ಆಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಹಿಂದೂ ಧಾರ್ಮಿಕ ಪಠ್ಯಗಳ ಸಂಗ್ರಹ
Content deleted Content added
ಆಗಮ
( ಯಾವುದೇ ವ್ಯತ್ಯಾಸವಿಲ್ಲ )

೨೨:೧೫, ೧೧ ನವೆಂಬರ್ ೨೦೦೮ ನಂತೆ ಪರಿಷ್ಕರಣೆ

ಆಗಮಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.ವೇದ,ಉಪನಿಷತ್ತು ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ ದೇವಾಲಯಗಳ ನಿರ್ಮಾಣ,ಸ್ವರೂಪ,ದೇವತಾವಿಗ್ರಹಗಳ ಪ್ರತಿಷ್ಠೆ,ಅರ್ಚನೆ,ಉತ್ಸವ,ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು,ಆಚಾರ ವಿಧಾನಗಳನ್ನು ತಿಳಿಸುತ್ತವೆ.

ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ.

"https://kn.wikipedia.org/w/index.php?title=ಆಗಮ&oldid=83193" ಇಂದ ಪಡೆಯಲ್ಪಟ್ಟಿದೆ