ಲಾಳಿಕೆಯು (ಆಲಿಕೆ, ಬುದ್ಧಿವಂತ) ಅಗ್ರಭಾಗದಲ್ಲಿ ಅಗಲವಾಗಿದ್ದು ಕೆಳಭಾಗದಲ್ಲಿ ಕಿರಿದಾಗಿರುವ ನಳಿಕೆ ಅಥವಾ ನಾಳ. ಇದನ್ನು ಸಣ್ಣ ಕಂಡಿ/ರಂಧ್ರದೊಳಗೆ ದ್ರವ ಅಥವಾ ಪುಡಿಗೆ ಮಾರ್ಗ ತೋರಿಸಲು ಬಳಸಲಾಗುತ್ತದೆ.[೧]

ಸಾಮಾನ್ಯ ಅಡಿಗೆಮನೆಯ ಲಾಳಿಕೆ

ಲಾಳಿಕೆಗಳನ್ನು ಸಾಮಾನ್ಯವಾಗಿ ತುಕ್ಕುರಹಿತ ಉಕ್ಕು, ಅಲ್ಯೂಮಿನಿಯಮ್, ಗಾಜು ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ಇದರ ತಯಾರಿಕೆಯಲ್ಲಿ ಬಳಸಲಾದ ವಸ್ತುವು ವರ್ಗಾಯಿಸಲಾಗುತ್ತಿರುವ ವಸ್ತುವಿನ ತೂಕವನ್ನು ತಡೆದುಕೊಳ್ಳುವಷ್ಟು ಗಟ್ಟಿಮುಟ್ಟಾಗಿರಬೇಕು, ಮತ್ತು ಅದು ಹಾಕಲಾಗುತ್ತಿರುವ ವಸ್ತುವಿನೊಂದಿಗೆ ಪ್ರತಿಕ್ರಿಯಿಸಬಾರದು. ಈ ಕಾರಣದಿಂದಾಗಿ, ಡೀಸಲ್‍ನ್ನು ವರ್ಗಾಯಿಸಲು ತುಕ್ಕುರಹಿತ ಉಕ್ಕು ಅಥವಾ ಗಾಜು ಉಪಯುಕ್ತವಾಗಿದೆ, ಮತ್ತು ಅಡುಗೆಮನೆಗಳಲ್ಲಿ ಪ್ಲಾಸ್ಟಿಕ್‍ನ ಲಾಳಿಕೆಗಳು ಉಪಯುಕ್ತವಾಗಿವೆ. ಕೆಲವೊಮ್ಮೆ ನಂತರ ಲಾಳಿಕೆಯನ್ನು ಸಮರ್ಪಕವಾಗಿ ಸ್ವಚ್ಛಮಾಡಲು ಕಷ್ಟವಾಗುವ ಸಂದರ್ಭಗಳಲ್ಲಿ ಬಿಸಾಡಬಹುದಾದ ಕಾಗದದ ಲಾಳಿಕೆಗಳನ್ನು ಬಳಸಲಾಗುತ್ತದೆ (ಉದಾಹರಣೆಗೆ, ಕಾರಿಗೆ ಮೋಟಾರು ಎಣ್ಣೆಯನ್ನು ಸೇರಿಸುವಾಗ).

ಉಲ್ಲೇಖಗಳು ಬದಲಾಯಿಸಿ

"https://kn.wikipedia.org/w/index.php?title=ಲಾಳಿಕೆ&oldid=924590" ಇಂದ ಪಡೆಯಲ್ಪಟ್ಟಿದೆ