ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕ್ಲೀನ್ ಅಪ್
ಚು ಕೊಂಡಿ ಸೇರ್ಪಡೆ: ಮಾಸ್ಟರ್ ಮಂಜುನಾಥ್
೧೬ ನೇ ಸಾಲು:
ಜೊತೆಗೆ ಸ್ಯಾಟಿನ್‌ಳನ್ನು ಬೆನ್ನು ಹತ್ತುವ ತಿಕ್ಕಲ ಡ್ಯೂಕ್‌ನ ಕಥೆಯೂ ಇದೆ. ಸ್ಯಾಟಿನ್ ಪಾತ್ರವನ್ನು ಪ್ರಸಿದ್ಧ ಹಾಲಿವುಡ್ ನಟಿ ನಿಕೋಲೆ ಕಿಡ್ಮನ್ ವಹಿಸಿದ್ದಾಳೆ. ಅದೇ ಚಿತ್ರದಲ್ಲಿ ಮತ್ತೊಂದು ಚಿತ್ರದ ಕತೆಯೂ ಅಡಕಗೊಂಡಿದೆ. ‘ಸ್ಪೆಕ್ಟಾಕ್ಯುಲರ್ ಸ್ಪೆಕ್ಟಾಕ್ಯುಲರ್’ ಎಂಬ ನಾಟಕದ ಆ ಕತೆಯು ‘ಮೃಚ್ಛಕಟಿಕಂ’ ನಾಟಕದ ಸಂಕ್ಷಿಪ್ತ ರೂಪ!
 
‘ಮೃಚ್ಛಕಟಿಕಂ’ ನಾಟಕಕ್ಕೂ ಕರ್ನಾಟಕಕ್ಕೂ ವಿಚಿತ್ರ • ಸಂಬಂಧವಿರುವ ಹಾಗೆ ಕಾಣುತ್ತದೆ. ಇದೇ ಕೃತಿಯನ್ನು ಆಧರಿಸಿ ಹಿಂದಿ ನಟ ಶಶಿಕಪೂರ್ ಅವರು ‘ಉತ್ಸವ್’ (೧೯೮೪) ಚಿತ್ರ ನಿರ್ಮಿಸಿದ್ದರು. ನಿರ್ದೇಶಕರು ನಮ್ಮ ನಾಟಕಕಾರರೇ ಆದ ಗಿರೀಶ್ ಕಾರ್ನಾಡ್. ಇಲ್ಲಿ ಮುಖ್ಯ ಕತೆಯ ಜೊತೆಗೆ ವಾತ್ಸಾಯನನ ಪಾತ್ರವನ್ನೂ ಅಳವಡಿಸಿದ್ದರು. ಕಾಮಸೂತ್ರ ರಚಿಸಿದ ವಾತ್ಸಾಯನ ತನ್ನ ಕೃತಿಗಾಗಿ ‘ನಗರವಧು’ಗಳ, ಮುಖ್ಯವಾಗಿ ‘ವಸಂತಸೇನೆ’ಯು ನೀಡುವ ಶೃಂಗಾರಕಲೆಯ ಶಿಕ್ಷಣವನ್ನು ದಾಖಲು ಮಾಡಿಕೊಳ್ಳುತ್ತಾನೆ. ಶೃಂಗಾರ ಮತ್ತು ಹಾಸ್ಯರಸಕ್ಕೆ ಒತ್ತು ನೀಡಿದ ನಿರ್ದೇಶಕರು ವಸಂತಸೇನೆಯ ಸೌಂದರ್ಯವನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅರಂಗೇಟ್ರಂ ಮಾಡಿದ ನಟಿ ರೇಖಾ ಈ ಚಿತ್ರದಲ್ಲಿ ವಸಂತಸೇನೆಯಾಗಿ ತನ್ನ ಮಾದಕತೆಯಿಂದ ಸೆಳೆದರೆ, ಚಾರುದತ್ತ(ಶೇಖರ್ ಸುಮನ್)ನ ಮಗ ರೋಹಸೇನನ ಪಾತ್ರದಲ್ಲಿ [[ಮಾಸ್ಟರ್ ಮಂಜುನಾಥ್]] ಮುದ್ದಾಗಿ ನಟಿಸಿದ್ದಾರೆ.
 
ಈ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದದ್ದು • ಕರ್ನಾಟಕದಲ್ಲಿ- ಬೆಂಗಳೂರು, ಕುಂದಾಪುರದ ಮರವಂತೆ, ಕೊಳಕೆಬೈಲು, ಚಿಕ್ಕಮಗಳೂರಿನ ತನ್ನೂಡಿ ಮುಂತಾದ ರಮ್ಯ ಪ್ರದೇಶಗಳಲ್ಲಿ. ಆ ಕಾಲದ ಪರಿಸರವನ್ನು ನಿರ್ಮಿಸಲು ಕಾರ್ನಾಡರು ಸ್ಥಳೀಯ ಪರಿಕರಗಳನ್ನೇ ಬಳಸಿದ್ದಾರೆ. ದಕ್ಷಿಣ ಕನ್ನಡದ ಪುರಾತನ ಮನೆಗಳ ಕಲಾತ್ಮಕ ಕೆತ್ತನೆಯ ಕಂಬಗಳು, ಹಜಾರಗಳು, ಹಸಿರುಕ್ಕುವ ಬಯಲು, ಒಲೆ, ಮಡಿಕೆ, ಕುಡಿಕೆ ಇತ್ಯಾದಿಗಳಲ್ಲಿ ಕನ್ನಡ ಸಂಸ್ಕೃತಿಯ ಮುದ್ರೆಯಿದೆ.
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