ಕಾಮನ್ವೆಲ್ತಿನ ಆರ್ಥಿಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬ ನೇ ಸಾಲು:
==ಉತ್ಪಾದನೆ==
ಈ ರಾಷ್ಟ್ರಸಮುದಾಯದ ಬಹುಪಾಲಿನ ರಾಷ್ಟ್ರಗಳ ಆರ್ಥಿಕತೆಯಲ್ಲಿ ಕೃಷಿ ಉದ್ಯಮ ಪ್ರಮುಖವಾದ ಕಾರಣ. ಕೈಗಾರಿಕೋತ್ಪನ್ನದ ಪ್ರಮಾಣ ಸ್ವಾಭಾವಿಕವಾಗಿಯೇ ಕಡಿಮೆ. ಉದಾಹರಣೆಗೆ, ಇಲ್ಲಿಯ ಒಟ್ಟು ಜನಸಂಖ್ಯೆ ಕಮ್ಯುನಿಸ್ಟ್ ರಾಷ್ಟ್ರಗಳನ್ನುಳಿದ ವಿಶ್ವದ ಮೂರನೆಯ ಒಂದರಷ್ಟಾದರೂ ಇವುಗಳ ಕೈಗಾರಿಕೋತ್ಪನ್ನದ ಪ್ರಮಾಣ ಅದರ ಆರನೆಯ ಒಂದಕ್ಕಿಂತಲೂ ಕಡಿಮೆ. ಈ ಸಮುದಾಯದಲ್ಲಿಯ ಕೈಗಾರಿಕೆಗಳೆಲ್ಲವೂ ೧೯೯೦ರವರೆಗೆ ಬ್ರಿಟನಿನಲ್ಲಿಯೇ ಹೆಚ್ಚಾಗಿ ಕೇಂದೀಕೃತವಾಗಿದ್ದವು. ೧೯೯೦ರಿಂದ ಮಲೇಷಿಯಾ, ಭಾರತ ಮತ್ತು ಕೆನಡಾ ಜಂಟಿಯಾಗಿ ಬ್ರಿಟನ್ ಅನ್ನು ಹಿಂದೆ ಹಾಕಿ ಮುನ್ನಡೆ ಪಡೆದಿವೆ. ಇದರ ಜೊತೆಗೆ ಕೆನಡ, ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳನ್ನೂ ಸೇರಿಸಿಕೊಂಡರೆ ಇವೆಲ್ಲ ರಾಷ್ಟ್ರಗಳೂ ಸೇರಿ ಕಾಮನ್‍ವೆಲ್ತಿನ ಮುಕ್ಕಾಲು ಭಾಗಕ್ಕೂ ಮೀರಿದ ಕೈಗಾರಿಕೋತ್ಪನ್ನಕ್ಕೆ ಕಾರಣವಾಗುತ್ತವೆ.
 
==ಖನಿಜ ಉತ್ಪನ್ನ==
ಕೈಗಾರಿಕೋತ್ಪನ್ನದ ಜೊತೆಗೆ ವಿಶ್ವದಲ್ಲಿ ಖನಿಜೋತ್ಪನ್ನದ ರಂಗದಲ್ಲಿ ಕಾಮನ್‍ವೆಲ್ತ್ ರಾಷ್ಟ್ರಗಳು ಒಳ್ಳೆಯ ಸ್ಥಾನ ಪಡೆದಿವೆ. ಆಫ್ರಿಕಾ ಖಂಡ ಖನಿಜಗಳ ಆಗರವೇ ಆಗಿದೆ. ಕೆನಡ ಮತ್ತು ದಕ್ಷಿಣ ಆಫ್ರಿಕ- ವಿಶ್ವದ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಿನ್ನವನ್ನೂ ಮಲಯ ಮತ್ತು ನೈಜೀರಿಯಗಳು ಅರ್ಧದಷ್ಟು ತವರನ್ನೂ ಕೆನಡ ಮೂರನೆಯ ಎರಡರಷ್ಟು ನಿಕಲನ್ನೂ ಉತ್ಪಾದಿಸುತ್ತವೆ. ಹಾಗೂ ಈ ಸಮುದಾಯ ವಿಶ್ವದ ಮೂರನೆಯ ಒಂದರಷ್ಟು ಕಲ್ಲಿದ್ದಲು, ತಾಮ್ರ ಮತ್ತು ಸೀಸಗಳನ್ನು ಉತ್ಪಾದಿಸುತ್ತದೆ.
 
ಈ ರಾಷ್ಟ್ರಸಮುದಾಯದಲ್ಲಿ ಕೃಷಿ ಉದ್ಯಮ ಪ್ರಮುಖವಾದುದರಿಂದ ವಿಶ್ವದ ಉತ್ಪನ್ನದ ಬಹುಪಾಲು ಕೃಷಿ ಉತ್ಪನ್ನ ಇಲ್ಲಿಂದಲೇ ಬರುತ್ತದೆ. ಆಸ್ಟ್ರೇಲಿಯ, ನ್ಯೂಜೀóಲೆಂಡ್ ಮತ್ತು ದಕ್ಷಿಣ ಆಫ್ರಿಕಗಳು ಅರ್ಧಕ್ಕೂ ಮೀರಿದ ಉಣ್ಣೆಯನ್ನು. ಭಾರತ ಮತ್ತು ಸಿಂಹಳ ಮುಕ್ಕಾಲು ಭಾಗಕ್ಕೂ ಮೀರಿದಷ್ಟು ಚಹವನ್ನು, ಘಾನ ಮತ್ತು ನೈಜೀರಿಯ ಅರ್ಧಕ್ಕೂ ಮೀರಿದಷ್ಟು ಕೋಕೋವನ್ನು, ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮುಕ್ಕಾಲು ಭಾಗಕ್ಕೂ ಹೆಚ್ಚು ಸೆಣಬನ್ನು, ಮಲಯ ಮತ್ತು ಸಿಂಹಳ ಅರ್ಧದಷ್ಟು ರಬ್ಬರನ್ನು ಸರಬರಾಜು ಮಾಡುತ್ತವೆ. ಈ ರಾಷ್ಟ್ರಸಮುದಾಯ ಗೋದಿಯ ಬಗ್ಗೆ ವಿಶ್ವದ ಸರಾಸರಿ ಮಟ್ಟವನ್ನು ಮುಟ್ಟದಿದ್ದರೂ ಭತ್ತದ ವಿಷಯದಲ್ಲಿ ವಿಶ್ವದ ಸರಾಸರಿ ಮಟ್ಟವನ್ನು ಮೀರುತ್ತದೆ.
 
==ಉಲ್ಲೇಖಗಳು==