ಅಷ್ಟಾದಶ ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧೫ ನೇ ಸಾಲು:
ಶಿವನ ವಿವಿಧ ರೂಪಗಳ-ಹೆಚ್ಚಾಗಿ ಲಿಂಗರೂಪದ - ಪೂಜೆಯನ್ನು ಮುಖ್ಯವಾಗಿ ವಿವರಿಸುತ್ತದೆ. ದೇವದಾರುವನಕ್ಕೊಮ್ಮೆ ಶಿವ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿಪತ್ನಿಯರು ಮರುಳಾದರು. ಆಗ ಲಿಂಗವಾಗೆಂದು ಶಿವನಿಗೆ ಋಷಿಗಳು ಶಾಪಕೊಟ್ಟರು. ಶಿವನಿಗಿಲ್ಲಿ 28 ಅವತಾರಗಳನ್ನು ಹೇಳಲಾಗಿದೆ. ತಂತ್ರಗಳ ಪ್ರಭಾವ ಈ ಪುರಾಣದ ಮೇಲೆ ಬಿದ್ದಿರುವುದನ್ನು ಕೆಲವೆಡೆ ಕಾಣಬಹುದು.
* ಒಟ್ಟಿನಲ್ಲಿ ಇದು ಅಷ್ಟೇನೂ ಪ್ರಾಚೀನ ಪುರಾಣವಲ್ಲ. ಪ್ರ.ಶ. 8ನೆಯ ಶತಮಾನಕ್ಕೂ ಈಚಿನದು. ಶ್ಲೋಕಸಂಖ್ಯೆ 11000. ಬಲ್ಲಾಳಸೇನನ ಪ್ರಕಾರ ಮತ್ಸ್ಯಪುರಾಣದಲ್ಲಿರುವ ಗಾತ್ರವನ್ನು ಹೆಚ್ಚಿಸಲಾಯಿತು. ಇದರಲ್ಲಿ ಕಥನವಸ್ತುಗಳಿಲ್ಲ, ಕರ್ಮಕಾಂಡದ ಅಂಶಗಳು ತುಂಬಿಕೊಂಡಿವೆ.
===[[ವರಾಹ ಮಹಾಪುರಾಣ]]===
*ವಿಷ್ಣು ವರಾಹಾವತಾರವನ್ನು ತಾಳಿ ಭೂದೇವಿಯನ್ನು ಉದ್ಧರಿಸುವ ಅಂಶವನ್ನು ಹೇಳುತ್ತದೆ. ಇದರಲ್ಲಿ ಸೃಷ್ಟಿಕ್ರಮ, ವಂಶ ವೃಕ್ಷಗಳ ವಿಷಯಗಳು ಬಂದಿದ್ದರೂ ಒಟ್ಟಿನಲ್ಲಿ ಇದು ವಿಷ್ಣುವಿನ ಸ್ತೋತ್ರ, ಪ್ರಾರ್ಥನೆ, ಪೂಜೆ ಪುರಸ್ಕಾರಗಳ ಬಗೆಯನ್ನು ಹೇಳಲು ಮೀಸಲಾದ ಪುರಾಣ. ಹೀಗಿದ್ದರೂ ಇದರಲ್ಲಿ ಶಿವ, ದುರ್ಗೆಯರ ಕಥೆಗಳಿವೆ. ಮಾತೃದೇವತೆಗಳ ಹಾಗೂ ಇತರ ಸ್ತ್ರೀದೇವತೆಗಳ ವಿಸ್ತಾರವನ್ನು ಅನೇಕ ಅಧ್ಯಾಯಗಳಲ್ಲಿ ವಿಶದಪಡಿಸಲಾಗಿದೆ. ಗಣೇಶೋತ್ಪತ್ತಿ, ಗಣೇಶಸ್ತೋತ್ರಗಳೂ ಇಲ್ಲಿವೆ.
