"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
== ನಿರೀಶ್ವರವಾದಿಗಳಲ್ಲಿ ಮೋಕ್ಷ ==
::'''ಚಾರ್ವಾಕರು'''
:ಚಾರ್ವಾಕರು ಮೋಕ್ಷವೆನ್ನುವುದು ಕೇವಲ ಕಲ್ಪನೆ ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ಸಾವೇ ಬಿಡುಗಡೆ. ಏಕೆಂದರೆ ಅವರಿಗೆ ಪುನರ್ಜನ್ಮದಲ್ಲಿ ಮತ್ತು ದೇವರಲ್ಲಿ ನಂಬುಗೆ ಇಲ್ಲ.
::'''ಜೈನರು'''
:ಜೈನರು ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನ್ನು ಒಪ್ಪುವುದಿಲ್ಲ. ಅವರ ಮೋಕ್ಷದ ವ್ಯಾಖ್ಯೆ ಬೇರೆಯೇ ಇದೆ.
:ಜೈನರು ಕರ್ಮ ಕ್ಷಯವೇ ಮೋಕ್ಷವೆನ್ನುತ್ತಾರೆ. ಕರ್ಮ ಒಂದು ಭೌತವಸ್ತು -ಪುದ್ಗಲ. ರಾಗ, ದ್ವೇಷ, ಅಜ್ಞಾನ, 'ಆಶ್ರವ' ರೀತಿಯಲ್ಲಿ (ಕೊಳವೆ ನೀರಿನಂತೆ ) ಜೀವನಲ್ಲಿ ತುಂಬುವುದು. 'ಸಮ್ಯಕ್ ಜ್ಞಾನ', 'ಸಮ್ಯಕ್ ದರ್ಶನ', 'ಸಮ್ಯಕ್ ಚಾರಿತ್ರ್ಯ'ದಿಂದ ಈ ಕರ್ಮದ ಆಸ್ರವ ನಿಂತು (ನೀರು ತುಂಬುವುದು ನಿಂತಂತೆ.) 'ಸಂವರ' ಸ್ಥಿತಿ ತಲುಪುವುದು. ನಂತರ 'ನಿರ್ಜರಾ'ದಿಂದ -ಕಾಯ ಕ್ಲೇಶಗಳಿಂದ, ಒಳಗಿರುವ ಕರ್ಮವನ್ನು ಹೊರಹಾಕಿ ಕರ್ಮ ಕ್ಷಯವಾದ ಮೇಲೆ '''ಮುಕ್ತಿ'''. ಈ ಮುಕ್ತ ಜೀವವು ಲೋಕಾಕಾಶದಲ್ಲಿ 'ಶಿದ್ಧಶಿಲೆ' ಯೆಂಬ ಅತ್ಯುನ್ನತ ಸ್ಥಾನವನ್ನು ಪಡೆಯುತ್ತದೆ. ಅಲ್ಲಿ 'ಅನಂತ ಜ್ಞಾನ', 'ಅನಂತ ದರ್ಶನ', 'ಅನಂತ ವೀರ್ಯ(ಶಕ್ತಿ)', ಸಂಪನ್ನರಾಗಿ ಜೀವವು, '''ಅನಂತ ಶಾಂತಿ''' ಪಡೆಯುತ್ತದೆ. ಸಾಧನೆಯಿಂದ ಇದನ್ನು ಎಲ್ಲರೂ ಪಡೆಯಬಹುದು.
::'''ಬೌದ್ಧರು'''
:ಬೌದ್ಧರು ಜೈನರಂತೆ ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನ್ನು ಒಪ್ಪುವುದಿಲ್ಲ. ಅವರ ಮೋಕ್ಷದ ವ್ಯಾಖ್ಯೆಯೂ ಬೇರೆಯೇ ಇದೆ.
:ಬೌದ್ಧರು ಮೋಕ್ಷವನ್ನು 'ನಿರ್ವಾಣ' ಎನ್ನುತ್ತಾರೆ. ನಿರ್ವಾಣ ಎನ್ನುವುದಕ್ಕೆ ಅಕ್ಷರಾರ್ಥ -ಅಳಿಸಿಹೋಗುವುದು / ನಂದಿಹೋಗುವುದು.
:[[ಆರ್ಯಸತ್ಯ]] ಗಳಲ್ಲಿ 'ಅಜ್ಞಾನ'ವೇ ಬಂಧಕ್ಕೆ ಕಾರಣ. ದುಃಖ, ದುಃಖಮೂಲ, ದುಃಖ ನಿವಾರಣಾ ಮಾರ್ಗ, ದುಃಖ ನಿವಾರಣ- 'ಈ ನಾಲ್ಕನ್ನು' ಚೆನ್ನಾಗಿ ತಿಳಿದು -'ಆರ್ಯ ಅಷ್ಟಾಂಗ ಮಾರ್ಗ'ವನ್ನು ಅನುಸರಿಸಿದರೆ ದುಃಖದಿಂದ ಬಿಡುಗಡೆ ದೊರೆಯುತ್ತದೆ. ಸಂಸಾರಕ್ಕೆ ಕಾರಣವಾದ, ವಾಸನೆಗಳೆಲ್ಲಾ ಅಳಿದು ಜ್ಞಾನೋದಯವಾಗುತ್ತದೆ. ಈ ಹಂತ ಪಡೆದವನು '''ಅರ್ಹತ್''' ಆಗುತ್ತಾನೆ. ವೈಬಾಷಿಕರು ಅರ್ಹತನು ಆಸ್ರವ ಕ್ಷಯ ನಂತರ ಜೀವಿಸಿದ್ದರೆ ಅದು 'ಸೋಪಧಿಶೇಷ ಸ್ಥಿತಿ'; ಮರಣಾನಂತರದ್ದು 'ನಿರುಪಧಿಶೇಷ ಸ್ಥಿತಿ'. ಹೀಗೆ ಎರಡು ಬಗೆ 'ಮೋಕ್ಷ' ವಿದೆ ಎನ್ನುತ್ತಾರೆ. ವಿಜ್ಞಾನವಾದಿಗಳು 'ಕ್ಲೇಷಾವರಣ', 'ಜ್ಞೇಯಾವರಣ', ನಾಶವೇ '''ಮೋಕ್ಷ''' ವೆನ್ನುತ್ತಾರೆ ; ಮಾದ್ಯಮಿಕರು 'ಶೂನ್ಯತಾ ಪ್ರಾಪ್ತಿ'ಯೇ '''ಮೋಕ್ಷ'''ವೆನ್ನುತ್ತಾರೆ.
 
== ಷಡ್ದರ್ಶನಗಳಲ್ಲಿ ಮೋಕ್ಷ==
೧,೩೦೧

edits

"https://kn.wikipedia.org/wiki/ವಿಶೇಷ:MobileDiff/803033" ಇಂದ ಪಡೆಯಲ್ಪಟ್ಟಿದೆ