ನೈಸರ್ಗಿಕ ಆಯ್ಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ವರ್ಗೀಕರಣ ತಿದ್ದುಪಡಿ
unsupported file option
೧೨ ನೇ ಸಾಲು:
 
ಯುನೈಟೆಡ್‌ ಕಿಂಗ್‌ಡಂಮ್‌ನಲ್ಲಿನ ಚುಕ್ಕೆ ಪತಂಗಗಳು ತಿಳಿ ಮತ್ತು ದಟ್ಟ (ಕಪ್ಪು) ಎರಡು ಬಣ್ಣಗಳಲ್ಲಿ ‌ಇವೆ. [[ಕೈಗಾರಿಕಾ ಕ್ರಾಂತಿ]] ಸಮಯದಲ್ಲಿ ಈ ಪತಂಗಗಳು ಕುಳಿತಿಕೊಳ್ಳುವ ಮರಗಳು ಹೊಗೆಮಸಿಯಿಂದ ಕಪ್ಪಾದವು ಮತ್ತು ಇದು ದಟ್ಟ ಬಣ್ಣದ ಪತಂಗಗಳಿಗೆ ಅನುಕೂಲವಾಗಿ ಪರಿಣಮಿಸಿತು. ಇದು ದಟ್ಟ ಬಣ್ಣದ ಪತಂಗಗಳು ಬದುಕುಳಿಯುವ ಮತ್ತು ದಟ್ಟ ಬಣ್ಣದ ಸಂತತಿಯನ್ನು ಉತ್ಪನ್ನ ಮಾಡುವ ಅವಕಾಶವನ್ನು ಹೆಚ್ಚಾಗಿಸಿತು. ಮೊದಲ ಕಪ್ಪು ಬಣ್ಣದ ಪತಂಗವನ್ನು ಹಿಡಿದ ಐವತ್ತು ವರುಷಗಳಲ್ಲಿಯೇ ಕೈಗಾರಿಕ ಪ್ರದೇಶ ಮ್ಯಾಂಚೆಸ್ಟರ್‌ನ ಬಹುತೇಕ ಎಲ್ಲ ಪತಂಗಗಳೂ ದಟ್ಟ ಬಣ್ಣದವೇ ಆಗಿದ್ದವು. ಈ ಸಮತೋಲನ ೧೮೫೬ರ <i>ಕ್ಲೀನ್ ಏರ್ ಆಕ್ಟ್‌</i>ನ ಪರಿಣಾಮವಾಗಿ ವಿರುದ್ಧ ದಿಕ್ಕಿನೆಡೆ ತುಡಿಯಿತು, ನೈಸರ್ಗಿಕ ಆಯ್ಕೆಯ ಪರಿಣಾಮವಾಗಿ ಚುಕ್ಕೆ ಪಂತಗಗಳ ವಿಕಾಸವನ್ನು ಸೂಚಿಸುತ್ತಾ ಮತ್ತೆ ದಟ್ಟ ಬಣ್ಣದ ಪತಂಗಗಳು ವಿರಳವಾದವು.<ref> Miller, Kenneth R. (August 1999). "The Peppered Moth - An Update". millerandlevine.com. Rehoboth, MA: Miller And Levine Biology. Retrieved 2011-04-13.</ref>
[[file: Lichte_en_zwarte_versie_berkenspanner.jpg|thumb|left|upload=0.50|ಟಿಪಿಕಾ ರೂಪದ ಮತ್ತು ಕಾರ್‌ಬೋನೇರಿಯ ರೂಪದ ಎರಡು ಚುಕ್ಕೆ ಪತಂಗಗಳು ಒಂದೇ ಮರದ ಮೇಲೆ ಕುಳಿತಿವೆ. ತಿಳಿ ಬಣ್ಣದ ಟಿಪಿಕಾ ರೂಪದ್ದನ್ನು (ತೊಗಟೆಯ ಗುರುತಿನ ಕೆಳಗೆ) ಮಾಲಿನ್ಯಕ್ಕೆ ತುತ್ತಾಗದ ಮರದ ಮೇಲೆ ಗುರುತಿಸುವುದು ಕಷ್ಟ, ಹೀಗಾಗಿ ಅದು ಪರಭಕ್ಷಕಗಳಿಂದ ಮರೆಯಾಗಿದೆ.]]
