ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೯ ನೇ ಸಾಲು:
[[ಪೊಟಾಸಿಯಂ]] ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. "ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಖಂಡಿತವೆಂದು ವೈದ್ಯರು ಹೇಳುತ್ತಾರೆ.
 
==ಕರ್ನಾಟಕದಲ್ಲಿ ಭಾಳೆಬಾಳೆ==
*ಇಡೀ ದೇಶದ ಬಾಳೆಹಣ್ಣು ಉತ್ಪಾದನೆ ಯಲ್ಲಿ 3ನೇ ಸ್ಥಾನದಲ್ಲಿರುವ ರಾಜ್ಯದಲ್ಲಿ ವರ್ಷಕ್ಕೆ 1,277 ದಶಲಕ್ಷ ಟನ್‌ ಬಾಳೆ ಉತ್ಪಾದನೆಯಾಗುತ್ತಿದೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುವ ಬಾಳೆಯನ್ನು ರಾಜ್ಯವೂ ಸೇರಿದಂತೆ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾ ಗುತ್ತಿದೆ. ಬಾಳೆಯನ್ನು ತೂಕದ ಲೆಕ್ಕದಲ್ಲಿ ಮಾರುವುದು ಹೌದಾದರೂ, ಅದರ ಸಿಪ್ಪೆಗೆ ಬೆಲೆಯೇನೂ ಇಲ್ಲ. ಸುಲಿದು ಬಿಸಾಡುವ ವಸ್ತು. ಗೊಬ್ಬರಕ್ಕೆ ಬಳಸ ಬಹುದಾದ ಸಾಧ್ಯತೆ ಇದೆಯಾದರೂ, ಒಟ್ಟಿಗೆ ಒಂದೆಡೆ ಸಿಪ್ಪೆ ಸೇರಿಸುವ ಸಾಧ್ಯತೆ ಕಡಿಮೆ.
 
*ಆದರೆ, ಬಾಳೆಯನ್ನು ಬಳಸಿಕೊಂಡು ಜ್ಯೂಸ್‌, ತಿಂಡಿಯನ್ನು ತಯಾರಿಸುವ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಪ್ಪೆ ಸಂಗ್ರಹವಾಗುತ್ತದೆ. ಈ ಸಿಪ್ಪೆಯನ್ನು ಸಾಮಾನ್ಯವಾಗಿ ಬಿಸಾಡಲಾ ಗುತ್ತದೆ. ಆದರೆ, '''ಅದೇ ಕಾರ್ಖಾನೆಯಲ್ಲಿ ಅದೇ ಬಾಳೆಹಣ್ಣು ಸಿಪ್ಪೆಯನ್ನು ಬಳಸಿಕೊಂಡು ಜ್ಯೂಸ್‌ ತಯಾರಿಸುವ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ತಯಾರಿಸಿದ್ದಾರೆ.''' ಈ ತಂತ್ರಜ್ಞಾನದ ಮೂಲಕ ರುಚಿಕರವಾದ, ನಾರುಯುಕ್ತ ವಾದ ಆರೋಗ್ಯಕರ ಆಹಾರ ಸೇವನೆಯೂ ಆದಂತೆ ಆಗುತ್ತದೆ.
 
==ಬಾಳೆಹಣ್ಣು ಸಿಪ್ಪೆಯ ಜ್ಯೂಸ್‌==
*ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು, ಸಂಸ್ಥೆಯ ‘ತ್ಯಾಜ್ಯ ಪುನರ್‌ ಬಳಕೆ ತಂತ್ರಜ್ಞಾನ ಯೋಜನೆ’ ಯ ಅಡಿಯಲ್ಲಿ ಈ ಹೊಸ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಳೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ನಾರಿನ ಅಂಶ ಇರುತ್ತದೆ. ಈ ನಾರಿನ ಅಂಶ ದೇಹಕ್ಕೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಪಚನ ಕ್ರಿಯೆಗೆ ಅತ್ಯಗತ್ಯವಾದ ಅಂಶ. ಈ ನಾರಿನ ಅಂಶವುಳ್ಳ ಪಾನೀಯವನ್ನು ಸೇವಿಸಿದರೆ ಜೀರ್ಣಾಂಗದ ಸಮಸ್ಯೆಗಳು ಕಡಿಮೆಯಾ ಗುತ್ತವೆ. ಈ ಉದ್ದೇಶವನ್ನೇ ಮುಖ್ಯವಾಗಿ ಗಮನದಲ್ಲಿ ಇರಿಸಿಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