ಜೇನ್ ಬಾರ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ...
( ಯಾವುದೇ ವ್ಯತ್ಯಾಸವಿಲ್ಲ )

೦೯:೩೦, ೩೧ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ


ಜೀವನ

ಜೇನ್ ಬಾರ್ಕರವರು (೧೬೫೨-೧೭೩೨) ಜನಪ್ರಿಯ ಇಂಗ್ಲೀಷ್ ಕಾಲ್ಪನಿಕ ಬರಹಗಾರರಾಗಿದ್ದರು, ಕವಿ ಮತ್ತು ಬಲವಾದ ಜಾಕೋಬೈತಟ್. ಅವರು ಸ್ವಯಂ-ಹೇರಿ ದೇಶಭಷ್ಟಕ್ಕೆ ಹೋಗಿ ಜೇಮ್ಸ್ ೨ ಇಂಗ್ಲೆಂಡಿಗೆ ೧೬೮೮ ಅದ್ಭುತವಾದ ಕ್ರಾಂತಿಯ ಸಂದರ್ಭದಲ್ಲಿ ಓಡಿಹೋದರು. ಅವರ ಕಾದಂಬರಿಗಳು, "ದಿ ಅಮೊರ್ಸ್ ಅಫ಼್ ಬೊಸ್ವಿಲ್ ಅನ್ಡ್ ಗಲಿಸಿಯ" ಸಹ "ಲವ್ ಇಂಟ್ರಿಗ್ಸ್" ಎಂದು ಪ್ರಕಟಿಸಲಾಗಿದೆ, (೧೭೧೩). "ಎಗ್ಸೀಲಿಎಸ್" ಅಥವ "ದಿ ಬೆನಿಷ್ಡ್ ರೋಮನ್" (೧೭೧೫), "ಎ ಪಛ್ವ್ರ್ಕ್ ಸ್ಕ್ರೀನ್ ಫ಼ರ್ ದಿ ಲೆಡೀಸ್" (೧೭೨೩), ಮತ್ತು "ದಿ ಲೈನ್ನಿಂಗ್ ಆಪ್ ದಿ ಪಛ್ವ್ರ್ಕ್ ಸ್ಕ್ರೀನ್ ಫ಼ರ್ ದಿ ಲೆಡೀಸ್" (೧೭೨೬) ಇವುಗಳನ್ನು ಅವರು ೧೭೦೪ ರಲ್ಲಿ ಲಂಡನ್ಗೆ ಹೋದ ನಂತರ ಬರೆದಿದ್ದಾರೆ. ಅವರ ಗಡಿಪಾರು ಮತ್ತು ಮುಂಚಿತವಾಗಿ, ಅವರು ಸ್ತ್ರೀ ಶಿಕ್ಷಣ ಮತ್ತು ಸ್ತ್ರೀ ಏಕೈಕ ಜೀವನ ಮೌಲ್ಯನವನ್ನು ಸಮರ್ಥಿಸುವ ಕವಿತಗಳ ಸಂಗ್ರಹವನ್ನು ಬರೆದಿದ್ದಾರೆ, "ಪೊಎಟಿಕ್ ರಿಕ್ರಿಏಶನ್ಸ್" (೧೬೮೮) ಮತ್ತು ಕೆಲುವು ರಾಜಕೀಯ ಕವಿತೆಗಳನ್ನು ಬರೆದಿದ್ದಾರೆ, "ಎ ಕಲಕ್ಷನ್ ಪೊಯಮ್ಸ್ ರಿಫ಼ರಿಂಗ್ ಟು ದಿ ಟೈಮ್ಸ್" (೧೭೦೧), ಇದು ಇಂಗ್ಲಂಡಿನ ರಾಜಕೀಯ ಭವಿಷ್ಯದ ಬಗ್ಗೆ ಅವರ ಅತಂಕವನ್ನು ತಿಳಿಸಿತು.