ಜೀವಿಗಳಿಗೆ ಸಂತಾನೋತ್ಪತ್ತಿಯ ಅನುಕೂಲವನ್ನು ಕೊಡುವ ಈ ಗುಣಗಳು ನಂತರದ ಪೀಳಿಗೆಗೆ ದತ್ತವಾಗಬಲ್ಲವು ಸಹ. ಅಂದರೆ ಜನ್ಮದಾತದಿಂದ ಸಂತತಿಗೆ ದಾಟಿಹೋಗ ಬಲ್ಲವು ಸಹ. ಇದು ನಂತರದ ಪೀಳಿಗೆಯಲ್ಲಿ ವೇಗವಾಗಿ ಓಡುವ ಮೊಲಗಳ ಅಥವಾ ಹೆಚ್ಚಿನ ಕಾರ್ಯಕ್ಷಮತೆ ಇರುವ ಪಾಚಿಗಳ ಇರುವಿಕೆಯನ್ನು ತುಸು ಹೆಚ್ಚಾಗಿಸುತ್ತದೆ. ಇದನ್ನು <i>ಸಂತಾನೋತ್ಪತ್ತಿಯ ವ್ಯತ್ಯಾಸ</i> ಎಂದು ಕರೆಯಲಾಗಿದೆ. ಸಂತಾನೋತ್ಪತ್ತಿಯ ಅನುಕೂಲ ಸ್ವಲ್ಪವೇ ಹೆಚ್ಚಾಗಿದ್ದಾಗಲೂ ಜನಸಂಖ್ಯೆಯಲ್ಲಿನ ಮುಂದಿನ ಸಂತತಿಗೆ ಕೊಡಲ್ಪಟ್ಟ ಗುಣ ಹಲವು ಪೀಳಿಗೆಗಳಲ್ಲಿ ಅಧಿಕ್ಯತೆ ಪಡೆಯುತ್ತದೆ. ಈ ರೀತಿ ನೈಸರ್ಗಿಕ ಪರಿಸರವು ನಿರ್ದಿಷ್ಟ ಗುಣಗಳ ಮೂಲಕ ಸಂತಾನೋತ್ಪತ್ತಿಯ ಅನುಕೂಲ ಪಡೆದ ಜೀವಿಯನ್ನು “ಆಯ್ಕೆ” ಮಾಡಿಕೊಳ್ಳುತ್ತದೆ ಮತ್ತು ನಿಧಾನವಾದ ಬದಲಾವಣೆಗಳಿಗೆ ಅಥವಾ ಜೀವಿಯ ವಿಕಾಸಕ್ಕೆ ಕಾರಣವಾಗುತ್ತದೆ. ಈ ಪರಿಣಾಮವನ್ನು ಮೊದಲು ಹೆಸರಿಸಿ, ವಿವರಿಸಿದುದು ಚಾರ್ಲ್ಸ್ ಡಾರ್ವಿನ್.
 
೬೬ ನೇ ಸಾಲು:
ಒಂದು ಲಿಂಗದಲ್ಲಿ ವ್ಯಕ್ತನಮೂನೆಯ ಗುಣಗಳನ್ನು ಪ್ರದರ್ಶಸಿಸ ಬಹುದು ಮತ್ತು ಅವು ಇನ್ನೊಂದು ಲಿಂಗದ ಬಯಕೆಯೂ ಆಗಬಹುದು. ಆಗ ಅದು ಫಿಶೇರಿಯನ್‌ ರನ್‌ಅವೇ ಎಂದು ಕರೆಯಲಾದ ಧನಾತ್ಮಕ ಪ್ರತ್ಯಾದಾನ (ಪಾಸಿಟಿವ್ ಫೀಡ್‌ಬ್ಯಾಕ್) ಲೂಪಿಗೆ<ref group=ಟಿಪ್ಪಣಿ>ಲೂಪು-ಮತ್ತೆ ಮತ್ತೆ ಕುಣಿಕೆಯಲ್ಲಿಯಂತೆ ಪುನರಾವರ್ತನೆಯಾಗುವುದು</ref> ಕಾರಣವಾಗುತ್ತದೆ. ಉದಾಹರಣೆ: ಕೆಲವೊಂದು ಗಂಡು ಹಕ್ಕಿಗಳಲ್ಲಿ ಕಂಡು ಬರುವ ಅತಿಯಾದ ಗರಿಗಳು. ರೊನಾಲ್ಡ್ ಫಿಷರ್ ೧೯೩೦ರಲ್ಲಿ ಬದಲೀ ಸಿದ್ಧಾಂತವನ್ನು ಮುಂದಿಟ್ಟ ಅದನ್ನು ರಸಿಕ ಮಗನ ಊಹನ (ಹೈಪೋಥೀಸಿಸ್) ಎಂದು ಕರೆದ. ಇದರ ಪ್ರಕಾರ ತಾಯಂದಿರು ದೊಡ್ಡ ಸಂಖ್ಯೆಯ ಮೊಮ್ಮಕ್ಕಳನ್ನು ಪಡೆಯಲು ಬಯಸುತ್ತಾರೆ ಮತ್ತು ಹೀಗಾಗಿ ಲಂಪಟ ತಂದೆಯನ್ನು ಆಯ್ದುಕೊಳ್ಳುತ್ತಾರೆ. ಒಂದೇ ಲಿಂಗದ ಸದಸ್ಯರ ನಡುವಿನ ಆಕ್ರಮಣಕಾರಿ ಪ್ರವೃತ್ತಿಯು ಕೆಲವೊಮ್ಮೆ ವಿಶಿಷ್ಟ ಲಕ್ಷಣಗಳೊಂದಿಗೆ ಸೇರಿಕೊಂಡಿದೆ, ಉದಾಹರಣೆಗೆ ಇನ್ನೊಂದು ಕಡವೆಯೊಂದಿಗೆ (ಕವಲುಗೊಂಬು ಇರುವ ಗಂಡು ಜಿಂಕೆ) ಸೆಣಸಲು ಬಳಸುವ ಕವಲುಗೊಂಬು. ಭಿನ್ನ ಲಿಂಗಗಳ ನಡುವಿನ ಆಯ್ಕೆ ಇರುವಲ್ಲಿ ಬಹಳಷ್ಟು ಸಲ ಗಂಡುಹೆಣ್ಣುಗಳ ನಡುವೆ ದ್ವಿರೂಪತೆಯೂ ಇರುತ್ತದೆ. ಇಂತಹ ವ್ಯತ್ಯಾಸಗಳಲ್ಲಿ ಒಂದೇ ಜೀವಸಂಕುಲದ ಗಂಡು ಹೆಣ್ಣುಗಳ ನಡುವೆ ದೇಹಗಾತ್ರದ ವ್ಯತ್ಯಾಸವೂ ಸೇರಿದೆ.<ref> Barlow, George W. (March 2005). "How Do We Decide that a Species is Sex-Role Reversed?". The Quarterly Review of Biology (Chicago, IL: University of Chicago Press) 80 (1): 28–35. doi:10.1086/431022. ISSN 0033-5770. PMID 15884733.</ref>
===ನೈಸರ್ಗಿಕ ಆಯ್ಕೆಯ ಉದಾಹರಣೆಗಳು===
[[file: Antibiotic_resistance.svg|thumb|right|upload=0.50|ಪ್ರತಿಜೀವಿಕಗಳ ನಿರೋಧವು ಪ್ರತಿಜೀವಕಗಳ ಪರಿಣಾಮಕ್ಕೆ ವಿನಾಯತಿ ಪಡೆದ ಜೀವಿಗಳ ಬದುಕುಳಿಯುವಿಕೆಯ ಮೂಲಕ ಹೆಚ್ಚಾಗುತ್ತದೆ. ಇವುಗಳ ಸಂತತಿ ನಿರೋಧವನ್ನು ಪಡೆದಿದ್ದು ಹೊಸ ನಿರೋಧಪಡೆದ ಜನಸಂಖ್ಯೆಯನ್ನು ಹುಟ್ಟುಹಾಕುತ್ತದೆ.]]
