ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ [[ಲಿಂಗ]]ಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ [[ದೇವಾಲಯ]]ವೆನಿಸಿದೆ. ( [[ಶಿವ]]ನ ಸ್ವರೂಪಗಳಾದ [[ಸದ್ಯೋಜಾತ]], [[ವಾಮದೇವ]],[[ಅಘೋರ]], [[ತತ್ಪುರುಷ]], [[ಈಶಾನ]])
[[File:ಪಂಛಲಿಂಗಗಳು.jpg|thumb|ಮೂಲ ಪಂಚಲಿಂಗಗಳು]]
[[File:ಶ್ರೀ ಪಂಚಲಿಂಗೇಶ್ವರ ದೇವರು.jpg|thumb|ಶ್ರೀ ಪಂಚಲಿಂಗೇಶ್ವರ ದೇವರು]]
==ದೇವಸ್ಥಾನದ ಇತಿಹಾಸ==
ಈ [[ದೇವಸ್ಥಾನ]]ವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವೆಂದು ಸಂಶೋಧಕರು ನಿರ್ಧರಿಸಿದ್ದಾರೆ.
Line ೩೮ ⟶ ೩೯:
ಹೊರಾಂಗಣದ [[ನೈಋತ್ಯ]] ದಿಕ್ಕಿನಲ್ಲಿ [[ದಕ್ಷಿಣ]]ಕ್ಕೆ ತೆರೆದಂತೆ [[ದೇವಾಲಯ]]ದ ಆವರಣದ ಪ್ರವೇಶದ್ವಾರವಿದೆ [[ನೈಋತ್ಯ]]ದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ( [[ಜಾತ್ರೆ]]ಯ ಸಮಯದಲ್ಲಿ [[ವಿಟ್ಲ]]ದ [[ಅರಸ]]ರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ). [[ನಾಗ]], ರಕ್ತೇಶ್ವರಿ, [[ಗುಳಿಗ]], ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪಂಚಲಿಂಗ ಪುಷ್ಕರಣಿಯಿದೆ.
[[File:ದೇವಸ್ಥಾನದ ಪುಷ್ಕರಣಿ.jpg|thumb|ಪಂಚಲಿಂಗ ಪುಷ್ಕರಣಿ]]
[[File:ದೇವರ ತೆಪ್ಪೋತ್ಸವ.jpg|thumb|ದೇವರ ತೆಪ್ಪೋತ್ಸವ]]
 
ಸೀಮೆಯ ಮುಖ್ಯ ದೈವಸ್ಥಾನ ಕೇಪು ಎಂಬಲ್ಲಿರುವ ’ಉಳ್ಳಾಲ್ತಿ’ಯದು, ಸೀಮೆಯ ಮುಖ್ಯ ಭೂತ ’ಮಲರಾಯ’ ಎಂದು ಹೇಳಲಾಗಿದೆ.
Line ೪೩ ⟶ ೪೫:
ವರ್ಷಾವಧಿ [[ಉತ್ಸವ]] ವಿಟ್ಲಾಯನವು ಮಕರಸಂಕ್ರಮಣದಂದು ಆರಂಭವಾಗಿ, ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸುಮಾರು ಹತ್ತು ದಿನಗಳ ಮೊದಲು ಗೊನೆಕಡಿಯುವ ಮುಹೂರ್ತವಿರುತ್ತದೆ. ಮಕರಸಂಕ್ರಮಣದಂದು ಮಧ್ಯಾಹ್ನ [[ಅರಮನೆ]]ಯ [[ಅರಸ]]ರು, ಗುರಿಕಾರರು, ಊರ- ಪರಊರ ಜನರ ಉಪಸ್ಥಿತಿಯಲ್ಲಿ ಧ್ವಜಾರೋಹಣವಾಗುತ್ತದೆ.
 
ಮೊದಲನೆಯದಿನ '''ಲಕ್ಷದೀಪೋತ್ಸವ''' [[ದೇವಸ್ಥಾನ]]ದ ಸುತ್ತಲೂ ಹಣತೆದೀಪಗಳನ್ನು ಬೆಳಗಿಸಲಾಗುತ್ತದೆ. ಎರಡು, ಮೂರು, ನಾಲ್ಕನೆಯ ದಿನಗಳಲ್ಲಿ ನಿತ್ಯೋತ್ಸವಗಳು ನಡೆಯುತ್ತವೆ.('''ಚಪ್ಪೆ ಆಯನ''') ಐದನೆಯದಿನ '''ಬಯ್ಯದಬಲಿ'''. ಅಂದು ರಾತ್ರೆ ಕೇಫುವಿನಿಂದ ಮಲರಾಯ, ಪಿಲಿಚಾಮುಂಡಿ ದೈವಗಳ ಭಂಡಾರ ಬರುತ್ತದೆ. ರಾತ್ರೆ [[ಉತ್ಸವ]] ನಡೆಯುತ್ತದೆ. ಆರನೆಯ ದಿನ '''ನಡುದೀಪೋತ್ಸವ''' ಆ ದಿನ ಬೆಳಗ್ಗೆ ದರ್ಶನ ಬಲಿ ನಡೆಯುತ್ತದೆ. ರಾತ್ರೆ ನಡುದೀಪೋತ್ಸವ ನಡೆಯುತ್ತದೆ. ಏಳನೆಯದಿನ '''ಹೂವಿನತೇರು'''. ಆದಿನ ಬೆಳ್ಳಂಬೆಳಗ್ಗೆ ದರ್ಶನಬಲಿ ಹಾಗೂ ರಾತ್ರೆ [[ಉತ್ಸವ]] ನಡೆಯುತ್ತದೆ. [[ದೇವಸ್ಥಾನ]]ದ ಸುತ್ತಲೂ ಹಣತೆಗಳನ್ನು ಬೆಳಗಿಸುವುದು ಈ [[ಉತ್ಸವ]]ದ ವಿಶೇಷತೆ. ರಾತ್ರೆ ಓಕುಳಿಕಟ್ಟೆಪೂಜೆ ನಡೆದಬಳಿಕ ಅಷ್ಟಾವಧಾನ ಕಾರ್ಯಕ್ರಮ ನಡೆಯುತ್ತದೆ. ([[ಋಗ್ವೇದ]], [[ಯಜುರ್ವೇದ]], [[ಸಾಮವೇದ]], [[ಅಥರ್ವವೇದ]], ಶ್ಲೋಕಗಳು, [[ಸಂಗೀತ]], [[ಶಂಖ]]ಧ್ವನಿ, ಚೆಂಡೆ, ವಾದ್ಯಘೋಷಗಳ ಸೇವೆ.) ಎಂಟನೆಯದಿನ '''ಮಹಾರಥೋತ್ಸವ'''.[https://epaper.udayavani.com/Home/Index] ಆದಿನ ಬೆಳಗ್ಗೆ ದರ್ಶನಬಲಿ ನಡೆದು, ರಾತ್ರೆ ದೇವರಬಲಿ ಹೊರಟು ಸಂಕ್ಷಿಪ್ತ [[ಉತ್ಸವ]] ನಡೆಯುತ್ತದೆ.[[https://epaper.udayavani.com/Home/Index]] ರಾಜಾಂಗಣದಲ್ಲಿ ಭಂಡಾರದೊಂದಿಗೆ ಮೆರವಣಿಗೆಯಾಗಿ, [[ದೇವಸ್ಥಾನ]]ದ ಎದುರಿನ ರಥಗದ್ದೆಯಲ್ಲಿ ಶ್ರೀದೇವರ ಮಹಾರಥೋತ್ಸವ ನಡೆಯುತ್ತದೆ. ಸುಡುಮದ್ದುಗಳ ಪ್ರದರ್ಶನ ನಡೆಯುತ್ತದೆ. ನಂತರ ವಿವಿಧ ಕಟ್ಟೆಪೂಜೆಗಳೊಂದಿಗೆ ಶ್ರೀದೇವರ ಬೀದಿಸವಾರಿ ನಡೆದು, [[ದೇವಾಲಯ]]ಕ್ಕೆ ಆಗಮಿಸುವ ವೇಳೆಗೆ ಆನೆಬಾಗಿಲು ಸಮೀಪ [[ಶಿವ]]-[[ಪಾರ್ವತಿ]]ಯರ ಭೇಟಿಯಾಗುತ್ತದೆ. ಆಬಳಿಕ ಪೆರಿಯ ಭೂತಬಲಿ [[ಉತ್ಸವ]] ನಡೆಯುತ್ತದೆ. ಆ ಬಳಿಕ ದೇವರ ಶಯನ. ಶಯನ ಸಂದರ್ಭದಲ್ಲಿ ಎಲ್ಲಾ ಬಲಿಕಲ್ಲುಗಳಿಗೆ ತೈಲವನ್ನು ಲೇಪಿಸಿ, ಯಾವಶಬ್ದವೂ ಕೇಳಿಸದಂತೆ ಗಂಟೆಗಳನ್ನು ಕಟ್ಟಲಾಗುತ್ತದೆ. ಒಂಭತ್ತನೆಯದಿನ '''ಅವಭೃತೋತ್ಸವ'''. ಅಂದು ಮಧ್ಯಾಹ್ನ ಕವಾಟೋದ್ಘಾಟನೆ. [[ನಗಾರಿ]], [[ಚಂಡೆ]], [[ವಾದ್ಯ]]ಘೋಷಗಳೊಂದಿಗೆ ಬಾಗಿಲು ತೆರೆದು ನಿರ್ಮಾಲ್ಯ ವಿಸರ್ಜನೆ, [[ಅಭಿಷೇಕ]], [[ಪೂಜೆ]], [[ನೈವೇದ್ಯ]]ಗಳು ನಡೆಯುತ್ತವೆ. ಮಧ್ಯಾಹ್ನ ತುಲಾಭಾರ ಸೇವೆ ನಡೆಯುತ್ತದೆ. ವರ್ಷದಲ್ಲಿ ಈದಿನ ಮಾತ್ರ ಈ ಸೇವೆ ನಡೆಯುತ್ತದೆ. ರಾತ್ರೆ ಸಂಕ್ಷಿಪ್ತ [[ಉತ್ಸವ]]ಬಲಿ ಹೊರಟು ಆನೆಬಾಗಿಲಿನ ಹತ್ತಿರ ಬಂದಾಗ ದೈವದ ಭೇಟಿಯಾಗಿ, ಕೊಡುಂಗಾಯಿಗೆ ತೆರಳಿ ಅವಭೃತಸ್ನಾನ ಮುಗಿಸಿ, ಆನೆಬಾಗಿಲಿನ ಬಳಿ [[ಶಿವ]]-[[ಪಾರ್ವತಿ]]ಯರ ಭೇಟಿಯಾಗುತ್ತದೆ. ನಂತರ ಶ್ರೀದೇವರು ಒಳಾಂಗಣಕ್ಕೆ ಪ್ರವೇಶಿಸಿದ ನಂತರ ಧ್ವಜಾವರೋಹಣ ಕಾರ್ಯಕ್ರಮ ಜರುಗುತ್ತದೆ. ಹತ್ತನೆಯದಿನ ಶ್ರೀ ದೇವರಿಗೆ ೧೦೮ ಕಲಶಾಭಿಷೇಕವಿರುತ್ತದೆ. ಇದನ್ನು ಸಂಪ್ರೋಕ್ಷಣೆ ಎನ್ನುವರು. ಆದಿನ ರಾತ್ರೆ [[ಉತ್ಸವ]] ಮೂರ್ತಿ ಮತ್ತು ಆಭರಣಗಳನ್ನು [[ಅರಮನೆ]]ಗೆ ತಲುಪಿಸುವುದು ವಾಡಿಕೆ. ಹನ್ನೊಂದನೆಯದಿನ ಮಲರಾಯ ಮತ್ತು ಪಿಲಿಚಾಮುಂಡಿ ದೈವಗಳಿಗೆ ವಾರ್ಷಿಕನೇಮದ ಕಾರ್ಯಕ್ರಮವಿರುತ್ತದೆ. ಊರಿನ ಗುರಿಕಾರರ, [[ಅರಮನೆ]]ಯ ಸಮ್ಮುಖದಲ್ಲಿ ನಡೆದು ರಾತ್ರಿ ದೈವದ ಭಂಡಾರ [[ಅರಮನೆ]]ಗೆ ತೆರಳುತ್ತದೆ. ಮರುದಿನ [[ಅರಮನೆ]]ಯಲ್ಲಿ ನೇಮ ನಡೆದಬಳಿಕ ಭಂಡಾರವು ಕೇಪುವಿಗೆ ತೆರಳುತ್ತದೆ.[http://www.bantwalnews.com/2017/01/10/%E0%B2%AA%E0%B2%82%E0%B2%9A%E0%B2%B2%E0%B2%BF%E0%B2%82%E0%B2%97%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%B8%E0%B2%A8%E0%B3%8D%E0%B2%A8%E0%B2%BF%E0%B2%A7%E0%B2%BF%E0%B2%AF%E0%B2%B2%E0%B3%8D/]
 
