ಉಷ್ಣರಸಾಯನವಿಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉಷ್ಣಲೋಹವಿದ್ಯೆ ಖನಿಜಗಳಿಂದ ಆಯಾ ಲೋಹಗಳನ್ನು ಪಡೆಯುವ ಸಲುವಾಗಿ ಉನ್ನತ ಉಷ್...
( ಯಾವುದೇ ವ್ಯತ್ಯಾಸವಿಲ್ಲ )

೦೫:೩೦, ೧೨ ಜನವರಿ ೨೦೨೦ ನಂತೆ ಪರಿಷ್ಕರಣೆ

ಉಷ್ಣಲೋಹವಿದ್ಯೆ


ಖನಿಜಗಳಿಂದ ಆಯಾ ಲೋಹಗಳನ್ನು ಪಡೆಯುವ ಸಲುವಾಗಿ ಉನ್ನತ ಉಷ್ಣತೆಯಲ್ಲಿ ರಾಸಾಯನಿಕ ಕ್ರಿಯೆಗಳನ್ನು ನಡೆಸುವ ತಂತ್ರ (ಪೈರೋ ಮೆಟಲರ್ಜಿ). ತಾಮ್ರವನ್ನು ಅದಿರಿನಿಂದ ಅಪಕರ್ಷಿಸಲು ಉಷ್ಣವನ್ನು ಬಳಸುವ ಪರಿಪಾಠ ಕ್ರಿ.ಪೂ. 3000ಕ್ಕೆ ಹಿಂದೆಯೂ ಇತ್ತು. ರಸಾಯನ ವಿಜ್ಞಾನ ಬೆಳೆದಂತೆ ಉನ್ನತ ಉಷ್ಣತೆಯನ್ನು ತಡೆಯಬಲ್ಲ ಯೋಗ್ಯ ವಸ್ತುಗಳು ರೂಪುಗೊಂಡಂತೆ ಮತ್ತು ಉಷ್ಣತಾ ನಿಯಂತ್ರಣ ಕಲೆ ಕರಗತವಾದಂತೆಲ್ಲ ಉಷ್ಣ ಲೋಹ ವಿದ್ಯೆಯ ತಂತ್ರಗಳೂ ಸುಧಾರಿತವಾಗಿ ಪರಿಪೂರ್ಣಗೊಂಡವು. 20ನೆಯ ಶತಮಾನದ ಮಧ್ಯಭಾಗದಲ್ಲಿ ಲೋಹೋತ್ಪತ್ತಿಗೆ ಇದೊಂದೇ ಪ್ರಮುಖ ವಿಧಾನವಾಗಿತ್ತು.

ಲೋಹೋತ್ಪತ್ತಿಗೆ ಉನ್ನತ ಉಷ್ಣತೆಯನ್ನು ಬಳಸುವುದರಿಂದ ಹಲವು ಅನುಕೂಲಗಳಿವೆ. ಆಗ ರಾಸಾಯನಿಕ ಕ್ರಿಯಾವೇಗ ಹೆಚ್ಚುತ್ತದೆ. ಸಾಮಾನ್ಯ ಉಷ್ಣತೆಯಲ್ಲಿ ಇಂಗಾಲದಿಂದ ಸೀಸದ ಆಕ್ಸೈಡಿನ ಮತ್ತು ಮ್ಯಾಗ್ನೀಸಿಯಂನಿಂದ ಟಿಟ್ಯಾನಿ ಕ್ಲೋರೈಡಿನ ಅಪಕರ್ಷಣ ಮಂದಗತಿಯಲ್ಲಿ ಮುಂದುವರೆಯುವುದು. ಆದರೆ 600ಲಿ-800ಲಿಸೆ. ಉಷ್ಣತಾಮಿತಿಯಲ್ಲಿ ಗಣನೀಯವಾಗಿರುತ್ತದೆ. ರಾಸಾಯನಿಕ ಸಮಸ್ಥಿತಿ ಉಷ್ಣತೆಗೆ ಅನುಗುಣವಾಗಿರುವುದಷ್ಟೇ. ಉನ್ನತ ಉಷ್ಣತೆಯಲ್ಲಿ ಈ ಸಮತೋಲನ ಅಪೇಕ್ಷಿತ ದಿಕ್ಕಿನಲ್ಲಿ ವ್ಯತ್ಯಾಸವಾಗುವಂತೆ ಮಾಡಬಹುದು. ತತ್ಫಲವಾಗಿ ಕೆಳಮಟ್ಟದ ಉಷ್ಣದಲ್ಲಿ ಅಸಾಧ್ಯವೆನಿಸಿದ್ದ ಕ್ರಿಯೆಗಳು ಉನ್ನತ ಉಷ್ಣತೆಯಲ್ಲಿ ನಡೆಯುವಂತಾಗುವುವು. ಸುಮಾರು 900ಲಿ ಸೆ. ನಲ್ಲಿ ವಾಯುವಿರುವುದು ಸಾಧ್ಯವೇ ಇಲ್ಲ. ಆದರೆ ಉಷ್ಣತೆ ಹೆಚ್ಚಿದರೆ ಇದೇ ಕ್ರಿಯೆ ಸಹಜವಾಗಿ ಜರುಗುವುದು. ಅದಿರುಗಳನ್ನು ಅಪಕರ್ಷಿಸಿದಾಗ ಸಿಲಿಕಾ (Siಔ2), ಅಲ್ಯೂಮಿನಾ (ಂI2ಔ3), ಕ್ಯಾಲ್ಸಿಯಂ ಆಕ್ಸೈಡ್(ಅಚಿಔ), ಫೆರಸ್ ಆಕ್ಸೈಡ್ (ಈeಔ) ಇತ್ಯಾದಿ ಕಶ್ಮಲಗಳು ಅಪಕರ್ಷಿತವಾಗದೆ ಲೋಹದೊಂದಿಗೆ ಉಳಿದುಬಿಡುವುವು. ಆದಾಗ್ಯೂ ಲಭ್ಯವಾದ ಲೋಹ ದ್ರವ ಅಥವಾ ಆವಿಯ ರೂಪದಲ್ಲಿ ಇರುವುದರಿಂದ ಶೇಷವಸ್ತುಗಳಿಂದ ಅದನ್ನು ಬೇರ್ಪಡಿಸುವುದು ಸುಲಭ.

