ಆಸ್ಮಾಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
ಒಂದು ದ್ರಾವಣದ ಆಸ್ಮಾಟಿಕ್ ಸಂಮರ್ದ ವಿಲೀನಕ ವಸ್ತುವಿನ ಅಣುಗಳ ಸ್ವಭಾವವನ್ನು ಅವಲಂಬಿಸಿರುವುದಿಲ್ಲ. ಅದು ವಿಲೀನವಾದ ವಸ್ತುವಿನ ಪ್ರಬಲತೆಗೆ ಅನುಗುಣವಾಗಿರುತ್ತದೆ. ಸಮನಾದ ಅಣುಪ್ರಬಲತೆಯುಳ್ಳ ಭಿನ್ನ ದ್ರಾವಣಗಳು ಸಮನಾದ ಆಸ್ಮಾಟಿಕ್ ಸಂಮರ್ದ ಪಡೆದಿರುತ್ತವೆ. ಒಂದು ದ್ರಾವಣದ ಆಸ್ಮಾಟಿಕ್ ಸಂಮರ್ದ ನಿರಪೇಕ್ಷ ಶೂನ್ಯ (ಆಬ್ಸಲ್ಯೂಟ್ ಜೀರೋ) ಉಷ್ಣತೆಯ ಅನುಲೋಮ ಪ್ರಮಾಣದಲ್ಲಿರುತ್ತವೆ. ಈ ಎಲ್ಲ ಅಂಶಗಳು ವ್ಯಾಂಟ್ ಹಾಫ್‍ನ ದುರ್ಬಲ ದ್ರಾವಣಗಳ ವಾದಕ್ಕೆ ನಾಂದಿಯಾಗಿವೆ. ಅವನ ಪ್ರಕಾರ ದುರ್ಬಲ ದ್ರಾವಣದಲ್ಲಿ ವಿಲೀನವಾದ ವಸ್ತು ಒಂದು ಅನಿಲದಂತೆ ವರ್ತಿಸುತ್ತದೆ. ವಿಲೀನವಸ್ತು ಆ ದ್ರಾವಣದ ಗಾತ್ರದೆಲ್ಲೆಡೆಯಲ್ಲೂ ಏಕಸಮವಾಗಿ ವ್ಯಾಪಿಸಿರುತ್ತದೆ; ಮತ್ತು ಬಾಯಲ್ಲನ ಮತ್ತು ಚಾಲ್ರ್ಸ್‍ನ ನಿಯಮಗಳನ್ನು ಅನುಸರಿಸುತ್ತದೆ. ಒಂದು ಶುದ್ಧದ್ರವ ಮತ್ತು ದ್ರಾವಣಗಳ ಮಧ್ಯದಲ್ಲಿ ಮುಚ್ಚಿರುವ ಸ್ಥಳದಲ್ಲಿನ ಗಾಳಿ ಅವೆರಡರ ಮಧ್ಯೆ ಅರ್ಧಪಾರಗಮ್ಯ ಪೊರೆಯಾಗಿ ವರ್ತಿಸಬಹುದು. ಶುದ್ಧ ನೀರನ್ನು ಒಂದು ಬೀಕರಿನ ಅರ್ಧ ಭಾಗದಲ್ಲಿ ತುಂಬಿ ಮತ್ತೊಂದು ಬೀಕರಿನಲ್ಲಿ ಅರ್ಧಭಾಗ ಒಂದು ದ್ರಾವಣ ತುಂಬಿ ಎರಡನ್ನೂ ಒಂದು ಘಂಟಾಪಾತ್ರೆಯಿಂದ ಮುಚ್ಚಿ ಸ್ವಲ್ಪ ಕಾಲ ಬಿಟ್ಟು ನೋಡಿದರೆ ಅನಿಲರೂಪದಲ್ಲಿ ನೀರು ಗಾಳಿಯ ಮುಖಾಂತರ ದ್ರಾವಣಕ್ಕೆ ಪಸರಿಸಿರುವುದು ಗೋಚರವಾಗುತ್ತದೆ. ಆಸ್ಮಾಟಿಕ್ ಸಂಮರ್ದಕ್ಕೆ ನೇರ ಸಂಬಂಧ ಹೊಂದಿರುವ ಅನಿಲ ಸಂಮರ್ದಗಳಲ್ಲಿನ ವ್ಯತ್ಯಾಸವೇ ಈ ಕ್ರಿಯೆಗೆ ಕಾರಣ.