*ಇಷ್ಟೇ ಅಲ್ಲ, ಶ್ರಾದ್ಧ, ಪ್ರಾಯಶ್ಚಿತ್ತ, ದೇವತಾಮೂರ್ತಿ ಪ್ರತಿಷ್ಠೆ, ಮಥುರಾಮಾಹಾತ್ಮ್ಯಗಳೂ, [[ನಚಿಕೇತ]] ವೃತ್ತಾಂತ. ಸ್ವರ್ಗ, ನರಕವರ್ಣನೆ ಮುಂತಾದವೂ ಪುರಾಣಕಕ್ಷೆಯಲ್ಲಿ ಬಂದಿವೆ. ಶ್ಲೋಕಸಂಖ್ಯೆ 24000ವೆಂದು ಪ್ರಸಿದ್ಧಿಯಿದ್ದರೂ ವಾಸ್ತವಿಕವಾಗಿ ಇದರಲ್ಲಿ 10000ಕ್ಕಿಂತ ಬಹಳ ಹೆಚ್ಚಾಗಿಲ್ಲ. ಕ್ರಿ.ಶ. 8ನೆಯ ಶತಮಾನದಲ್ಲಿದ್ದ ಇದರ ಮೂಲ ಸ್ವರೂಪ ಅನುಪಲಬ್ಧ. ಸದ್ಯದ ಸ್ವರೂಪದ ಕಾಲ ಪ್ರ.ಶ. 12ನೆಯ ಶತಮಾನದ ಆದಿಭಾಗವೆನ್ನಬಹುದು. ಇದು ಮೂಲದ ಕೆಲ ಅಧ್ಯಾಯಗಳನ್ನೊಳಗೊಂಡಿದೆ.
===[[ಸ್ಕಂದಪುರಾಣ]]===
*ಸ್ಕಂದಪ್ರೋಕ್ತವಾದುದು. ಶೈವತತ್ತ್ವಗಳಿದರಲ್ಲಿವೆ. ಈ ಹೆಸರಿನ ಪ್ರಾಚೀನಪುರಾಣವೀಗ ಅನುಪಲಬ್ಧ. ಸ್ಕಂದಪುರಾಣದ ಸಂಹಿತೆಗಳೆಂದೂ ಖಂಡಗಳೆಂದೂ ಹೇಳಿಕೊಳ್ಳುವ ಅನೇಕ ಕೃತಿಗಳಿದ್ದರೂ ಸ್ಕಂದಪುರಾಣವೆಂಬ ಹೆಸರುಳ್ಳ ಉಪಲಬ್ಧ ಪ್ರಾಚೀನಪ್ರತಿಯಲ್ಲಿ ಅವುಗಳಲ್ಲಾವುದೂ ಅಡಕವಾಗಿಲ್ಲ. ಇದರ ಪ್ರಾಚೀನ ಮೂಲದಲ್ಲಿ 81800 ಶ್ಲೋಕಗಳಿದ್ದುವೆಂದು ಹೇಳಿಕೆ. ಅದರ ಅಭಾವದಲ್ಲಿ ಅದಕ್ಕೀ ಉಪಲಬ್ಧ ಪ್ರತಿ ಎಲ್ಲ ಅಂಶಗಳಲ್ಲೂ ಸರಿಯಾಗಿ ಹೊಂದುತ್ತದೆಂದು ಹೇಳಲು ಸಾಧ್ಯವಿಲ್ಲ.
*ಸ್ಕಂದಪುರಾಣಕ್ಕೆ ಸೇರಿದುವೆಂದು ಹೇಳಿಕೊಳ್ಳುವ ಎಲ್ಲ ಕೃತಿಗಳ ಶ್ಲೋಕಗಳನ್ನೂ ಸೇರಿಸಿದರೆ 81800ಕ್ಕೂ ಹೆಚ್ಚು ಶ್ಲೋಕಗಳಾಗುತ್ತವೆ. ಉಪಲಬ್ಧ ಪ್ರತಿಯಲ್ಲಿ ಶಿವ, ಅಂಧಕಾಸುರರ ಯುದ್ಧಗಳೂ ನರಕ, ಸಂಸಾರ, ಯೋಗಗಳ ವಿವರಗಳೂ ಬಂದಿದ್ದರೂ ಪುರಾಣ ಪಂಚಲಕ್ಷಣಗಳು ಕಂಡುಬರುವುದಿಲ್ಲ. ಇದಕ್ಕೆ ಆರು ಸಂಹಿತೆಗಳು : ಸನತ್ಕುಮಾರೀಯ, ಸೂತ, ಬ್ರಾಹ್ಮೀ, ವೈಷ್ಣವೀ, ಶಾಂಕರೀ, ಸೌರಿ ಸಂಹಿತೆಗಳೆಂದು. ಸನತ್ಕುಮಾರೀಯಸಂಹಿತೆ ಕಾಶಿಯ ಪವಿತ್ರಸ್ಥಳಗಳು ಮತ್ತು ಇತರ ಶೈವಕಥೆಗಳನ್ನು ಹೇಳುತ್ತದೆ.
"https://kn.wikipedia.org/wiki/ಅಷ್ಟಾದಶ_ಪುರಾಣಗಳು" ಇಂದ ಪಡೆಯಲ್ಪಟ್ಟಿದೆ