20ನೆಯ ಶತಮಾನದಲ್ಲಿ ಉಷ್ಣಲೋಹವಿದ್ಯಾ ಕ್ಷೇತ್ರದಲ್ಲಾಗಿರುವ ಅಗಾಧ ಪ್ರಗತಿಯ ಫಲವಾಗಿ ಈ ಕಲೆ ಇತರ ಆಧುನಿಕ ಲೋಹೋತ್ಪತ್ತಿ ವಿಧಾನಗಳ ಪೈಪೋಟಿಯನ್ನೂ ಸಹಿಸಿಕೊಂಡು ಜೀವಂತವಾಗಿದೆ. ಉನ್ನತ ಉಷ್ಣತೆಯಲ್ಲಿ ಜರುಗುವ ಕ್ರಿಯಾಸ್ವರೂಪದ ಅರಿವು, ಕುಲುಮೆಗಳಿಂದ ಉಷ್ಣ ಹಾಳಾಗದಂತೆ ಕಾಪಾಡುವ ಉತ್ತಮ ಅಸ್ತರಿಗಳ ತಯಾರಿಕೆ, ಕುಲುಮೆಗಳನ್ನು ಕಾಯಿಸಲು ವಿದ್ಯುವಿಧಾನದ ಬಳಕೆ, ಉಷ್ಣ ನಿಯಂತ್ರಿಸುವ ವಿದ್ಯುತ್ ಸಲಕರಣೆಗಳು, ಒತ್ತಡ ಮತ್ತು ನಿರ್ವಾತ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸಬಲ್ಲ ಯಂತ್ರೋಪಕರಣಗಳ ನಿರ್ಮಾಣ, ಅಗ್ಗದ ಬೆಲೆಯಲ್ಲಿ ಆಕ್ಸಿಜನ್ನಿನ ಪೂರೈಕೆ ಮೊದಲಾದ ಸುಧಾರಣೆಗಳು ಗಮನಾರ್ಹವಾದವು. 1925-58ರ ಅವಧಿಯಲ್ಲಿ ಕಬ್ಬಿಣೇತರ ಲೋಹಗಳ ಉತ್ಪಾದನೆಯಲ್ಲೇ ಅನುಷ್ಠಾನಕ್ಕೆ ಬಂದಿರುವ ಆಧುನಿಕ ವಿಧಾನಗಳು ಅನೇಕ. ಅವುಗಳಲ್ಲಿ ಕೆಲವನ್ನು ಮಾತ್ರ ಮುಂದೆ ಹೆಸರಿಸಲಾಗಿದೆ. ಸತುವಿನ ಅದಿರನ್ನು ಕರಗಿಸಲು ಅಹರ್ನಿಶಿ ಕೆಲಸ ಮಾಡುವ ನಿಲುಗುಲುಮೆ (ವರ್ಟಿಕಲ್ ರಿಟಾರ್ಟ್) ಬಳಕೆಗೆ ಬಂದಿದೆ. ಅಶುದ್ಧ ಸತುವಿನ ಸಂಸ್ಕರಣಕ್ಕೆ ಅಂಶಬಾಷ್ಪೀಭವನ ಪದ್ಧತಿಯನ್ನು ಜಾರಿಗೆ ತರಲಾಗಿದೆ. ನಿರ್ವಾತ ಕುಲುಮೆಯಲ್ಲಿ ಮ್ಯಾಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಲೋಹಗಳನ್ನು ಅತ್ಯಾಧುನಿಕ ಕ್ರೋಲ್ ವಿಧಾನದಿಂದ ಉತ್ಪಾದಿಸಲಾಗುತ್ತಿದೆ. ಕೀಳುದರ್ಜೆಯ ನಿಕ್ಕಲ್ ಅದಿರುಗಳನ್ನು ಕರಗಿಸುವ ಸಲುವಾಗಿಯೇ ಆಕ್ಸಿಜನ್ನಿನಲ್ಲಿ ಉರಿಸುವ ಮಿಂಚಿನ ವಿಧಾನ (ಫ್ಲಾಶ್ ಸ್ಮೆಲ್ಟಿಂಗ್) ಹುಟ್ಟಿಕೊಂಡಿದೆ. ಸತುವಿನ ತಯಾರಿಕೆಗೂ ಊದುಕುಲುಮೆಯ ಅನ್ವಯ ಮತ್ತೊಂದು ಪ್ರಮುಖ ಮೈಲಿಗಲ್ಲು, ಯುರೇನಿಯಂ, ಕೋಬಾಲ್ಟ್, ಬೆಳ್ಳಿ, ಬಿಸ್ಮತ್, ಪಾದರಸ, ಮಾಲಿಬ್ಡಿನಂ, ಬೆರಿಲಿಯಂ, ಟಂಗ್‍ಸ್ಟನ್, ಚಿನ್ನ, ಜಿರ್ಕೋನಿಯಂ, ಟ್ಯಾಂಟಲಂ, ನಿಯೋಬಿಯಂ ಮತ್ತು ಇತರ ಅಪ್ರಧಾನ ಲೋಹಗಳೂ ಉಷ್ಣ ಲೋಹವಿದ್ಯಾ ವಿಧಾನದಿಂದಲೇ ತಯಾರಿಸಲ್ಪಡುತ್ತಿವೆ. ಕಬ್ಬಿಣ, ಉಕ್ಕು, ಫರೊಮ್ಯಾಂಗನೀಸ್ ಮತ್ತು ಫೆರೊಕ್ರೋಮ್ ಮಿಶ್ರಲೋಹಗಳು ಇತ್ಯಾದಿಗಳ ತಯಾರಿಕೆಗೆ ಸಂಪೂರ್ಣವಾಗಿ ಈ ವಿಧಾನವನ್ನು ಅವಲಂಬಿಸಿದೆ. ಅದಿರಿನಿಂದ ಲೋಹದವರೆಗೆ ಉತ್ಪಾದನಾ ಕ್ರಮ ಪೂರ್ತಿಯಾಗಿ ಉಷ್ಣಲೋಹ ವಿದ್ಯಾತಂತ್ರವಾಗಿರಬಹುದು. ಇಲ್ಲವೆ ಮೊದಲ ಹಂತಗಳಲ್ಲಿ ಮಾತ್ರ ಉನ್ನತ ಉಷ್ಣತೆ ಬಳಸಿ ಮುಂದೆ ಜಲಲೋಹತಂತ್ರವನ್ನಾಗಲೀ (ಹೈಡ್ರೋಮೆಟಲರ್ಜಿ) ಅಥವಾ ವಿದ್ಯುಲೋಹತಂತ್ರವನ್ನಾಗಲೀ (ಎಲೆಕ್ಟ್ರೋಮೆಟಲರ್ಜಿ) ಉಪಯೋಗಿಸಬಹುದುಂಟು. ಉಷ್ಣಲೋಹ ವಿದ್ಯಾ ವಿಧಾನಗಳು ಮೂರು ರೀತಿಯವಾಗಿರಬಹುದು: 1. ಅಣಿಗೊಳಿಸುವ ಕ್ರಿಯೆಗಳು( ಕಚ್ಚಾವಸ್ತುವನ್ನು ಮುಂದಿನ ಕ್ರಿಯಾ ಹಂತಗಳಿಗೆ ಅನುಗೊಳಿಸುವುದು ಇವುಗಳ ಕರ್ತವ್ಯ. ಸಲ್ಫೈಡ್ ಅದಿರುಗಳನ್ನು ಹುರಿದು ಆಕ್ಸೈಡುಗಳಾಗಿ ಪರಿವರ್ತಿಸುವುದು ಇದಕ್ಕೆ ಉದಾಹರಣೆ. 2. ಅಪಕರ್ಷಣ ವಿಧಿಗಳು(ಸಂಯುಕ್ತಗಳನ್ನು ಮೂಲ ಲೋಹಕ್ಕೆ ಮಾರ್ಪಡಿಸುವ ಘಟ್ಟವಿದು. ಹೆಮಟೈಟ್ ಅದಿರನ್ನು ಬೀಡು ಕಬ್ಬಿಣವಾಗಿ ಅಪಕರ್ಷಿಸುವುದು ಇದಕ್ಕೆ ನಿದರ್ಶನ. 3 ಸಂಸ್ಕರಣ ಕ್ರಿಯೆಗಳು(ಇವುಗಳ ಅನ್ವಯದಿಂದ ಅಶುದ್ಧ ಲೋಹದಲ್ಲಿರುವ ಕಲ್ಮಷಗಳನ್ನು ಹೋಗಲಾಡಿಸಿ ಅದರ ಶುದ್ಧತೆಯನ್ನು ಹೆಚ್ಚಿಸಲಾಗುವುದು. ಉದಾಹರಣೆಗೆ ಅಶುದ್ಧ ಸತುವನ್ನು ಕುದಿಸಿದಾಗ ಅದರಲ್ಲಿದ್ದ ಕಬ್ಬಿಣ, ಸೀಸ ಮತ್ತು ಕ್ಯಾಡ್ಮಿಯಂ ಲೋಹಗಳು ಆವಿಯ ರೂಪದಲ್ಲಿ ಪಾರಾಗುವುವು. ಹಿಂದುಳಿದ ಸತು ಹೆಚ್ಚು ಶುದ್ಧವಾಗಿರುವುದು. ಮೇಲ್ಕಂಡ ಮೂರು ಪ್ರಧಾನ ಕ್ರಿಯಾವಿಧಿಗಳನ್ನು ಮುಂದೆ ಒಂದೊಂದಾಗಿ ವಿವೇಚಿಸಲಾಗುವುದು.

1 ಅಣಿಗೊಳಿಸುವ ಕ್ರಿಯೆಗಳು. ಸಲ್ಫೈಡುಗಳ ಹುರಿಯುವಿಕೆ: ಲೋಹದ ಸಲ್ಫೈಡುಗಳನ್ನು ಗಾಳಿ ಅಥವಾ ಆಕ್ಸಿಜನ್‍ನಿನಲ್ಲಿ ಹುರಿದಾಗ ಆಯಾ ಲೋಹದ ಆಕ್ಸೈಡುಗಳು ಅಥವಾ ಸಲ್ಫೈಡುಗಳಾಗಿ ಗಂಧಕದ ಡೈಆಕ್ಸೈಡ್ ಬಿಡುಗಡೆಯಾಗುವುದು. ಎಚ್ಚರದಿಂದ ಹುರಿದರೆ ಆಗುವ ಪ್ರಯೋಜನಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ. (1) ಖನಿಜ ವಸ್ತು ಮುಂದೆ ಇಂಗಾಲ ಅಥವಾ ಇಂಗಾಲದ ಮಾನಾಕ್ಸೈಡಿನಿಂದ ಅಪಕರ್ಷಿತವಾಗಲು ಅನುಕೂಲಿಸುವುದು. ಲೋಹದ ಸಲ್ಫೈಡುಗಳಿಗಿಂತ ಆಕ್ಸೈಡುಗಳು ಈ ಅಪಕರ್ಷಣಕಾರಿಗಳ ವರ್ತನೆಗೆ ಸುಲಭವಾಗಿ ಮಣಿಯುವುವು. ಇದರ ಬಗ್ಗೆ ವಿವರಗಳು ಮುಂದೆ ಕೋಷ್ಟಕದಲ್ಲಿದೆ. (ಪುಟ 785) (2) ಅದಿರಿನಲ್ಲಿ ಘನ ಲೋಹಗಳಿರಬಹುದು, ಅವು ತಮ್ಮ ಸಲ್ಫೈಡುಗಳ ದ್ರವ ಮಿಶ್ರಣವಾಗಲು (ಇದನ್ನು ಮೆಟ್ಟೆ ಎಂದು ಕರೆಯುವರು) ಸಾಕಾಗುವಷ್ಟು ಮಾತ್ರ ಗಂಧಕ ಉಳಿಯುವುದು. (3) ಲಭ್ಯವಸ್ತು ಆಮ್ಲಾವಶೋಷಣೆಗೆ ಮತ್ತು ವಿದ್ಯುದ್ವಿಶ್ಲೇಷಣೆಗೆ ಹದಗೊಳ್ಳುವುದು. ಹೇಗೆಂದರೆ ಅವಶೋಷಣೆಗೆ ಸಲ್‍ಫ್ಯೂರಿಕ್ ಆಮ್ಲವನ್ನು ಉಪಯೋಗಿಸುವುದು ಸರ್ವೇಸಾಮಾನ್ಯ. ಅದರಲ್ಲಿ ಲೋಹದ ಆಕ್ಸೈಡುಗಳು ಲೀನವಾಗುವಷ್ಟು ಸರಾಗವಾಗಿ ಲೋಹದ ಸಲ್ಫೈಡುಗಳು ಆಗುವುದಿಲ್ಲ.