 
=ಸಿದ್ಧಾಂತ=ಸಿದ್ಧಾಂತ==
ಆಸ್ಮಾಟಿಕ್ ಕ್ರಿಯೆಯನ್ನು ವಿವರಿಸುವ ಅನೇಕ ಸಿದ್ಧಾಂತಗಳನ್ನು ಮುಂದಿಡಲಾಗಿದೆ. ಆದರೆ ಅವುಗಳ ಪೈಕಿ ಯಾವುದೊಂದೂ ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಹೀಗಾಗಿ ಯಾವ ಒಂದು ಸಿದ್ಧಾಂತವನ್ನೂ ಸಾರ್ವತ್ರಿಕವಾಗಿ ತಜ್ಞರು ಒಪ್ಪಿಕೊಂಡಿಲ್ಲ. ಕ್ಯಾಲ್ಸಿಯಂ ಸಲ್ಫೇಟ್‍ನಂಥ (ಅಚಿSಔ4. 2ಊ2ಔ) ಹರಳುಗಳ ಮುಖಾಂತರವೂ ನೀರು ಹಾದು ಹೋಗುತ್ತದೆ. ಏಕೆಂದರೆ ಆ ಹರಳು ನೀರನ್ನು ಪ್ರಬಲ ದ್ರಾವಣಕ್ಕೆ ಬಿಟ್ಟುಕೊಡುತ್ತದೆ. ಹಾಗೆ ಕಳೆದುಕೊಂಡ ನೀರಿನ ಅಂಶವನ್ನು ಶುದ್ಧ ದ್ರವದಿಂದ ಪಡೆದ ನೀರಿನ ಅಣುಗಳು ತುಂಬಿಕೊಡುವುದು ಬಹುಶಃ ಕಾರಣವಿರಬಹುದು. ಯಾವ ಪೊರೆಯಲ್ಲಿ ದ್ರವ ಹೆಚ್ಚಾಗಿ ಕರಗುತ್ತದೆಯೋ ಆ ಪೊರೆಯ ಮುಖಾಂತರವೂ ಆಸ್ಮಾಟಿಕ್ ಕ್ರಿಯೆ ಅತ್ಯಂತ ವೇಗದಲ್ಲಿ ನಡೆಯುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಪೊರೆಯ ಮೇಲೆ ದ್ರವದ ಅಧಿಶೋಷಣೆ (ಅಡ್‍ಸಾರ್ಪ್‍ಷನ್) ಸಹ ಆಸ್ಮಾಟಿಕ್ ಕ್ರಿಯೆಗೆ ಕಾರಣವಾಗಬಹುದು. ಅರ್ಧಪಾರಗಮ್ಯ ಪೊದೆಯಿಂದ ಬೇರ್ಪಡಿಸಿರುವ ಎರಡು ದ್ರಾವಣಗಳ ಮಧ್ಯೆ ಯಾವಾಗ ಎರಡೂ ದಿಕ್ಕುಗಳಲ್ಲೂ ಆಸ್ಮಾಟಿಕ್ ಚಲನೆ ಇರುವುದಿಲ್ಲವೊ ಆಗ ಅವನ್ನು ಐಸೊಟಾನಿಕ್ ದ್ರಾವಣಗಳು ಎನ್ನುತ್ತಾರೆ. ಕೆಂಪು ರಕ್ತಕಣಗಳು 0.85% ಉಪ್ಪು ನೀರಿನಲ್ಲಿರಿಸಿದಾಗ ಅವು ಸುಕ್ಕಾಗುವುದಿಲ್ಲ ಅಥವಾ ಉಬ್ಬುವುದೂ ಇಲ್ಲ. ಅಂದರೆ ಆ ನಾರ್ಮಲ್ ಉಪ್ಪು ನೀರಿನ ದ್ರಾವಣ ಕೆಂಪು ರಕ್ತಕಣದೊಡನೆ ಐಸೊಟಾನಿಕ್ ಆಗಿದೆ ಎಂದರ್ಥ. ರಕ್ತಕ್ಕೆ ಸೇರಿಸುವ ದ್ರಾವಣಗಳಾಗಲೀ ಅಥವಾ ಸೂಕ್ಷ್ಮಶರೀರ ಜೀವಕಣಗಳೊಡನೆ ಇಡುವ ದ್ರಾವಣಗಳಾಗಲೀ ಜೀವಕಣಗಳೊಡನೆ ಐಸೊಟಾನಿಕ್ ಆಗಿರಬೇಕಾದದ್ದು ಬಲು ಮುಖ್ಯ. ಒಂದು ಜೀವಕಣದ ಆಸ್ಮಾಟಿಕ್ ಸಂಮರ್ದಕ್ಕಿಂತ ಹೆಚ್ಚು ಸಂಮರ್ದ ಪಡೆದಿರುವ ದ್ರಾವಣವನ್ನು ಜೀವಕಣಕ್ಕೆ ಹೋಲಿಸಿದಾಗ ಆ ದ್ರಾವಣ ಹೈಪರ್‍ಟಾನಿಕ್ ಎನಿಸುತ್ತದೆ. ಈ ಸಂದರ್ಭದಲ್ಲಿ ಜೀವಕಣದಿಂದ ಹೈಪರ್‍ಟಾನಿಕ್ ದ್ರಾವಣದ ಕಡೆಗೆ ಆಸ್ಮಾಟಿಕ್ ಕ್ರಿಯೆ ಆಗುತ್ತಿರುತ್ತದೆ. ಹೀಗಾಗುವುದರಿಂದ ಜೀವಕಣ ಸುಕ್ಕಾಗಿ ಜೋತು ಬೀಳುತ್ತದೆ (ಪ್ಲಾಸ್ಮೋಲಿಸಿಸ್). ಹಾಗೆಯೇ ಅತಿ ಹೆಚ್ಚು ಗೊಬ್ಬರ ಅಥವಾ ಉಪ್ಪು ದ್ರಾವಣದಿಂದ ಸಸಿಗಳ ಬೇರುಗಳು ಆವೃತವಾದಾಗ ಆ ಸಸಿಗಳು ಬಾಡುತ್ತವೆ. ಒಂದು ಜೀವಕಣದ ಆಸ್ಮಾಟಿಕ್ ಸಂಮರ್ದಕ್ಕಿಂತ ಕಡಿಮೆ ಸಂಮರ್ದ ಪಡೆದಿರುವ ದ್ರಾವಣವನ್ನು ಜೀವಕಣಕ್ಕೆ ಹೋಲಿಸಿದಾಗ ಆ ದ್ರಾವಣ ಹೈಪೊಟಾನಿಕ್ ಎನಿಸುತ್ತದೆ. ಇಲ್ಲಿ ದ್ರಾವಣದಿಂದ ಜೀವಕಣದ ಕಡೆಗೆ ಆಸ್ಮಾಟಿಕ್‍ಕ್ರಿಯೆ ಆಗುತ್ತಿರುತ್ತದೆ. ತತ್ಪರಿಣಾಮವಾಗಿ ಜೀವಕಣ ಉಬ್ಬುತ್ತದೆ ಮತ್ತು ಸಾಧ್ಯವಾದಲ್ಲಿ ಜೀವಕಣದ ಪೊರೆಯನ್ನು ಹರಿದು ಹಾಕುತ್ತದೆ (ಪ್ಲಾಸ್ಮೋಪ್ಟಿಸಿಸ್).<ref>https://biologydictionary.net/plasmolysis/</ref>
 
"https://kn.wikipedia.org/wiki/ಆಸ್ಮಾಸಿಸ್" ಇಂದ ಪಡೆಯಲ್ಪಟ್ಟಿದೆ