ಧನುರ್ಮಾಸದಲ್ಲಿ ಧನುಪೂಜೆಯು ಪ್ರಾತಃಕಾಲದಲ್ಲಿ ಜರುಗುತ್ತದೆ. [[ಗಣಪತಿ]][[ಹಬ್ಬ]], [[ನವರಾತ್ರಿ]], [[ಮಹಾಶಿವರಾತ್ರಿ]] ಮುಂತಾದ [[ಹಬ್ಬ]]ದ ದಿನಗಳಲ್ಲಿ ವಿಶೇಷ ಪೂಜೆಗಳಿರುತ್ತವೆ.
Line ೬೨ ⟶ ೬೪:
 
೩ http://www.bantwalnews.com/2017/01/10/%E0%B2%AA%E0%B2%82%E0%B2%9A%E0%B2%B2%E0%B2%BF%E0%B2%82%E0%B2%97%E0%B3%87%E0%B2%B6%E0%B3%8D%E0%B2%B5%E0%B2%B0-%E0%B2%B8%E0%B2%A8%E0%B3%8D%E0%B2%A8%E0%B2%BF%E0%B2%A7%E0%B2%BF%E0%B2%AF%E0%B2%B2%E0%B3%8D/
 
[[ವರ್ಗ: ದೇವಾಲಯಗಳು ]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು ]]
[[ವರ್ಗ: ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು ]]
[[ವರ್ಗ: ದಕ್ಷಿಣ ಕನ್ನಡ ಜಿಲ್ಲೆ ]]