(4) ಬಿಡುಗಡೆಯಾದ ಗಂಧಕದ ಡೈಆಕ್ಸೈಡನ್ನು ದ್ರವರೂಪಕ್ಕೆ ತರಬಹುದು ಅಥವಾ ಸಲ್ಫ್ಯೂರಿಕ್ ಆಮ್ಲವಾಗಿ ಪರಿವರ್ತಿಸಬಹುದು. ಈ ಉಪ ಉದ್ಯಮ ಲಾಭದಾಯಕವಾಗಿರಲಿ ಅಥವಾ ಬಿಡಲಿ ಕಾನೂನಿನ ಪ್ರಕಾರ ಅದರ ವಿನಿಯೋಗವಾಗಲೇಬೇಕು. ಇಲ್ಲದಿದ್ದರೆ ಅದರ ಸೇವನೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಧಕ್ಕೆಯಾಗುತ್ತದೆ. ಹುರಿಯುವಾಗ ನಡೆಯುವ ಕ್ರಿಯೆಯನ್ನು ಸಾಂಕೇತಿಕವಾಗಿ ಹೀಗೆ ಸೂಚಿಸಬಹುದು. ಒS(s) + 3/2 ಔ2(g)→ಒಔ(s) +Sಔ2(g)

ಸಾಮಾನ್ಯವಾಗಿ 650ಲಿ-1000ಲಿ ಸೆ. ಉಷ್ಣತಾ ಮಿತಿ ಹುರಿಯಲು ಬಹಳ ಪ್ರಶಸ್ತವಾದುದು. ರೋಸ್ಟರಿನಿಂದ ಹೊರಬೀಳುವ ಅನಿಲದಲ್ಲಿ ಆಕ್ಸಿಜನ್ ಕೊಂಚವಾದರೂ ಇರುವಂತೆ ನೋಡಿಕೊಂಡರೆ, ಈ ಕ್ರಿಯೆ ನಡೆದಾಗ ಉಷ್ಣ ಹುಟ್ಟುವುದು. ಸ್ವಲ್ಪ ಗಂಧಕದ ಟ್ರೈ ಆಕ್ಸೈಡ್ ಇದ್ದೇ ತೀರುವುದು. Sಔ2+ ಳಿ ಔ2→Sಔ3

ಉಷ್ಣವೇರಿದಂತೆ ಈ ಕ್ರಿಯೆಯ ಸಮತೋಲನ ಎಡದಿಂದ ಬಲಕ್ಕೆ ಸ್ಥಿತ್ಯಂತರವಾಗುವುದು. 1.000ಲಿಸೆ. ಸನಿಹದಲ್ಲಿ ಗಂಧಕದ ಟ್ರೈ ಆಕ್ಸೈಡಿನ ಪ್ರಮಾಣ ಅತ್ಯಲ್ಪವಾಗಿರುತ್ತದೆ. ಕಡಿಮೆ ಉಷ್ಣತೆಯಲ್ಲಿ ಅದರ ಪ್ರಮಾಣ ಹೆಚ್ಚಾಗಿರುವುದರಿಂದ ಆಕ್ಸೈಡುಗಳಿಗಿಂತ ಸಲ್ಫೇಟುಗಳಾಗುವುದು ಹೆಚ್ಚು ಸಂಭವನೀಯ. ಸಾಮಾನ್ಯ ಬಳಕೆಯಲ್ಲಿರುವ ಹುರಿಯೋಡುಗಳಲ್ಲಿ ಮಲ್ಟಿಪಲ್ ಹಾರ್ತ್, ಫ್ಲೂಯಿಡ್ ಬೆಡ್ ಮತ್ತು ಫ್ಲಾಷ್ ರೋಸ್ಟರುಗಳೆಂದು ಮೂರು ವಿಧಗಳಿವೆ. ರೋಟರಿಗೆ ಒದಗಿಸುವ ಕಚ್ಚಾವಸ್ತು ನಯವಾದ ಹುಡಿಯಂತಿರಬೇಕು. ಅಂದರೆ 10ನೆಯ ಸಂಖ್ಯೆಯ ಜರಡಿಯ ಮೂಲಕ ಹರಿದು ಹೋಗುವಷ್ಟು ಸೂಕ್ಷ್ಮವಾಗಿದ್ದರೆ ಸಾಕು. ಹಾಗಿದ್ದರೆ ಹುರಿಯಲ್ಪಟ್ಟ ವಸ್ತುವೂ ಅಷ್ಟೇ ನಯವಾದ ಪುಡಿಯಾಗಿರುವುದು. ರೋಸ್ಟರು ಹೊರಹಾಕುವ ಅನಿಲಗಳಲ್ಲಿ ದೂಳಿನ ಅಂಶ ಹೆಚ್ಚಾಗಿರುತ್ತದೆ. ಇದನ್ನು ಸಂಗ್ರಹಿಸಿ ರೋಸ್ಟರಿಗೇ ಹಿಂತಿರುಗಿಸುವ ಪ್ರತ್ಯೇಕ ವ್ಯವಸ್ಥೆಯಿರುವುದು. ಉಷ್ಣಲೋಹ ವಿದ್ಯಾಕ್ಷೇತ್ರಕ್ಕೆ ಫ್ಲೂಯಿಡ್ ಬೆಡ್ ರೋಸ್ಟರಿನ ಆಗಮನವಾದದ್ದು ಎರಡನೆಯ ಮಹಾಯುದ್ಧ ತರುವಾಯ. ಘನ ಅನಿಲ ಕ್ರಿಯೆಗಳನ್ನು ನಡೆಸಲು ಇದು ಬಲು ಸಹಾಯಕ. ರೋಟರಿನ ತಳ ಸರಂಧ್ರ. ಇದರ ಮೂಲಕ ಗಾಳಿಯನ್ನು ಹಾಯಿಸಲಾಗುವುದು. ಹುರಿಯಲ್ಪಡುತ್ತಿರುವ ಕಣಗಳು ಗಾಳಿಯ ವೇಗದಿಂದ ಬುಡಮೇಲಾಗಿ ನಿಕಟ ಮಿಶ್ರಣ ಲಭಿಸುವುದು. ಅತಿ ಸೂಕ್ಷ್ಮಕಣಗಳು ಮಾತ್ರ ಅನಿಲಪ್ರವಾಹದೊಡನೆ ಪಾರಾಗುವುದು. ತಿರುಪುವಾಹಕವೊಂದು (ಸ್ಕ್ರೂ ಕನ್ವೇಯರ್) ಸಾಂಕ್ರೀಕರಿಸಿದ ಸಲ್ಫೈಡಿನ ಅದಿರನ್ನು ನಿರಂತರವಾಗಿ ಪೂರೈಸುತ್ತಿರುತ್ತದೆ. ಬೆಡ್ಡಿನ ಮೇಲ್ಭಾಗದಲ್ಲಿರುವ ನಿಯೋಜಿತ ದ್ವಾರದ ಮೂಲಕ ಹುರಿಯಲ್ಪಟ್ಟ ದ್ರವವಸ್ತು ನಿರ್ಗಮಿಸುತ್ತದೆ. ಸಲ್ಫೈಡುಗಳ ದಹನದಿಂದ ಕ್ರಿಯೆಗೆ ಅಗತ್ಯವಾದ ಉಷ್ಣ ತಾನಾಗಿಯೇ ಒದಗುವುದು. ಸ್ವಯಂಚಾಲಿತ ಸಾಧನಗಳು ಬೆಡ್ಡಿನ ಮೇಲೆ ಅಪಕರ್ಷಣೆಯ ಹೆಸರು ಅಪಕರ್ಷಿಸುವ ಶಕ್ತಿ ಉತ್ಪಾದಿಸುವ ಲೋಹ


