ಸಾಂಖ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೭ ನೇ ಸಾಲು:
::::'''ಸಾಂಖ್ಯ ದರ್ಶನ ಹೆಚ್ಚಿನ ವಿವರ'''
:ಸಾಂಖ್ಯ ದರ್ಶನವು ಮೇಲೆ ತಿಳಿಸಿದಂತೆ ಅತ್ಯಂತ ಪ್ರಾಚೀನವದುದು. ಪ್ರಾಚೀನ ಉಪನಿಷತ್ (ಕಠ, ಶ್ವೇತಾಶ್ವೇತರ) ಪುರಾಣ, ಗೀತೆಗಳಲ್ಲಿ ಉಲ್ಲೇಖವಗಿದೆ. [[ಆದಿ ಶಂಕರ| ಶ್ರೀ ಶಂಕರಾಚಾರ್ಯರು]] ಸಾಂಖ್ಯವನ್ನು ಪ್ರಧಾನ ಮಲ್ಲ, ಪ್ರಧಾನ ಪ್ರತಿಕಕ್ಷಿ ಎಂದಿದ್ದಾರೆ. ವೇದಾಂತ / ಭಾರತೀಯ ತತ್ವಶಾಸ್ತ್ರದ ದರ್ಶನಗಳೆಲ್ಲವೂ ಸಾಂಖ್ಯರ ಪ್ರಪಂಚ ವಿಕಾಸ ಕ್ರಮವನ್ನು ಒಪ್ಪುತ್ತಾರೆ.
:[[ಕಪಿಲ]] ಮುನಿಯು ಈ ಪಂಥದ/ದರ್ಶನದ ಪ್ರವರ್ತಕ. ಅವನು '''ಆದಿ ವಿದ್ವಾನ್''' ಎಂದು ಹೆಸರು ಪಡೆದಿದ್ದಾನೆ. ಅವನ ಮೂಲ ಬರೆಹದ ಕೃತಿ ಸಿಕ್ಕಿಲ್ಲ . ಈಗ ಲಭ್ಯವಿರುವ ಕೃತಿಗಳಲ್ಲಿ '''ಈಶ್ವರ ಕೃಷ್ಣನ ಸಾಂಖ್ಯ ಕಾರಿಕಾ''' ಪ್ರಾಚೀನವಾದುದು. ಅದು ಸುಮಾರು ಕ್ರಿ. ಶ. ೫ ನೇ ಶತಮಾನದ್ದೆಂದು ಹೇಳಲಾಗಿದೆ. (ಕ್ರಿ.ಶ.೨ ನೇ ಶತಮಾನದ್ದಿರಬಹುದೆಂಬ ವಾದವೂ ಇದೆ.)
:'''ಸಾಂಖ್ಯ''' ಎಂಬುದಕ್ಕೆ ಸಂಖ್ಯಾ ಎಂಬುದು ಮೂಲ ಪದ. ಇದಕ್ಕೆ ಜ್ಞಾನ, ಪರಿಗಣನೆ ಎಂಬ ಅರ್ಥ ಇದೆ. ಈ ದರ್ಶನದ ಪ್ರವರ್ತಕರು ಒಟ್ಟು ೨೩+ ಪುರುಷ =೨೪( ಆತ್ಮ+ ಇಪ್ಪತ್ತೈದು ;ಆದರೆ ಆತ್ಮ ತ್ತ್ವವನ್ನು ಒಪ್ಪಿಲ್ಲ ) ತತ್ವಗಳು ಎಂದು ಮೊದಲು ಹೇಳಿದವರು . ಜ್ಞಾನ ಮೋಕ್ಷಕ್ಕೆ ಕಾರಣ ಎಂದು ಹೇಳಿದ ಕಾರಣ ,ಇದು ದರ್ಶನ - ಈಎರಡೂ ಕಾರಣದಿಂದ,'''ಸಾಂಖ್ಯ ದರ್ಶನ''' ಎಂಬ ಹೆಸರು ಪಡೆದಿದೆ.
:ಭೋಗ ಮತ್ತು ಅಪವರ್ಗ (ವೈರಾಗ್ಯ/ಮೋಕ್ಷ) ಗಳನ್ನು ಜೀವನದ ಮೌಲ್ಯಗಳೆಂದು ಸಾಂಖ್ಯವು ಗುರುತಿಸಿದೆ (ಕಪಲಮುನಿ ಮತ್ತು ಅಸುರಿಯ ಕಥೆ)ಭೋಗವನ್ನು ಪೂರ್ತಿ ಅನುಭವಿಸಿದ ಮೇಲೆ ವಿರಕ್ತಿ ಹುಟ್ಟುತ್ತದೆ ; ಆದ್ದರಿಂದ ಸಂಸಾರ ಸುಖ ಅನುಭವಿಸಿದ ನಂತರ ತತ್ವದ ಬೀಜ ಬಿತ್ತಬೇಕೆಂಬುದು ಇವರ ಮತ.
 
"https://kn.wikipedia.org/wiki/ಸಾಂಖ್ಯ" ಇಂದ ಪಡೆಯಲ್ಪಟ್ಟಿದೆ