ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೩ ನೇ ಸಾಲು:
==ಅಡ್ರೀನಲ್ ಗ್ರಂಥಿಗಳು==
[[File:Illu adrenal gland.jpg|thumb|ಮೂತ್ರಪಿಂಡಗಳ ಮೇಲೆ ಟೊಪ್ಪಿಗೆಯಂತಿರುವ ದಟ್ಟ ಹಳದಿಬಣ್ಣದ ಗ್ರಂಥಿಗಳು]]
*ಈ [[ಅಡ್ರೀನಲ್ ಗ್ರಂಥಿಗಳು|ಅಡ್ರೀನಲ್ ಗ್ರಂಥಿಗಳಿಗೆ]] (ಎಪಿನೆಫ್ರೈನೆ ?ಮತ್ತು) '''ಸುಪ್ರಾರೀನಲ್''' ಗ್ರಂಥಿಗಳು ಎಂದೂ ಕರೆಯುತ್ತಾರೆ. ದೇಹ ಕೃಶವಾಗುವ ಕೆಲವು ರೋಗಗಳಿಗೆ ಈ ಅಡ್ರೀನಲ್ ಗ್ರಂಥಿಗಳು ಕಾರಣವೆಂದು ಡಾ.ಎಡಿಸನ್ ಎಂಬಾತ 1881ರಲ್ಲಿ ಕಂಡುಹಿಡಿದ. ಈ ಗ್ರಂಥಿಗಳು ನಮ್ಮ ಮೂತ್ರಪಿಂಡಗಳ ಅಥವಾ ಕಲಿಜಗಳ ಮೇಲುಗಡೆಯಲ್ಲಿರುವ ಹಳದಿಬಣ್ಣದ ಎರಡು ಕೋಶಗಳು ಅಥವಾ ಗ್ರಂಥಿಗಳು. ಈ ಗ್ರಂಥಿಯ ಹೊದ್ದಿಕೆಯ (ಕೊರ್ಟೆಕ್ಸ್) ರಚನೆಯು ಒಂದು ಬಗೆಯದು, ಒಳಭಾಗ ರಚನೆ (ಮೆಡ್ಯುಲ) ಇನ್ನೊಂದು ಬಗೆಯದು. ಮೀನಿನಲ್ಲಿ ಇವೆರಡೂ ಪ್ರತ್ಯೇಕವಾದ ಕೋಶವಾಗಿವೆ. ಮನುಷ್ಯರಲ್ಲಿ ಇವೆರಡು ಭಾಗಗಳು ಒಂದುಗೂಡಿವೆ.
 
*ಈ ಗ್ರಂಥಿಯನ್ನು ಕತ್ತರಿಸಿ ತಗೆದಲ್ಲಿ ಮನುಷ್ಯನು ಸತ್ತುಹೋಗಬಹುದು. ಇದರ ಒಳಭಾಗವನ್ನು ತೆಗೆದರೂ ಜೀವಕ್ಕೆ ಅಪಾಯ. ಇದರ ಒಳಬಾಗದಿಂದ ಎಡ್ರಿನಾಲ್/ಅಡ್ರಿನಾಲ್ ಎಂಬ ದ್ರವ ಒಸರುತ್ತದೆ. ಈ ರಸಾಯನಿಕ ದ್ರವವು ರಕ್ತನಾಳಗಳ ಸಂಕೋಚನಕ್ಕೆ ಸಹಾಯ ಮಾಡುತ್ತದೆ. ಆ ದ್ರವವನ್ನು ಪ್ರತ್ಯೇಕವಾಗಿ ನಮ್ಮ ರಕ್ತಕ್ಕೆ ಸೇರಿಸಿದಲ್ಲಿ ರಕ್ತನಾಳಗಳು ಸಂಕೋಚಗೊಂಡು ರಕ್ತವೇಗವಾಗಿ ಹರಿಯುತ್ತದೆ. ಅದೇ ಎಡ್ರಿನಾಲ್ ದ್ರವವು ಹೊಟ್ಟೆ ಕರುಳು ಗಂಟಲು ನಾಳ ಮೊದಲಾದ ಸ್ನಾಯುಗಳ ಮೇಲೆ ಇದಕ್ಕೆ ವಿರುದ್ಧವಾದ ಪಪಿಣಾಮ ಮಾಡುತ್ತದೆ. ಕೋಪ ಬಂದಾಗ, ಆತುರ ಹೆಚ್ಚಾದಾಗ ಭಯವಾದಾಗಲೂ ಈ ದ್ರವ ಪ್ರಮಾಣ ರಕ್ತದಲ್ಲಿ ಹೆಚ್ಚುತ್ತದೆ. ಭಯವಾದಾಗ ಕಾಣಿಸುವ ರೋಮಾಂಚನ, ಕಣ್ಣಾಲಿಗಳು ದೊಡ್ಡಾಗುವಿಕೆ ಸೂಕ್ಷ್ಮ ರಕ್ತನಾಳಗಳು ಸಂಕುಚಿತಗೊಂಡು ಮೈ ಕೆಂಪಡರುವಿಕೆ ಈ ದ್ರವದ ಹೆಚ್ಚಿನ ಒಸರುವಿಕೆಯ ಕಾರಣದಿಂದ. ಆಪತ್ತಿನ ಸಮಯದಲ್ಲಿ ನಾವು ರಕ್ಷಣೆಗಾಗಿ ಹೋರಾಡಬೇಕಾಗುತ್ತದೆ, ಇಲ್ಲವೇ ಓಡಿಹೋಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಚುರುಕುತನವನ್ನೂ ಆವೇಗ-ಸಕ್ತಿಗಳನ್ನೂ ಸ್ನಾಯುಗಳಿಗೆ ಒದಗಿಸಿಕೊಡುವುದೇ ಈ ಗ್ರಂಥಿದ್ರವದ ಕೆಲಸ. ಆದರೆ ಇದರ ಪ್ರಮಾಣ ಹೆಚ್ಚಾದರೆಣಾತುರ ಕಾತುರ ಹೆಚ್ಚಿ ದೇಹ ಕೆಲಸಮಾಡದೆ ಹೊಗಬಹುದು. ಈ ದ್ರವದ ಅತಿ ಶ್ರಾವದಿಂದ ರಕ್ತ ಚಲನೆ ಹೆಚ್ಚಿ ಹೃದಯಕ್ಕೆ ತೊಂದರೆಯಾಗಬಹುದು.