ಆಕ್ಸೈಡುಗಳನ್ನು ಸಲ್ಫೈಡುಗಳನ್ನು ಹ್ಯಾಲೈಡುಗಳನ್ನು


ಇಂಗಾಲ (ಕೋಕ್) ಉತ್ತಮ -- -- Zಟಿ, ಓi. ಅo.Sಚಿ

ಇಂಗಾಲದ ಮೊನಾಕ್ಸೈಡ್ (ಕೋಕಿನಿಂದ ಪಡೆದ) ಉತ್ತಮ -- -- Pb. ಅu.Sಟಿ

ಹೈಡ್ರೋಜನ್(ನೈಸರ್ಗಿಕ ಅನಿಲದಿಂದಾದ) ಮಧ್ಯಮ ಕನಿಷ್ಠ ಮಧ್ಯಮ ಒo.W

ಕಬ್ಬಿಣ (ಚೂರುಪಾರು) ಮಧ್ಯಮ ಮಧ್ಯಮ ಮಧ್ಯಮ ಅu.Pb.Sb

ಸಿಲಿಕಾನ್ (ಫೆರೋಸಿಲಿಕಾನ್) ಉತ್ತಮ ಮಧ್ಯಮ ಮಧ್ಯಮ ಒg

ಅಲ್ಯೂಮಿನಿಯಂ ಅತ್ಯುತ್ತಮ ಮಧ್ಯಮ ಉತ್ತಮ ಅಚಿ

ಸೋಡಿಯಂ ಉತ್ತಮ ಉತ್ತಮ ಅತ್ಯುತ್ತಮ ಖಿi,Zಡಿ

ಮ್ಯಾಗ್ನೀಸಿಯಂ ಅತ್ಯುತ್ತಮ ಉತ್ತಮ ಅತ್ಯುತ್ತಮ ಖಿi,Zಡಿ,ಊಜಿ,ಃe,U


ಆಗಿಂದಾಗ್ಗೆ ಸಿಂಪಡಿಸುವ ನೀರಿನಿಂದ ಉಷ್ಣತಾ ನಿಯಂತ್ರಣವಾಗುವುದು. ಬೆಡ್ಡಿನಿ ಮೂಲಕ ಹಾಯುವ ಅನಿಲ ಪ್ರಮಾಣವನ್ನೂ ಉಷ್ಣತೆಯನ್ನೂ ಇಷ್ಟಾನುಸಾರ ನಿಯಂತ್ರಿಸುವುದು ಮತ್ತು ಕಾದ ಆವರಣದಲ್ಲಿ ಚಲಿಸುವ ಯಂತ್ರಭಾಗಗಳು ಇಲ್ಲದಿರುವುದು ಈ ಹುರಿಯೋಡಿನ ವೈಶಿಷ್ಟ್ಯಗಳು. 100ನೆಯ ಸಂಖ್ಯೆಯ ಜರಡಿಯಷ್ಟು ಸಣ್ಣ ಕಣಗಳನ್ನೂ ಕಾಯಿಸಿದಾಗ ಅಂಟಿಕೊಳ್ಳುವ ಜಿಗುಟು ಸ್ವಭಾವದ ವಸ್ತುಗಳನ್ನೂ ಹುರಿಯಲು ಇದು ತಕ್ಕುದಲ್ಲ. ಮಲ್ಟಿಪಲ್ ಹಾರ್ತ್ ರೋಸ್ಟರಿನ ಬೆಡ್ಡಿಗೆ ಉಷ್ಣನಿರೋಧಕ ಅಸ್ತರಿಯಿರುತ್ತದೆ. ಆದರ ಮೇಲೆ ಸಾರೀಕರಿಸಿದ ಅದಿರನ್ನು ಹರಡಿರುತ್ತಾರೆ. ಬಿಸಿಯಾದ ಅನಿಲಗಳು ಅದಿರಿನ ಮೇಲೆ ಹಾಯುವುವು. ಫ್ಲಾಷ್ ರೋಸ್ಟರಿನಲ್ಲಿ ದಹನ ಕೋಶವಿರುವುದು. ಪುಡಿ ಮಾಡಿದ ಸಾಂದ್ರೀಕೃತ ಅದಿರನ್ನು ಈ ಕೋಶದೊಳಕ್ಕೆ ತೂರಲಾಗುವುದು. ಸಿಂಟರಿಂಗ್: ಸೂಕ್ಷ್ಮ ಕಣಗಳನ್ನು ಒಂದುಗೂಡಿಸಿ ಸಾಕಷ್ಟು ದೊಡ್ಡವಾಗಿಸಿ, ಊದುಕುಲುಮೆ ಮತ್ತಿತರ ಅಪಕರ್ಷಣ ವಿಧಾನಗಳನ್ನು ಬಳಸಲು ಅನುಕೂಲಿಸುವ ಗಾತ್ರಕ್ಕೆ ತರುವುದು ಇದರ ಉದ್ದೇಶ. ಇದಕ್ಕಾಗಿ ಬಳಸುವ ಸಾಧನಕ್ಕೆ ಕೆಳಮುಖ ಗಾಳಿ ಸಂಚಾರಿ (ಡೌನ್‍ಡ್ರೇಫ್ಟ್) ಎಂದು ಹೆಸರು. ಕ್ಲೋರಿಟಿನ್ನಿನ ಪ್ರಯೋಗ: ಟಿಟ್ಯಾನಿಯಂ, ಜಿರ್ಕೋನಿಯಂ ಮೊದಲಾದ ಉಷ್ಣ ನಿರೋಧಿ ಲೋಹಗಳನ್ನು ಉತ್ಪಾದಿಸುವಾಗ ಅವುಗಳ ಆಕ್ಸೈಡುಗಳನ್ನು ಕ್ಲೋರೈಡುಗಳಾಗಿ ಮಾರ್ಪಡಿಸದೆ ವಿಧಿಯಿಲ್ಲ. ಏಕೆಂದರೆ ಈ ಲೋಹಗಳ ಆಕ್ಸೈಡುಗಳನ್ನು ನೇರವಾಗಿ ಅಪಕರ್ಷಿಸುವಂತಿಲ್ಲ. ಕ್ಲೋರೈಡುಗಳಾದರೆ ಸೋಡಿಯಂ ಅಥವಾ ಮ್ಯಾಗ್ನೀಸಿಯಂನಿಂದ ಸುಲಭವಾಗಿ ಅಪಕರ್ಷಿತವಾಗುವುವು. ಟೆಟ್ಯಾನಿಯಂ ಆಕ್ಸೈಡ್ ಕ್ಲೋರಿನಿನೊಡನೆ ವರ್ತಿಸಿದಾಗ ಟಿಟ್ಯಾನಿಯಂ ಟೆಟ್ರಕ್ಲೋರೈಡ್ ಉಂಟಾಗುತ್ತದೆ. ಖಿiಔ2(s)+2ಅ(s)+2ಅI2(g)→ಖಿiಅI4(g)+2ಅಔ(g) ಇಂಗಾಲದ ಸಂಪರ್ಕದಲ್ಲಿ ಕ್ರಿಯೆ ಸರಾಗವಾಗಿ ಎಡದಿಂದ ಬಲಕ್ಕೆ ನಡೆಯುವುದು. ಆಗ ಹುಟ್ಟುವ ಅಲ್ಪ ಉಷ್ಣವೇ ಕ್ರಿಯೆಗೆ ಅಗತ್ಯವಾದ 800ಲಿ-900ಲಿ ಸೆ. ಉಷ್ಣತೆಯನ್ನು ಉತ್ಪಾದಿಸಲು ಸಾಕಾಗಬಹುದು. ಸೂಕ್ಷ್ಮಕಣಗಳಿರುವ ಅದಿರಿನೊಡನೆ ವ್ಯವಹರಿಸುವ ಪ್ರಸಂಗದಲ್ಲಿ ಕ್ಲೋರಿನಿನ ಪ್ರಯೋಗಕ್ಕೆ ಫ್ಲೂಯಿಡ್ ಬೆಡ್ ರೋಸ್ಟರ್ ಅಗತ್ಯ. ಇದರ ಬದಲು ಫ್ಲಾಷ್ ಕುಲುಮೆಯಾದರೂ ಆದೀತು. ಆಗ ಲೋಹದ ಆಕ್ಸೈಡ್ ಮತ್ತು ಇಂಗಾಲದ ಮಿಶ್ರಣದಿಂದ ಇಟ್ಟಿಗೆಗಳನ್ನು ಮಾಡಿಕೊಂಡು ಅನಂತರ ಅವುಗಳನ್ನು ಕ್ಲೋರಿನಿನ ವರ್ತನೆಗೆ ಒಡ್ಡಬೇಕಾಗುತ್ತದೆ. ಈ ಪ್ರಯೋಗಕ್ಕೆ ಹೆಚ್ಚು ಉಷ್ಣದ ಅಗತ್ಯವಿದೆ. ಅದನ್ನು ಒದಗಿಸಲು ಆಂತರಿಕ ವಿದ್ಯುದ್ವಿಧಾನವನ್ನು ಉಪಯೋಗಿಸುವರು. ಕ್ಯಾಲ್ಸಿನೇಷನ್: ತೇವಾಂಶ ನಿವಾರಣೆ ಮತ್ತು ಹೈಡ್ರೇಟುಗಳ ಹಾಗೂ ಕಾರ್ಬೋನೇಟುಗಳ ವಿಭಜನೆ ಇದರ ಗುರಿ. ತೇವವಾದ ಸಾಂದ್ರೀಕೃತ ಸಲ್ಫೈಡುಗಳನ್ನು ಫ್ಲಾಷ್ ರೋಸ್ಟರಿನಲ್ಲಿ ಹುರಿಯುವ ಮುನ್ನ ಶುಷ್ಕಗೊಳಿಸುವುದು. ವಿದ್ಯುವಿಧಾನದಿಂದ ಅಲ್ಯೂಮಿನಿಯಂ ತಯಾರಿಸುವುದಕ್ಕೆ ಮುಂಚೆ ಅಲ್ಯೂಮಿನಿಯಂ ಟ್ರೈ ಹೈಡ್ರೇಟನ್ನು ಅಲ್ಯೂಮಿನಾಕ್ಕೆ ಪರಿವರ್ತಿಸುವುದು ಮತ್ತು ಪಿಡ್ಜನ್ ವಿಧಾನದಿಂದ ಮ್ಯಾಗ್ನೀಸಿಯಂ ಮಾಡುವಾಗ ಡಾಲೊಮೈಟನ್ನು (ಅಚಿಅಔ3. ಒgಅಔ3) ಸುಟ್ಟ ಡಾಲೊಮೈಟಿಗೆ (ಅಚಿಔಒgಔ) ಮಾರ್ಪಡಿಸುವುದು ಇದಕ್ಕೆ ನಿದರ್ಶನಗಳು. ಇದರ ಸಲುವಾಗಿ ಉರುಳು ಕುಲುಮೆ ಅಥವಾ ಹಿಂದೆಯೇ ವರ್ಣಸಿರುವ ಯಾವುದಾದರೂ ರೋಸ್ಟರನ್ನು ಉಪಯೋಗಿಸುವುದು ವಾಡಿಕೆ. ಕ್ಯಾಲ್ಸಿನೇಷನ್ ವಿಧಿ ಉಷ್ಣ ಗ್ರಾಹಕ ಕ್ರಿಯೆಯಾದುದರಿಂದ ಬಾಹ್ಯಮೂಲಗಳಿಂದ ಉಷ್ಣವನ್ನು ಹೊಂದಿಸಬೇಕಾಗುವುದು. ಅಪಕರ್ಷಣ ವಿಧಿಗಳು: ಸಂಯುಕ್ತ ಸ್ಥಿತಿಯಿಂದ ಮೂಲ ಲೋಹವನ್ನು ಬಿಡುಗಡೆ ಮಾಡಿ ಶೇಷವಸ್ತುವಿನಿಂದ ಬೇರ್ಪಡಿಸುವುದು ಈ ಕ್ರಿಯೆಗಳು ಸಾಧಿಸಬೇಕಾದ ಗುರಿ. ಉಪಯೋಗಿಸಿದ ಅಪಕರ್ಷಣಕಾರಿ ಉನ್ನತ ಉಷ್ಣತೆಯಲ್ಲಿ ಅದಿರಿನ ಅನಪೇಕ್ಷಿತ ಭಾಗದೊಡನೆ ಮಾತ್ರ ವರ್ತಿಸುವಂತಿರಬೇಕು. ಒಂ ಒಂದು ಸಂಯುಕ್ತವಾದರೆ ಃ ಎಂಬ ಸಂಪರ್ಕದಲ್ಲಿ ಕೆಳಕಂಡ ಕ್ರಿಯೆ ನಡೆದು ಃಒಲಿ ಎಂಬ ಮೂಲಸ್ಥಿತಿಯಲ್ಲಿರುವ ಲೋಹ ಬಿಡುಗಡೆ ಹೊಂದಬೇಕು. ಒಂ+ಃ→ಒ0+ಃಂ ಕ್ರಿಯೆ ಸ್ವಾಭಾವಿಕವಾಗಿ ಎಡದಿಂದ ಬಲಕ್ಕೆ ನಡೆಯಬೇಕಾದರೆ ಕ್ರಿಯಾ ಸನ್ನಿವೇಶದಲ್ಲಿ ಃಂ ಸಂಯುಕ್ತ ಒಂ ಗಿಂತ ಹೆಚ್ಚು ಸ್ಥಿರವಾಗಿರಲು ಮಾತ್ರ ಸಾಧ್ಯ. ಉಷ್ಣಗತಿಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ ಮೇಲಿನ ಕ್ರಿಯೆಯಲ್ಲಾಗುವ ಮುಕ್ತ-ಶಕ್ತಿಯ ವ್ಯತ್ಯಾಸ ಋಣಾತ್ಮಕವಾಗಿರಬೇಕು. ಸೂಕ್ತ ಅಪಕರ್ಷಣಕಾರಿಯ ಬಳಕೆ, ಕ್ರಿಯಾಭಾಗಿ ವಸ್ತುಗಳ ಪ್ರಬಲತೆಯ ಹೊಂದಾಣಿಕೆ ಮತ್ತು ಅಪೇಕ್ಷಿತ ಉಷ್ಣತೆಯ ಒತ್ತಡಗಳ ಉಪಯೋಗದಿಂದ ಈ ಗುರಿಯನ್ನು ಮುಟ್ಟಬಹುದು. ಅಪಕರ್ಷಣಕಾರಿಯನ್ನು ಆರಿಸುವಾಗ ಗಮನಿಸಬೇಕಾದ ಅಂಶಗಳು ಎರಡು. ಲೋಹಕ್ಕಿಂತ ಅದು ಅಗ್ಗವಾಗಿರಬೇಕು. ಃಂ ಲೋಹದಿಂದ ಸುಲಭವಾಗಿ ಬೇರ್ಪಡಿಸುವಂತಿರಬೇಕು. ಅನಿಲರೂಪದಲ್ಲಿ ಲೋಹದ ಉತ್ಪಾದನೆ: ಅವ್ಯಾಸಕ್ತ ಲೋಹಗಳಾದ ಸತು, ಕ್ಯಾಡ್ಮಿಯಂ, ಪಾದರಸ, ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಬೇರಿಯಂ ಮೊದಲಾದವುಗಳನ್ನು ಹೀಗೆ ಪಡೆಯಬಹುದು. ಶೇಷವಸ್ತುವಿನ ಸಂಪರ್ಕವಿಲ್ಲದಂತೆ ಲೋಹದ ಆವಿಯನ್ನು ಪ್ರತ್ಯೇಕಕೋಶದಲ್ಲಿ ದ್ರವ ಅಥವಾ ಘನರೂಪದಲ್ಲಿ ಸಾಂದ್ರೀಕರಿಸುವುದು ಈ ವಿಧಾನದ ವೈಶಿಷ್ಟ್ಯ. ಸತುವಿನ ಆಕ್ಸೈಡನ್ನು ಇಂಗಾಲದಿಂದ ಅಪಕರ್ಷಿಸಿದಾಗ ಲೋಹ ಬರುವುದು. ಕೆಳಕಂಡ ಕ್ರಿಯೆ 1,200ಲಿ-1,300ಲಿ ಸೆ. ಉಷ್ಣತೆಯಲ್ಲಿ ನಡೆಯುವುದರಿಂದ Zಟಿಔ(s)+ಅ(s)→Zಟಿ(g)+ಅಔ(g) 906ಲಿ ಸೆಂಟಿಗ್ರೇಡಿನಲ್ಲಿ ಕುದಿಯುವ ಸತು ಆವಿಯ ರೂಪದಲ್ಲಿರುವುದು ಸ್ವಾಭಾವಿಕ. ರಿಟಾರ್ಟುಗಳಿಗೆ ಗಾಳಿಯ ಪ್ರವೇಶವಿರಕೂಡದು, ಹೆಚ್ಚು ಬಳಕೆಯಲ್ಲಿರವುದು ಬೆಲ್‍ತಾಯನ್ ಮಾದರಿಯ ರಿಟಾರ್ಟು. ಇದರ ಉತ್ಪಾದನಶಕ್ತಿ ಕಡಿಮೆ. ದಿನವೊಂದಕ್ಕೆ 40-60 ಪೌಂಡು ಲೋಹಕ್ಕಿಂತ ಹೆಚ್ಚು ಕೊಡಲಾರದು. ರಿಟಾರ್ಟು ಮತ್ತು ಸಾಂದ್ರಕಗಳನ್ನು ಉಷ್ಣನಿರೋಧಕ ಮಣ್ಣಿನಿಂದ ಮಾಡಿರುತ್ತಾರೆ. ಒಂದು ಕುಲುಮೆಯಲ್ಲಿ ಇಂಥ ನೂರಾರು ರಿಟಾರ್ಟುಗಳನ್ನು ಸ್ವಲ್ಪ ಇಳಿಮುಖವಾಗಿ ಜೋಡಿಸಿರುತ್ತಾರೆ. ಕುಲುಮೆಯನ್ನು ಜ್ವಲನಾನಿಲದಿಂದ (ಪ್ರೊಡ್ಯೂಸರ್ ಗ್ಯಾಸ್) ಕಾಯಿಸಲಾಗುತ್ತದೆ. ರಿಟಾರ್ಟುಗಳನ್ನು ಭರ್ತಿಮಾಡಲು, ಸಾಂದ್ರಕಗಳನ್ನು ಖಾಲಿ ಮಾಡಲು ಮತ್ತು ಶೇಷವಸ್ತುಗಳ ನಿರ್ಮಲೀಕರಣಕ್ಕೆ ಸಹಾಯಕ ಸಿಬ್ಬಂದಿ ಅಗತ್ಯ. ಈಚೆಗೆ ಈ ಕಾರ್ಯನಿರ್ವಹಣೆಗೆ ಯಾಂತ್ರಿಕ ವ್ಯವಸ್ಥೆಯುಂಟು. ಸಾಂದ್ರಕಕ್ಕೆ ಗಾಳಿ ಪ್ರವೇಶಿಸದಂತೆ ಸಂಪೂರ್ಣವಾಗಿ ತಡೆಯುವುದು ಅಸಾಧ್ಯದ ಕೆಲಸ. ತತ್ಪಲವಾಗಿ ಲೋಹ ಸಾಂದ್ರೀಕರಣ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುವುದಿಲ್ಲ. ಇದು ಈ ರಿಟಾರ್ಟ್ ವಿಧಾನದ ಮುಖ್ಯ ದೋಷ. ಆದ್ದರಿಂದ ಎಡೆಬಿಡದೆ ನಡೆಯುವ ನಿಲುಗುಲುಮೆಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಈ ಕುಲುಮೆಗಳು ದಿನವೊಂದಕ್ಕೆ ಸರಾಸರಿ 5 ಟನ್ ಲೋಹ ನೀಡುವುವು. ವಿದ್ಯುವಿಧಾನದಿಂದ ಕಾಯಿಸಲ್ಪಡುವ ಕುಲುಮೆಗಳಾದರೆ 5 ಪಟ್ಟು ಹೆಚ್ಚು ಲೋಹವನ್ನು ಉತ್ಪಾದಿಸುತ್ತವೆ. ಕಾರ್ಯ ನಿರ್ವಹಣೆಯಲ್ಲಿ ಮೇಲೆನಿಸಿದರೂ ಇವುಗಳ ಸ್ಥಾಪನೆಗೆ ಅಧಿಕ ಬಂಡವಾಳ ಹೂಡಬೇಕು. ಆದ್ದರಿಂದ ಆರ್ಥಿಕ ಕಾರಣಗಳಿಂದಾಗಿ ಇಂದಿಗೂ ಬೆಲ್ಜಿಯನ್ ವಿಧಾನ ಅಲ್ಲಲ್ಲಿ ಆಚರಣೆಯಲ್ಲಿದೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಎಲ್.