ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
==ದೇವಸ್ಥಾನದ ಇತಿಹಾಸ==
ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವೆಂದು ಸಂಶೋಧಕರು ನಿರ್ಧರಿಸಿದ್ದಾರೆ.
 
ವಿಟ್ಲ ದೇವಸ್ಥಾನದ ಬಗ್ಗೆ ಸಿಗುವ ಮೊದಲ ಉಲ್ಲೇಖ ಕಾರ್ಕಳ ತಾಲೂಕಿನ ಹಚವೆಟ್ಟು ಶಿಲಾಶಾಸನದಲ್ಲಿದೆ. (ಸುಮಾರು ಕ್ರಿ.ಶ.೧೪೦೫ರ ಶಾಸನ.) ವಿಟ್ಲ ಡೊಂಬಹೆಗಡೆ ಮನೆತನದ ಉಲ್ಲೇಖವು ಕ್ರಿ.ಶ. ೧೨೫೭ರ ವಗೆನಾಡು ಶಾಸನದಲ್ಲಿದೆ.(ಆಧಾರ- ಡಾ.ಪುಂಡಿಕಾಯಿ ಗಣಪಯ್ಯ ಭಟ್ ರವರ ’ವಗೆನಾಡು ದೇವಾಲಯದ ಒಂದನೆಯ ವೀರಪಾಂಡ್ಯನ ಶಿಲಾಶಾಸನ’ (ಲೇಖನ) ಸ್ಕಂದ ವೈಭವ (ಸಂ.ಪಾದೇಕಲ್ಲು ವಿಷ್ಣು ಭಟ್ಟ) ೧೯೯೩.
 
ಕ್ರಿ.ಶ. ೧೪೩೬,೧೭೨೭,೧೮೯೪ ರಲ್ಲಿ ಜೀರ್ಣೋಧ್ಧಾರವಾದ ದಾಖಲೆಗಳು ದೇಗುಲದಲ್ಲಿರುವ ಶಿಲಾಶಾಸನಗಳಲ್ಲಿವೆ. ೧೮೯೪ ರಲ್ಲಿ ಅರಮನೆಯ ಅರಸಿ ಸುಭದ್ರಮ್ಮ ಯಾನೆ ದೊಡ್ಡಮ್ಮನವರಾಗಿದ್ದಿರಬೇಕು. ಅವರ ನಂತರ ರವಿವರ್ಮ ನರಸಿಂಹ ರಾಜರು, ಆನಂತರ ಅವರ ಪುತ್ರ ರವಿವರ್ಮ ಕೃಷ್ಣರಾಜರು, ತದನಂತರ ಅವರ ತಮ್ಮ ರಾಮವರ್ಮ ರಾಜರು ಅರಸರಾದರು.
==ಪುನಃ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ==
ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ ದೇವಾಲಯಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ,ಅಷ್ಟಮಂಗಲ ಪ್ರಶ್ನೆಯನ್ನಿರಿಸಿ,ದೋಷಗಳಿದ್ದರೆ ಪರಿಹರಿಸಿ,ನಂತರ ಜೀರ್ಣೋಧ್ಧರಕ್ಕೆ ಆರಂಭಿಸುವುದು ವಾಡಿಕೆ.ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು.ಹೊಸದಾಗಿ ಪುನರಾರಂಭಿಸುವ ದೇವಸ್ಥಾನದ ವಾಸ್ತುಶಿಲ್ಪಿಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. ದೇವಸ್ಥಾನ ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು.ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-ವಿಟ್ಲ ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-ವಿಟ್ಲ, ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು