ಕಾರಾಗೃಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕಾರಾಗೃಹ
 
ಸಂಪರ್ಕವನ್ನು ಅಳವಡಿಸಿದ್ದು
 
೧ ನೇ ಸಾಲು:
'''ಕಾರಾಗೃಹ'''ವು ಅಪರಾಧಿಗಳನ್ನು ಅಥವಾ ಕಾನೂನುಬದ್ಧ[[ಕಾನೂನು]]ಬದ್ಧ ಪ್ರಾಧಿಕಾರ ಒಪ್ಪಿಸಿಕೊಟ್ಟವರನ್ನು ಭದ್ರಸುಪರ್ದಿನಲ್ಲಿ ಅಥವಾ ಬಂಧನದಲ್ಲಿ ಇಡಲು ಬಳಸಲಾಗುವ ಕಟ್ಟಡ ಅಥವಾ ಸ್ಥಳ (ಪ್ರಿಸನ್). ಕಾರಾಗೃಹ, ಜೈಲು, ಬಂದೀಖಾನೆ ಮತ್ತು ಸೆರೆಮನೆ ಇವು ಸಮಾನ ಪದಗಳು. ಭಾರತದ ಕಾರಾಗೃಹಗಳಿಗೆ ಸಂಬಂಧಿಸಿದ ಕಾಯಿದೆಗಳಲ್ಲಿ ಕಾರಾಗೃಹ ಶಬ್ದದ ವ್ಯಾಖ್ಯೆಯನ್ನು ಹೇಳಲಾಗಿದೆ. ಈಗ ಶಾಸನ ವಿರೋಧವೆನಿಸುವ ಸಮಾಜ ಘಾತಕವೆನಿಸುವ ಕ್ರಿಯೆಗಳಿಗೆ ವಿಧಿಸಲಾಗುವ ಕಾರಾಗೃಹ ಶಿಕ್ಷೆ ಹಿಂದೆ ಶಿಕ್ಷೆಯೆನಿಸುತ್ತಿರಲಿಲ್ಲ. ಕಾರಾಗೃಹಗಳನ್ನು ಕೇವಲ ವಿಚಾರಣೆಯ ಮೊದಲು ಮತ್ತು ಶಿಕ್ಷೆಯನ್ನು ವಿಧಿಸುವ ವರೆಗೆ ಆಪಾದಿತನನ್ನು ಕಾವಲಿನಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಎಲ್ಲ ದೇಶಗಳಲ್ಲೂ ಪ್ರತಿವರ್ಷವೂ ಸಾವಿರಾರು ಜನ ಕಾರಾಗೃಹವಾಸಿಗಳಾಗಿರುತ್ತಾರೆ. ಅವರೆಲ್ಲ ಅಪರಾಧದ ವಿಚಾರಣೆಗೋ ಸ್ಥಳೀಯ ಅಥವಾ ದೇಶದ ಕಾಯಿದೆಗಳನ್ನು ಅತಿಕ್ರಮಿಸಿದ ನಿಮಿತ್ತ ಶಿಕ್ಷೆಗೆ ಗುರಿಯಾಗಿಯೋ ಕಾರಾಗೃಹವಾಸಿಗಳಾಗುತ್ತಾರೆ. ಕಳ್ಳರು, ಕುಡುಕರು, ಕೊಲೆಗಡುಕರು, ಬಾಲದೋಷಿಗಳು, ವ್ಯಭಿಚಾರಿಗಳು, ಅಪರಾಧಿಗಳೆನಿಸಿದ ನಿರ್ದೋಷಿಗಳು, ಅಪರಾಧ ಮಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು, ಸಂದರ್ಭ ಸನ್ನಿವೇಶಗಳಿಗೆ ತುತ್ತಾಗಿ ಅಪರಾಧ ಮಾಡಿದವರು-ಹೀಗೆ ಆಪಾದಿತರಲ್ಲಿ ನಾನಾ ಬಗೆಗಳುಂಟು.