ಎಮ್. ಪಡ್ಜನ್, ಮ್ಯಾಗ್ನೀಸಿಯಂ ಮತ್ತು ಕ್ಯಾಲ್ಸಿಯಂ ತಯಾರಿಸಲು ನಿರ್ವಾತ ರಿಟಾರ್ಟ್ ವಿಧಾನವನ್ನು ಆಚರಣೆಗೆ ತಂದ. ಯುದ್ಧಕಾಲದಲ್ಲಿ ಮ್ಯಾಗ್ನಿಸಿಯಂ ತಯಾರಿಸಲು ಇದು ವಿಶೇಷವಾಗಿ ಬಳಕೆಯಲ್ಲಿತ್ತು. 1958 ರಿಂದ ಇದರ ಪ್ರಾಶಸ್ತ್ಯ ತಗ್ಗಿದೆ. ಮ್ಯಾಗ್ನೀಸಿಯಂ ಉತ್ಪಾದನೆಯಲ್ಲಿ ನಡೆಯುವ ಕ್ರಿಯೆ ಹೀಗಿದೆ: 2ಅಚಿಔ(s)+2ಒgಔ(s)+ಈex'Si(s)→xಈe(s)+(ಅಚಿಔ)2.Siಔ2(s) ಇಲ್ಲಿ ಉಪಯೋಗಿಸುವ ಕಚ್ಚಾವಸ್ತು ಸುಟ್ಟ ಡಾಲೊಮೈಟ್. ಫೆರೋ ಸಿಲಿಕಾನಿನ ರೂಪದಲ್ಲಿರುವ ಸಿಲಿಕಾನ್ ಅಪಕರ್ಷಣಕಾರಿಯಾಗಿ ವರ್ತಿಸುವುದು. ಕ್ರಿಯೆ 1,200ಲಿ ಸೆ.ನಲ್ಲಿ ನಡೆಯುತ್ತದೆ. ಈ ಉಷ್ಣತೆಯಲ್ಲಿ ಸಮಸ್ಥಿತಿ ಏರ್ಪಟ್ಟಾಗ ಮ್ಯಾಗ್ನೀಸಿಯಂ ಆವಿಯ ಒತ್ತಡ ಕೇವಲ 34 ಮಿ.ಮೀ ಪಾದರಸದಷ್ಟಿರುವುದು. ಈ ಕಾರಣದಿಂದ ಮತ್ತು ಸಾಂದ್ರಕದಲ್ಲಿ ಮ್ಯಾಗ್ನೀಸಿಯಂ ಘನೀಭವಿಸಲು ಅನುಕೂಲಿಸುವಂತೆ ಕ್ರಿಯೆಯನ್ನು ನಿರ್ವಾತಸ್ಥಿತಿಯಲ್ಲಿ ನಡೆಸುವುದು ಅನಿವಾರ್ಯ. 1,200ಲಿ ಸೆಂ.ಗ್ರೇ.ನಲ್ಲಿ ಒಂದು ವಾಯುಭಾರದಷ್ಟು ಒತ್ತಡ ವ್ಯತ್ಯಾಸವನ್ನು ಸಹಿಸಬೇಕಾದ್ದರಿಂದ ವಿಶೇಷ ಅಡಿ.ಓi.ಈe ಮಿಶ್ರಲೋಹಗಳಿಂದ ಮಾಡಿದ ರಿಟಾರ್ಟೇ ಆಗಬೇಕು. ಬೆಲ್ಜಿಯನ ರಿಟಾರ್ಟುಗಳಂತೆ ಇವೂ ಚಿಕ್ಕವು. 10' ಉದ್ದ ಮತ್ತು 10" ಒಳವ್ಯಾಸವುಳ್ಳವು. ಇಂಥ ಅನೇಕ ರಿಟಾರ್ಟುಗಳನ್ನು ಕುಲುಮೆಯೊಂದರಲ್ಲಿ ಸಮಮಟ್ಟವಾಗಿ ಜೋಡಿಸಿರುತ್ತಾರೆ. ಸರದಿಯ ಪ್ರಕಾರ ಅವು ಕಾರ್ಯೋನ್ಮುಖವಾಗುತ್ತವೆ. ರಿಟಾರ್ಟಿನ ತಂಪಾದ ತುದಿಗೆ ಸುಲಭವಾಗಿ ಹಾಕಿ ತೆಗೆದು ಮಾಡಬಹುದಾದ ಸಾಂದ್ರಕಗಳನ್ನು ಬಂಧಿಸಲಾಗುವುದು. ಈ ರಿಟಾರ್ಟುಗಳ ನಿರ್ವಹಣೆಯ ವೆಚ್ಚ ಹೆಚ್ಚು. ಇದು ಒಂದು ಅಸೌಕರ್ಯ. ಆದರೆ ಸಮುದ್ರದ ನೀರಿನಿಂದ ಮ್ಯಾಗ್ನೀಸಿಯಂ ತೆಗೆಯುವ ಡೌ ವಿಧಾನದಿಂದ ಇಲ್ಲಿ ದೊರೆಯುವ ಲೋಹ ಹೆಚ್ಚು ಪರಿಶುದ್ಧವಾಗಿರುತ್ತದೆ. ದ್ರವರೂಪದ ಲೋಹೋತ್ಪತ್ತಿ: ಲೋಹ ತಯಾರಿಕೆಗೆ ವಿಶೇಷವಾಗಿ ಉಪಯೋಗಿಸುವ ವಿಧಾನವಿದೆ. ಸುಮಾರಾದ ದ್ರವೀಕರಣ ಬಿಂದುಗಳಿರುವ ಸುಲಭವಾಗಿ ಆವಿಯಾಗದ ಲೋಹಗಳಾದ ತಾಮ್ರ, ಸೀಸ, ತವರ, ನಿಕ್ಕಲ್, ಬೆಳ್ಳಿ, ಬಿಸ್ಮತ್, ಬೆರಿಲಿಯಂ, ಆಂಟಿಮೊನಿ, ಕೊಬಾಲ್ಟ್ ಮತ್ತು ಯುರೇನಿಯಮ್‍ಗಳ ತಯಾರಿಕೆಗೆ ಈ ವಿಧಾನ ಸಮರ್ಪಕ, ಲೋಹವೊಂದೇ ದ್ರವರೂಪದಲ್ಲಿದ್ದರೆ ಶೇಷವಸ್ತುವಿನಿಂದ ಬೇರ್ಪಡೆ ಕಷ್ಟವಲ್ಲ. ಇಳಿಜಾರಾದ ವೇದಿಕೆಯ ಮೇಲೆ ಸುರಿದರೆ ಸಾಕು, ದ್ರವಿತ ಲೋಹ ಶೇಷವಸ್ತುವನ್ನು ಹಿಂದುಳಿಸಿ ಹರಿದೋಡುವುದು. ಆದರೆ ಸಾಮಾನ್ಯವಾಗಿ ಅನುಸರಿಸುವ ಕ್ರಮವೇ ಬೇರೆ. ಸ್ರಾವಕಗಳನ್ನು (ಫ್ಲಕ್ಸಸ್) ಕೂಡಿಸಿ ಶೇಷವಸ್ತುವಿನೊಡನೆ ವರ್ತಿಸುವಂತೆ ಮಾಡಿದರೆ ದ್ರವರೂಪದ ಕಿಟ್ಟವಾಗುವುದು. ಇದನ್ನು ದ್ರವಿತ ಲೋಹದಿಂದ ಪ್ರತ್ಯೇಕಿಸುವುದು ಇನ್ನೂ ಸುಲಭ. ಇದಕ್ಕಾಗಿ ಊದುಕುಲುಮೆ, ಉಷ್ಣ ಪ್ರತಿಫಲನ ಕುಲುಮೆ ಮತ್ತು ವಿದ್ಯುತ್ ಕುಲುಮೆಗಳನ್ನು ಉಪಯೋಗಿಸುವುದು ಪದ್ಧತಿ. ಕೋಕ್ ಅಥವ ಕಲ್ಲಿದ್ದಲನ್ನು ಅಪಕರ್ಷಣಕಾರಿಯಾಗಿ ಉಪಯೋಗಿಸಿದಾಗ ಉಷ್ಣ ಪ್ರತಿಫಲನ ಕುಲುಮೆಯ ಅಗತ್ಯ ಬೀಳುವುದು. ಈ ಕುಲುಮೆಗೆ ಉಷ್ಣ ನಿರೋಧಕ ಚಾವಣಿಯಿರುತ್ತದೆ. ಬೆಂಕಿಗೂಡಿನಿಂದ ಹೊರಟ ಉರಿ ಕಮಾನಿನಂತಿರುವ ಚಾವಣಿಯನ್ನು ಅನುಸರಿಸಿ ಸಾಗುವುದು. ಅದರಿಂದ ಉಷ್ಣ ಪ್ರತಿಫಲಿಸಿ ಚಾರ್ಜಿಗೆ ತಾಗುವುದು. ಅನಿಲ ಹಾಯುವ ವೇಗ ಅಷ್ಟು ತೀವ್ರವಾಗಿರುವುದಿಲ್ಲ. ಅದರ ಪ್ರಯುಕ್ತ ಸುಣ್ಣ ಉಪಯೋಗಿಸಿದರೂ ಭಾದಕವಿಲ್ಲ. ಕುಲುಮೆಯ ಪಕ್ಕದಿಂದಾಗಲೀ ಅಥವಾ ಮೇಲಿನಿಂದಾಗಲೀ ಅಪಕರ್ಷಣಕಾರಿಯಿರುವ ಚಾರ್ಜನ್ನು ಸೇರಿಸಲಾಗುವುದು. ಕಿಟ್ಟ ಮತ್ತು ಲೋಹಗಳ ನಿರ್ಗಮನಕ್ಕಾಗಿಯೇ ಪ್ರತ್ಯೇಕದ್ವಾರಗಳು ಕುಲುಮೆಯ ಪಕ್ಕದಲ್ಲಿರುತ್ತವೆ. ಈ ಕುಲುಮೆಗಳನ್ನು ತಡೆಯಿಲ್ಲದೆ ಅಥವ ಸರದಿಯ ಪ್ರಕಾರ ಕೆಲಸಕ್ಕೆ ಹಚ್ಚಬಹುದು. 