ಆದಾಗೂ ಅವರು ತನ್ನ ಪತ್ರ ಬರವಣಿಗೆಗೆ ಗುರುತಿಸಲಾಗಿಲ್ಲ, ಬ್ರಿಟಿಷ್ ಗ್ರಂಥಾಲಯದಲ್ಲಿ ನಾಲ್ಕು ಮಟ್ಟಿಗೆ ಪತ್ರಗಳನ್ನು ಇರಿಸಲಾಗಿದೆ ಮತ್ತು ಆಕ್ಸ್ಫರ್ಡ್ ಮ್ಯಾಗ್ಡಲ್ಲೆನ್ ಗ್ರಂಥಾಲಯದಲ್ಲಿ ಮ್ಯಾಗ್ಡಾಲಿನ್ ಹಸ್ತಪ್ರತಿಯೊಳಗೆ ೧೬೭೦-೧೬೮೮ ನಡುವೆ ಬರೆಯಲಾಗಿದೆ,ಜೇನ್ ಬಾರ್ಕರ್ ಅವರು ಬರಹಗಲಳನ್ನು ಹಸ್ತಪ್ರತಿ ಮತ್ತು ಮುದ್ರಣ ರೂಪಗಳಲ್ಲಿ ಪ್ರಕಟಿಸಲು ಮೊದಲ ಸ್ತ್ರೀ ಲೇಖಕರಲ್ಲಿ ಒಬ್ಬರಾಗಿದ್ದರು. "ದಿ ಪಸ್ಸೇಜ್ ಆಪ್ ಬಾರ್ಕರ್ಸ್ ಪೊಎಟ್ರೀ ಫ಼್ರಂ ಕೊಟೆರೀ ಸರ್ಕಲ್ಸ್ ಟು ಲಾರ್ಜರ್, ಮೊರ್ ಇಂಪರ್ಸನಲ್ ಕಮ್ಯೂನಿಟೀಸ್ ಆಪ್ ರೀಡರ್ಸ್" ಇಂತಹ ಆಧುನಿಕ ವಿದ್ವಾಂಸರನ್ನು ಅಧ್ಯಯನ ಮಾಡಲು ಅವಕಾಶ ಕೊಡುತ್ತಾರೆ. ಅವರ ತನ್ನ ಜೀವನದಲ್ಲಿ ಮದುವೆಯಾಗದೆ ಜೇನ್ ಬಾರ್ಕರವರು ಸುಮಾರು ೧೭೩೨ ರಲ್ಲಿ ಸತ್ತರು.

ಆರಂಭಿಕ ಜೀವನ

ಬ್ಲೇದರ್ವಿಕ್ ಹಳ್ಳಿಯಲ್ಲಿ, ಮೇ ೧೬೫೨ ರಲ್ಲಿ ಜನಿಸಿದರು, ಇಂಗ್ಲಂಡ್ನ ನಾರ್ತ್ಯಾಂಪ್ಟನ್ನೈರಿಂದ ಥಾಮಸ್ ಬಾರ್ಕರವರು ಮತ್ತು ಅನ್ನೀ ಕನ್ಯಾಕ್. ಅನ್ನೀ ಕನ್ಯಾಕ್ ಅವರ ಕನ್ಯಾಕ್ ಕುಟುಂಬದ ವಂಶಸ್ಥರು ಎಂದು ಮತ್ತು ರೋಮನ್ ಕ್ಯಾಥೊಲಿಕ್ ಶಾಖೆಯಿಂದ ವಂಶಸ್ಥರೆಂದು ತೋರುತ್ತದೆ, ಇದು ರೋಮನ್ ಕ್ಯಾಥೊಲಿಕ್ ಅಂಗಸಂಸ್ಥೆಯನ್ನು ವಿವರಿಸುತ್ತದೆ. ಅವರು ರಾಜಪ್ರಭುತ್ವದ ಸದಸ್ಯರು, ಜೇಮ್ಸ್ ೨ ಇಂಗ್ಲಂಡ್ಗೆ ಪ್ರವೇಶಿಸಿದಾಗ ಜೇನ್ ದೇಶಭ್ರಷ್ಟರಾದರು, ಬಾಹ್ಯವಾಗಿ ಕ್ಯಾಥೋಲಿಕ್ ಜೇಮ್ಸ್ ೨ ನನ್ನು ಉರುಳಿಸುವಂತೆ ಬೆದರಿಕೆ ಹಾಕಿದರು. ಜೇನ್ ಬಾರ್ಕರವರು ಹತ್ತು ವರ್ಷ ವಯಸ್ಸಿನ ಹುಡುಗಿಯಾಗಿದ್ದಾಗ, ಥೋಮಸ್ ಬಾರ್ಕರ್ ವಿಲ್ಸ್ಥೊರ್ಪ್,ಲಿಂಕಂಶೈರ್ನಲ್ಲಿ ಅಸ್ತಿ ಮತ್ತು ಮಹಲುಗಳನ್ನು ಗುತ್ತಿಗೆ ಪಡೆದುಕೊಂಡನು. ಈ ಅಸ್ತಿ ಮತ್ತು ಮಹಲುಗಳನ್ನು ೧೬೮೧ ರಲ್ಲಿ ತನ್ನ ತಂದೆಯ ಮರಣದ ನಂತರ ಜೇನ್ ಬಾರ್ಕರ್ ಮತ್ತು ಅವರ ತಾಯಿಗೆ ಹಕ್ಕನ್ನು ನೀಡಲಾಯಿತು ಮತ್ತು ೧೭೦೪ ರಲ್ಲಿ ಅವರು ದೇಶಭ್ರಷ್ಟೆಯಿಂದ ಹಿಂದಿರುಗಿದ ನಂತರ ಅಸ್ತಿಗೆ ಸಳಾಂತರಗೊಂಡರು.

