ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೮ ನೇ ಸಾಲು:
==ಮತ್ತೆ ಲೋಕ ಶಿಕ್ಷಣ ಟ್ರಸ್ಟ್ ಆಡಳಿತ==
 
ನ್ಯಾಯಾಲಯದ ಮೊಕ್ಕದ್ದಮೆಗಳು ಇತ್ಯರ್ಥವಾಗಿ ಲೋಕ ಶಿಕ್ಷಣ ಟ್ರಸ್ಟ್ ಗೆ ಆಡಳಿತ ಹಿಂದಿರುಗಿತು. ಮಾಜಿ ಮುಖ್ಯ ಮಂತ್ರಿ [[ಬಿ.ಡಿ.ಜತ್ತಿ]]ಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಪುನಾರಚನೆಗೊಂಡಿತು. ನ್ಯಾಯಮೂರ್ತಿ [[ನಿಟ್ಟೂರು ಶ್ರೀನಿವಾಸರಾವ್]] ಸದಸ್ಯರಾಗಿ ಸೇರ್ಪಡೆಗೊಂಡರು. [[ಕೆ.ಶಾಮರಾವ್]] ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಪತ್ರಿಕಾ ಸಮೂಹದ ವ್ಯವಸ್ಥಾಪಕ ಸಂಪಾದಕರಾಗಿ ನೇಮಕಗೊಂಡರು. ಉಪಾಧ್ಯ, ಮುತಾಲಿಕ ದೇಸಾಯಿ ಅವರ ನಿವೃತ್ತಿಯ ನಂತರ [[ನರಸಿಂಹ ಜೋಶಿ]] ಸಂಪಾದಕರಾದರು. ಕಲ್ಬುರ್ಗಿ ಆವೃತ್ತಿ ಆರಂಭವಾಯಿತು. ಆಡಳಿತ ವರ್ಗದೊಂದಿಗೆ ಭಿನ್ನಾಭಿಪ್ರಾಯದಿಂದ [[ವೆಂಕಟನಾರಾಯಣ]] ನಿರ್ಗಮಿಸಿದರು. ಜೋಶಿ ನಿವೃತ್ತರಾದರು. [[ಕೆ.ಶ್ರೀಧರ ಆಚಾರ್]] ಸಲಹೆಗಾರರಾಗಿ ಸೇರ್ಪಡೆಯಾದರು. ಸ್ಥಾನಿಕ ಸಂಪಾದಕರಾಗಿದ್ದ [[ಎ.ಗುಂಡಾಭಟ್]] ನಿವೃತ್ತರಾದರು. ಶಾಮರಾವ್ ನಿರ್ಗಮಿಸಿದರು. [[ಹಾರನಹಳ್ಳಿ ರಾಮಸ್ವಾಮಿ]] ಟ್ರಸ್ಟ್ ನ ಅಧ್ಯಕ್ಷರಾದರು. ಹಿರಿಯ ಪತ್ರಕರ್ತ [[ವಿ.ಎನ್.ಸುಬ್ಬರಾವ್]] ‘ಸಂಕ’ದ ಸಂಪಾದಕರಾದರು. ಅವರ ಅಧಿಕಾರಾವಧಿಯ ನಂತರ, ಪ್ರಧಾನಿ [[ಹೆಚ್.ಡಿ.ದೇವೇಗೌಡ]]ರಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ದೆಹಲಿಗೆ ಹೋಗಿದ್ದ [[ಎಸ್.ವಿ.ಜಯಶೀಲರಾವ್]] ‘ಸಂಕ’ಕ್ಕೆ ಸಂಪಾದಕರಾದರು. [[ಕನ್ನಡಪ್ರಭ]]ದಿಂದ ನಿವೃತ್ತರಾಗಿ [[ಪತ್ರಿಕಾ ಅಕ್ಯಾಡೆಮಿ]] ಅಧ್ಯಕ್ಷಗಿರಿಯಿಂದಲೂ ನಿವೃತ್ತರಾಗಿದ್ದ [[ಗರುಡನಗಿರಿ ನಾಗರಾಜ]] [[ಕರ್ಮವೀರ]] ಪತ್ರಿಕೆಯ ಸಂಪಾದಕರಾದರು. ಜಯಶೀಲರಾವ್ ಅವರ ನಿರ್ಗಮನದ ನಂತರ ‘ಸಂಕ’ದ ಸಂಪಾದಕರಾಗಿ [[ಮನೋಜ್ ಗೌಡ ಪಾಟೀಲ]] ನೇಮಕಗೊಂಡರು.<ref>[http://epaper.samyukthakarnataka.com/1188113/Samyuktha-Karnataka-Bangalore/April,29,2017,Bangalore#page/6/2 ಸಂಯುಕ್ತ ಕರ್ನಾಟಕ ಪತ್ರಿಕೆ ೮೫ ರ ಹುಟ್ಟುಹಬ್ಬದ ಸಂಭ್ರಮದಲ್ಲಿದೆ] </ref>
 
ಹಾರನಹಳ್ಳಿ ರಾಮಸ್ವಾಮಿಯವರ ಆಡಳಿತದಲ್ಲಿ ಸಂಯುಕ್ತ ಕರ್ನಾಟಕದ ದಾವಣಗೆರೆ ಹಾಗೂ ಮಂಗಳೂರು ಆವೃತ್ತಿಗಳು ಆರಂಭವಾದವವು. ಅವರ ನಿಧನದ ನಂತರ ಟ್ರಸ್ಟ್ ಪುನಾರಚನೆಗೊಂಡಿತು.
 
ಪಾಟೀಲ ನಿವೃತ್ತರಾದರು. ಇದೀಗ ಪ್ರಧಾನ ವರದಿಗಾರರಾಗಿದ್ದ [[ಹುಣಸವಾಡಿ ರಾಜನ್]] ‘ಸಂಕ’ದ ಸಂಪಾದಕರಾಗಿದ್ದಾರೆ.
==೮೫ ನೆಯ ವರ್ಷಕ್ಕೆ ಕಾಲಿಟ್ಟಿದೆ==
'''ಸಂಯುಕ್ತ ಕರ್ನಾಟಕ''', ೮೫ ರ ಹುಟ್ಟುಹಬ್ಬದ ಸಂದರ್ಭದಲ್ಲಿದೆ.
------------------------------------------------------------------------
 
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