1-100 ಟನ್ ಲೋಹವನ್ನು ಉತ್ಪಾದಿಸುವ ಕುಲುಮೆಗಳೂ ಉಂಟು. ಪ್ರತಿಫಲನ ಕುಲುಮೆಯಲ್ಲಿ ಸ್ವಲ್ಪ ಮಟ್ಟಿಗಾದರೂ ಉತ್ಕರ್ಷಣ ವಾತಾವರಣವಿರುವುದು ಆವಶ್ಯಕ. ಇಲ್ಲದಿದ್ದರೆ ಇಂಧನ ಉರಿಯಲಾರದು. ಆದರೆ ವಿದ್ಯುತ್ ಕುಲುಮೆಯಲ್ಲಿ ಈ ನಿರ್ಬಂಧವಿಲ್ಲ. ನಮ್ಮ ಅಗತ್ಯಕ್ಕೆ ಅನುಗುಣವಾಗಿ ಉತ್ಕರ್ಷಣ ಅಥವ ಅಪಕರ್ಷಣ ವಾತಾವರಣವನ್ನು ಸೃಷ್ಟಿಸಿಕೊಳ್ಳಬಹುದು. ಘನರೂಪದಲ್ಲಿ ಲೋಹೋತ್ಪತ್ತಿ: ಉನ್ನತ ದ್ರವೀಕರಣ ಬಿಂದುಗಳಿರುವ ಲೋಹಗಳ ತಯಾರಿಕೆಗೆ ಈ ವಿಧಾನ ಯೋಗ್ಯವಾಗಿದೆ. ಉದಾಹರಣೆಗೆ 3,400ಲಿ ಸೆ. ನಲ್ಲಿ ದ್ರವಿಸುವ ಟಂಗ್‍ಸ್ಟನ್ ಮತ್ತು 2,620ಲಿ ಸೆ. ನಲ್ಲಿ ದ್ರವಿಸುವ ಮಾಲಿಬ್ಡಿನಂ ನಮಗೆ ತಿಳಿದಿವೆ. ಟಿಟ್ಯಾನಿಯಂ ಮತ್ತು ಜಿರ್ಕೋನಿಯಂನಂಥ ದ್ರವಿತ ಲೋಹಗಳನ್ನು ಎದುರಿಸಬಲ್ಲ ಕುಲುಮೆಗಳ ಅಸ್ತರಿ ಅಲಭ್ಯವಾದಾಗಲೂ ಈ ವಿಧಾನಕ್ಕೆ ನಾವು ಶರಣು ಹೋಗಬೇಕು. ಇತರ ಅಪಕರ್ಷಣ ವಿಧಾನಗಳಿಗಿಂತ ಇದು ದುಬಾರಿ, ಪ್ರಯಾಸಕರ ಮತ್ತು ಸರದಿಯ ಪ್ರಕಾರ ಮಾತ್ರ ನಡೆಸಲು ಸಾಧ್ಯ. ಕ್ರೋಲ್ ವಿಧಾನದಿಂದ ಟೆಟ್ಯಾನಿಯಂ ತಯಾರಿಸುವಾಗ ನಾವು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ದ್ರವರೂಪದ ಟಿಟ್ಯಾನಿಯಂ ಸಂಪರ್ಕದಲ್ಲಿ ಸುರಕ್ಷಿತವಾಗಿದ್ದು, ಅವನ್ನು ಕಲುಷಿತಗೊಳಿಸದಿರುವ ಉಷ್ಣನಿರೋಧಕ ವಸ್ತುವಿನ ಶೋಧವಿನ್ನೂ ಆಗಿಲ್ಲ. ಆದ್ದರಿಂದ ಲೋಹವನ್ನು ಘನರೂಪದಲ್ಲಿ ಕೆಳಮಟ್ಟದ ಉಷ್ಣತೆಯಲ್ಲಿ ಪಡೆಯಲು ಹವಣಿಸಬೇಕು. ಕ್ರೋಲ್ ವಿಧಾನದಲ್ಲಿ ಉಕ್ಕಿನ ಪಾತ್ರೆಯೊಂದಿದೆ. ಇದರ ಸ್ವಲ್ಪ ಭಾಗವನ್ನು ಮಾತ್ರ ಮ್ಯಾಗ್ನೀಷಿಯಂ ತುಂಡುಗಳಿಂದ ಭರ್ತಿಮಾಡಿ ಭದ್ರವಾಗಿ ಮುಚ್ಚಿ, ಅನಿಲ ಸೋರದಂತೆ ಮೊಹರು ಮಾಡಲಾಗುವುದು. ನೈಟ್ರೋಜನ್, ಆಕ್ಸಿಜನ್, ಇಂಗಾಲದ ಮಾನಾಕ್ಸೈಡ್ ಮತ್ತು ಡೈ ಆಕ್ಸೈಡ್ ಮೊದಲಾದ ಪರಿಚಿತ ಅನಿಲಗಳೆಲ್ಲ ಟಿಟ್ಯಾನಿಯಮನ್ನು ಕಲುಷಿತಗೊಳಿಸುವುವು. ಆದ್ದರಿಂದ ಪಾತ್ರೆಯಲ್ಲಿರುವ ಗಾಳಿಯನ್ನೆಲ್ಲ ಹೊರದೂಡಿ, ಅದರ ಬದಲು ಶುದ್ಧ ಆರ್ಗಾನ್ ಅಥವಾ ಹೀಲಿಯಮ್ಮನ್ನು ತುಂಬಬೇಕು. ಅನಂತರ ಕುಲುಮೆಯಲ್ಲಿಟ್ಟು 750ಲಿ ಸೆ. ಉಷ್ಣತೆಗೆ ಕಾಯಿಸಲಾಗುವುದು. ಮ್ಯಾಗ್ನೀಸಿಯಂ ದ್ರವಿಸಿದ ಕೂಡಲೇ ಕೋಶಕ್ಕೆ ಶುದ್ಧವಾದ ದ್ರವಿತ ಟಿಟ್ಯಾನಿಯಂ ಟೆಟ್ರಕ್ಲೋರೈಡನ್ನು ನಿಯೋಜಿಸಿದ ದ್ವಾರದ ಮೂಲಕ ಬಿಡಲಾಗುವುದು. ಆಗ ಕೆಳಕಂಡ ಉಷ್ಣಜನಕಕ್ರಿಯೆ ನಡೆಯುವುದು: ಖಿiಅI4(g)+2ಒg(I)→ಖಿi(s)+2ಒgಅI2(I) ಮ್ಯಾಗ್ನೀಸಿಯಂ ವಿನಿಯೋಗವಾದ ಹಾಗೆಲ್ಲ ಮ್ಯಾಗ್ನೀಸಿಯಂ ಕ್ಲೋರೈಡಿನ ಬಹುಪಾಲನ್ನು ಪಾತ್ರೆಯಲ್ಲಿರುವ ನಿರ್ಗಮನ ದ್ವಾರದ ಮುಖೇನ ವಿಸರ್ಜಿಸಲಾಗುವುದು. ಅನಂತರ ಕ್ರಿಯಾಪಾತ್ರೆಯನ್ನು ಸಾಮಾನ್ಯ ಉಷ್ಣತೆಗೆ ತಣಿಸಿ, ಬಾಯಿ ತೆರೆದರೆ ಅದರಲ್ಲಿ ಟಿಟ್ಯಾನಿಯಂ, ಮ್ಯಾಗ್ನೀಸಿಯಂ ಕ್ಲೋರೈಡಿನ ಹರುಳುಗಳು ಹೆಣೆದುಕೊಂಡಿರುತ್ತವೆ. ಇದನ್ನು ಹೊರಕ್ಕೆ ತೆಗೆಯಲು ಕೊರೆಯುವ ಯಂತ್ರವನ್ನು ಉಪಯೋಗಿಸುವರು. ದುರ್ಬಲ ಆಮ್ಲದ ಅವಶೋಷಣೆಯಿಂದ ಅಥವಾ ನಿರ್ವಾತ ಬಾಷ್ಪೀಭವನದಿಂದ ಮ್ಯಾಗ್ನೀಸಿಯಂ ಮತ್ತು ಮ್ಯಾಗ್ನೀಸಿಯಂ ಕ್ಲೋರೈಡುಗಳು ನಿವಾರಣೆಯಾಗುವುವು. ಸುಮಾರು 1,500-3,000 ಪೌಂಡುಗಳಷ್ಟು ಟಿಟ್ಯಾನಿಯಂ ಒಂದೇ ಕಂತಿನಲ್ಲಿ ದೊರೆಯುವುವು. ಮೂರು ಸಂಸ್ಕರಣ ವಿಧಿಗಳು: ಈ ಕ್ರಿಯೆಗಳನ್ನು ನಡೆಸಿ ಕಚ್ಚಾ ಲೋಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾದ ನಿರ್ದಿಷ್ಟ ದರ್ಜೆಯ ಲೋಹವನ್ನು ಪಡೆಯಬಹುದು. ಹೀಗೆ ಮಾಡಲು ಮೂರು ಬಗೆಯ ವಿಧಾನಗಳಿವೆ. (1) ಇವರಿಕೆ (ವೋಲಟಲ್ಯೇಸೇóಷನ್): ಕಶ್ಮಲವನ್ನಾಗಲೀ ಅಥವಾ ಲೋಹವನ್ನಾಗಲೀ ಅನಿಲರೂಪದಲ್ಲಿ ಪ್ರತ್ಯೇಕಿಸುವುದು ಇಲ್ಲಿಯ ಕ್ರಮ. ಅಶುದ್ಧ ಸತುವಿನಲ್ಲಿ ಅಲ್ಪಪ್ರಮಾಣ ಕಬ್ಬಿಣ ಮತ್ತು ಸೀಸಗಳಿರುವುದುಂಟು. ಅಂಶಬಾಷ್ಫೀಭವನ ಮಾಡಿದರೆ ಹೆಚ್ಚು ಅವ್ಯಾಸಕ್ತಿಯುಳ್ಳ ಸತು ಮಾತ್ರ ಪಾರಾಗಿ ಕಬ್ಬಿಣ ಮತ್ತು ಸೀಸಗಳು ಉಳಿಯುವುವು. ಅದೇ ಕಚ್ಚಾ ಸೀಸವನ್ನು ಕಾಯಿಸಿದಾಗ ಅದರಲ್ಲಿ ಕಶ್ಮಲರೂಪದಲ್ಲಿರುವ ಸತು ನಿರ್ಗಮಿಸಿ ಸೀಸ ಉಳಿಯುವುದು. ಆದರೆ ಈ ಸಂದರ್ಭದಲ್ಲಿ ನಿರ್ವಾತ ಬಾಷ್ಪೀಭವನ ಮಾಡಬೇಕಾಗುತ್ತದೆ. ಅವ್ಯಾಸಕ್ತಿಯಿಲ್ಲದ ಲೋಹಗಳ ಸಂಸ್ಕರಣಕ್ಕಾಗಿಯೇ ಅಯೊಡೈಡ್ ವಿಧಾನ ರೂಪಿತವಾಗಿದೆ. ಉದಾಹರಣೆಗೆ 1750 ಸೆ.ಗ್ರೇ ಉಷ್ಣತೆಯಲ್ಲಿ ಕಚ್ಚಾ ಟಿಟ್ಯಾನಿಯಂನೊಡನೆ ಅಯೊಡೀನಿನ ಆವಿ ವರ್ತಿಸುವಂತೆ ಮಾಡಿದರೆ ಖಿi(s)+2I2(g)→ಖಿiI4(g) ಕಶ್ಮಲಗಳ ಬಹುಪಾಲು ಘನವಸ್ತುವಾಗಿ ಉಳಿಯುವುದು. ಟಿಟ್ಯಾನಿಯಂ ಟಿಟ್ರ ಅಯೊಡೈಡಿನ ಆವಿಯನ್ನು ವಿದ್ಯುದ್ವಿಧಾನದಿಂದ 1,3000-1,4000 ಸೆ. ಉಷ್ಣತೆಯಲ್ಲಿಟ್ಟಿರುವ ತಂತಿಯ ಸಂಪರ್ಕಕ್ಕೆ ತಂದರೆ ಅದು ವಿಭಜಿಸಿ ಶುದ್ಧ ಟಿಟ್ಯಾನಿಯಂ, ಉಳಿಯುವುದು. ಆವಿಯಾಗಿ ಹೋದ ಅಯೋಡೀನನ್ನು ಮತ್ತೆ ಉಪಯೋಗಿಸಿಕೊಂಡು ಈ ಕ್ರಮದ ಪುನಾರಾವರ್ತನೆ ಮಾಡುವರು. ಹೀಗೆ ಟಿಟ್ಯಾನಿಯಂ, ಜಿರ್ಕೋನಿಯಂ, ಹ್ಯಾಫ್ನಿಯಂ, ಸಿಲಿಕಾನ್ ಮತ್ತು ಇತರ ಲೋಹಗಳನ್ನು ತಯಾರಿಸುತ್ತಾರೆ. (2) ಕಸಗಟ್ಟಿಸುವುದು (ಡ್ರಾಸ್ಸಿಂಗ್) : ಉಷ್ಣತೆ ವ್ಯತ್ಯಾಸವಾದಂತೆ ದ್ರವಿತ ಲೋಹದಲ್ಲಿ ಕಶ್ಮಲದ ದ್ರಾವ್ಯತೆಯೂ ಏರುಪೇರಾಗುವುದು. ದ್ರವಿತ ಲೋಹ ತಣಿದಂತೆಲ್ಲ ಕಶ್ಮಲ ಅದರ ಮೇಲೆ ಘನೀಭವಿಸಿ ತೇಲುವುದು. ಒತ್ತರಿಸಿದ ಕಸವನ್ನು ಕೆರೆದು ತೆಗೆಯಬಹುದು. ಕಚ್ಚಾ ತವರದಿಂದ ಕಬ್ಬಿಣವನ್ನೂ, ಕಚ್ಚಾ ಸೀಸದಿಂದ ತಾಮ್ರವನ್ನೂ ಉಚ್ಚಾಟಿಸುವುದು ಹೀಗೆಯೇ. (3) ಒತ್ತರ ವಿಧಾನ: ಇಲ್ಲಿ ಒತ್ತರಕಾರಿಯನ್ನು ದ್ರವಿತ ಕಚ್ಚಾ ಲೋಹಕ್ಕೆ ಕೂಡಿಸಲಾಗುವುದು. ಉದಾಹರಣೆಗೆ, ದ್ರವಿತ ಸೀಸಕ್ಕೆ ಗಂಧಕವನ್ನು ಸೇರಿಸಿ ತಾಮ್ರದ ಸಲ್ಫೈಡನ್ನು ಒತ್ತರಿಸಬಹುದು. ಪಾರ್ಕ್ ವಿಧಾನ ಮತ್ತೊಂದು ಉತ್ತಮ ನಿದರ್ಶನ. ಅಶುದ್ಧ ಸೀಸದಲ್ಲಿ ಅಲ್ಪ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಸೇರಿರುತ್ತವೆ. ಈ ಲೋಹ ಮಿಶ್ರಣವನ್ನು ಕರಗಿಸಿ ದ್ರವಿತ ಸತುವನ್ನು ಕೂಡಿಸಿದರೆ ಅದು ಚಿನ್ನ ಮತ್ತು ಬೆಳ್ಳಿಯೊಡನೆ ಅಂತರ್ಲೋಹ (ಇಂಟರ್‍ಮೆಟಾಲಿಕ್) ಸಂಯುಕ್ತಗಳನ್ನು ಉತ್ಪತ್ತಿಮಾಡುವುದು. ಇದನ್ನು ಪ್ರತ್ಯೇಕಿಸಿ ಕಾಯಿಸಿದರೆ ಸತು ಆವಿಯಾಗಿ ಘನಲೋಹಗಳು ಉಳಿಯುವುವು. ಕಿಟ್ಟದಿಂದ ಸಂಸ್ಕರಣ: ದ್ರವಿತ ಕಚ್ಚಾ ಲೋಹವನ್ನು ಅದರೊಡನೆ ಬೆರೆಯದ ಮತ್ತೊಂದು ದ್ರವದೊಡನೆ ಕಾಯಿಸಲಾಗುವುದು. ಇದು ಕಿಟ್ಟ ಅಥವಾ ದ್ರವಿತ ಉಪ್ಪಾಗಿರಬಹುದು. ಆಗ ಕಶ್ಮಲಗಳು ಮಾತ್ರ ಉತ್ಕರ್ಷಿತವಾಗಿ ಕಿಟ್ಟ ಮಟ್ಟದಲ್ಲಿ ವಿಲೀನವಾಗುವುವು. ಅಂದರೆ ಲೋಹಕ್ಕಿಂತ ಕಶ್ಮಲಗಳು ಮಾತ್ರ ಉತ್ಕರ್ಷಿತವಾಗಿ ಕಿಟ್ಟದಲ್ಲಿ ವಿಲೀನವಾಗುವುವು. ಅಂದರೆ ಲೋಹಕ್ಕಿಂತ ಕಶ್ಮಲಗಳು ಹೆಚ್ಚು ಸರಾಗವಾಗಿ ಉತ್ಕರ್ಷಿತವಾಗುವ ಸಂದರ್ಭಗಳಲ್ಲಿ ಮಾತ್ರ ಈ ವಿಧಾನ ಬಳಸಲು ಯೋಗ್ಯವಾಗಿದೆ. ಉದಾಹರಣೆಗೆ ದ್ರವಿತ ಕಚ್ಚಾತಾಮ್ರದ ಮೂಲಕ ಗಾಳಿಯನ್ನು ಊದಿದಾಗ ಉತ್ಪತ್ತಿಯಾಗುವ ಕಿಟ್ಟದಲ್ಲಿ ಪ್ರಧಾನವಾಗಿ ಕ್ಯೂಪ್ರಸ್ ಆಕ್ಸೈಡ್ (ಅu2ಔ) ಇರುತ್ತದೆ. ಲೋಹದಲ್ಲಿದ್ದ ಕಬ್ಬಿಣ, ಸೀಸ, ಸತು, ತವರ, ಆರ್ಸೆನಿಕ್ ಮತ್ತು ಆಂಟಿಮೊನಿ ಆಕ್ಸೈಡುಗಳನ್ನು ಈ ಕಿಟ್ಟ ಹೀರುವುದು. ಚಿನ್ನ ಬೆಳ್ಳಿಗಳನ್ನು ಉತ್ಕರ್ಷಿಸುವುದು ತಾಮ್ರದಷ್ಟು ಸುಲಭವಲ್ಲ. ಆದ್ದರಿಂದ ಅವು ಹಾಗೆಯೇ ಉಳಿಯುವುವು. ಕಿಟ್ಟ ಸಂಸ್ಕರಣಕ್ಕೆ ಪ್ರತಿಫಲದ ಕುಲುಮೆಯಾದರೆ ಲೇಸು. ತಾಮ್ರ, ಸೀಸ, ಬೆಳ್ಳಿ ಮುಂತಾದ ಲೋಹಗಳನ್ನು ಸಂಸ್ಕರಿಸುವುದು ಹೀಗೆಯೇ.