ಅದುಮಿದ ಗಾಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅದುಮಿದ ಗಾಳಿ''' ಭೂಮಿಯ ವಾತಾವರಣದಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಒತ್ತಡದ...
 
No edit summary
೭ ನೇ ಸಾಲು:
ಗಾಳಿಯ ಸಾಂದ್ರತೆಯನ್ನು ಹೆಚ್ಚಿಸಿ, ಅದರ ಒತ್ತಡವನ್ನು ಅಧಿಕಗೊಳಿಸುವ ಯಂತ್ರ. ಇದರ ಸಂಕೋಚಕ ಭಾಗದಲ್ಲಿ ಒಂದು ಉರುಳೆಯಿದ್ದು ಅದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಆಡುಬೆಣೆಯೊಂದಿರುತ್ತದೆ. ಉರುಳೆಯೊಳಕ್ಕೆ ಗಾಳಿ ಬರಲು ಮತ್ತು ಹೊರಹೋಗಲು ಸ್ವಯಂಚಾಲಿತ ಕವಾಟಗಳಿರುತ್ತವೆ. ಈ ಯಂತ್ರದಲ್ಲಿ ಅದುಮಿದ ಗಾಳಿಯನ್ನು ಕಬ್ಬಿಣದ ಉರುಳೆಯಾಕಾರದ ಕೋಶಗಳಲ್ಲಿ ತುಂಬಿಡುತ್ತಾರೆ. ಗಾಳಿ ಸತತವಾಗಿ ಅದುಮಲ್ಪಟ್ಟು ಯಂತ್ರದಲ್ಲಿ ಶಾಖೋತ್ಪತ್ತಿಯಾಗಿ ಅದು ಕಾಯಲವಕಾಶವಾಗುತ್ತದೆ. ಕಾದ ಯಂತ್ರವನ್ನು ತಣ್ಣಗಿರಿಸಲು ನೀರನ್ನೋ ತಣ್ಣನೆಯ ಗಾಳಿಯನ್ನೋ ಉಪಯೋಗಿಸುತ್ತಾರೆ.
 
ಒತ್ತಡ ಹೆಚ್ಚಾಗಿಲ್ಲದ ಕಡೆ ಆವರ್ತಕ (ರೋಟರಿ) ಸಂಕೋಚಕಗಳನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.<ref>https://aircompressorworks.com/compressed-air-basics-part-8-rotary-vane/</ref> ಇವು ಜಾರುವ ದಿಕ್ಸೂಚಿಗಳ (ಸ್ಲೈಡಿಂಗ್ ವೇನ್ಸ್) ನಮೂನೆಯಲ್ಲಿರುತ್ತವೆ. ಆಡುಬೆಣೆಗಳಾಗಲೀ ಕ್ರ್ಯಾಂಕ್ ಕಾಂಡವಾಗಲೀ (ಷ್ಯಾಫ್ಟ್) ಇರುವುದಿಲ್ಲ.
 
ಅದುಮಿದ ಗಾಳಿಯನ್ನು ಶೇಖರಿಸುವುದೂ ಸ್ಥಳದಿಂದ ಸ್ಥಳಕ್ಕೆ ಸಾಗಿಸುವುದೂ ಸುಲಭ. ಅನುಕೂಲವಿದ್ದೆಡೆಯಲ್ಲಿಯೇ ಗಾಳಿಯನ್ನು ಕುಗ್ಗಿಸಬಹುದು. ವ್ಯಾಪಕವಾದ ಇದರ ಬಳಕೆಗೆ ಕಾರಣಗಳು ಹಲವು.
೨೦ ನೇ ಸಾಲು:
ಗಣಿಗಳಲ್ಲಿ ಕಲ್ಲಿದ್ದಲನ್ನು ಅಗೆಯಲೂ ಕಂಬಿಗಳ ಮೇಲೆ ಕಲ್ಲಿದ್ದಲನ್ನು ಸಾಗಿಸುವ ಎಂಜಿನ್ನುಗಳನ್ನು ನಡೆಸಲೂ ಅದುಮಿದ ಗಾಳಿಯನ್ನು ಉಪಯೋಗಿಸುತ್ತಾರೆ. ಈ ಗಾಳಿಗೆ ಬೆಂಕಿ ತಗಲದೆ ಇರುವುದರಿಂದಲೂ ಇದನ್ನು ಉಪಯೋಗಿಸುವಾಗಿ ತಾನಾಗಿಯೇ ಸ್ವಚ್ಫವಾಗುವುದರಿಂದಲೂ ಗಣಿಗಳಲ್ಲಿ ಇದರ ಉಪಯೋಗ ಹೆಚ್ಚು.
 