 
ಕಾರಾಗೃಹಗಳು ಅತಿಪ್ರಾಚೀನ ಕಾಲದಿಂದಲೆ, ಎಂದರೆ ಮಾನವ ಸಂಘಜೀವಿಯಾಗಿ ಬಾಳಲು ಆರಂಭಿಸಿದಾಗಿನಿಂದಲೆ, ಅಸ್ತಿತ್ವದಲ್ಲಿವೆ. ಆದರೆ ಅವು ಇದ್ದ ರೀತಿ ಮತ್ತು ಅವುಗಳ ಉದ್ದೇಶಗಳು ಕಾಲಕಾಲಕ್ಕೆ ಬೇರೆಯಾಗುತ್ತ ಬಂದಿವೆ. ಬಂಡೆಗಳ[[ಬಂಡೆ]]ಗಳ ಸಂದು, ಮರದ ಪೊಟರೆ, ಗವಿ ಮತ್ತು ಗುಡಿಸಲುಗಳಿಂದ ಆರಂಭವಾಗಿ ಕಗ್ಗತ್ತಲ ಕೋಣೆಗಳವರೆಗೆ ಕಾರಾಗೃಹಗಳ ಬೆಳೆವಣಿಗೆಯಾಗಿದೆ. ಈಗ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಕಾರಾಗೃಹಗಳಲ್ಲಿ ಬಂದೀಖಾನೆಗಳು, ಬಯಲ ಸೆರೆಮನೆಗಳು ಮತ್ತು ಸುಧಾರಣಾ ಕೇಂದ್ರಗಳು-ಎಂದು ಮೂರು ವಿಧಗಳುಂಟು.
 
ಸುಮಾರು 200 ವರ್ಷಗಳಿಗೆ ಮುಂಚೆ ಕಾರಾಗೃಹಗಳನ್ನು ಬಾಕಿ ವಸೂಲಿಗಾಗಿ ಅಥವಾ ಆಪಾದಿತರನ್ನು ವಿಚಾರಣೆಗೆ ಮುನ್ನ ಮತ್ತು ಶಿಕ್ಷೆ ಕೊಡುವುದಕ್ಕೋಸ್ಕರ ಬಂಧನದಲ್ಲಿಡಲು ಉಪಯೋಗಿಸಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಅಪರಾಧಕ್ಕನುಗುಣವಾಗಿ ಜುಲ್ಮಾನೆಯ ರೂಪದಲ್ಲೊ ಶಾರೀರಿಕ ದಂಡನೆ, ಮರಣದಂಡನೆ ಹಾಗೂ ಗಡಿಪಾರು ಮುಂತಾದ ರೂಪುಗಳಲ್ಲೋ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಕಾರಾಗೃಹ ವಾಸವೂ ಶಿಕ್ಷೆಯ ಒಂದು ಪ್ರಕಾರವಾದ ಮೇಲೆ ಅದು ದಮನರೂಪದ ದಂಡನೆಯಾಗಿ ಪರಿಣಮಿಸಿತು. ಒತ್ತಾಯದ ಶ್ರಮ ಮತ್ತು ಸತತವಾಗಿ ಶಾರೀರಿಕ ಮತ್ತು ನೈತಿಕ ಅಪಮಾನಗಳಿಗೆ ಈಡುಮಾಡುವುದರ ಮೂಲಕ ಅಪರಾಧಿಯ ಚಿತ್ತವನ್ನು ಅಧೀನ ಮತ್ತು ನಿಯಂತ್ರಣಕ್ಕೊಳಪಡಿಸುವುದು ಕಾರಾಗೃಹಗಳಲ್ಲಿಯ ಪದ್ಧತಿಯಾಯಿತು. ಅಪರಾಧಿಯನ್ನು ದಂಡಿಸುವುದು ಮತ್ತು ಅವನ ಉಪಟಳದಿಂದ ಸಮಾಜಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕಾರಾಗೃಹದ ಉದ್ದೇಶಗಳಾದುವು. ಇದರಿಂದಾಗಿ ಸಮಾಜಕ್ಕೆ ಒಂದು ರೀತಿಯ ರಕ್ಷಣೆ ದೊರೆಯಿತು.
೨೧ ನೇ ಸಾಲು:
1831ರಲ್ಲಿ ಅಲ್ಲಿಯ ಸಂಸತ್ ಸಮಿತಿ ಕಾರಾಗೃಹಗಳನ್ನು ಕುರಿತ ಎಲ್ಲ ವಿಷಯಗಳನ್ನೂ ಕೂಲಂಕಷವಾಗಿ ಪರಾಮರ್ಶಿಸಿ ಎಲ್ಲ ಅಪರಾಧಿಗಳನ್ನೂ ಪ್ರತ್ಯೇಕವಾಗಿ ಇಡಬೇಕೆಂದೂ ಹಾಗೆ ಮಾಡಲು ಅನುಕೂಲವಾಗುವಂತೆ ಏಕಾಂತ ಕೋಣೆಗಳನ್ನು ಕಟ್ಟಬೇಕೆಂದೂ ಸಲಹೆ ಮಾಡಿತು. ಈ ಸುಮಾರಿಗೆ ಆಗಲೇ ಅಮೆರಿಕದಲ್ಲಿ ಕಾರಾಗೃಹಗಳ ಸುಧಾರಣೆ ಅವ್ಯಾಹತವಾಗಿ ನಡೆದಿದೆ ಎಂಬ ಸಮಾಚಾರ ಐರೋಪ್ಯ ದೇಶಗಳಲ್ಲೆಲ್ಲ ಹಬ್ಬಿತ್ತು. ಅಲ್ಲಿಯ ಪ್ರಯೋಗಗಳನ್ನು ನೋಡಿಕೊಂಡು ಬರಲು ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳ ಪ್ರತಿನಿಧಿಗಳು ಒಟ್ಟಾಗಿಯೇ ಅಮೆರಿಕಕ್ಕೆ ಹೋದರು. ಅದರ ಫಲವಾಗಿ 1842ರಲ್ಲಿ ಪೆಂಟನ್‍ವಿಲ್ಲೆಯ ಏಕಾಂತ ಕೋಣೆಗಳ ಕಾರಾಗೃಹವನ್ನೇ ಅಲ್ಲದೆ ಇನ್ನೂ ಅನೇಕ ಕಾರಾಗೃಹಗಳನ್ನು ಕಟ್ಟಲಾಯಿತು.
 
ಇಂಗ್ಲೆಂಡಿನಲ್ಲಿಯ ಕಾರಾಗೃಹಗಳ ಸುಧಾರಣೆಗೆ ಅಲ್ಲಿಯ ಸಾಮಾಜಿಕ ಜಾಗೃತಿಯ ಜೊತೆಗೆ ಅಪರಾಧಶಾಸ್ತ್ರವನ್ನು ಕುರಿತ ಚಿಂತನ ಸಂಶೋಧನಗಳೂ ಅಪರಾಧಿಗಳನ್ನು ಗಡಿಪಾರು ಶಿಕ್ಷೆಯ ಮೇಲೆ [[ಅಮೆರಿಕ]], [[ವೆಸ್ಟ್ ಇಂಡೀಸ್]], [[ಆಸ್ಟ್ರೇಲಿಯ]] ಮತ್ತು ಟಾಸ್ಮೇನಿಯ ದೇಶಗಳಿಗೆ ಕಳಿಸುವುದನ್ನು ನಿರ್ಬಂಧಿಸಿದುದೂ ಕಾರಣವೆಂದು ಹೇಳಬಹುದು. 1878ರಲ್ಲಿ ಸರ್ಕಾರ ಎಲ್ಲ ಸ್ಥಳೀಯ ಕಾರಾಗೃಹಗಳನ್ನೂ ತನ್ನ ಹತೋಟಿಗೆ ತೆಗೆದುಕೊಂಡಿತು; ಕಾರಾಗೃಹಗಳ ಆಯೋಗವನ್ನು ನೇಮಿಸಿತು. ಕಾರಾಗೃಹಗಳಲ್ಲಿ ಸಶ್ರಮ ಮತ್ತು ಏಕಾಂತ ಸೆರೆವಾಸದ ವಿಧಾನಗಳು ಸಾಮಾನ್ಯವಾದುವು.
