂಡು ಪಿಗ್ ಐರನ್ ಮತ್ತಿತರ ವಸ್ತುಗಳನ್ನು ತಯಾರಿಸುವ ವಿಧಿಯಲ್ಲಿ ಸಹಾಯವಾಗುತ್ತದೆ.
ಅಮೆರಿಕದ ಕಂಪೆನಿಯ ಸಹಕಾರದೊಂದಿಗೆ
ಬದಲಾಯಿಸಿಸನ್, ೧೯೧೫-೧೬ ರಲ್ಲಿ ಭದ್ರಾವತಿನಗರದಲ್ಲಿ ಐರನ್ ಮತ್ತು ಸ್ಟೀಲ್ ಕಾರ್ಖಾನೆ ಸ್ಥಾಪಿಸುವಬಗ್ಗೆ ಅಮೆರಿಕದ ನ್ಯೂಯಾರ್ಕ್ ನ ಕಂಪೆ ಸಹಕಾರದೊಂದಿಗೆ ಕಲ್ಲಿದ್ದಲನ್ನು ಉಪಯೋಗಿಸಿಕೊಂಡು ಪಿಗ್ ಐರನ್ ತಯಾರಿಕೆಯ ವ್ಯವಸ್ಥೆ ನಡೆಯಿತು. ೧೯೧೮-೨೨ ರ ವರಎಗೆ ನಡೆಸಿದ ಸಂಶೋಧನೆ, ಸ್ಥಳೀಯ ಪ್ರಕೃತಿಸಂಪತ್ತನ್ನು ಬಳಸಿಕೊಂಡು ಒಂದು ಕಾರ್ಖಾನೆಯ ಸ್ಥಾಪನೆಗೆ ಸಹಕಾರಿಯಾಯಿತು.