ರಕ್ಷಿತ್ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Updated references
ಚುNo edit summary
೧೨ ನೇ ಸಾಲು:
'''ರಕ್ಷಿತ್ ಶೆಟ್ಟಿ''' ಒಬ್ಬ [[ಕನ್ನಡ ಚಿತ್ರರಂಗ|ಕನ್ನಡ ಚಲನಚಿತ್ರ]] ನಟ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ಪದವಿ ಪಡೆದಾನಂತರ, ನಾಟಕಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿ ಕೆಲಸಮಾಡಿದರು.<ref>{{Cite web|url=http://timesofindia.indiatimes.com/entertainment/kannada/movies/did-you-know-/Rakshit-Shetty-is-a-BE-graduate/articleshow/34781302.cms|title=Rakshit Shetty is a BE Graduate|website=The Times of India}}</ref><ref>{{Cite web|url=http://themanipaljournal.com/2014/08/26/talking-cinema-with-rakshit-shetty/|title=Talking Cinema with Rakshit Shetty|website=The Manipal Journal}}</ref>
 
ಶೆಟ್ಟಿ ಅವರ ಚೊಚ್ಚಲ ಚಿತ್ರ ೨೦೧೦ರಲ್ಲಿ ಬಿಡುಗಡೆಯಾದ ''ನಮ್ ಏರಿಯಾಲ್ ಒನ್‍ದಿನ''. ೨೦೧೩ರ ಪ್ರಣಯ ಮತ್ತು ಹಾಸ್ಯ ಕಥೆಯುಳ್ಳ ''[[ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (ಚಲನಚಿತ್ರ)|ಸಿಂಪಲ್ಲಾಗ್ ಒಂದ್ ಲವ್‍ ಸ್ಟೋರಿ]]'' ಪ್ರೇಕ್ಷಕರ ಪ್ರಶಂಸೆಗೊಳಪಟ್ಟಿತು. ನಂತರ ೨೦೧೪ರಲ್ಲಿ ಅವರು ನಿರ್ದೇಶಿಸಿ ನಟಿಸಿದ ಕ್ರೈಂ-ಡ್ರಾಮಾ ಚಿತ್ರ ''[[ಉಳಿದವರು ಕಂಡಂತೆ (ಚಲನಚಿತ್ರ)|ಉಳಿದವರು ಕಂಡಂತೆ]]'' ಚಿತ್ರ ವ್ಯಾಪಕ ವಿಮರ್ಶಾತ್ಮಕ ಪ್ರಶಂಸೆ ಪಡೆಯಿತು.<ref>{{Cite web|url=http://www.thehindu.com/features/friday-review/a-cult-classic-and-then/article8253097.ece|title=A cult classic and then...|website=The Hindu}}</ref> ಈ ಚಿತ್ರವು ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕನಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕನಾಗಿ (ದಕ್ಷಿಣ) ಫಿಲಂಫೇರ್ ಪ್ರಶಸ್ತಿಗಳುಪ್ರಶಸ್ತಿಗಳನ್ನು ದೊರೆತವುತಂದುಕೊಟ್ಟಿತು.<ref name="m.timesofindia.com">{{cite web|url=http://m.timesofindia.com/entertainment/kannada/movies/news/Announced-Winners-of-the-2014-State-Awards/articleshow/50970801.cms|title=Rakshit Shetty bagged state award the best debut director award for Ulidavaru Kandante|work=The Times of India}}</ref> ನಂತರ ಅವರು ''[[ವಾಸ್ತು ಪ್ರಕಾರ]]'' (೨೦೧೫) ಹಾಗೂ ''[[ಗೋಧಿ ಬಣ್ಣ ಸಾಧಾರಣ ಮೈಕಟ್ಟು (ಚಲನಚಿತ್ರ)|ಗೋಧಿ ಬಣ್ಣ ಸಾಧಾರಣ ಮೈಕಟ್ಟು]]'' (೨೦೧೬) ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದರು. ಶೆಟ್ಟಿಯವರಿಗೆ ತಮ್ಮ ಮುಂದಿನ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ಗಳಿಸಿಕೊಟ್ಟದ್ದು, ತಾವೇ ಬರೆದು ನಿರ್ಮಿಸಿದ ೨೦೧೬ರ ಹಾಸ್ಯಪ್ರಧಾನ ಚಿತ್ರ [[ಕಿರಿಕ್ ಪಾರ್ಟಿ]].<ref>{{Cite web|url=http://www.thehindu.com/news/cities/bangalore/Kirik-Party-does-a-Mungaru-Male/article17368097.ece|title=Kirik Party does a Mungaru Male|website=The Hindu}}</ref>
 
ಪವನ್ ಕುಮಾರ್, ಅನುಪ್ ಭಂಡಾರಿ ಹಾಗೂ ಇತರ ನಿರ್ದೇಶಕರೂ ಸೇರಿದಂತೆ ಶೆಟ್ಟಿಯವರಿಗೆ ಕನ್ನಡ ಸಿನಿಮಾ ವಲಯದಲ್ಲಿ ಹೊಸ ಸಿನಿಮಾ ಸಂಚಲನವನ್ನು ಸೃಷ್ಟಿಸಿದ ಮನ್ನಣೆಯಿದೆ.  ಇದು ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವರ್ಛಸ್ಸನ್ನು ಸೃಷ್ಟಿಸಿದೆ.<ref>{{Cite web|url=http://www.newindianexpress.com/entertainment/kannada/2017/jan/03/is-rakshit-shetty-sandalwoods-next-superstar-1555451.html|title=Is Rakshit Shetty Sandalwood's next Superstar?|website=New Indian Express}}</ref><ref>{{Cite web|url=http://newsable.asianetnews.tv/entertainment/rakshit-shetty-the-storm-that-hit-kannada-film-industry-hard|title=Rakshit Shetty the storm that rocked Kannada Film Industry|website=Asianet News}}</ref>
"https://kn.wikipedia.org/wiki/ರಕ್ಷಿತ್_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