ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭೬ ನೇ ಸಾಲು:
==ವಿನಾಯ್ತಿ ಮುಂದುವರಿಕೆ==
*ಇದುವರೆಗೆ ಸೇವಾ ತೆರಿಗೆಯಿಂದ ವಿನಾಯ್ತಿ ಹೊಂದಿರುವ ಸೇವೆಗಳು ಹೊಸ ವ್ಯವಸ್ಥೆಯಲ್ಲಿಯೂ ಈ ಅನುಕೂಲತೆ ಪಡೆಯಲಿವೆ.
*ಸಾರಿಗೆ ಸೇವೆಯನ್ನು ಕನಿಷ್ಠ ತೆರಿಗೆ ದರ ಮಟ್ಟವಾದ ಶೇ 5ರ ವ್ಯಾಪ್ತಿಯಲ್ಲಿ ತರಲಾಗಿದೆ. ಇದರಿಂದಾಗಿ ಗ್ರಾಹಕ ಬಳಕೆ ಸರಕುಗಳು, ತರಕಾರಿ ಮತ್ತು ಹಣ್ಣುಗಳ ಬೆಲೆ ನಿಯಂತ್ರಣದಲ್ಲಿ ಇರಲಿದೆ. ಏ.ಸಿ ರಹಿತ ರೈಲ್ವೆ ಪ್ರಯಾಣಕ್ಕೆ ವಿನಾಯ್ತಿ ನೀಡಲಾಗಿದೆ. ಏ.ಸಿ ರೈಲ್ವೆ ಪ್ರಯಾಣ ಮತ್ತು ಇಕಾನಮಿ ದರ್ಜೆಯ ವಿಮಾನ ಪ್ರಯಾಣವು ಸದ್ಯದ ಶೇ 6ರ ಬದಲಿಗೆ ಶೇ 5ರ ವ್ಯಾಪ್ತಿಗೆ ತರಲಾಗಿದೆ. ಮನರಂಜನಾ ತೆರಿಗೆಯನ್ನು ಸೇವಾ ತೆರಿಗೆಯಲ್ಲಿ ಲೀನಗೊಳಿಸಲಾಗಿದೆ. ಇದರಿಂದಾಗಿ ಸಿನಿಮಾ ಟಿಕೆಟ್‌ಗಳ ಮೇಲೆಶೇ 28ರಷ್ಟು ತೆರಿಗೆ ಅನ್ವಯವಾಗಲಿದೆ. ಸಿನಿಮಾ ಟಿಕೆಟ್‌ಗಳ ಮೇಲೆ ಸದ್ಯಕ್ಕೆ ಶೇ 40 ರಿಂದ ಶೇ 55ರಷ್ಟು ತೆರಿಗೆ ಜಾರಿಯಲ್ಲಿ ಇದೆ. ಅದಕ್ಕೆ ಹೋಲಿಸಿದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕಡಿಮೆ ತೆರಿಗೆ ಇರಲಿದೆ. ಆದರೆ, ರಾಜ್ಯ ಸರ್ಕಾರಗಳು ಸ್ಥಳೀಯ ಶುಲ್ಕ ವಿಧಿಸುವ ಅಧಿಕಾರ ಹೊಂದಿರುವುದರಿಂದ ಟಿಕೆಟ್‌ ದರ ಅಗ್ಗವಾಗುವ ಸಾಧ್ಯತೆ ಕಡಿಮೆ ಇದೆ. ಕುದುರೆ ರೇಸ್‌ ಬೆಟ್ಟಿಂಗ್‌ ಕೂಡ ಇದೇ ದರದ ವ್ಯಾಪ್ತಿಗೆ ಬರಲಿದೆ.<ref>[http://www.prajavani.net/news/article/2017/05/20/492683.html ಶಿಕ್ಷಣ, ಆರೋಗ್ಯಕ್ಕೆ ವಿನಾಯ್ತಿ;20 May, 2017]</ref>
 
==ಗರಿಷ್ಟ ತೆರಿಗೆ==
*ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಐಷಾರಾಮಿ ಸರಕುಗಳಿಗೆ ಶೇ 28 ರಷ್ಟು ಗರಿಷ್ಠ ಮಟ್ಟದ ತೆರಿಗೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ.ಎಲ್ಲಾ ಮಾದರಿಯ ಕಾರು, ಬಸ್‌, ಟ್ರಕ್‌, ಮೋಟಾರ್ ಸೈಕಲ್ಸ್‌ (ಮೊಪೆಡ್‌ ಒಳಗೊಂಡು), ವೈಯಕ್ತಿಕ ಬಳಕೆಯ ಜೆಟ್‌ ವಿಮಾನ ಮತ್ತು ಐಷಾರಾಮಿ ದೋಣಿಗಳಿಗೆ ಶೇ 28 ರಷ್ಟು ಜಿಎಸ್‌ಟಿ ತೆರಿಗೆ ದರ ಮತ್ತು ಶೇ 3 ರಷ್ಟು ಸೆಸ್‌ ಸೇರಿ ಒಟ್ಟಾರೆ ಶೇ 31 ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.<ref>[http://www.prajavani.net/news/article/2017/05/20/492685.html ವಿಲಾಸಿ ಸರಕಿಗೆ ಶೇ 31ತೆರಿಗೆ;20 May, 2017]</ref>