ಯುವತಿಯರಾಗಿರುವಾಗಳೆ ಜೇನ್ ತನ್ನ ಸಹೋದರ ಎಡ್ವರ್ಡ್ರಿಂದ ಲ್ಯಾಟಿನ್, ಅಂಗರಚನಾಶಾಸ್ತ್ರ ಮತ್ತು ಮೂಲಿಕೆ ಔಷಧಿಗಳನ್ನು ಕಲಿಸಿದನು. ಎಡ್ವರ್ಡ್ ೧೬೬೮ ರಲ್ಲಿ ಸೇಂಟ್ ಜಾನ್ಸ್ ಕಾಲೇಜ್, ಆಕ್ಸ್ಫ಼ರ್ಡ್ನಲ್ಲಿ ಸೇರಿಕೊಂಡರು ಮತ್ತು ೧೬೭೪-೧೬೭೫ ರಲ್ಲಿ ಆಕ್ಸ್ಫರ್ಡ್ನ ಕ್ರೈಸ್ಟ್ ಚರ್ಚ್ನಿಂದ ತನ್ನ ಎಮ್.ಎ. ಅನ್ನು ಪಡೆದರು. ಜೇನ್ ಬಾರ್ಕರ್ನವರ ಔಷಧಿಯ ಜ಼್ಞ್ನದ ಪ್ರರಾವೆಗಾಗಿ ಜಾಹೀರಾತನ್ನು "ಡಾ.ಬಾರ್ಕರ್ಸ್ ಫ಼ೆಮಸ್ ಗೊವ್ಟ್ ಪ್ಲೆಸ್ಟರ್" ರಲ್ಲಿ ಕಾಣಬಹುದು. ಮತ್ತು ಅವರ "ಪೊಯೆಟಿಕಲ್ ರಿಕ್ರಿಯೇಶನ್ಸ್" ನಲ್ಲಿ ಕಂಡುಬರುವ ಅಂಗರಚನೆಯ ಬಗ್ಗೆ ಅವರ ಕವಿತೆಗಳಲ್ಲಿ ಕಂಡುಬರುತ್ತದೆ. ಆಕೆಯ ಶಿಕ್ಷಣದ ಆಧಾರದ ಮೇಲೆ ತನ್ನ ಸಹೋದ ಹಣವನ್ನು ಕೊಟ್ಟಿದ್ದಕ್ಕಾಗಿ, ಆಕ್ಸ್ಫರ್ಡ್ನಲ್ಲಿ ತನ್ನ ಸಮಯವನ್ನು ಮುಗಿಸಿದ ಕೆಲವೇ ದಿನಗಳಲ್ಲಿ, ೧೬೭೫ ರಲ್ಲಿ ಅವರ ಮರಣವನ್ನು ದುಃಖಿಸಿದನು.

ರಾಜಕೀಯ ಸಂಬಂಧಗಳು ಮತ್ತು ದೇಶಭ್ರಷ್ಟತೆ

ಬರ್ಕರ್ ೧೭೫೨ ಮೇ ೧೭ ರಂದು ಇಂಗ್ಲಂಡಿನ ಚರ್ಚ್ನಲ್ಲಿ ವಿಧಿಗಳ ಪ್ರಕಾರ ದೀಕ್ಷಾಸ್ನಾನ ಪಡೆದರು; ಆದಾಗ್ಯೂ, ಅವರು ೧೬೮೫-೧೬೮೮ ರ ನಡುವೆ ಜೇಮ್ಸ್ ೨ (ಇಂಗ್ಲೆಂಡ್ನ) ಆಳ್ವಿಕೆಯಲ್ಲಿ ಕ್ಯಾಥೊಲಿಕ್ ಆಗಿ ಪರಿವರ್ತನೆಗೊಂಡರು. ಖ್ಯಾತಿವೆತ್ತ ಕ್ರಾಂತಿಯ ಸಮಯದಲ್ಲಿ ಜೇಮ್ಸ್ನ ಪ್ರಿನ್ಸ್ ಆಫ್ ಆರೆಂಜ್ (ವಿಲಿಯಂ ೩) ಸೋಲಿಸಿದ ನಂತರ, ಲಂಡನ್ ಕ್ಯಾಥೋಲಿಕ್ಕರಿಗೆ ಒಂದು ಅಪಾಯಕಾರಿ ಸ್ಥಳವಾಯಿತು, ಫ್ರಾನ್ಸ್ನಲ್ಲಿ ಗಡೀಪಾರು ಮಾಡಲು ಜೇಮ್ಸ್ ೨ ರನ್ನು ಅನುಸರಿಸಲು ಬಾರ್ಕರ್ಗೆ ಪ್ರೇರೇಪಿಸಿದರು. ಜೇಕಬಿಟಿಸಮ್ನ ಒಂದು ಸಿದ್ಧಾಂತದ ನಂತರ ಮತ್ತು ರಾಜಪ್ರಭುತ್ವವಾದಿಯಾಗಿತ್ತು, ಜೇನ್ ಬಾರ್ಕರ್ ಜೇಮ್ಸ್ ೨ ರನ್ನು ಫ್ರಾನ್ಸ್ಗೆ ಗಡಿಪಾರು ಮಾಡಿದ ೪೦೦೦೦ ಜನರಲ್ಲಿ ಒಬ್ಬರು. ೧೬೮೯ ರಲ್ಲಿ ಸೇಂಟ್-ಜರ್ಮೈನ್-ಎ-ಲೇಯ್ನಲ್ಲಿ ನಿವಾಸವನ್ನು ನಿರ್ವಹಿಸಿದ ಸಣ್ಣ ಸಂಖ್ಯೆಯ ವ್ಯಕ್ತಿಗಳಲ್ಲಿ ಒಬ್ಬರು. ಜೇಮ್ಸ್ ೨ ೧೬೮೯ ರಿಂದ ೧೭೦೪ ರವರೆಗೆ ಲೂಯಿಸ್ ೧೪ ಅವರು ಸ್ಟುವರ್ಟ್ಸ್ಗೆಗಳಿಗೆ ನೀಡಿದ ಕೋಟೆಯಾದ ಚ್ಯಾಟೊ ಡಿ ಸೇಂಟ್ಜ-ರ್ಮೈನ್-ಎನ್-ಲೇಯ್ನಲ್ಲಿ ನ್ಯಾಯಾಲಯವನ್ನು ನಿರ್ವಹಿಸಿದ.

ಬರ್ಕರ್ ಅವರ ಜಾಕೋಬೈಟ್ ಪಾಲ್ಗೊಳ್ಳುವಿಕೆಯು ತನ್ನ ಪತ್ರದಲ್ಲಿ ಫ್ರಾನ್ಸ್ನಿಂದ ಜಾಕೋಬೈಟ್ ದಾಳಿಯನ್ನು ಆಯೋಜಿಸಲು ಪ್ರಾರಂಭಿಸಿದ ಆರ್ಮಂಡ್ನ ೨ ನೇ ಡ್ಯೂಕ್ ಜೇಮ್ಸ್ ಬಟ್ಲರ್ಗೆ ಪತ್ರದಲ್ಲಿ ಸಾಕ್ಷಿಯಾಗಿದೆ. ೧೯೧೮ ರ ಮಾರ್ಚ್ ೧೯ ರಂದು ಬರೆದ ಪತ್ರವು, ಓರ್ಮಾಂಡ್ಗೆ ತನ್ನ ಪತ್ರಕರ್ತರನ್ನು ಇಂಗ್ಲೆಂಡ್ನಲ್ಲಿ ಬೆಂಬಲಿಗರು ಆಕ್ರಮಣ ಮಾಡಬೇಕೆಂದು ಸೂಚಿಸಿದರು. ಆದಾಗ್ಯೂ, ಆ ವರ್ಷದ ಜಾಕೋಬ್ ವಿರೋಧಿ ಗುಪ್ತಚರ ಸಂಘಟನೆಯ ಬ್ರಿಟಿಷ್ ಸೀಕ್ರೆಟ್ ಆಫೀಸ್ ಈ ಪತ್ರವನ್ನು ತಡೆಹಿಡಿಯಿತು. ಬಾರ್ಕರ್ನ ಹೆಸರು ಮತ್ತು ಕೈಬರಹವು ಸರ್ಕಾರಿ ಅಧಿಕಾರಿಗಳಿಗೆ ತಿಳಿದಿಲ್ಲದ ಕಾರಣ,ಆ ಪತ್ರಕ್ಕೆ ಅವರು ಪ್ರೇತ ಬರಹಗಾರನಾಗಿದ್ದಾನೆಂದು ಶಂಕಿಸಲಾಗಿದೆ-ಒಂದು ತಂತ್ರಜ್ಞರು ಒಳಸಂಚುಗಾರರನ್ನು ರಕ್ಷಿಸಲು ಬಳಸುತ್ತಾರೆ, ಅವರ ಗುರುತುಗಳು ಮತ್ತು ಕೈಬರಹವನ್ನು ಈಗಾಗಲೇ ಅಧಿಕಾರಿಗಳು ಚೆನ್ನಾಗಿ ತಿಳಿದಿದ್ದರು.

ಪ್ರಮುಖ ಕೃತಿಗಳು

ಪೊಯೆಟಿಕಲ್ ರಿಕ್ರಿಯೇಶನ್ಸ್ (೧೬೮೮) ಎ ಕಲಕಷಂಸ್ ಅಫ಼್ ಪೊಯಮ್ಸ್ ರಿಫ಼ರಿಂಗ್ ಟು ದಿ ಟೈಮ್ಸ್ (೧೭೦೧) ಲವ್ ಇಂಟ್ರೀಗ್ಸ್; ಅತವ ದಿ ಅಮೊರ್ಸ್ ಅಫ಼್ ಬೊಸ್ವಿಲ್ ಅನ್ದ್ ಗಲ್ಸಿಯ (೧೭೧೩) ಎಗ‍‍‍‌‌ಸೈಲಸ್; ಅತವ ದಿ ಬೆನಿಷ್ಡ್ ರೊಮನ್ (೧೭೧೫) ದಿ ಕ್ರಿಸ್ಟಿಯನ್ ಪಿಲ್ಗ್ರಿಮೆಜ್ (೧೭೧೮) ಎ ಪೆಚ್-ವರ್ಕ್ ಸ್ಕ್ರೀನ್ ಫ಼ಾರ್ ದಿ ಲೆಡೀಸ್ (೧೭೨೩) ದಿ ಲೈನಿಂಗ್ ಅಫ಼್ ದಿ ಪೆಚ್-ವರ್ಕ್ ಸ್ಕ್ರೀನ್ ಫ಼ಾರ್ ದಿ ಲೆಡೀಸ್ (೧೭೨೬)


