ವಿಶ್ವನಾಥನ್ ಆನಂದ್

ವಿಶ್ವನಾಥನ್ ಆನಂದ್ (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.

ವಿಶ್ವನಾಥನ್ ಆನಂದ್
VishyAnand09.jpg
ಪೂರ್ಣ ಹೆಸರುವಿಶ್ವನಾಥನ್ ಆನಂದ್
ದೇಶ India
ಜನನ (1969-12-11) ೧೧ ಡಿಸೆಂಬರ್ ೧೯೬೯ (ವಯಸ್ಸು ೫೨)
ಮಯಿಲದುತ್ತುರೈ, ತಮಿಳುನಾಡು, ಭಾರತ
ಶೀರ್ಷಿಕೆಗ್ರಾಂಡ್‌ಮಾಸ್ಟರ್ (೧೯೮೮)
ವಿಶ್ವ ಚಾಂಪಿಯನ್೨೦೦೦-೨೦೦೨ (ಫಿಡೆ)
೨೦೦೭-ಪ್ರಸಕ್ತ (ನಿರ್ವಿವಾದಿತ)
ಫಿಡೆ ರೇಟಿಂಗ್೨೮೧೭
(ಮೊದಲ ಸ್ಥಾನ, ಮಾರ್ಚಿ ೨೦೧೧ಫಿಡೆ ಅಂತರಾಷ್ಟ್ರೀಯ ಶ್ರೇಣಿ)
ಗರಿಷ್ಠ ರೇಟಿಂಗ್೨೮೧೭ (ಮಾರ್ಚಿ ೨೦೧೧)
ವಿಶ್ವನಾಥನ್ ಆನಂದ್

ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!

ವಿಶ್ವ ಚಾಂಪಿಯನ್‍ಶಿಪ್ ೧೯೯೫ಸಂಪಾದಿಸಿ

೧೯೯೫ ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಆಗಿನ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್‍ರ ವಿರುದ್ಧ ವಿಶ್ವ ಚಾಂಪಿಯನ್‍ಶಿಪ್ ಸರಣಿಯನ್ನು ಆಡಿದರು. ಮೊದಲ ಎಂಟು ಪಂದ್ಯಗಳು ಡ್ರಾ ಆದವು. ವಿಶ್ವ ಚಾಂಪಿಯನ್‍ಶಿಪ್ ಸರಣಿಯಲ್ಲಿ ಹಿಂದೆಂದೂ ಪ್ರಾರಂಭದಲ್ಲೇ ಇಷ್ಟು ಡ್ರಾ ಗಳು ನಡೆದಿರಲಿಲ್ಲ. ಒಂಬತ್ತನೆಯ ಪಂದ್ಯವನ್ನು ಆನಂದ್ ಗೆದ್ದರೂ ಮುಂದಿನ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತರು. ಒಟ್ಟು ಸರಣಿಯನ್ನು ೭.೫ - ೧೦.೫ ರಿಂದ ಸೋತರು.

ವಿಶ್ವ ಚಾಂಪಿಯನ್‍ಶಿಪ್ ೨೦೦೦ಸಂಪಾದಿಸಿ

೨೦೦೦ ದಲ್ಲಿ ಫಿಡೆ (ಚೆಸ್ ಸರಣಿಗಳನ್ನು ಆಯೋಜಿಸುವ ಅಂತಾರಾಷ್ಟ್ರೀಯ ಸಂಸ್ಥೆ) ಯಿಂದ ಆಯೋಜಿತ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ರಷ್ಯದ ಅಲೆಕ್ಸೀ ಶಿರೋವ್ ರನ್ನು ೩.೫-೦.೫ ರಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು.

ವಿಶ್ವ ರಾಪಿಡ್ ಚೆಸ್ ಚಾಂಪಿಯನ್‍ಶಿಪ್ ೨೦೦೩ಸಂಪಾದಿಸಿ

ಅಕ್ಟೋಬರ್ ೨೦೦೩ ರಲ್ಲಿ ಪ್ರಪಂಚದ ಹನ್ನೆರಡು ಅತ್ಯುತ್ತಮ ಆಟಗಾರರಲ್ಲಿ ಹತ್ತು ಜನರು ಪಾಲ್ಗೊಂಡ ವೇಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಗೆದ್ದರು. (ವೇಗದ ಚೆಸ್ ಆಟಗಳಲ್ಲಿ ಆಟಗಾರರು ತಮ್ಮ ನಡೆಗಳನ್ನು ನಡೆಸಲು ಕಡಿಮೆ ಸಮಯ ಹೊಂದಿರುತ್ತಾರೆ. ಈ ಸರಣಿಯಲ್ಲಿ ಪ್ರತಿ ಪಂದ್ಯದ ಆರಂಭದಲ್ಲಿ ಆಟಗಾರರಿಗೆ ೨೫ ನಿಮಿಷಗಳ ಸಮಯವಿದ್ದು, ಪ್ರತಿ ನಡೆಯ ನಂತರ ೧೦ ಸೆಕೆಂಡುಗಳಷ್ಟು ಹೆಚ್ಚುವರಿ ಸಮಯ ಸಿಕ್ಕುತ್ತಿತ್ತು.)

ವಿಶ್ವ ಪಂದ್ಯಾವಳಿ ೨೦೦೭ಸಂಪಾದಿಸಿ

ಮೆಕ್ಸಿಕೊ ನಗರದಲ್ಲಿ ನಡೆದ ೨೦೦೭ರ ಚದುರಂಗ ವಿಶ್ವ ಪಂದ್ಯಾವಳಿಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, ಸೆಪ್ಟೆಂಬರ್ ೨೯ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು.

ಇತರ ಸರಣಿಗಳುಸಂಪಾದಿಸಿ

ಆನಂದ್ ಗೆದ್ದಿರುವ ಇತರ ಕೆಲವು ಪ್ರಸಿದ್ಧ ಸರಣಿಗಳು:

  • ಕೋರಸ್ ಸರಣಿ (೨೦೦೩)
  • ಕೋರಸ್ ಸರಣಿ (೨೦೦೪)
  • ಡಾರ್ಟ್‍ಮಂಡ್ ಸರಣಿ (೨೦೦೪)

ಕಳೆದ ಹತ್ತು ವರ್ಷಗಳ ಉದ್ದಕ್ಕೂ ಪ್ರಪಂಚದ ಐದು ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಆನಂದ್ ಇದ್ದಾರೆ. ಇದರಲ್ಲಿ ಬಹುಕಾಲ ಪ್ರಪಂಚದ ಮೂರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