ಬಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚುNo edit summary
೮೯ ನೇ ಸಾಲು:
| ethnic groups = [[Balinese people|Balinese]], [[Javanese people|Javanese]], [[Sasak]]
}}
==ಪ್ರವಾಸಿಗಳ ಸ್ವರ್ಗ==
*ಇದು [[ಇಂಡೋನೇಷ್ಯಾ]] ದೇಶದ ಒಂದು ದ್ವೀಪ. ಬಾಲಿ (ಬಲಿನೀಸ್: ᬩᬮᬶ) ಇಂಡೋನೇಷಿಯಾದ ದ್ವೀಪ ಮತ್ತು ಪ್ರಾಂತ್ಯ. ಪ್ರಾಂತ್ಯವು ಬಾಲಿ ದ್ವೀಪ ಮತ್ತು ಕೆಲವು ಸಣ್ಣ ನೆರೆಹೊರೆಯ ದ್ವೀಪಗಳನ್ನು ಒಳಗೊಂಡಿದೆ, ಅದರಲ್ಲೂ ವಿಶೇಷವಾಗಿ ನುಸಾ ಪೆನಿಡಾ, ನುಸಾ ಲೆಂಬೊಂಗನ್, ಮತ್ತು ನುಸಾ ಸಿನೆನನ್. ಇದು ಪಶ್ಚಿಮದ ಜಾವಾ ಮತ್ತು ಪೂರ್ವದಲ್ಲಿ ಲೊಂಬೊಕ್ ನಡುವೆ, ಲೆಸ್ಸರ್ ಸುಂದ ದ್ವೀಪಗಳು ಪಶ್ಚಿಮ ತುದಿಯಲ್ಲಿದೆ. ಇದರ ರಾಜಧಾನಿಯಾದ ಡೆನ್ಪಾಸರ್ ದ್ವೀಪದ ದಕ್ಷಿಣ ಭಾಗದಲ್ಲಿದೆ.
 
*2010 ರ ಜನಗಣತಿಯಲ್ಲಿ 3,890,757 ಜನಸಂಖ್ಯೆಇದ್ದದ್ದು, ಜನವರಿ 2014 ರ ವೇಳೆಗೆ 4,225,000 ಜನಸಂಖ್ಯೆ ಆಗಿದೆ, ದ್ವೀಪದ ಬಹುತೇಕ ಇಂಡೋನೇಶಿಯಾದ ಹಿಂದೂ ಅಲ್ಪಸಂಖ್ಯಾತರ ನೆಲೆಯಾಗಿದೆ. 2010 ರ ಜನಗಣತಿಯ ಪ್ರಕಾರ, ಬಾಲಿ ಜನಸಂಖ್ಯೆಯಲ್ಲಿ 83.5% ರಷ್ಟು ಬಲಿನಿಸ್ ಹಿಂದೂ ಧರ್ಮ, ನಂತರ 13.4% ಮುಸ್ಲಿಮರು, ಕ್ರಿಶ್ಚಿಯನ್ ಧರ್ಮ 2.5% ಮತ್ತು ಬೌದ್ಧ ಧರ್ಮ 0.5% ದವರಿದ್ದಾರೆ<ref>http://sp2010.bps.go.id/index.php/site/tabel?tid=321&wid=0</ref>
*ಬಾಲಿ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ, ಇದು 1980 ರ ದಶಕದಿಂದಲೂ ಪ್ರವಾಸಿಗರ ಗಮನಾರ್ಹ ಏರಿಕೆ ಕಂಡಿದೆ. ಪ್ರವಾಸೋದ್ಯಮ-ಸಂಬಂಧಿತ ವ್ಯವಹಾರವು ತನ್ನ ಆರ್ಥಿಕತೆಯ 80% ರಷ್ಟನ್ನು ನೀಡುತ್ತದೆ. ಇದು ಸಾಂಪ್ರದಾಯಿಕ ಮತ್ತು ಆಧುನಿಕ ನೃತ್ಯ, ಶಿಲ್ಪಕಲೆ, ಚಿತ್ರಕಲೆ, ಚರ್ಮ, ಲೋಹದ ಕೆಲಸ ಮತ್ತು ಸಂಗೀತವನ್ನು ಒಳಗೊಂಡಂತೆ ಹೆಚ್ಚು ಅಭಿವೃದ್ಧಿ ಹೊಂದಿದ ಕಲೆಗಳಿಗೆ ಹೆಸರುವಾಸಿಯಾಗಿದೆ. ಇಂಡೋನೇಷಿಯಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿವರ್ಷ ಬಾಲಿಯಲ್ಲಿ ನಡೆಸಲಾಗುತ್ತದೆ. ಮಾರ್ಚ್ 2017 ರಲ್ಲಿ, ಟ್ರಿಪ್ ಅಡ್ವೈಸರ್ ತನ್ನ ಪ್ರಯಾಣಿಕರ ಆಯ್ಕೆಯ ಪ್ರಶಸ್ತಿಯಲ್ಲಿ ವಿಶ್ವದ ಅಗ್ರ ಗಮ್ಯಸ್ಥಾನವನ್ನು ಬಾಲಿದ್ವೀಪ ಎಂದು ಹೆಸರಿಸಿತು.<ref>"Bali named as best destination in the world by TripAdvisor". Nzherald.co.nz. March 22, 2017</ref>
*ಬಾಲಿ ಕೋರಲ್ (ಹವಳ) ತ್ರಿಕೋಣದ ಭಾಗವಾಗಿದೆ, ಇದು ಸಮುದ್ರ ಜಾತಿಗಳ ಅತಿ ಹೆಚ್ಚು ಜೀವವೈವಿಧ್ಯತೆಯ ಪ್ರದೇಶವಾಗಿದೆ. ಈ ರೀತಿಯಾಗಿ 500 ರೀಫ್ ಕಟ್ಟಡದ (ದಂಡೆ) ಹವಳದ ಜಾತಿಗಳನ್ನು ಕಾಣಬಹುದು. ಹೋಲಿಕೆಯಲ್ಲಿ, ಇಡೀ ಕೆರಿಬಿಯನ್ನಲ್ಲಿರುವುದಕ್ಕಿಂತ ಇದು ಸುಮಾರು 7 ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ, ಬಾಲಿ 2011 ಏಷಿಯಾನ್ ಶೃಂಗಸಭೆ, 2013 ಅಪೆಕ್ (APEC) ಮತ್ತು ವಿಶ್ವ ಸುಂದರಿ 2013 ರ ಸ್ಪರ್ಧೆಗೆ ಆತಿಥೇಯವಾಗಿತ್ತು. ಬಾಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಸುಬಾಕ್ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ.[<ref>https://web.archive.org/web/20140512230756/http://coralreef.noaa.gov/aboutcorals/facts/coral_species. Shallow tropical reefs in the Indian and Pacific oceans boast the most coral species]</ref>
==ಇತಿಹಾಸ==
 
==ಪವಿತ್ರ ತೀರ್ಥ==
[[File:1 tirtha empul temple.jpg|ಇಂಪುಲ್ ದೇವಾಲಯದ ತೀರ್ಥ (tirtha empul temple)]]
*ಬಾಲಿಯಲ್ಲಿ ‘ತೀರ್ಥ ಎಂಪುಲ್’ ಎನ್ನುವ ಚಿಲುಮೆಯೊಂದಿದೆ. ಇದರ ನೀರಲ್ಲಿ ಮೀಯುವುದರಿಂದ, ಮೈ–ಮನಗಳ ಜೊತೆಗೆ ಆತ್ಮವೂ ಶುದ್ಧಿಯಾಗುತ್ತದೆ ಎನ್ನುವುದು ಹಿಂದೂ ಜನರ ನಂಬಿಕೆ. ಇದು ಪ್ರಕೃತಿಯಲ್ಲಿ ದೇವರನ್ನು ಕಾಣುವ ಬಾಲಿಯನ್ನರ ಮನೋಧರ್ಮಕ್ಕೆ ಅನುಗುಣವಾಗಿರುವ ನಂಬಿಕೆ. ಇಂಡೋನೇಷ್ಯಾದಲ್ಲಿ ‘ದೇವರ ದ್ವೀಪ’ ಎಂದು ಹೆಸರಾದದ್ದು ಬಾಲಿ. ಆ ದೇವರಿಗೂ ಆಕರ್ಷಕ ಎನಿಸುವಷ್ಟು ಚೆಂದದ ದ್ವೀಪ ಎನ್ನುವ ಬಾಲಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ದೇವಾಲಯಗಳೇ! ಬಾಲಿಯಲ್ಲಿ ಆಚರಿಸುವ ಹಿಂದೂಧರ್ಮಕ್ಕೆ ಆಗಮ ತೀರ್ಥ (ಪವಿತ್ರ ನೀರಿನ ಧರ್ಮ) ಎಂದೇ ಕರೆಯುತ್ತಾರೆ. ನೀರಿಲ್ಲದೇ ಅವರಿಲ್ಲ. ದಿನಕ್ಕೆ ಎರಡು ಬಾರಿ ಸ್ನಾನಮಾಡುವರು. ಅದರೊಂದಿಗೆ ಅವರು ಪ್ರತೀ ಆರು ತಿಂಗಳಿಗೊಮ್ಮೆ ದೇಹ ,ಮನಸ್ಸು, ಆತ್ಮ ಮೂರನ್ನೂ ಸ್ವಚ್ಛಗೊಳಿಸುವ ‘ಮೇಲುಕಾಟ್’ ತೀರ್ಥಸ್ನಾನ ಮಾಡುತಾರೆ.
 
*ತ್ರಿಹಿತಕರಣ’ ಬಾಲಿಯ ಹಿಂದೂಗಳ ಜೀವನದ ಮುಖ್ಯ ಪದ್ಧತಿ. ಸಮಾಜದ ಜನರು, ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಹಿತ ಅಡಗಿದೆ ಎಂಬುದು ಇದರ ಅರ್ಥ. ಹಾಗಾಗಿಯೇ ಮನೆಗಳು ಬೇರೆ ಇದ್ದರೂ ಹಬ್ಬ ಸಮಾರಂಭಗಳಲ್ಲಿ ಊರಿಗೆ ಊರೇ ಭಾಗಿಯಾಗುತ್ತದೆ. ಇಡೀ ಹಳ್ಳಿಯೇ ದೊಡ್ಡ ಅವಿಭಕ್ತ ಕುಟುಂಬದಂತೆ! ದೇವರನ್ನು ಕುರಿತು ಭಕ್ತಿಯಿದೆ, ಪ್ರತೀ ಮನೆಯಲ್ಲೂ ದೇಗುಲವಿರುತ್ತದೆ. ಆದರೆ ಒಳಗೆ ಯಾವುದೇ ಮೂರ್ತಿಯಿಲ್ಲ: ದೇವರು, ಹಿರಿಯರು ಶಕ್ತಿ ಸ್ವರೂಪಿಗಳು.
 
*ಅವರ ಪೂಜೆಗೆ ದೇವರು, ಹಿರಿಯರ ಆತ್ಮ ಒಲಿದು ಆಗಮಿಸಿ, ಕುಳಿತು, ಹರಸುತ್ತಾರೆ ಎಂಬ ನಂಬಿಕೆಯಿಂದ ಅವರಿಗಾಗಿಯೇ ಪುಟ್ಟ ಜಾಗವನ್ನು ಖಾಲಿ ಇಡಲಾಗುತ್ತದೆ! ನಿಸರ್ಗದ ಅಂಶಗಳಾದ ಕಲ್ಲು, ನೀರು, ಅಗ್ನಿ, ಮಣ್ಣು, ಗಾಳಿ ಜನರಿಗೆ ಶಕ್ತಿ ಸಂಕೇತಗಳು. ಹಿರಿಯರು ಮತ್ತು ದೇವರು ಕೂಡಾ ನಿಸರ್ಗದಲ್ಲಿ ಲೀನವಾಗಿದ್ದಾರೆ. ಹಾಗಾಗಿ ಅವುಗಳ ಮೂಲಕ ಎಲ್ಲೆಲ್ಲೂ ಇದ್ದಾರೆ ಎಂದು ಹೇಳುತ್ತಾರೆ. ಆದ್ದರಿಂದಲೇ ಇಲ್ಲಿ ನೀರು, ಕಲ್ಲು, ಮಣ್ಣು ಎಲ್ಲವೂ ಪವಿತ್ರ.
 
*‘ಮೇಲುಕಾಟ್’ತೀರ್ಥಕ್ಷೇತ್ರ ಬಾಲಿಯ ಜನರು ಸಾವಿರಾರು ವರ್ಷಗಳಿಂದ ಸಂದರ್ಶಿಸುತ್ತಿರುವ ಮುಖ್ಯ ಸ್ಥಳ ‘ತೀರ್ಥ ಎಂಪುಲ್’! ಉಬುಡ್ ಗ್ರಾಮದಿಂದ ಅರ್ಧ ತಾಸಿನ ಹಾದಿಯಲ್ಲಿ ಮನುಕಯಾ ಎಂಬ ಪ್ರಾಂತ್ಯದಲ್ಲಿ ‘ತಂಪಕ್ ಸಿರಿಂಗ್’ ಎಂಬ ಪುಟ್ಟ ಪಟ್ಟಣ. ಇಲ್ಲಿದೆ ಪರಮಪವಿತ್ರ ದೇವಾಲಯ, ತೀರ್ಥ ಎಂಪುಲ್ (ಪವಿತ್ರ ಚಿಲುಮೆ)ಇದೆ. ಇಲ್ಲಿನ ಕೊಳದ ಚಿಲುಮೆಯಿಂದ ಸತತವಾಗಿ ಸಿಹಿನೀರು ಚಿಮ್ಮುತ್ತಿದ್ದು ಅದು ಅಮೃತಕ್ಕೆ ಸಮಾನ–ಪವಿತ್ರ ಎಂದು ಬಾಲಿಯ ಜನ ಪರಿಗಣಿಸುತ್ತಾರೆ. ಈ ನೀರಿನ ವಿಧಿವತ್ತಾದ ಸ್ನಾನ, ಪ್ರೋಕ್ಷಣೆ ಮತ್ತು ಸೇವನೆ ಶುದ್ಧೀಕರಣದ ಪ್ರಮುಖ ಘಟ್ಟ. ಈ ದೇವಾಲಯ ಸಂಕೀರ್ಣವನ್ನು ಕ್ರಿ.ಶ 960ರಲ್ಲಿ ವರ್ಮದೇವ ರಾಜವಂಶದ ಆಡಳಿತ ಅವಧಿಯಲ್ಲಿ ಕಟ್ಟಲಾಯಿತು. ಇಲ್ಲಿರುವ ಪವಿತ್ರ ಚಿಲುಮೆಯ ಕುರಿತು ಉಸಾನಾ ಬಾಲಿ ಹಸ್ತಪ್ರತಿಯಲ್ಲಿ ಉಲ್ಲೇಖವಿದೆ.
 
ಇದು [[ಇಂಡೋನೇಷ್ಯಾ]] ದೇಶದ ಒಂದು ದ್ವೀಪ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ಬಾಲಿ" ಇಂದ ಪಡೆಯಲ್ಪಟ್ಟಿದೆ