ಸದಸ್ಯ:Revathikainthaje/ನನ್ನ ಪ್ರಯೋಗಪುಟ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕರ್ನಾಟಕದ, ಬಂಟ್ವಾಳ ತಾಲೂಕಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ....
( ಯಾವುದೇ ವ್ಯತ್ಯಾಸವಿಲ್ಲ )

೧೬:೨೯, ೨೭ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

ಕರ್ನಾಟಕದ, ಬಂಟ್ವಾಳ ತಾಲೂಕಿನ ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ’"ಶ್ರೀ ಪಂಚಲಿಂಗೇಶ್ವರ ದೇವಸ್ಥಾನ""ವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದ ಆಡಳಿತಕ್ಕೊಳಪಟ್ಟಿದೆ.ಸೀಮೆಯ ಮುಖ್ಯಸ್ಥರು ವಿಟ್ಲದ ಅರಸರು.ಹಲವು ಶತಮಾನಗಳ ಇತಿಹಾಸವುಳ್ಳ ""ಡೊಂಬಹೆಗಡೆ"" ಅರಸು ಮನೆತನದವರು ವಿಟ್ಲದ ಅರಸರು.(""ಡೊಂಬಹೆಗಡೆ"" ಎಂಬುದು ವಿಟ್ಲದ ಅರಸರು ಪಡೆಯುತ್ತಿದ್ದ ಬಿರುದು.ಈ ಅರಸು ವರ್ಗದವರಿಗೆ ""ಬಲ್ಲಾಳ"" ಎಂಬುದು ಉಪನಾಮ.)ಸೀಮೆಯ ಅರಸರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು.ವಿಟ್ಲದ ಜಾತ್ರೆ ಮುಖ್ಯ ಉತ್ಸವ.

ಸ್ಥಳೈತಿಹ್ಯ

ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು.ಭೀಮ ಅವನನ್ನು ಕೊಂದುದು ಅಲ್ಲಿಯೇ.ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ’ನೆತ್ತರುಕೆರೆ’ ಉಂಟಾಯಿತು.(ಕಳಂಜಿಮಲೆ ಹಾಗೂ ನೆತ್ತರುಕೆರೆ ವಿಟ್ಲದ ಆಸುಪಾಸಿನ ಸ್ಥಳಗಳು.)

ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ ಪಾಂಡವರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ.ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ಇಚ್ಛಿಸಿ,ಕಾಶಿಯಿಂದ ಲಿಂಗಗಳನ್ನು ತರಲು,ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಳುಹಿಸಿದರು.