ಪಕ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
*ಹಕ್ಕಿ ಹಾಡು ಸಂಕೀರ್ಣವಾದದ್ದರಿಂದ ಹಾಡುಗಾರ ಹಕ್ಕಿಗಳು ಗಾನಕಲೆಯನ್ನು ಕೇವಲ ಹುಟ್ಟರಿವಿನಿಂದ ಕಲಿಯುವುದಿಲ್ಲ. ಅವು ಮೊಟ್ಟೆಯಿಂದ ಹೊರಬಂದ ಕ್ಷಣದಿಂದ, ಹಾಡು ಹಕ್ಕಿಗಳು ತಮ್ಮ ತಂದೆಯ ಮತ್ತು ತಮ್ಮದೇ ಪ್ರಭೇದದ ಇತರ ಗಂಡುಹಕ್ಕಿಗಳ ಹಾಡುಗಳನ್ನು ಆಲಿಸಿ ಆಲಿಸಿ, ಅನುಕರಿಸಿ, ಅಭ್ಯಸಿಸಿ ತಾವೂ ಹಾಡಲು ಕಲಿಯುತ್ತವೆ. ತಮ್ಮದೇ ಪ್ರಭೇದದ ಹಾಡುಗಳನ್ನು ಇತರ ಪ್ರಭೇದಗಳಿಂದ ಪ್ರತ್ಯೇಕಿಸಿ ಗುರುತಿಸುವುದನ್ನೂ ಅರಿಯುತ್ತವೆ. ಸ್ಪಷ್ಟವಾಗಿಯೇ, ತಂದೆ–ತಾಯಿಯರ, ಸಹಚರರ ಸಾಂಗತ್ಯ ಸಿಗದ ಅನಾಥ ಹಕ್ಕಿಗಳಿಗೆ ಗಾನಕಲೆ ಸಿದ್ಧಿಸುವುದಿಲ್ಲ; ಹಾಡುಗಾರಿಕೆಯ ಕಲಿಯದ ಅಂತಹ ಹಾಡು ಹಕ್ಕಿಗಳು ಯಶಸ್ವೀ ಜೀವನ ನಡೆಸಲು ಸಾಧ್ಯವಾಗದು.
*ಸಂಶೋಧನೆಗಳಿಂದ ತಿಳಿಯುವುದೇನೆಂದರೆ, ಹಾಡುಹಕ್ಕಿಗಳು ತಮ್ಮ ಪ್ರಭೇದದ ವಿಶಿಷ್ಟ ಹಾಡುಗಾರಿಕೆಯ ಮೂಲ ಪಾಠಗಳನ್ನೆಲ್ಲ ತಮ್ಮ ಬದುಕಿನ ಮೊದಲ ಅರವತ್ತು ದಿನಗಳಲ್ಲಿ ಕಲಿಯುತ್ತವೆ. ಮನುಷ್ಯರ ಮಕ್ಕಳು ತಮ್ಮ ತಾಯಿಯ ಮತ್ತು ಸುತ್ತಲಿನ ಇತರರ ಮಾತುಗಳನ್ನು ಆಲಿಸಿ, ಕೆಲವೇ ಪದಗಳ ತೊದಲುವಿಕೆಯಿಂದ ಆರಂಭಿಸಿ, ನಿರರ್ಗಳವಾಗಿ ಮಕ್ಕಳು ಮಾತನಾಡಲು ಕಲಿಯುವಂತೆಯೇ ಹಕ್ಕಿಮರಿಗಳೂ ಒಂದೊಂದೇ ಸ್ವರ ಗ್ರಹಿಸುತ್ತ, ಹಾಡಲು ಪ್ರಯತ್ನಿಸುತ್ತ, ಪರಿಶ್ರಮಪಟ್ಟು ಗಾನಕಲೆಯನ್ನು ಮೈಗೂಡಿಸಿಕೊಳ್ಳುತ್ತವೆ.
 
*ಬದುಕಿನುದ್ದಕ್ಕೂ ಇತರ ಹಕ್ಕಿಗಳ ಹಾಡುಗಳನ್ನು ಕೇಳಿಕೇಳಿ, ತಮ್ಮ ಮನೋಧರ್ಮವನ್ನು ಅದಕ್ಕೆ ಬೆರೆಸುತ್ತ, ವರ್ಷದಿಂದ ವರ್ಷಕ್ಕೆ ತಮ್ಮ ಹಾಡುಗಾರಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತ, ಪರಿಣಿತ ಹಾಡುಗಾರರಾಗುತ್ತವೆ. ಕೋಗಿಲೆ, ಗುಬ್ಬಚ್ಚಿ, ಬುಲ್ ಬುಲ್, ಸಿಂಪಿಗ, ಸೂರಕ್ಕಿ, ಥ್ರಶ್, ರಾಬಿನ್, ಆರಿಯೋಲ್, ವಾರ್ಬ್ಲರ್, ಕಾಮೂಳಿ ಮೊದಲಾದವು ಹಾಡುಗಾರರು ಗಾನ ವಿಶಾರದರ ಪಟ್ಟಿಯಲ್ಲಿವೆ.<ref>[http://www.prajavani.net/news/article/2017/05/21/492827.html ಖಗ ಜಗದ ದ್ವಿವಿಧ ಸೋಜಿಗ;ಎನ್. ವಾಸುದೇವ್;21 May, 2017]</ref><ref>[https://link.springer.com/article/10.1007%2FBF00174024 Sexual selection and the evolution of bird song: A test of the Hamilton-Zuk hypothesis]</ref>
 
===ಹಕ್ಕಿಗಳ ದನಿಗೆ ಅನ್ಯಾಟಮಿ ಮತ್ತು ಶರೀರವಿಜ್ಞಾನ===
*'ಏವಿಯನ್' ಎಮಗ ಗಂಟಲಲ್ಲಿರುವ ಗಾಯನ ಅಂಗವನ್ನು 'ಸಿರಿನಕ್ಸ್' (ದನಿಪೊರೆ) ಎಂದು ಕರೆಯಲಾಗುತ್ತದೆ; ಇದು ಶ್ವಾಸನಾಳದ ಕೆಳಭಾಗದಲ್ಲಿರುವ ಮೂಳೆಯ ರಚನೆ. (ಸಸ್ತನಿ ಶ್ವಾಸನಾಳದ ಮೇಲ್ಭಾಗದಲ್ಲಿರುವ ಲಾರಿಕ್ಸ್ ಎಂದರೆ ಧ್ವನಿಪೆಟ್ಟಿಗೆಗೆ ಬದಲಾಗಿ). ಸಿರಿನ್ಕ್ಸ್ ಮತ್ತು ಕೆಲವೊಮ್ಮೆ ಸುತ್ತಮುತ್ತಲಿನ ಗಾಳಿ ಚೀಲವು ಪದರಗಳಿಂದ ಧ್ವನಿಯನ್ನು ತರಲು -ಹೊರಡಿಸಲು ಅನುರಣಿಸುತ್ತದೆ. ಪಕ್ಷಿಯು ಪೊರೆಯ ಮೇಲೆ ಒತ್ತಡವನ್ನು ಬದಲಾಯಿಸುವ ಮೂಲಕ ಪಿಚ್- ದನಿಯ ಏರಿಳಿತವನ್ನು ನಿಯಂತ್ರಿಸುತ್ತದೆ ಮತ್ತು ಉಸಿರಾಟದ ಬಲವನ್ನು ಬದಲಿಸುವ ಮೂಲಕ ಪಿಚ್-ಶೃತಿ? ಮತ್ತು ಪರಿಮಾಣವನ್ನು ನಿಯಂತ್ರಿಸುತ್ತದೆ. ಇದು ಸ್ವತಂತ್ರವಾಗಿ ಶ್ವಾಸನಾಳದ ಎರಡು ಬದಿಗಳನ್ನು ನಿಯಂತ್ರಿಸಬಹುದು, ಇದು ಕೆಲವು ಪ್ರಭೇದಗಳು ಏಕಕಾಲದಲ್ಲಿ ಎರಡು ರಾಗಗಳನ್ನು ಉತ್ಪತ್ತಿ ಮಾಡಬಹುದಾದ ಬಗೆ. <ref>Attenborough, D. 1998. The Life of Birds. BBC publication.0563-38792-0</ref>
"https://kn.wikipedia.org/wiki/ಪಕ್ಷಿ" ಇಂದ ಪಡೆಯಲ್ಪಟ್ಟಿದೆ