ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ತಾಲ್ಲೂಕು ಮತ್ತು ಪಟ್ಟಣವಾಗಿ ಕೊಪ್ಪಳ: ಹಳೆಯ ಮಾಹಿತಿ ತೆಗೆದು ಹಾಕಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೧೬೩ ನೇ ಸಾಲು:
ತಾಲ್ಲೂಕಿನ ಬಹುಭಾಗ ಕಪುಮೆಕ್ಕಲು ಮಣ್ಣಿನ ಮಟ್ಟಸ ಪ್ರಸ್ಥಭೂಮಿ. ತಾಲ್ಲೂಕಿನ ಈಶಾನ್ಯ ಮತ್ತು ಕೊಪ್ಪಳ ಪಟ್ಟಣದ ಸಮೀಪದಲ್ಲಿ ಗುಡ್ಡಗಳಿವೆ. ತುಂಗಭದ್ರಾನದಿ ತಾಲ್ಲೂಕಿನ ದಕ್ಷಿಣದ ಗಡಿಯಾಗಿತ್ತು. ಈಗ ತುಂಗಭದ್ರಾ ಜಲಾಶಯದ ಹರವಿನಲ್ಲಿ ಆ ಅಂಚಿನ ಭಾಗಗಳು ಮುಳುಗಿವೆ. ತುಂಗಭದ್ರಾ ಅಣೆಕಟ್ಟಿರುವುದು ತಾಲ್ಲೂಕಿನ ಆಗ್ನೇಯದಲ್ಲಿ ಮುನಿರಾಬಾದ್ ಬಳಿ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 594.65ಮಿಮೀ. ಕೃಷಿ ತಾಲ್ಲೂಕಿನ ಮುಖ್ಯ ಜೀವನೋಪಾಯ. ಸಾಗುವಳಿಯಾಗುತ್ತಿರುವ ಒಟ್ಟು 3,40,592 ಎಕರೆಗಳಲ್ಲಿ 5,285ಕ್ಕೂ ಹೆಚ್ಚು ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ (ಕಾಲುವೆಯಿಂದ 4,702 ಎಕರೆಗಳು, ಬಾವಿಗಳಿಂದ 285 ಎಕರೆಗಳು, ಇತರ ಮೂಲಗಳಿಂದ 150 ಎಕರೆಗಳು). ಜೋಳ (51,940), ನೆಲಗಡಲೆ (37,005), ಹತ್ತಿ (27,835), ಗೋದಿ (7,200), ತೊಗರಿ (5,562), ಬಾಜ್ರ (4,593), ಬತ್ತ (2,942), ಕಬ್ಬು (2,583), ಹುರುಳಿ (1,320), ಹರಳು (260) ಮುಖ್ಯ ಬೆಳೆಗಳು.
 
ಕೊಪ್ಪಳದಿಂದ 13ಕಿಮೀ ದೂರದಲ್ಲಿರುವ ಕಿನ್ನಾಳ ಗ್ರಾಮ ಮರದ ಕುಶಲ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ಚಿತ್ರಗಾರ ಮನೆತನದವರು ಉತ್ತಮವಾಗಿ ರಚಿಸಿ ಬಣ್ಣಹಾಕಿದ ದೇವವಿಗ್ರಹಗಳು, ಪ್ರಾಣಿಗಳ ಬೊಂಬೆಗಳು, ಹಣ್ಣು ತರಕಾರಿಗಳ ತದ್ರೂಪ ಬೊಂಬೆಗಳು, ನಾಟಕಗಳಲ್ಲಿ ಬಳಸುವ ಕಿರೀಟ, ಮುಖವಾಡ, ತೊಟ್ಟಿಲು, ಪೀಠಗಳನ್ನು ತಯಾರಿಸುತ್ತಾರೆ<ref>{{cite news|last1=ಜಯರಾಮ|first1=ಸುರೇಶ್|title=WHAT YOU SEE WHEN YOU SEE: KINNAL: A TRADITIONAL ART FORM WITH RICH HISTORY|url=http://bangaloremirror.indiatimes.com/bangalore/others//articleshow/54511693.cms|accessdate=15 March 2018|agency=Bangalore Mirror|publisher=ಇಂಡಿಯಾ ಟೈಮ್ಸ್|date=ಸೆಪ್ಟೆಂಬರ್ ೨೬, ೨೦೧೬}}</ref>. ನೇಯ್ಗೆ, ಕೊಂಬಿನಿಂದ ಬಾಚಣಿಗೆಯ ತಯಾರಿಕೆ ಈ ಮೊದಲಾದ ಉದ್ಯಮಗಳೂ ಇಲ್ಲಿವೆ.
 
ತುಂಗಭದ್ರಾ ನದಿಯ ಉಪನದಿಯಾದ ಹಿರೇಹಳ್ಳದ ಎಡದಂಡೆಯ ಮೇಲಿರುವ ಕೊಪ್ಪಳ ಈ ತಾಲ್ಲೂಕಿನ ಮುಖ್ಯ ಪಟ್ಟಣ. ಜನಸಂಖ್ಯೆ 56,145. ಇದು ತಾಲ್ಲೂಕಿನ ವಾಣಿಜ್ಯ, ಕೈಗಾರಿಕೆ ಮತ್ತು ವಿದ್ಯಾಕೇಂದ್ರ ಹಾಗೂ ಹುಬ್ಬಳ್ಳಿ ಗುಂತಕಲ್ಲು ರೈಲುಮಾರ್ಗದ ಒಂದು ನಿಲ್ದಾಣ. ಬಳ್ಳಾರಿ, ಕುಷ್ಪಗಿ, ಹುಬ್ಬಳ್ಳಿ, ಯಲಬುರ್ಗ, ಗಂಗಾವತಿಗಳಿಗೆ ರಸ್ತೆ ಸಂಪರ್ಕವಿದೆ. ಕೈಮಗ್ಗದ ಬಟ್ಟೆಗಳಿಗೆ ಇದು ಪ್ರಸಿದ್ಧ. ವಾರ್ಷಿಕವಾಗಿ ಜನವರಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಈ ಪಟ್ಟಣದ ಪಶ್ಚಿಮಕ್ಕೆ ಬೆಟ್ಟಗಳ ಸಾಲು ಹಬ್ಬಿದೆ. ಇವುಗಳಲ್ಲಿ ಪಾಲ್ಕಿ ಗುಂಡು ಅತ್ಯಂತ ಎತ್ತರವಾದ್ದು (2339'). ಪೂರ್ವಕ್ಕಿರುವ ಬೆಟ್ಟಗಳ ಸಾಲಿನಲ್ಲಿ ಗವಿಮಠವಿದೆ. ದಕ್ಷಿಣಕ್ಕೆ ಮತ್ತೊಂದು ಬೆಟ್ಟದ ಸಾಲು ಇದೆ. ಅದನ್ನು ಬಹದ್ದೂರ್ ಬಂಡೆ (1980') ಎನ್ನುತ್ತಾರೆ.
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