ಶೈವಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Laurencia.jpg|thumb|right|ಕೆಂಪು ಆಲ್ಗೆ]]
'''ಆಲ್ಗೆ'''ಒಂದು ಸರಳವಾದ [[ಜೀವಾಣು]]. ಥಾಲ್ಲೊಫೈಟ ಗುಂಪಿಗೆ (ಗ್ರೀಕ್ ಪದ ಥಾಲ್ಲಸ್ ಅಂದರೆ ಎಳೆಕೊನರು, ಫೈಟಾನ್ ಅಂದರೆ ಒಂದು ಗಿಡ) ಸೇರಿದ ಕನಿಷ್ಠ ದರ್ಜೆಯ ಸಸ್ಯ. ಪಾಚಿ, ಶೈವಲ, ಶಿಲಾವಲ್ಕ ಮತ್ತು ಸಾಮಾನ್ಯ ಭಾಷೆಯಲ್ಲಿ ಜಲಕುಸುಮ (ವಾಟರ್ ಬ್ಲೂಮ್), ಕಪ್ಪೆಯ ಉಗುಳು, ಮಾಸಸ್ ಪರ್ಯಾಯನಾಮಗಳು, ತೇವಪೂರಿತ ಪ್ರದೇಶಗಳಿಂದ ತೊಡಗಿ ವಿಶಾಲಸಾಗರಗಳವರೆಗೆ ವಿವಿಧ ಉಷ್ಣತಾವಲಯಗಳಲ್ಲಿ ವಿವಿಧ ಎತ್ತರ ಆಳಗಳಲ್ಲಿ ಆಲ್ಗೆ ಸಸ್ಯಗಳ ವ್ಯಾಪ್ತಿ ಇದೆ.<ref>https://books.google.com/?id=GccVAAAAYAAJ&pg=PA3525</ref> ಹೊಸ ನೀರಿನ ಕೊಳದ ತಳದ ತೆಳುಲೇಪ, ಕಲ್ಲುಬಂಡೆಗಳ ಮರದ ಕಾಂಡಗಳ ಮೇಲಿನ ಹೆಸರು ಕರೆಗಳು, ಸಾಗರಗಳ ಮಹಾ ಕಳೆಗಳು (ಸಮುದ್ರಕಳೆ-ಸೀ ವೀಡ್) ಎಲ್ಲವೂ ಆಲ್ಗೆಯ ವಿವಿಧ ರೂಪಗಳು.<ref>http://paleobiol.geoscienceworld.org/cgi/content/abstract/26/3/386</ref> ಸಸ್ಯವಿಜ್ಞಾನಿಗಳು ಆಲ್ಗೆಯನ್ನು ಅತ್ಯಂತ ಪುರಾತನ ಮತ್ತು ಮೂಲ ರೂಪದ ಸಸ್ಯವೆಂದು ತಿಳಿದರೆ ಇದರ ಕೆಲವು ವಿಭಾಗಗಳಾದರೂ ಪ್ರಾಣಿವರ್ಗಕ್ಕೆ ಸೇರಿವೆಯೆಂದು ಪ್ರಾಣಿಶಾಸ್ತ್ರಜ್ಞರು ಸಾಧಿಸುತ್ತಾರೆ. ಆಲ್ಗೆಯ ವಿವಿಧ ಪ್ರಭೇಧಗಳು ಪ್ರದರ್ಶಿಸುವ ಗುಣಲಕ್ಷಣಗಳು ಇಂಥ ತರ್ಕಕ್ಕೆ ಎಡೆ ಮಾಡಿಕೊಟ್ಟಿವೆ-ಸ್ವಯಂಚಾಲನೆ ಇರುವ ಆಲ್ಗೆಗಳಿವೆ, ಇಲ್ಲದವೂ ಇವೆ. ಉನ್ನತದರ್ಜೆಯ ಸಸ್ಯಗಳನ್ನು ಹಲವಾರು ಆಲ್ಗೆಗಳು ತೋರಿಕೆಗೆ ಹೋಲುತ್ತವಾದರೂ ಈ ಆಲ್ಗೆಗಳಿಗೆ ನಿಜವಾದ ಎಲೆಗಳಿಲ್ಲ, ಕಾಂಡಗಳಿಲ್ಲ, ಬೇರುಗಳಿಲ್ಲ, ನಾಳವ್ಯವಸ್ಥೆಯೂ (ವಾಸ್ಕ್ಯುಲರ್ ಸಿಸ್ಟಂ) ಇಲ್ಲ.<ref>https://www.livescience.com/54979-what-are-algae.html</ref>
 
