ಪೋಷಣಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Kartikdn ಪೌಷ್ಟಿಕ ಆಹಾರ ಪುಟವನ್ನು ಪೋಷಣಶಾಸ್ತ್ರ ಕ್ಕೆ ಸರಿಸಿದ್ದಾರೆ: ಹೆಚ್ಚು ಸೂಕ್ತವಾದ ಶೀರ್ಷಿಕೆ
ಅನರೋಗ್ಯವು-ಅನಾರೋಗ್ಯವು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೭ ನೇ ಸಾಲು:
== ಪೌಷ್ಟಿಕಾಂಶಗಳು ==
ಪೌಷ್ಟಿಕಾಂಶಗಳಲ್ಲಿ ಒಟ್ಟು ಏಳು ವರ್ಗಗಳಿವೆ: [[ಕಾರ್ಬೋಹೈಡ್ರೇಟ್‌]]ಗಳು, [[ಕೊಬ್ಬು]], [[ಫೈಬರ್]], [[ಖನಿಜ]]ಗಳು, [[ಪ್ರೋಟೀನ್]], [[ವಿಟಮಿನ್]] ಹಾಗೂ [[ನೀರು]].
ಈ ಪೌಷ್ಟಿಕಾಂಶವರ್ಗಗಳನ್ನು [[ದೊಡ್ಡಮಟ್ಟಿನ ಪೌಷ್ಟಿಕಾಂಶಗಳು]] (ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವವು) ಹಾಗೂ [[ಸಣ್ಣಮಟ್ಟಿನ ಪೌಷ್ಟಿಕಾಂಶಗಳು]] (ಅಲ್ಪಪ್ರಮಾಣದಲ್ಲಿ ಅಗತ್ಯವಿರುವವು) ಎಂದು ವಿಭಾಗಿಸಬಹುದು. ದೊಡ್ಡಮಟ್ಟಿನ ಪೌಷ್ಟಿಕಾಂಶಗಳೆಂದರೆ ಕಾರ್ಬೋಹೈಡ್ರೇಟ್‌ಗಳು, ಕೊಬ್ಬು, ಫೈಬರ್, ಪ್ರೋಟೀನ್, ಹಾಗೂ ನೀರು. ಸಣ್ಣಮಟ್ಟಿನ ಪೌಷ್ಟಿಕಾಂಶಗಳೆಂದರೆ ಖನಿಜಗಳು, ಮತ್ತು ವಿಟಮಿನ್‌ಗಳು.ದೊಡ್ಡಮಟ್ಟಿನ ಪೌಷ್ಟಿಕಾಂಶಗಳು(ಫೈಬರ್ ಮತ್ತು ನೀರನ್ನು ಹೊರತುಪಡಿಸಿ) ರಚನಾ-ಕ್ರಮದ ವಸ್ತುಗಳನ್ನು(ಪ್ರೋಟೀನ್ ರಚಿಸಲ್ಪಡುವ ಅಮೈನೋ ಆಮ್ಲಗಳು, ಕೋಶಪೊರೆ ಮತ್ತು ಕೆಲವು ಸಂಜ್ಞಾ ಪರಮಾಣುಗಳು ರಚಿಸಲ್ಪಡುವ ಲಿಪಿಡ್‌ಗಳು), [[ಶಕ್ತಿ]]ಯನ್ನು ಒದಗಿಸುತ್ತವೆ. ರಚನಾ-ಕ್ರಮದ ವಸ್ತುಗಳಲ್ಲಿ ಕೆಲವು, ಆಂತರಿಕವಾಗಿ ಶಕ್ತಿ ಬಿಡುಗಡೆ ಮಾಡಲು ಉಪಯುಕ್ತವಾಗಿವೆ. ಹಾಗೂ ಅದನ್ನು [[ಜೂಲ್]] ಗಳಲ್ಲಿ ಅಥವಾ [[ಕಿಲೋಕ್ಯಾಲೊರಿ]]ಗಳಲ್ಲಿ (ಹೆಚ್ಚಾಗಿ "ಕ್ಯಾಲೊರಿಗಳು" ಎಂದೇ ಕರೆಯಲ್ಪಡುತ್ತದೆ ಮತ್ತು ಅದನ್ನು ಸಣ್ಣ ಕ್ಯಾಲೊರಿಯಿಂದ ಬೇರ್ಪಡಿಸಲು ಇಂಗ್ಲಿಷ್ ದೊಡ್ಡಕ್ಷರ ''C'' ಯಿಂದ ಬರೆಯಲಾಗುವುದು) ಅಳೆಯಲಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಗಣನೀಯ ಪ್ರಮಾಣದಲ್ಲಿ ಬದಲಾಗುವ, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಹಾಗೂ ಕೊಬ್ಬುಗಳು ಒದಗಿಸುವ ನಿವ್ವಳ ಶಕ್ತಿಯು ಹೀರಿಕೊಳ್ಳುವಿಕೆ ಮತ್ತು ಜೀರ್ಣಕ್ರಿಯಾ ಶ್ರಮದ ಮೇಲೆ ಅವಲಂಬಿತವಾದರೂ, ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್ ಗಳು ಪ್ರತಿ ಗ್ರಾಂಗೆ ೧೭ ಕಿಲೋಜೂಲ್ (೪ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯನ್ನೊದಗಿಸಿದರೆ, ಕೊಬ್ಬು ಪ್ರತಿ ಗ್ರಾಂ<ref name="Stryer">{{cite book | author = Berg J, Tymoczko JL, Stryer L | title = Biochemistry | publisher = W.H. Freeman | edition = 5th | location = San Francisco | year = 2002 | isbn = 0716746840 |page= 603 }}</ref> ಗೆ ೩೭ ಕಿಲೋಜೂಲ್(೯ ಕಿಲೋಕ್ಯಾಲೊರಿ)ಗಳಷ್ಟು ಶಕ್ತಿಯೊದಗಿಸುತ್ತದೆ. ವಿಟಮಿನ್‌ಗಳು, ಖನಿಜಾಂಶಗಳು, ಫೈಬರ್, ಮತ್ತು ನೀರು ಶಕ್ತಿಯನ್ನೊದಗಿಸುವುದಿಲ್ಲ. ಆದರೆ ಅವು ಬೇರೆ ಕಾರಣಗಳಿಗೆ ಅಗತ್ಯವಾಗಿವೆ. ನಿರ್ದಿಷ್ಟ ಕಾರಣ ಸ್ಪಷ್ಟವಾಗಿ ತಿಳಿಯದಿದ್ದರೂ, ಮೂರನೇ ದರ್ಜೆಯ ಆಹಾರ ಪದಾರ್ಥವಾದ ಫೈಬರ್ (ಎಂದರೆ ಸೆಲ್ಯುಲೋಸ್ ನಂಥ ಜೀರ್ಣವಾಗದ ವಸ್ತು) ಕೂಡ ಯಾಂತ್ರಿಕ ಹಾಗೂ ಜೀವರಾಸಾಯನಿಕ ಕಾರಣಗಳಿಗಾಗಿ ಅಗತ್ಯವಾಗಿದೆ.ಕಾರ್ಬೋಹೈಡ್ರೇಟ್‌ಗಳ ಮತ್ತು ಕೊಬ್ಬುಗಳ ಪರಮಾಣುಗಳು ಇಂಗಾಲ, ಜಲಜನಕ, ಮತ್ತು ಆಮ್ಲಜನಕದ ಅಣುಗಳನ್ನು ಹೊಂದಿರುತ್ತವೆ. ಕಾರ್ಬೋಹೈಡ್ರೇಟ್‌ಗಳು ಸರಳ [[ಮೋನೊಸ್ಯಾಕರೈಡ್]](ಗ್ಲೂಕೋಸ್,ಫ್ರೂಕ್ಟೋಸ್,ಗ್ಯಾಲಕ್ಟೋಸ್)ಗಳಿಂದ ಸಂಕೀರ್ಣ [[ಪಾಲಿಸ್ಯಾಕರೈಡ್]](ಸ್ಟಾರ್ಚ್‌್)ಗಳ ವರೆಗೆ ವ್ಯಾಪಿಸಿವೆ. ಕೊಬ್ಬು ಎಂಬುದು [[ಗ್ಲಿಸೆರಾಲ್]] ಸರಪಳಿಗೆ ಜೋಡಣೆಗೊಂಡ [[ಮೇದಾಮ್ಲ]] ದ [[ಗೊಂಚಲು]]ಗಳ [[ಟ್ರೈ-ಗ್ಲಿಸರೈಡ್]] ರೂಪದಲ್ಲಿರುತ್ತದೆ. ಕೆಲವು ಮೇದಾಮ್ಲಗಳು, ಎಲ್ಲವೂ ಅಲ್ಲ, ಆಹಾರದಲ್ಲಿ [[ಅಗತ್ಯ]]ವಾಗಿವೆ: ಅವು ದೇಹದಲ್ಲಿ ಸಂಶ್ಲೇಷಿಸಲ್ಪಡುವುದಿಲ್ಲ. ಪ್ರೋಟೀನ್ ಪರಮಾಣುಗಳು ಇಂಗಾಲ, ಆಮ್ಲಜನಕ ಮತ್ತು ಜಲಜನಕದೊಂದಿಗೆ ನೈಟ್ರೋಜನ್ ಅಣುಗಳನ್ನು ಒಳಗೊಂಡಿರುತ್ತವೆ. ಪ್ರೋಟೀನ್ ನ ಕೆಲವು ಮೂಲಭೂತ ಘಟಕಗಳೆಂದರೆ, ಮನುಷ್ಯದೇಹದಲ್ಲಿ ಆಂತರಿಕವಾಗಿ ತಯಾರಾಗದಿರುವ ಕಾರಣದಿಂದ [[ಅತ್ಯಗತ್ಯ]]ವಾದ [[ಅಮೈನೋ ಆಮ್ಲ]]ವನ್ನೊಳಗೊಂಡ ನೈಟ್ರೋಜನ್. ಕೆಲವು ಅಮೈನೋ ಆಮ್ಲಗಳು ಗ್ಲೂಕೋಸ್ ಆಗಿ ಪರಿವರ್ತಿಸಲಾಗುವಂಥವು(ಶಕ್ತಿಯ ವ್ಯಯದೊಂದಿಗೆ) ಮತ್ತು ಸಾಮಾನ್ಯ ಗ್ಲೂಕೋಸ್ ನಂತೆ ಇದನ್ನೂ ಕೂಡ ಶಕ್ತಿಯುತ್ಪಾದನೆಗೆ ಬಳಸಬಹುದು. ಇರುವ ಪ್ರೋಟೀನನ್ನು ವಿಭಾಗಿಸುವ ಮೂಲಕ ಆಂತರಿಕವಾಗಿ ಒಂದಷ್ಟು ಗ್ಲೂಕೋಸ್ ಉತ್ಪತ್ತಿಯಾಗುತ್ತದೆ; ಉಳಿದ ಅಮೈನೋ ಆಮ್ಲಗಳು ಯೂರಿಯಾ ರೂಪದಲ್ಲಿ ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಇದು ಸಾಮಾನ್ಯವಾಗಿ ವಿಸ್ತರಿತ ಉಪವಾಸದ ಸಂದರ್ಭದಲ್ಲಿ ಮಾತ್ರ ಉಂಟಾಗುತ್ತದೆ.ಇತರ ಸಣ್ಣಮಟ್ಟಿನ ಪೋಷಕಾಂಶಗಳು ಕೆಲವು ದೈಹಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ(ಅಥವಾ ಅದನ್ನು ರಕ್ಷಿಸುವ) [[ತೈಲ ಮತ್ತು ಕೊಬ್ಬಿನ ಆಹಾರಾಂಶ ರಕ್ಷಕ]] ಮತ್ತು [[ಸಸ್ಯರಾಸಾಯನಿಕ]]ಗಳನ್ನು ಒಳಗೊಂಡಿವೆ. ಅವುಗಳ ಅಗತ್ಯವು ವಿಟಮಿನ್ ಗಳಷ್ಟಿದೆಯೇ ಎಂಬುದು ಸರಿಯಾಗಿ ದೃಢೀಕರಿಸಲ್ಪಟ್ಟಿಲ್ಲ.ಹೆಚ್ಚಿನ ಆಹಾರಗಳು, ವಿಷಗಳಂಥ ಅಥವಾ ವಿವಿಧ ಬಗೆಗಳ ಇತರ ವಸ್ತುಗಳೊಂದಿಗೆ ಕೆಲವು ಅಥವಾ ಎಲ್ಲ ಬಗೆಯ ಪೌಷ್ಟಿಕಾಂಶಗಳ ಮಿಶ್ರಣವನ್ನು ಹೊಂದಿರುತ್ತವೆ. ಕೆಲವು ಪೌಷ್ಟಿಕಾಂಶಗಳು ದೇಹದಲ್ಲಿ ಆಂತರಿಕವಾಗಿ ಶೇಖರಿಸಲ್ಪಟ್ಟರೆ (ಉದಾ, ಕೊಬ್ಬು ಕರಗುವ ವಿಟಮಿನ್ ಗಳು), ಉಳಿದವು ಹೆಚ್ಚುಕಮ್ಮಿ ನಿರಂತರವಾಗಿ ಅಗತ್ಯವಿರುತ್ತವೆ. ಅನರೋಗ್ಯವುಅನಾರೋಗ್ಯವು ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗಬಹುದು ಅಥವಾ ಕೆಲವು ವೈಪರೀತ್ಯ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪೌಷ್ಟಿಕಾಂಶಗಳ ಒದಗುವಿಕೆಯಿಂದಲೂ ಉಂಟಾಗಬಹುದು. ಉದಾಹರಣೆಗೆ ಉಪ್ಪು ಮತ್ತು ನೀರು (ಎರಡೂ ಅತೀಅಗತ್ಯ), ಹೆಚ್ಚಾದಲ್ಲಿ ಅನಾರೋಗ್ಯ ಅಥವಾ ಮರಣವನ್ನೂ ತಂದೊಡ್ಡಬಹುದು.
===ಕಾರ್ಬೋಹೈಡ್ರೇಟ್‌ಗಳು===
{{Main|Carbohydrate}}
"https://kn.wikipedia.org/wiki/ಪೋಷಣಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