ಶೂರ್ಪಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
 
{{Dead end|date=ಡಿಸೆಂಬರ್ ೨೦೧೫}}
{{Orphan|date=ಡಿಸೆಂಬರ್ ೨೦೧೫}}
 
[[ಬಾಗಲಕೋಟೆ]] ಜಿಲ್ಲೆಯ [[ಜಮಖಂಡಿ]] ತಾಲೂಕಿನಲ್ಲಿಯ ಶೂರ್ಪಾಲಯ ಒಂದು ಚಿಕ್ಕ ಗ್ರಾಮ. ಇಲ್ಲಿಯ ಕೃಷ್ಣಾನದಿಯ ತೀರದಲ್ಲಿ ಮನಮೋಹಕವಾದ ಪರಮ, ಪವಿತ್ರ, ಪ್ರಾಚೀನ, ಭಾಗವತ ಪುರಾಣ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನವಿದೆ. [[ಕನಕದಾಸರು]] ಹೇಳಿದಂತೆ ಸಿರಿ ತನ್ನ ತೊಡೆಯ ಮೇಲೇರಿಸಿಕೊಂಡ ಪಾದ ಎಂಬಂತೆ ಶ್ರೀ ಲಕ್ಷ್ಮೀ ಸಮೇತ ಶ್ರೀ ನರಸಿಂಹ ದೇವರು ಶಂಖ, ಚಕ್ರ, ಗದೆ, ಪದ್ಮ, ಮುಕುಟ, ಕಂಠಾಭರಣ, ಚರಣಾಭರಣಗಳಿಂದ ವಿರಾಜಮಾನರಾಗಿ ವಿಜೃಂಭಿಸುತ್ತಿದ್ದಾರೆ. ಏಕಶಿಲಾ ಸಾಲಿಗ್ರಾಮದ ಈ ಮೂರ್ತಿ ಒಬ್ಬ ಹುಟ್ಟುಕುರುಡನಿಂದ ಕೆತ್ತಲ್ಪಟ್ಟಿದೆ ಎಂಬ ಐತಿಹ್ಯವಿದೆ.
Line ೨೦ ⟶ ೧೯:
ಶ್ರೀ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವವು ವೈಶಾಖ ಶುದ್ಧ ಸಪ್ತಮಿಯಿಂದ ಪ್ರಾರಂಭವಾಗಿ ವೈಶಾಖ ವದ್ಯ ದ್ವಿತೀಯಾದವರೆಗೆ ನವರಾತ್ರಿ ನೆರವೇರುವದು. ಉತ್ಸವದ ದಿನಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಪಲ್ಲಕ್ಕಿ ಅವಾಹನೋತ್ಸವ ನೆರವೇರುವುದು. ವೈಶಾಖ ಶುದ್ಧ ಹುಣ್ಣಿಮೆ ದಿನ ಶ್ರೀ ಲಕ್ಷ್ಮೀ ನರಸಿಂಹ ದೇವರ ರಥೋತ್ಸವ ಜಾತ್ರೆ ನಡೆಯುತ್ತದೆ. ಆ ಹುಣ್ಣಿಮೆಯನ್ನು ಆಗಿ ಹುಣ್ಣಿಮೆ ಎಂದು ಕರೆಯುವರು. ಆ ದಿನ ಸುಕ್ಷೇತ್ರದ ದೇವಸ್ಥಾನದಲ್ಲಿ ಪುಣ್ಯಾಹವಾಚನ, ರಥಾಂಗ ಹೋಮ ಹವನಗಳನ್ನು ಮಾಡುತ್ತಾರೆ. ಅಲ್ಲದೇ ಕಾರ್ತಿಕ ಮಾಸದಲ್ಲಿ ವೈಕುಂಠ ಚತುರ್ದಶಿ ದಿವಸ ದೇವರಿಗೆ ಸುವರ್ಣಭರಿತ ವಿಶೇಷ ಅಲಂಕಾರ ನೈವೇದ್ಯೆ ಪ್ರಸಾದ ಇರುವುದು. ಬೆಳ್ಳಿ ಉತ್ಸವ ಪ್ರತಿಮೆಯನ್ನು ನಾವಿನಲ್ಲಿ ಕೂಡಿಸಿ ಕೃಷ್ಣಾ ನದಿಯಲ್ಲಿ ತಪೋತ್ಸವ ದೀಪೋತ್ಸವ ನೆರವೇರುವುದು.
 
ಮಹಾರಾಷ್ಟ್ರದ ಶಾಹೂ ಮಹಾರಾಜರು ಹಾಗೂ ಬಿಜಾಪೂರದ ಆದಿಲ್‌ಶಾಹಿ ಮನೆತನದವರು ಶ್ರೀ ಕ್ಷೇತ್ರದ ಜನರಿಗೆ ಭೂಮಿಯನ್ನು ಉಂಬಳಿಯಾಗಿ ಕೊಟ್ಟ ಬಗ್ಗೆ ಐತಿಹಾಸಿಕ ದಾಖಲೆಗಳಿವೆ.{{Citation needed|reason=ದಾಖಲೆಗಳು|date=September 2019}}
 
[[ವರ್ಗ:ಬಾಗಲಕೋಟೆ ಜಿಲ್ಲೆ]]
"https://kn.wikipedia.org/wiki/ಶೂರ್ಪಾಲಯ" ಇಂದ ಪಡೆಯಲ್ಪಟ್ಟಿದೆ