ಶೀರ್ಮಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಇರಾನ್‍ನಲ್ಲಿ ಹುಟ್ಟಿಕೊಂಡ, ಕೇಸರಿ ಸೇರಿಸಿದ, ಸಾಂಪ್ರದಾಯಿಕ ಖಾದ್ಯ
Content deleted Content added
"Sheermal" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
( ಯಾವುದೇ ವ್ಯತ್ಯಾಸವಿಲ್ಲ )

೧೭:೦೨, ೧೮ ಮೇ ೨೦೨೦ ನಂತೆ ಪರಿಷ್ಕರಣೆ

ಶೀರ್ಮಲ್ ಇರಾನ್‍ನಲ್ಲಿ ಹುಟ್ಟಿಕೊಂಡ, ಕೇಸರಿ ಸೇರಿಸಿ ರುಚಿಗೊಳಿಸಲಾದ ಚಪಾತಿಯಂತಹ ಸಾಂಪ್ರದಾಯಿಕ ಖಾದ್ಯವಾಗಿದೆ.[೧] ಶೀರ್ಮಲ್ ಶಬ್ದವು ಎರಡು ಪರ್ಷಿಯನ್ ಶಬ್ದಗಳಿಂದ ವ್ಯುತ್ಪನ್ನವಾಗಿದೆ - ಶೀರ್ ಅಂದರೆ ಹಾಲು ಮತ್ತು ಮಲಿದಾನ್ ಅಂದರೆ ತೀಡು/ತೇಯು. ಹಾಲಿನಿಂದ ತೀಡಿದ ಎಂಬುದು ಅಕ್ಷರಶಃ ಅನುವಾದವಾಗಿದೆ. ಇದನ್ನು ಮುಘಲ್ ಸಾಮ್ರಾಟರು ಉತ್ತರ ಭಾರತಕ್ಕೆ ಪರಿಚಯಿಸಿದರು. ಇದು ಲಖ್ನೋ, ಹೈದರಾಬಾದ್ ಮತ್ತು ಔರಂಗಾಬಾದ್‌ನಲ್ಲಿ ರುಚಿ ತಿನಿಸಾಯಿತು.[೨]

ಶೀರ್ಮಲ್ ಮೈದಾದಿಂದ ತಯಾರಿಸಲಾದ ಸೌಮ್ಯವಾಗಿ ಸಿಹಿಯಾಗಿರುವ ನಾನ್ ಆಗಿದೆ. ಇದಕ್ಕೆ ಯೀಸ್ಟ್ ಸೇರಿಸಿ ಹುದುಗು ಬರಿಸಲಾಗುತ್ತದೆ ಮತ್ತು ಇದನ್ನು ತಂದೂರ್ ಅಥವಾ ಒಲೆಯಲ್ಲಿ ಬೇಯಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಶೀರ್ಮಲ್‌ನ್ನು ರೋಟಿಯಂತೆ ತಯಾರಿಸಲಾಗುತ್ತಿತ್ತು. ನಾನ್ ರೋಟಿಯ ಪಾಕವಿಧಾನದಲ್ಲಿ ಬಳಸುವಂತೆ ಬಿಸಿ ನೀರಿನ ಬದಲು ಸಕ್ಕರೆ ಸೇರಿಸಿದ, ಕೇಸರಿ ಮತ್ತು ಏಲಕ್ಕಿ ಹಾಕಿ ರುಚಿಗೊಳಿಸಲಾದ ಬಿಸಿ ಹಾಲನ್ನು ಬಳಸಲಾಗುತ್ತದೆ.

ಉಲ್ಲೇಖಗಳು

  1. "Sheermal, Persian Sweet Bread". Retrieved 5 October 2014.
  2. "The Hindu : A nawabi affair". Retrieved 5 October 2014.
"https://kn.wikipedia.org/w/index.php?title=ಶೀರ್ಮಲ್&oldid=993234" ಇಂದ ಪಡೆಯಲ್ಪಟ್ಟಿದೆ