ಸುಪರಿಚಿತವಾದ ನೈಸರ್ಗಿಕ ಆಯ್ಕೆಯು ಕೆಲಸ ಮಾಡವುದನ್ನು ಸೂಕ್ಷ್ಮಜೀವಿಗಳಲ್ಲಿ [[ಪ್ರತಿಜೀವಕ ನಿರೋಧಕಶಕ್ತಿ]] ಬೆಳೆಯುವುದರಲ್ಲಿ ನೋಡಬಹುದು. ೧೯೨೮ರಲ್ಲಿ ಪೆನ್ಸಿಲಿನ್ ಅವಿಷ್ಕಾರದಿಂದ ಹಿಡಿದು ಆರಂಭಿಸಿ ಪ್ರತಿಜೀವಕಗಳನ್ನು [[ಬ್ಯಾಕ್ಟೀರಿಯ]] ರೋಗಗಳ ಶಮನಕ್ಕೆ ಬಳಸಲಾಗುತ್ತಿದೆ. ನೈಸರ್ಗಿಕ ಜನಸಂಖ್ಯೆಯು ಬ್ಯಾಕ್ಟೀರಿಯದ ದೊಡ್ಡ ಸಂಖ್ಯೆಯ ಜೀವಿಗಳು ಇದ್ದು ಅವುಗಳಲ್ಲಿ ಪ್ರಧಾನವಾಗಿ [[ವ್ಯತ್ಯಯನ|ವ್ಯತ್ಯಯನಗಳ]] ಕಾರಣಕ್ಕೆ ಅನುವಂಶಿಕತೆಯ ಪದಾರ್ಥದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಪ್ರತಿಜೀವಕಕ್ಕೆ ಬ್ಯಾಕ್ಟೀರಿಯಗಳನ್ನು ಒಡ್ಡಿದಾಗ ಅವುಗಳಲ್ಲಿ ಬಹಳಷ್ಟ ಜೀವಿಗಳು ತಕ್ಷಣವೇ ಸಾಯುತ್ತವೆ. ಆದರೆ ಅವುಗಳಲ್ಲಿ ಕೆಲವದರಲ್ಲಿ ವ್ಯತ್ಯಯನಗಳು ಇದ್ದ ಕಾರಣಕ್ಕೆ ಸ್ವಲ್ಪಮಟ್ಟಿಗೆ ಕಡಿಮೆ ಪ್ರಭಾವಕ್ಕೆ ಒಳಗಾಗ ಬಹುದು. ಪ್ರತಿಜೀವಕಗಳಿಗೆ ಒಡ್ಡುವಿಕೆ ಕಡಿಮೆ ಸಮಯದ್ದಾಗಿದ್ದಲ್ಲಿ ಇಂತಹವುಗಳು ಚಿಕಿತ್ಸೆಯಲ್ಲಿ ಉಳಿದುಕೊಳ್ಳ ಬಹುದು. ಹೀಗೆ ಹೊಂದಿಕೊಳ್ಳಲಾಗದ ಆಯ್ದ ಜೀವಿಗಳು ಜನಸಂಖ್ಯೆಯಿಂದ ಹೊರದೂಡುವುದು ನೈಸರ್ಗಿಕ ಆಯ್ಕೆ.
 
೮೩ ನೇ ಸಾಲು:
 
ಕೆಲವು ವ್ಯತ್ಯಯನಗಳು ‌ನಿಯಂತ್ರಕ ವಂಶವಾಹಿಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳು ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ ಏಕೆಂದರೆ ಅವು ಇತರ ಹಲವು ವಂಶವಾಹಿಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತವೆ. ಬಹಳಷ್ಟು (ಆದರೆ ಎಲ್ಲವೂ ಅಲ್ಲ) ನಿಯಂತ್ರಕ ವಂಶವಾಹಿಗಳ ವ್ಯತ್ಯಯನಗಳು ಬದುಕುಳಿಯದ ಯುಗ್ಮಜಗಳಲ್ಲಿ<ref group=ಟಿಪ್ಪಣಿ name=A /> ಕೊನೆಗೊಳ್ಳುತ್ತವೆ. ಮಾನವನಲ್ಲಿನ ಹೆಚ್‌ಒಎಕ್ಸ್‌ವಂಶವಾಹಿಗಳ ಮಾರಕವಲ್ಲದ ನಿಯಂತ್ರಕ ವ್ಯತ್ಯಯನವು ಸೆರ್ವಿಕಲ್ ಪಕ್ಕೆಲುಬು<ref> Galis, Frietson (April 1999). "Why do almost all mammals have seven cervical vertebrae? Developmental constraints, Hox genes, and cancer". Journal of Experimental Zoology (Hoboken, NJ: Wiley-Blackwell) 285 (1): 19–26. doi:10.1002/(SICI)1097-010X(19990415)285:1<19::AID-JEZ3>3.0.CO;2-Z. ISSN 1932-5223. PMID 10327647.</ref> ಅಥವಾ ಪಾಲಿಡಕ್ಟೈಲಿ -ಕೈ ಕಾಲಿನ ಬೆರಳುಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುವುದನ್ನು ಉದಾಹರಿಸ ಬಹುದು.<ref> Zákány, József; Fromental-Ramain, Catherine; Warot, Xavier; Duboule, Denis (December 9, 1997). "Regulation of number and size of digits by posterior Hox genes: A dose-dependent mechanism with potential evolutionary implications". Proc. Natl. Acad. Sci. U.S.A. (Washington, D.C.: National Academy of Sciences) 94 (25): 13695–13700. doi:10.1073/pnas.94.25.13695. ISSN 0027-8424. PMC 28368. PMID 9391088.</ref> ಇಂತಹ ವ್ಯತ್ಯಯನಗಳು ಹೆಚ್ಚಿನ ಯೋಗ್ಯತೆಗೆ ಕಾರಣವಾದರೆ ನೈಸರ್ಗಿಕ ಆಯ್ಕೆಯು ಇಂತಹ ವ್ಯಕ್ತನಮೂನೆಯ ಪರವಾಗಿ ಪಕ್ಷಪಾತ ವಹಿಸುತ್ತವೆ ಮತ್ತು ಈ ಹೊಸ ಗುಣವು ಜನಸಂಖ್ಯೆಯಲ್ಲಿ ಹರಡುತ್ತದೆ.
[[File: Polydactyly_01_Lhand_AP.jpg|thumb|right|upload=0.75|ಪಾಲಿಡಕ್ಟೈಲಿ ವ್ಯಯತ್ಯಯನ ಹೊಂದಿದ ಹತ್ತು ವರುಷದ ಹುಡುಗನ ಎಡಗೈಯ ಎಕ್ಸ್‌-ರೇ.]]
 
ಸ್ಥಾಪಿತ ಗುಣಗಳು ಬದಲಾಗದೆ ಇರುವುದಿಲ್ಲ. ಒಂದು ಪರಿಸರದಲ್ಲಿ ಹೆಚ್ಚು ಯೋಗ್ಯತೆ ಎನಿಸಿದ ಗುಣಗಳು ಇನ್ನೊಂದು ಬದಲಾದ ಪರಿಸರದಲ್ಲಿ ಕಡಿಮೆ ಯೋಗ್ಯತೆಯಾಗ ಬಹುದು. ಇಂತಹ ಗುಣವು ನೈಸರ್ಗಿಕ ಆಯ್ಕೆಯ ಗೈರು ಹಾಜರಿಯಲ್ಲಿ ಹೆಚ್ಚು ಬದಲಾವಣೆಗೊಳಗಾಗಿ ಮತ್ತು ಕೆಲಕಾಲದಲ್ಲಿ ಕೆಟ್ಟುಹೋಗಿ ಆ ಗುಣದ ಕೇವಲ ಕುರುಹಾಗಿ ಉಳಿದುಕೊಳ್ಳ ಬಹುದು. ಆಗ ಇದನ್ನು ವಿಕಸನೀಯ ಗತಕಾಲದ ಗುರುತು ಎಂದು ಕರೆಯಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಕುರುಹಾಗಿ ಉಳಿದ ರಚನೆ ಮಿತಿಗೊಂಡ ಕಾರ್ಯನಿರ್ವಹಿಸ ಬಹುದು ಅಥವಾ ಬೇರೆ ಉಪಯುಕ್ತ ಗುಣವನ್ನು ಪ್ರತಿನಿಧಿಸ ತೊಡಗಬಹುದು (ಅದನ್ನು ಪ್ರಿಅಡಾಪ್ಟೇಶನ್ ಅಥವಾ ಎಕ್ಸಾಪ್ಟೇಶನ್ ಎಂದು ಕರೆಯಲಾಗುತ್ತದೆ). ಪ್ರಸಿದ್ಧ ಉದಾಹರಣೆ ಕುರುಡು ಮೋಲ್-ಇಲಿಯ ಕಣ್ಣಿನ ಕುರುಹಾಗಿ ಉಳಿದ ರಚನೆ. ಇವು ಬೆಳಕಿನ ಅವಧಿಯನ್ನು ಗ್ರಹಿಸುವ ಕಾರ್ಯವನ್ನು ಉಳಿಸಿಕೊಂಡಿವೆ ಎಂದು ಹೇಳಲಾಗಿದೆ.<ref> Sanyal, Somes; Jansen, Harry G.; de Grip, Willem J.; Nevo, Eviatar; et al. (July 1990). "The Eye of the Blind Mole Rat, Spalax ehrenbergi. Rudiment With Hidden Function?". Investigative Ophthalmology & Visual Science (Association for Research in Vision and Ophthalmology) 31 (7): 1398–1404. ISSN 0146-0404. PMID 2142147. Retrieved 2015-07-2</ref>
"https://kn.wikipedia.org/wiki/ನೈಸರ್ಗಿಕ_ಆಯ್ಕೆ" ಇಂದ ಪಡೆಯಲ್ಪಟ್ಟಿದೆ