ಪೊಯೆಟಿಕಲ್ ರಿಕ್ರಿಯೇಶನ್ಸ್

ಮೂಲತ ೧೬೮೮ ರಲ್ಲಿ ಪ್ರಕಟವಾಯಿತು, ಈ ಎರಡು ಭಾಗಗಳ ಸಂಕಲನದ ಮೊದಲ ಭಾಗವು ಬಾರ್ಕರ್ ಅವರ ಕವಿತೆಗಳನ್ನು ಅವರ ಸ್ನೇಹಿತರಿಗೆ ತಿಳಿಸಲಾಗಿದೆ, ಮತ್ತು ಬಾರ್ಕರ್ ಅವರ ಸ್ನೇಹಿತರಿಂದ ಬರೆಯಲ್ಪಟ್ಟ ಕವಿತೆಗಳನ್ನು ಬಾರ್ಕರನ್ನು ಎರಡನೆಯ ಭಾಗದಲ್ಲಿ ಒಳಗೊಂಡಿದೆ. "ಸೆವರಲ್ ಜೆಂಟಲ್ಮೆನ್ ಅಫ಼್ ದಿ ಯುನಿವರ್ಸಿಟೀಸ್, ಅನ್ದ್ ಅದರ್ಸ್" ಬರೆದಂತೆ ವಿವರಿಸಲಾಗಿದೆ, ಪೊಯೆಟಿಕಲ್ ರಿಕ್ರಿಯೇಶನ್ಸ್ನ ಎರಡನೇ ಭಾಗವನ್ನು ಕೇಂಬ್ರಿಡ್ಜ್ ಅಥವಾ ಆಕ್ಸ್ಫರ್ಡ್ ವಿಶ್ವವಿದ್ಯಾಲಯದವರು ಬರೆದಿದ್ದಾರೆ.ಮೂಲತ ಲೇಖಕರ ಅನುಮತಿಯಿಲ್ಲದೆ ಬೆಂಜಮಿನ್ ಕ್ರೇಲೆ ಅವರು ಮುದ್ರಿತವಾಗಿದ್ದು, ಪೊಯೆಟಿಕಲ್ ರಿಕ್ರಿಯೇಶನ್ಸ್ ಶೀರ್ಷಿಕೆ ಪುಟವು"ಒಕೆಷನಲಿ ರಿಟನ್ ಬೈ ಮಿಸಸ್. ಜೇನ್ ಬಾರ್ಕರ್" ಎಂದು ಹೆಮ್ಮೆಪಡಿಸಿತು. ಬೆಂಜಮಿನ್ ಕ್ರೇಲ್ ಅವರು ಹನ್ನೆರಡು ಕವಿತೆಗಳನ್ನು ಎರಡನೆಯ ಭಾಗದಲ್ಲಿ ಭಾಗಗಳಿಗೆ ರಚಿಸಿದಾರೆ ಮತ್ತು ಬಾರ್ಕರ್ ಅವರ ಸಾಹಿತ್ಯದ ರುಚಿಗೆ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈಗ ಮ್ಯಾಗ್ಡಲೀನ್ ಮನುಸ್ಕ್ರಿಪ್ಟ್ ಎಂದು ಕರೆಯಲ್ಪಡುವ ಒಂದು ಟಿಪ್ಪಣಿ ಪ್ರಕಟಣೆಮಾಡುವ ಸಂಗ್ರಹವನ್ನು ಮುದ್ರಿಸಲು ಬಾರ್ಕರ್ ಅನುಮತಿಯನ್ನು ಹೊಂದಿಲ್ಲ ಎಂದು ಸೂಚಿಸುತ್ತದೆ: "ನವ್ ಕರೆಕ್ಟಡ್ ಬೈ ಹರ್ ಒವ್ನ್ ಹೆನ್ಡ್ಸ್". ಆರಂಭಿಕ ಸಂಗ್ರಹಗಳು ಸಾರ್ವಜನಿಕ ಬಳಕೆಗಾಗಿಲ್ಲ ಎಂದು 'ಮಾರ್ಗಿನಾಲಿಯ' ತೋರಿಸುತ್ತದೆ. ವಿದ್ವಾಂಸ ಕ್ಯಾಥರಿನ್ ಕಿಂಗ್ ಬರ್ಕೆರ್ನ ಕೃತಿಗಳು ಆತ್ಮಚರಿತ್ರೆಗೆ ಒಳಪಡುವ ಮ್ಯಾಗ್ಡಲೀನ್ ಹಸ್ತಪ್ರತಿಯಲ್ಲಿ ಉಪನಾಮಗಳ ಮೂಲಕ ಪುರಾವೆಗಳನ್ನು ಕಂಡುಕೊಳ್ಳುತ್ತದೆ.