ಸಿಮೆಂಟ್, ಸುಣ್ಣದ ತಿಳಿ, ಬಣ್ಣಗಳು, ಕರಗಿಸಿದ ಲೋಹಗಳು-ಇವನ್ನು ತುಂತುರು ತುಂತುರಾಗಿ ಚಿಮುಕಿಸಲು ಅದುಮಿದ ಗಾಳಿಯನ್ನು ಉಪಯೋಗಿಸುತ್ತಾರೆ. ಯಂತ್ರದ ಭಾಗಗಳು ಸವೆದು ಹೋದಾಗ ತಂತಿಯ ಹಾಗೆ ಎಳೆಯಬಹುದಾದ ಯಾವ ಲೋಹವನ್ನು ಬೇಕಾದರೂ ಚಿಮುಕಿಸಿ ಹೊಸ ಭಾಗವನ್ನು ಜೋಡಿಸದೆ ರಿಪೇರಿ ಮಾಡಬಹುದು.<ref>http://www.cagi.org/working-with-compressed-air/applications.aspx</ref>
 
ಎರಕಗಳಲ್ಲಿನ ಉಬ್ಬುತಗ್ಗುಗಳನ್ನು ತೆಗೆದು ನಯ ಮಾಡುವುದಕ್ಕೆ ಮರಳು ಅಥವಾ ಲೋಹದ ಸಣ್ಣ ಸಣ್ಣ ಗೋಲಿಗಳನ್ನು ಅತಿಯಾದ ವೇಗದಿಂದ ಅವುಗಳ ಮೇಲೆ ಬೀರುತ್ತಾರೆ. ಈ ಕೆಲಸ ಮತ್ತಾವುದೇ ರೀತಿಯ ಕೆಲಸಕ್ಕಿಂತಲೂ ಬಹುಬೇಗಾಗುತ್ತದೆ. ಹೀಗೇಯೇ ಲೋಹಕ್ಕೆ ಗಾಜಿಗೆ ಅವುಗಳ ಮೈಮೇಲೆ ಆಕರ್ಷಕ ರೀತಿಯಲ್ಲಿ ಸೂಕ್ಷ್ಮಕಣಗಳೆದ್ದಿರುವಂತೆ ಮಾಡಲು ಅದುಮಿದ ಗಾಳಿಯನ್ನು ಬಳಸಲಾಗುತ್ತದೆ.
 
ಭೂಗರ್ಭದಲ್ಲಿ ಬಹಳ ಆಳದವರೆಗೂ ಕೊರೆಯುವ ಕೊಳವಿಗಂಡಿಗಳಿಂದ ನೀರನ್ನೋ ಎಣ್ಣೆಯನ್ನೋ ಹೊರತೆಗೆಯಲು ಅದುಮಿದ ಗಾಳಿಯನ್ನು ಬಳಸುತ್ತಾರೆ. ಆವರ್ತಕ ದಿಕ್ಸೂಚಿಗಳಿರುವ 1-10 ಅಶ್ವಸಾಮಥ್ರ್ಯವುಳ್ಳ ಅದುಮಿದ ಗಾಳಿಯ ಮೋಟಾರುಗಳನ್ನುಪಯೋಗಿಸಿ ನೀರನ್ನು ಹೊರತೆಗೆಯುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಭೂಮಿಯ ಕೆಳಭಾಗದಲ್ಲಿ ನೂರಾರು ಅಡಿ ಆಳದಲ್ಲಿ ನೀರು ತುಂಬಿಕೊಂಡಿರುವ ಬಂಡೆಯ ಪದರಗಳನ್ನು ಮುಟ್ಟುವವರೆಗೂ ಕೊಳವಿಗಂಡಿಗಳಿಂದ ಕೊರೆದು ಮೇಲಕ್ಕೆ ನೀರನ್ನು ಹೊರತೆಗೆದು ದೊಡ್ಡ ಕಾರ್ಖಾನೆಗಳಿಗೂ ಮಂಡಿಗಳಿಗೂ ಸರಬರಾಜು ಮಾಡುತ್ತಾರೆ. ಭಾರತದ ಹಲವೆಡೆ ಇತ್ತೀಚೆಗೆ ವಿದ್ಯುತ್ತನ್ನು ಉಪಯೋಗಿಸಿ ಕೊಳವಿಗಂಡಿಗಳಿಂದ ನೀರನ್ನು ಹೊರತೆಗೆದು ಬೇಸಾಯ ನಡೆಸುತ್ತಿದ್ದಾರೆ. ಆದರೆ ಅದುಮಿದ ಗಾಳಿಯನ್ನು ಈ ಕೆಲಸಕ್ಕಾಗಿ ಬಳಸುವಾಗ ಬಾವಿಯ ತಳಭಾಗದಲ್ಲಿ ಚಲಿಸುವ ಯಾವುದೇ ಭಾಗವನ್ನೂ ಇಡಬೇಕಾಗಿಲ್ಲ. ವಾಯುಸಂಕೋಚಕ ಬಾವಿಗೆ ಸ್ವಲ್ಪದೂರದಲ್ಲಿ ಇದ್ದರೆ ಅದರ ಮೇಲ್ವಿಚಾರಣೆ ಸುಲಭವಾಗುತ್ತದೆ. ಭೂಮಿಯ ಒಳಭಾಗದಿಂದ ಮೇಲಕ್ಕೆ ಜಿನುಗಿರುವ ನೀರು ಶೋಧಿಸಿದ ನೀರಿನಷ್ಟೇ ಶುದ್ಧವಾಗುತ್ತದೆ. ಇದನ್ನು ಮೇಲಕ್ಕೆ ಎತ್ತುವ ಖರ್ಚೂ ಹೆಚ್ಚಾಗಿರುವುದಿಲ್ಲ.<ref>https://koldwater.com/Free/basics-air-compressor-tutorial.html</ref>
 
ಜೌಗು ನೆಲದಲ್ಲಿಯೂ ಹರಿಯುವ ನದಿಗಳ ತಳದಲ್ಲಿಯೂ ಸುರಂಗಗಳನ್ನು ತೋಡುವ ಕೆಲಸದಲ್ಲೂ ಕೆಲಸ ಮಾಡುವ ಜಾಗಕ್ಕೆ ನೀರು ನುಗ್ಗದಂತೆ ಮಾಡಲು ಅದುಮಿದ ಗಾಳಿಯನ್ನು ಉಪಯೋಗಿಸುತ್ತಾರೆ. 1861ರಲ್ಲಿ ಇಟಲಿಯಲ್ಲಿ ಮೌಂಟ್ ಸೆನಿಸ್ ಸುರಂಗವನ್ನು ಕೊರೆದಾಗ, ಬಂಡೆಯಲ್ಲಿ ಕುಳಿಗಳನ್ನು ತೋಡಿ ಮದ್ದಿನಿಂದ ಸಿಡಿಸುವುದಕ್ಕೆ ಅದುಮಿದ ಗಾಳಿಯನ್ನು ಉಪಯೋಗಿಸಿದರು.
"https://kn.wikipedia.org/wiki/ಅದುಮಿದ_ಗಾಳಿ" ಇಂದ ಪಡೆಯಲ್ಪಟ್ಟಿದೆ