 
ಮುಂದಿನ ಇಪ್ಪತ್ತು ವರ್ಷಗಳಲ್ಲಿ ಕಾರಾಗೃಹಗಳ ಪರಿಸ್ಥಿತಿ ಕೆಟ್ಟು ಕೈದಿಗಳ ಶಾರೀರಿಕ, ಮಾನಸಿಕ ಅವನತಿಗೆ ಕಾರಣವಾಗುತ್ತಿವೆ ಎಂಬುದಾಗಿ ಅನೇಕ ಆರೋಪಗಳು ಬಂದು ಇವುಗಳ ವಿಚಾರಣೆಗಾಗಿ ಗ್ಲಾಡ್‍ಸ್ಟನನ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಅಲ್ಲಿಯ ಕಾರಾಗೃಹಪದ್ಧತಿಯಲ್ಲಿ ದಂಡನೆಯೇ ಪ್ರಧಾನ ದೃಷ್ಟಿಯಾಗಿತ್ತು. ವ್ಯಕ್ತಿಯ ಸುಧಾರಣೆಗೂ ಮಾನ್ಯತೆ ದೊರೆಯಬೇಕೆಂದು ಆ ಸಮಿತಿ ಸಲಹೆ ಮಾಡಿತು. ಕೈದಿಯ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಕಾರಾಗೃಹ ಕಾರಣವಾಗಬೇಕೆಂದೂ ಅದು ಸೂಚಿಸಿತು. ಇದರ ಪರಿಣಾಮವಾಗಿ 1898ರಲ್ಲಿ ಕಾರಾಗೃಹ ಕಾಯಿದೆಯೊಂದು ಅನುಮೋದಿತವಾಯಿತು. ಇಂಗ್ಲೆಂಡಿನ ಕಾರಾಗೃಹ ವ್ಯವಸ್ಥೆಗೆ ಅದೇ ಮುಖ್ಯ ಅಡಿಪಾಯ. ಸಶ್ರಮದ ಎಲ್ಲ ವಿಧಾನಗಳನ್ನೂ ರದ್ದುಗೊಳಿಸಲಾಯಿತು. ಆ ಕಾಯಿದೆಯಲ್ಲಿ ಅಪರಾಧಿಗಳನ್ನು ಮೂರು ಬಗೆಗಳಾಗಿ ವಿಂಗಡಿಸುವ ವಿಧಾನವನ್ನು ಸೂಚಿಸಲಾಗಿದೆ. ದಂಡ ಸಲುವಳಿ ಮಾಡದಿರುವ ತಪ್ಪಿಗಾಗಿ ಒಬ್ಬನಿಗೆ ಕಾರಾಗೃಹ ಶಿಕ್ಷೆ ವಿಧಿಸಿದ್ದಲ್ಲಿ, ಭಾಗಶಃ ದಂಡ ತೆತ್ತು ಕಾರಾಗೃಹ ಶಿಕ್ಷೆಯನ್ನು ಕಡಿಮೆ ಮಾಡಿಸಿಕೊಳ್ಳುವ ಅವಕಾಶವನ್ನೂ ಕಾಯಿದೆಗೆ ವಿರುದ್ಧವಲ್ಲದ ನಿಯಮಗಳನ್ನು ಮಾಡಲು ಸರ್ಕಾರಕ್ಕೆ ಅಧಿಕಾರವನ್ನೂ ನೀಡಲಾಗಿದೆ.
"https://kn.wikipedia.org/wiki/ಕಾರಾಗೃಹ" ಇಂದ ಪಡೆಯಲ್ಪಟ್ಟಿದೆ