==ಪ್ರಾಪ್ತಿ ಮತ್ತು ವಿತರಣೆ==
ಸಿಹಿನೀರಿನ ಆಲ್ಗೆ ಮತ್ತು ಉಪ್ಪುನೀರಿನ ಆಲ್ಗೆ ಎಂಬ ಸ್ಥೊಲ ವಿತರಣೆ ಆಲ್ಗೆಯ ಪ್ರಾಪ್ತಿ ಸ್ಥಾನವನ್ನು ಕುರಿತು ಇದೆ. ಸುಮಾರು 18,000 ಬಿನ್ನ ಪ್ರಭೇದಗಳಿರುವ ಅಲ್ಗೆ ಸಸ್ಯದಲ್ಲಿನ ಪ್ರತಿ ಪ್ರಭೇದವನ್ನೂ ಈ ಎರಡು ವಿಂಗಡಣೆಗಳಲ್ಲಿ ಒಂದರಲ್ಲಿ ಗುರುತಿಸಬಹುದು. ಒಟ್ಟಾಗಿ ಪರಿಶೀಲಿಸುವಾಗ ಸಿಹಿ ನೀರಿನ ಮತ್ತು ಉಪ್ಪು ನೀರಿನ ಆಲ್ಗೆಗಳು ಪ್ರದರ್ಶಿಸುವ ವೈವಿಧ್ಯ-ಅತಿ ಸರಳತೆಯಿಂದ ಬಲು ಸಂಕೀರ್ಣತೆ ವರೆಗೆ-ಬೆರಗುಗೊಳಿಸುವಂತಿದೆ.<ref>https://www.ncbi.nlm.nih.gov/pmc/articles/PMC5024002</ref>
 
==ವರ್ಗೀಕರಣ==
ವರ್ಣ ಪದಾರ್ಥಗಳ ರಾಸಾಯನಿಕ ಸ್ವಭಾವ, ಕಣಗಳಲ್ಲಿ ಶೇಖರವಾಗಿರುವ ಆಹಾರ ಪದಾರ್ಥಗಳ ಸಮ್ಮಿಳನ, ಚಲನಾಂಗಗಳ ವೈವಿಧ್ಯ, ಕಣ ಭಿತ್ತಿಯ ರಾಸಾಯನಿಕ ರಚನೆ, ಸಂತಾನೋತ್ಪತ್ತಿ ವಿಧಾನಗಳು-ಇವನ್ನು ಆಧರಿಸಿ ಆಲ್ಗೆ ಸಸ್ಯಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.<ref>https://www.ncbi.nlm.nih.gov/pmc/articles/PMC1713255</ref>
===ಸೈಯನೋಫೈಸಿ (ನೀಲಿ ಹಸಿರು ಆಲ್ಗೆಗಳು )===
ಜೀವಕಣದ ಒಳರಚನೆ ಬಲು ಸರಳ. ಈ ಶೈವಲದಲ್ಲಿ ನೈಜಕಣಬೀಜ ಮತ್ತು ಕ್ರೊಮಟೋಫೋರ್‍ಗಳು ಇರುವುದಿಲ್ಲ. ಇದರ ಕಣಗಳಲ್ಲಿರುವ ಕಣದ್ರವ್ಯವನ್ನು ಎರಡು ವಿಭಾಗಗಳಾಗಿ ನೋಡುತ್ತೇವೆ-ವರ್ಣದ್ರವ್ಯಗಳು, ತೈಲವಸ್ತುಗಳು ಮತ್ತು ನೀಲಹರಿತ ಶೈವಾಲೀಯ ಪಿಷ್ಟವನ್ನು ಒಳಗೊಂಡಿರುವ (ಪೆರಿಫೆರಲ್ ಪಿಗ್‍ಮೆಂಟೆಡ್ ರೀಜನ್ ಟುಗೆದರ್ ವಿತ್ ಆಯ್ಲ್ ಡ್ರಾಪ್ಸ್) ಪರಿಧಿಯ ಸಮೀಪದ ಹೊರವಿಭಾಗ ; ವರ್ಣ ದ್ರವ್ಯರಹಿತ ನಡುವಣ ವಿಭಾಗ. ಈ ವರ್ಣದ್ರವ್ಯದಲ್ಲಿ ಪತ್ರಹರಿತ್ತು ಎ. ಕೆರೊಟೀನ್, ಮಿಕ್ಸೊಸೆಂತೀನ್, ಮಿಕ್ಸೊಸೆಂತೊಫಿಲ್, ಫೈಕೊಸಯನಿನ್ ಮತ್ತು ಫೈಕೊ ಇರಿತ್ರಿನ್ ಇವೇ ಮೊದಲಾದ ವಸ್ತುಗಳಿವೆ. ಅವುಗಳಲ್ಲಿ ಲಿಂಗಕಣಗಳಾಗಲಿ ಚಲಿಸುವ ಕಣಗಳಾಗಲಿ ಇರುವುದಿಲ್ಲ. ಈ ಸಸ್ಯಗಳು ಒಮ್ಮೊಮ್ಮೆ ಆಕಸ್ಮಿಕವಾಗಿ ತುಂಡಾಗುವುದರ ಮೂಲಕ ಸಂತಾನೋತ್ಪತ್ತಿ ಕ್ರಿಯೆ ನಡೆಯುವುದು. ಇವುಗಳ ಇನ್ನು ಕೆಲವು ಪ್ರೆಭೇದಗಳಲ್ಲಿ ವಿಶೇಷ ಕಣಗಳು ರೂಪಗೊಂಡು ಅವು ಈ ಕ್ರಿಯೆಯನ್ನು ನಡೆಸುತ್ತವೆ.
೩೨ ನೇ ಸಾಲು:
 
==ಉಪಯೋಗ==
ಇದು [[ಸಮುದ್ರ]],[[ಕೆರೆ]],[[ನದಿ]] ಹಾಗೂ ತೇವಾಂಶದಿಂದ ಕೂಡಿದ ಮಣ್ಣು ಇವುಗಳಲ್ಲಿ ಬೆಳೆಯುತ್ತದೆ.ಹೆಚ್ಚಿನ ಆಲ್ಗೆಗಳು ಏಕ [[ಜೀವಕೋ]]ಗಳನ್ನು ಹೊಂದಿದ್ದು [[ಸೂಕ್ಷ್ಮದರ್ಶಕ]]ದಲ್ಲಷ್ಟೇ ಕಾಣಬಹುದಾಗಿದೆ. ಕೆಲವು ಹಲವು ಜೀವಕೋಶಗಳನ್ನು ಹೊಂದಿದ್ದು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.ಕೆಲವು ಆಲ್ಗೆಗಳು ನೀರಿನಲ್ಲಿ ತೇಲುವಂತೆ ಇದ್ದರೆ,ಕೆಲವು ಕಲ್ಲುಗಳಿಗೆ ಅಂಟಿಕೊಂಡಿರುತ್ತವೆ. ನೆಲದ ಮೇಲೆ ಹಾಗೂ ಮರಗಳ ಮೇಲೆ ಬೆಳೆಯುವ ಆಲ್ಗೆಗಳೂ ಇವೆ.ಆಲ್ಗೆಗಳು ಕ್ಲೋರೋಫಿಲ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇವುಗಳು ನೀರು ಹಾಗೂ ಗಾಳಿಯನ್ನು ಶುದ್ಡೀಕರಿಸಲು ಸಹಕರಿಸುತ್ತವೆ. ನೀರಿನಲ್ಲಿರುವ [[ಮೀನು]] ಮತ್ತು ಇತರ ಜೀವಿಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ.<ref>https://www.ncbi.nlm.nih.gov/pmc/articles/PMC3819078</ref>
 
==ಉಲ್ಲೇಖಗಳು==
[[ವರ್ಗ:ಸೂಕ್ಷ್ಮಜೀವಶಾಸ್ತ್ರ]]
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಶೈವಲ" ಇಂದ ಪಡೆಯಲ್ಪಟ್ಟಿದೆ