ಕೊಡೆಕಲ್ಲು ಬೆಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed redirect to ಕೊಡೆಕಲ್ಲು
ಟ್ಯಾಗ್: Removed redirect
No edit summary
೧ ನೇ ಸಾಲು:
'''ಕೊಡೆಕಲ್ಲು ಬೆಟ್ಟ''' ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಣಸಿಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಬರುವ ಬಾಳೆ ಗುಡ್ಡ ಎಂಬ ಬೆಟ್ಟದಲ್ಲಿ ಈ ಕಲ್ಲು ಕಾಣಸಿಗುತ್ತದೆ. ಕೋಡೆಕಲ್ಲಿಗೆ ಚಾರ್ಮಾಡಿ ಘಾಟಿಯಲ್ಲಿ ಸಿಗುವ ಬಿದುರು ತಳ ಎಂಬ ಊರಿನಿಂದ ಎರಡು ಕಿಲೋಮೀಟರ್ ಸಾಗಿದರೆ ಕೊಡೆಕಲ್ಲು ತಲುಪಬಹುದು.
==ಪರಿಚಯ==
ಈ ಕಲ್ಲು ಕೊಡೆ( ಛತ್ರಿ )ಯ ಆಕಾರದಲ್ಲಿರುವುದರಿಂದ ಇದಕ್ಕೆ ಕೊಡೆಕಲ್ಲು ಎಂಬ ಹೆಸರು ಬಂತು. ಇದು ದೂರದಿಂದ ನೋಡಲು ಛತ್ರಿಯ ಆಕಾರದಲ್ಲಿದ್ದು, ತನ್ನ ಪಾದದ ಕೆಳಗೆ ಐವತ್ತರಿಂದ ನೂರು ಜನ ವಿಶ್ರಾಂತಿ ಪಡೆಯಬಹುದಾದಷ್ಟು ಸ್ಥಳಾವಕಾಶವಿದೆ. ಇದು ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿದ್ದು, ಈ ಬೆಟ್ಟದ ಸುತ್ತ ದೊಡ್ಡ ಪ್ರಪಾತಗಳಿದೆ. ಈ ಬೆಟ್ಟದ ಮೇಲೆ 25-30 ಅಡಿಗಳಷ್ಟು ಬೃಹತಾಕಾರದ ಕೊಡೆಕಲ್ಲನ್ನು ಕಾಣಬಹುದಾಗಿದೆ. ಇದು ವಿಶ್ರಾಂತಿ ಪಡೆಯಲು ಬಹಳ ಅಚ್ಚುಕಟ್ಟಿನ ಸ್ಥಳವಾಗಿದೆ. ಅಲ್ಲೇ ಪಕ್ಕದಲ್ಲಿ ನೀರಿನ ವ್ಯವಸ್ಥೆ ಕೂಡ ಇದ್ದು, ಹಿಂದೆ ಬೇಟೆ ಆಡಲು ಬರುತ್ತಿದ್ದವರು ಇಲ್ಲಿ ಒಂದೆರಡು ದಿನ ಇದ್ದು ವಿಶ್ರಾಂತಿ ಪಡೆದು ಇಲ್ಲಿಂದ ತೆರಳುತ್ತಿದ್ದರು ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಹಳ್ಳಿಯ ಜನರು ಕಾಡಿನಲ್ಲಿ ಸಿಗುವ ಸೀಗೆ, ರಾಮಪತ್ರೆ, ಮುರುಗನ ಹುಳಿ ಮುಂತಾದ ಕಾಡು ಪದಾರ್ಥಗಳನ್ನು ಇಲ್ಲಿ ತಂದು ಒಣಗಿಸಿ ಕೊಂಡೊಯ್ಯುತ್ತಿದ್ದರು.
"https://kn.wikipedia.org/wiki/ಕೊಡೆಕಲ್ಲು_ಬೆಟ್ಟ" ಇಂದ ಪಡೆಯಲ್ಪಟ್ಟಿದೆ