ಎ ಕಲಕ್ಷನ್ ಅಫ಼್ ಪೊಯಮ್ಸ್ ರಿಫ಼ರ್ಂಗ್ ಟು ದಿ ಟೈಮ್ಸ್

"ಎ ಕಲಕ್ಷನ್ ಅಫ಼್ ಪೊಯಮ್ಸ್ ರಿಫ಼ರ್ಂಗ್ ಟು ದಿ ಟೈಮ್ಸ್" ಎಂಬ ಕವನ ಸಂಗ್ರಹವನ್ನು ಸೇಂಟ್-ಜರ್ಮೈನ್-ಎನ್-ಲೇಯ್ನಲ್ಲಿ ಆಕೆಯ ಸಮಯದ ಕೊನೆಯಲ್ಲಿ ಬರೆಯಲಾಗಿದೆ, ಹೆಚ್ಚು ರಾಜಕೀಯ ಮತ್ತು ಉಪನಾಮ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ಈ ಸಂಗ್ರಹದಲ್ಲಿ ಕವಿತೆಯ ಹೇಳಿಕೆಗಾರರದ ಫ಼ಿಡೆಲಿಯರವರ ಆತ್ಮಚರಿತ್ರೆಯೆಂದು ಪರಿಗಣಿಸಲಾಗಿದೆ. ಬಾರ್ಕರ್ ಅವರ ಸ್ವಂತ ರಾಜಕೀಯ ಮತ್ತು ಧಾರ್ಮಿಕ ಸಂಬಂಧಗಳನ್ನು ಚಿತ್ರಿಸುವ ನಿಷ್ಠಾವಂತ ಮತ್ತು ಕ್ಯಾಥೋಲಿಕ್ ಪರಿವರ್ತನೆಗರರು ಎಂದು ಅವರನ್ನು ನಿರೂಪಿಸಲ್ಪಾಗ್ಗಿದಾರೆ. ಇಂಗ್ಲೆಂಡ್ಗೆ ಮರಳಿದ ಜೇನ್ ಬಾರ್ಕರ್, "ಎ ಕಲಕ್ಷನ್ ಅಫ಼್ ದಿ ಅಫ಼್ ಪೊಯಮ್ಸ್ ರಿಫ಼ರಿಂಗ್ ಟು ದಿ ಟೈಮ್ಸ್" ಎಂಬ ಕವನ ಸಂಗ್ರಹದ ಪ್ರತಿಯನ್ನು ಜೇಮ್ಸ್ ೨ ನವರ ಮಗನಿಗೆ ಹುಟ್ಟುಹಬ್ಬದಂದು ಉಡುಗೊರೆಯಾಗಿ ನೀಡಿದರು. ಇದರ ಒಂದು ನಕಲಿನ ಹಸ್ತಪ್ರತಿ ಬ್ರಿಟಿಷಿನ ಗ್ರಂಥಾಲಯದಲ್ಲಿದೆ ನಂಬಲಾಗಿದೆ.

ಉಲೇಖಗಳು

[೧] [೨]

  1. https://web.warwick.ac.uk/english/perdita/html/pw_BARK01.htm
  2. https://books.google.co.in/books?id=g_OwjIIjabcC&pg=PR15&lpg=PR15&dq=jane+barker&source=bl&ots=aDXitNuPSH&sig=nC2bBtGpFJFKsUjVp2g1dq8Hd08&hl=en&sa=X&ved=0ahUKEwj1pZbXpfzVAhXLO48KHQmdDSc4ChDoAQg1MAM#v=onepage&q=jane%20barker&f=false